ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏತಕೆ ಸಂತತ ಚಿಂತಿಸುವೆ ಪ ಕೋತಿಗೆ ಮದ್ದಿಕ್ಕಿದ ರೀತಿಲಿ ಮನವೆಅ.ಪ ಹಾನಿ ವೃದ್ಧಿಗಳು ತಾನಾಗಿ ಬರುವುದು ಏನೇನು ಮಾಡಲು ಬಿಡಲೊಲ್ಲದು ಜ್ಞಾನವಿಲ್ಲದೆ ವೃಥಾ ಧೇನಿಸಿ ಧೇನಿಸಿ 1 ದೇಹಸಂಬಂಧಿಗಳ ಮೋಹ ಪಾಶಕ್ಕೆ ಸಿಕ್ಕಿ ಸಾಹಸ ಮಾಡುವುದೇನು ಫಲ ಊಹಿಸಿ ನೋಡಲು ಭ್ರಾಂತಿಯದಲ್ಲವೆ 2 ಪೂರ್ವ ಕರ್ಮಾನುಸಾರ ನಡೆಸುವನು ಗರ್ವವಿರಹಿತನು ಗುರುರಾಮವಿಠಲನು 3
--------------
ಗುರುರಾಮವಿಠಲ
ಬಂದಿದೆ ದುರಿತಘಸಂಗ ಶ್ರೀರಂಗಮಂದಮತಿಯೆಂದುಪೇಕ್ಷಿಸದುಳುಹೊ ಪ.ಒಲ್ಲೆನೆಂದರೆ ಬಿಡದೀ ಮನ ತಿಳಿದತ್ತೆಕ್ಷುಲ್ಲ ವೃತ್ತಿಯ ಸೇರಿ ಬಿಡಲೊಲ್ಲದುಕಲ್ಲುಗೊಂಡಿದೆ ಪುಣ್ಯಮಾರ್ಗಕ್ಕೆ ಇದರೊಳುಫುಲ್ಲನಾಭನೆ ಆವ ತೆರದಿಂದ ಸಲಹೊ 1ಕೆಂಡವ ಕೊಂಡು ಮಂಡೆಯ ಬಾಚುತಿದೆಪರಹೆಂಡಿರು ವಿತ್ತದಾಸೆಗೆ ತೊಡಕಿಕಂಡರೆ ಸೊಗಸದು ಭಕುತಿ ವೈರಾಗ್ಯವಪುಂಡರೀಕಾಕ್ಷನೆಗತಿನೀನೆ ಬಲ್ಲೆ2ಮೆಲ್ಲ ಮೆಲ್ಲನೆ ದುಷ್ಕರ್ಮವ ಸಾಧಿಸಿಬಲ್ಲಿದಜವನವರ ಬರಮಾಡಿದೆವಲ್ಲಭಪ್ರಸನ್ವೆಂಕಟ ಕೃಷ್ಣನಿಲ್ಲಿಸು ನಿನ್ನ ನಾಮವ ನಾಲಿಗೆಯಲಿ 3
--------------
ಪ್ರಸನ್ನವೆಂಕಟದಾಸರು
ಮನವೆನ್ನ ಮಾತ ಕೇಳದು - ಮಂದಜ್ಞಾನದಿ |ತನುವಿನಾಸೆಯ ಬಿಡಲೊಲ್ಲದು ಪವನಜನಾಭನೆ ನಿನ್ನ ನಾಮ ಸಾಸಿರವ |ನೆನೆಯದೆ ಕಂಡಕಡೆಗೆ ಎರಗುತಲಿದೆ ಅ.ಪದೇಹ ಸಂಬಂಧಿಗಳಾದವರೈವರು |ಮೋಹಪಾಶದಿಕಟ್ಟಿಬಿಗಿದಿಹರೈ ||ಕಾಯಅನಿತ್ಯವೆಂಬುದನರಿಯದೆ |ಮಾಯಾಪ್ರಪಂಚದಿಂದಲಿ ಬದ್ಧನಾಗಿಹೆ1ಸಾಧುಸಜ್ಜನರ ಸಂಗವ ಮಾಡಿ ಪರಗತಿ-|ಗಾಧಾರವನು ಮಾಡಲೊಲ್ಲದಯ್ಯ ||ಕ್ರೋಧಕುಹಕದುಷ್ಟರೊಡನಾಡಿ ಕಾಲನ |ಬಾಧೆಗೆ ಒಳಗಾಗುವಂತೆ ಮಾಡುತಲಿದೆ 2ಮದಗಜ ಮೈಯ ಮರೆತು ಮುಂದುಗಾಣದೆ |ಕದುವಿನೊಳಗೆ ಬಿದ್ದಂತಾದೆನಯ್ಯ ||ಹೃದಯ ಕಮಲದಲಿ ನಿಂತ ರಕ್ಷಿಸೋ ಎನ್ನ |ಪದುಮಾಕ್ಷ ವರದ ಶ್ರೀಪುರಂದರವಿಠಲ3
--------------
ಪುರಂದರದಾಸರು