ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರಗತನಾಗಿರಲು ಶ್ರೀಕೃಷ್ಣನು ಪ ಪುರಜನಗಳಿಗಿನ್ನು ಕೊರತೆಗಳುಂಟೆ ಅ.ಪ ಪರಮದಯದಿ ತನ್ನ ನೆರಳಿನೊಳೆಲ್ಲರ ಪೊರೆಯುತಿರುವ ನಮ್ಮ ಸಿರಿವಲ್ಲಭನು 1 ನಾಡಿನ ಭಕುತರ ಕೂಡಿಸಿ ಮುದದಲಿ ಬೇಡಿದ ವರಗಳ ನೀಡುವ ದೊರೆಯು 2 ಬಿಡಿಬಿಡಿ ನಿಮ್ಮಯ ಕಡು ಕ್ಲೇಶಗಳೆಂದು ಗಡಗಡ ದುಂದುಭಿ ಹೊಡೆಸುವ ಧೀರನು 3 ಪತಿತ ಪಾವನೆಂದು ಪ್ರಥೆಯನು ಪೊಂದಿಹ ಕ್ಷಿತಿಸುರರೊಡೆಯನು ಅತಿಸುಲಭದಿಲಿರೆ 4 ಎನ್ನನು ಸೇವಿಸಿ ಧನ್ಯರಾಗಿ ಎಂದು ಸನ್ನೆಯನೀವ ಪ್ರಸನ್ನ ಶ್ರೀಮಾಧವ 5
--------------
ವಿದ್ಯಾಪ್ರಸನ್ನತೀರ್ಥರು
ಸಿರಿ ಪ ನಲ್ಲನವರ ಸಂಗದಿ ಕೂಡು ಅ.ಪ ಉಪದೇಶ ಮಾಳ್ಪುದಕೆ ಹೋಗಬೇಡ ನೀ ಚಪಲಚಿತ್ತನು ತಿಳಿದಿರು ಮೂಢ- ತೋರ್ಪದಿರು ಕೋಣ 1 ಹಿಂದೆ ಹೋದರು ಬಹಳ ಮಂದಿ | ಸ್ಥಿರ- ವೆಂದು ತಿಳಿದು ನೀದುಃಖ ಹೊಂದಿ ಮುಂದಾಗುವುದುಕ್ಕೆಲ್ಲಾ ಕಂದರ್ಪ ಕಾರಣನಲ್ಲಾ 2 ಎಲ್ಲಾ ಜನರನು ಸುಲಿವರು ಮುನ್ನು ಕ್ಷುಲ್ಲಕರಿಗೆ ತತ್ವವ ಪೇಳೆ ಸುಳ್ಳೆಂದು ನಿಂದಿಸುವರು 3 ಪ್ರಶ್ನೆಗೆ ತಕ್ಕ ಉತ್ತರವಾಡು | ಸೂರ್ಯ- ರಶ್ಮಿಯೊಳಗಿರುವ ಲವಣಿಯ ನೋಡು ನಿ_ ನ್ನಸ್ವರೂಪವದರಂತೆ | ಯಾತಕೆ ಇನ್ನು ಅಗಾಧ ಭ್ರಾಂತಿ 4 ಅನಂತ ಪ್ರಾಣಿಗಳೊಳಗೆ ನಿವಾಸ | ನಮ್ಮ ವನಜಾಕ್ಷ ಗುರುರಾಮವಿಠಲೇಶ ಅನಿಮಿತ್ತ ಬಂಧುವನು ಬಿಡಿಬಿಡಿರೋ ದುರಾಶಾ5
--------------
ಗುರುರಾಮವಿಠಲ
ಹರಿನಾಮ ಭಜನೆಯೊಳಿರು ಇರೂ ಶ್ರೀಹರಿ ಮಹಿಮೆಯ ಭುವಿ ತೋರುರೋರು ಪ ಸಜ್ಜನರ ಸಂಗವ ಮಾಡು ಮಾಡು ದುರ್ಜನರ ಸಂಗವ ಬಿಡೂ ಬಿಡೂ ಮೂಜ್ಜಗದೊಡೆಯನ ಪಾಡು ಪಾಡು ಇನ್ನು ಮುಕುತಿಯ ಬೇಕೆಂದು ಬೇಡು ಬೇಡು 1 ಪಾದ ಹಿಡಿ ಹಿಡಿ ಮನದಿರುವ ಕಾಮ ಕ್ರೋಧ ಕಡಿ ಕಡಿ ಶರಣರ ಕೂಟದೋಳ್ ಕೂಡಿ ಕೂಡಿ ಬೇಗ ನರಹರಿ ಮೂರ್ತಿಯ ನೋಡಿನೋಡಿ 2 ರಾಮನಾಮಾಮೃತ ಕುಡಿ ಕುಡಿ ಅತಿಕಾಮುಕ ದ್ರವ್ಯವ ಬಿಡಿಬಿಡಿ ಸ್ವಾಮಿ ನಾರಾಯಣನೆಂದು ನುಡಿನುಡಿ ಬಹು ಪ್ರೇಮದಿ ಹರಿಕರುಣ ಪಡಿಪಡಿ 3 ಸಕಲಶಾಸ್ತ್ರಗಳ ನೋಡು ನೋಡು ಅದರ ಸಾರಾಂಶ ತಿಳಿದು ಆಡೂ ಆಡೂ ಪ್ರಕಟಿತ ಭಕ್ತರಿಗನ್ನ ನೀಡು ನೀಡು ಇನ್ನು ಪರಮಾತ್ಮನ ಕೊಂಡಾಡು ಆಡು 4 ನರಹರಿಯು ಕಥೆಯ ಕಿವಿಲಿ ಕೇಳುಕೇಳು ಪರಮ ಭಕ್ತರ ಪಾದಕೆ ಬೀಳು ಬೀಳು ಶ್ರೀ ಪರಬ್ರಹ್ಮನ ಸೇವೆಗೆ ಏಳು ಏಳು 5 ಯೋಗ್ಯರ ಕಂಡರೆ ಹಿಗ್ಗೂ ಹಿಗ್ಗೂ ಅತಿ ಭಾಗ್ಯರ ಕಂಡರೆ ತಗ್ಗೂ ತಗ್ಗೂ ಸುಜ್ಞಾನಿಗಳಿಗೆ ಡೊಗ್ಗು ಡೊಗ್ಗು ಇನ್ನು ಶುದ್ಧಾತ್ಮಕರೊಳು ಜಗ್ಗು ಜಗ್ಗು 6 ಸನ್ಯಾಸಿಗಳನು ಸೇರು ಸೇರು ದುಷ್ಟದುರ್ಮಾಗರ ಕಂಡು ದೂರು ದೂರು ಮರ್ಮ ಬಲ್ಲವರಲ್ಲಿ ಜಾರು ಜಾರು ಶ್ರೀ ಮಹಾ 'ಹೆನ್ನ ವಿಠ್ಠಲನ’ ‘ಸಾರೂ ಸಾರೂ’ 7
--------------
ಹೆನ್ನೆರಂಗದಾಸರು
ಬಂದನೇನೆ-ರಂಗ-ಬಂದನೇನೆ-ಎನ್ನ |ತಂದೆ ಬಾಲಕೃಷ್ಣ ನವನೀತಚೋರ ಪಘಿಲುಘಿಲು ಘಿಲುರೆಂಬ ಪೊನ್ನಂದುಗೆ ಗೆಜ್ಜೆ |ಹೊಳೆಹೊಳೆಯುವಪಾದಊರುತಲಿ ||ನಲಿನಲಿದಾಡುವ ಉಂಗುರ ಅರಳೆಲೆಥಳಥಳ ಹೊಳೆಯುತ ಶ್ರೀಕೃಷ್ಣ 1ಕಿಣಿಕಿಣಿಕಿಣಿಯೆಂಬ ಕರದ ಕಂಕಣ ಬಳೆ |ಝಣಝಣಝಣರೆಂಬ ನಡುವಿನ ಗಂಟೆ ||ಗಣಗಣಗಣಯೆಂಬ ಪಾದದ ತೊಡವಿನ |ಕುಣಿಕುಣಿಕುಣಿದಾಡುತ ಶ್ರೀಕೃಷ್ಣ 2ಹಿಡಿಹಿಡಿಹಿಡಿಯೆಂದು ಪುರಂದರವಿಠಲನ |ದುಡುದುಡುದುಡುದುಡು ಓಡುತ ||ನಡೆನಡೆನಡೆಯೆಂದು ಮೆಲ್ಲನೆ ಪಿಡಿಯಲು |ಬಿಡಿಬಿಡಿ ದಮ್ಮಯ್ಯ ಎನ್ನತಲಿ 3
--------------
ಪುರಂದರದಾಸರು