ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯೋ ಕರುಣಿಸಿ ಎನ್ನ ರಂಗಾ | ಬೇಗನೇ ಪಾದವದೋರಿಸಿ | ನಮನಕ ಭವಬಲಿಯನು ಬಿಡಸಿ ರಂಗಾ ಪ ಶರಣೆಂದು ಸಕಲರು ಬಂದು ಪೋಗುವಾ | ನಿನ್ನ ಮಹಾದ್ವಾರದಲಿ | ಇರುತಿಹ ನಿನ್ನಯ ಭಕುತ ಬಲೆಯಲಿ | ಇರಿಸಿ ನೀ ಇಟ್ಟು ಅಚಲದಲಿ ರಂಗಾ | ಸಂಬಳನಿತ್ತಿಹ ಧನವ ನಾನೊಲ್ಲೆ | ಬೇಡುವೆ ಒಂದÀನೋ ರಂಗಾ | ಹಂಬಲ ದಣಿವಂತೆ ನಾಮ ಭಾಂಡಾರವ | ಮಾಡೆನ್ನ ಆಧೀನವ ರಂಗಾ 1 ಕರಿದಲಿಧೃತಿ ಚಿತ್ತವನಿತ್ತು ಅನುದಿನಾ | ಹರಿಪಾದ ಸದ್ಬಕ್ತಿಯಾ ರಂಗಾ | ಮೆರೆವ ಮಂಟಪದೊಳು ನಿಲಿಸೆನ್ನ | ದುರಿತವ ತಟ್ಟದಂದದಿ ಪೊರೆಯೋ ರಂಗಾ2 ಇಹಪರದಲ್ಲಿ ಏಕೋದೇವನೆಂಬ ಮುದ್ರೆಯಾ ಭಾವದ ಬಲದಿಂದಲಿ | ಮಹಿಪತಿ ಸುತ ಪ್ರಭು ಕೊರಳಿಗೆ ಹಾಕಿನ್ನು | ಸಲಹು ನೀ ಕೃಪೆಯಿಂದಾ ರಂಗಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯ ಜಯ ಮಂಗಳ ಗುರುಮೂರ್ತಿ | ಜಯಸುರವರ ಪಾವನಕೀರ್ತಿ ಪ ಮೊಲದಜ್ಞ ತಮನಸುವನೆ ಬಗೆದೆ | ವಿದಿತ ವಿವೇಕ ನಗವನೊಗೆದೆ | ಒದಗಿ ಸುಜ್ಞಾನ ಧರೆಯ ತಂದೆ | ಬುಧರ ಸದ್ಭಾವ ಸ್ತಂಬದಲೊಗೆದೆ 1 ಪ್ರೇಮಪ್ರೀತಿ ರತಿವೆಂಬುವದಾ | ಭೂಮಿಯ ಬೇಡಿದ ಮೂರ್ಪಾದಾ | ದಮೆಶಮೆ ಗುಣಕ್ಷತ್ರಿಯ ವೃಂದಾ | ಸುಮನರ ಬಿಡಸಿದೆ ಸೆರೆಯಿಂದ 2 ಅಪದಿ ಗೋಕುಲದಲಿ ನಲಿದೆ | ತಾಪತ್ರಯ ಮುಪ್ಪುರ ವಳಿದೆ | ವ್ಯಾಪಿಸಿ ಕಲಿಮಲ ಬೆಳಗಿಸಿದೆ | ಕೃಪೆಯಲಿ ಮಹೀಪತಿ ಸುತಗೊಲಿದೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವ್ಯಾಸಕೂಟ ದಾಸಕೂಟ ಎನ್ನದಿರೊ ಹೀನಮಾನವ ಪ ಈಶ ಹೊರತು ಮಿಕ್ಕ ಜನರು ದಾಸರೇ ಸರಿ ಅ.ಪ. ವೇದವ್ಯಾಸದೇವ ದೇವ ಸರ್ವರಿಗೆ ಈಶ ಕಾಣಿರೋ ಮೋದಮುನಿಯು ಆತನಿಗೆ ಮುಖ್ಯದಾಸ ಶಾಸ್ತ್ರಸಿದ್ದವೋ ಎಂದಮೇಲೆ ನೀನು ಯಾರು ಸಾಕ್ಷಿಕೇಳಿ ಬೇಗ ನುಡಿಯಲೋ ಛಂದ ಭಜಿಸಿ ಜ್ಞಾನ ಘಳಿಸಿ ದಾಸನೆಂದು ಹರಿಯ ಭಜಿಸೆಲೋ 1 ಧರ್ಮಶಾಸ್ತ್ರ ಮರ್ಮಬಿಟ್ಟು ಓದಿ ಓದಿ ಏನು ಫಲವೊ ನಿತ್ಯ ತೃಪ್ತ ನಿರ್ಜರೇಶ ನೊಲಿಮೆ ಮುಖ್ಯವೋ ಕಮಲೆಯರಸ ಕಲ್ಪವೃಕ್ಷ ಹೃಸ್ಥದೊರೆಯ ಕಾಣಬೇಕೆಲೋ ಕರ್ಮಬಿಡದೆ ಆಶೆತೊರೆದು ಕರ್ಮಪತಿಯ ಶರಣು ಪೊಗೆಲೋ 2 ವೇದಶಾಸ್ತ್ರ ಸ್ಮøತಿಗಳಲ್ಲಿ ಪೇಳಿರುವ ತತ್ವಗಳನ್ನು ನಡತೆಯಿಂದ ನಡಿಸಿ ನಡಿಸುತ ಇಂದಿರೇಶನ ದಾಸಜನರು ಪದಗಳಿಂದ ಪಾಡಿ ಪಾಡುವ ಖೇದವಳಿದು ಸಾಧು ಜನಕೆ ನಂದ ಸೂರೆಗೈದು ನಲಿವರೋ 3 ವೇಷದಿಂದ ಭಾಷೆಯಿಂದ ಶ್ರೀಶನೊಲಿಮೆ ಕಾಣಲಾಗದೋ ದಾಸನೆಂದು ದೈನ್ಯದಿಂದ ದ್ವೇಷ ತ್ಯಜಿಸಿ ಕೂಗಬೇಕೆಲೋ ಕುಣಿದು ಕುಣಿಯಲೊ 4 ಶಕ್ತಿಜರಿದ್ವಿರಕ್ತಿಬೇಡಿ ಭಕ್ತಿಯಿಂದ ಭಜಿಸಿ ಭಜಿಸೆಲೊ ಶಕ್ತ ವಿಜಯಸೂತ ಶ್ರೀ ವಾಯುಹೃಸ್ಥ “ಕೃಷ್ಣವಿಠಲ” ಯುಕ್ತಿಯಿಂದ ಬಂಧಬಿಡಸಿ ನಿತ್ಯಸುಖವ ನಿತ್ತು ಕಾಯ್ವನೊ ಭಕ್ತಿಯಿಂದ ಶಕ್ಯನಾದ ಜ್ಞಾನ ಘಳಿಸಿ ಕೊಲ್ಲು ಸಂಶಯ 5
--------------
ಕೃಷ್ಣವಿಠಲದಾಸರು