ಒಟ್ಟು 9 ಕಡೆಗಳಲ್ಲಿ , 6 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಷ್ಟ ಕಷ್ಟವೋ ಕೃಷ್ಣ ದೃಷ್ಟಿಯಲಿ ನೋಡದಿರೆ ತುಷ್ಟಿಪಡಿಸಲು ನಿನ್ನ ನಾನೆಷ್ಟರವನಯ್ಯ ಪ ಭ್ರಷ್ಟನಾಗಿಹೆ ನಾ ಅಷ್ಟಾಂಗಯೋಗವ ತಿಳಿಯೆ ಒಂ- ದಿಷ್ಟು ಭಕುತಿಯ ಕೊಟ್ಟು ಕಡೆಹಾಯಿಸಯ್ಯ ಅ.ಪ ಸತ್ಯ ಅಸ್ತೇಯ ಬ್ರಹ್ಮಚರ್ಯ ಅಹಿಂಸಾ ಧೃತಿ ದಯಾ ಕ್ಷಮಾರ್ಜಿತ ಮಿತಭುಕ್ತವು ನಿತ್ಯ ಬಾಹ್ಯಾಂತರ ಶೌಚಾದಿ ದಶಗುಣ ಯುತವಾದಯಮ ಉಪಾಸನೆಗಳಿನಿತಿಲ್ಲವೋ ದೇವಾ 1 ನಿಯಮ ಮೊದಲಿಲ್ಲ ಜಪತಪ ಸಂತೃಪ್ತಿ ನಿಯತ ಸಿದ್ಧಾಂತ ಶ್ರವಣ ಲಜ್ಜಮತಿಯು ಶ್ರೀಯಃಪತಿಯ ಪೂಜನ ಆಸ್ತಿಕ್ಯವ್ರತ ದಾನೋ- ಪಾಯವಿಲ್ಲದೇ ಕಡೆ ಹಾಯ್ವುದೆಂತಯ್ಯ 2 ಘಾಸಿಯಾಗಿಹುದಯ್ಯ ಷಡ್ವಿಧಾಸನಗಳೂ ಸ್ವಸ್ತಿಕ ಭದ್ರಪದ್ಮ ಅರ್ಧಾಂಗಾಸನದಿ ಸಿದ್ಧ ಪರ್ಯಂಕಗಳೆಂಬ ಆಸನದಿ ಕುಳಿತು ನಾ ಧೇನಿಸಲರಿಯೆ ಹರಿಯೇ 3 ಪ್ರಾಣಾಯಾಮವ ಕ್ರಮವು ರೇಚಕ ಪೂರಕವು ದಣಿವಿಲ್ಲದೆ ಕುಂಭಕದ ಕ್ರಮವಿಲ್ಲ ತ್ರಾಣವಿಲ್ಲವೋ ವಾಯುಬಂಧ ಮಾಡಲರಿಯೆ ಪ್ರಾಣಪತಿ ನಿನ್ನ ಕರುಣವಿಲ್ಲದಾತನಕ 4 ವಿಷಯಾಭಿಲಾಷೆಯಿಂದ್ಹರಿದು ಹೋಯಿತು ಮನಸು ವಿಷಮವಾಗಿಹುದಯ್ಯ ಮತ್ಸಾಧನ ಪ್ರತ್ಯಾಹಾರ ಸಾಧನವಿಲ್ಲ ಕೃಷಿಮಾಡಿ ಸ್ಥಿರಮನದಿ ಧೇನಿಸಲು ನಾನರಿಯೆ 5 ಧಾರಣೋಪಾಯದೊಳು ಅಣುಮಾತ್ರ ನಾನರಿಯೆ ನರಕ್ರಿಮಿಯಾಗಿ ನಾ ಧರೆಯೊಳುಳಿದೆ ಅರಿಯೆ ಬಾಹ್ಯಾಂತರದಿ ಭೂತಪಂಚಕವಿರುವ ಪರಿ ತಿಳಿದು ಪ್ರಾಣವಾಯು ಸಡಿಲಬಿಡಲರಿಯೆ 6 ಧ್ಯಾನಿಸಲು ಏಕಾಗ್ರಚಿತ್ತವೇ ಎನಗಿಲ್ಲ ಸಂಸ್ತುತಿಸೆ ಸಂಪ್ರಜ್ಞಾ ಅಸಂಪ್ರಜ್ಞವೆಂಬ ಘನಸಮಾಧಿಯೊಳ್ ಪರಿವಿಲ್ಲದಲೆ ನಿನ್ನ ಕರುಣವೆಂತಾಗುವುದೋ ಶ್ರೀ ವೇಂಕಟೇಶಾ 7 ಶುದ್ಧವಾದ ದ್ವೈತತ್ರಯ ತಿಳಿಯದಲೆ ಮುಗ್ಧನಾಗಿಹೆ ನಾನಪರಿಶುದ್ಧನೊ ಶಬ್ದಗೋಚರ ನಿನ್ನ ಪರಿಶುದ್ಧ ಭಾವದಿಂ ಬುದ್ಧಿಪೂರ್ವಕ ತಿಳಿಯೆ ಬದ್ಧಪಾಮರನಯ್ಯ 8 ಕರಣತ್ರಯದಲಿ ಮಾಳ್ವ ಕ್ರಿಯೆಗಳೆಲ್ಲವು ಸತತ ಹರಿಯೇ ಬಿಂಬಕ್ರಿಯವ ನಾನರಿಯದೇ ಕರುಣಶರಧಿಯೆ ನೀ ಕೃಪೆಮಾಡಿ ಪೊರೆಯದಿರೆ ಉರಗಾದ್ರಿವಾಸವಿಠಲ ನಿನ್ನ್ಹ್ಹೊರತು ಗತಿಯುಂಟೆ 9
--------------
ಉರಗಾದ್ರಿವಾಸವಿಠಲದಾಸರು
ಜೀವ ಕರ್ತೃತ್ವದ ಭ್ರಮೆಯ ಬಿಡಿಸೊ ಪ ಜೀವೇಶನೊಡೆಯ ಶ್ರೀ ವೇಣುಗೋಪಾಲ ಹರಿ ಅ.ಪ ಮಿಥ್ಯೆವೆಂಬುದು ಬಲ್ಲೆ ಕರ್ತೃತ್ವ ನಮಗಿಲ್ಲ ಪ್ರತ್ಯಕ್ಷಕಪವಾದದಲ್ಲಿ ಬಾಳ್ವೆ ವ್ಯರ್ಥಧಾವತಿಪಡುವೆ ಸರ್ವಕರ್ತನ ಮರೆದು ಯತ್ನಕೆ ವಶವಲ್ಲ ಮಿಥ್ಯೆ ಭಾವವು ಬಿಡಲು 1 ವಿಷಯ ವಿಷವದು ಬಲ್ಲೆ ತಲ್ಲೋಭ ಬಿಡಲರಿಯೆ ವಿಷಮಗತಿ ಪ್ರವಹದಲಿ ವಿವಶನಾಗಿ ಹುಸಿನಂಬಿ ತೆರಳುತಿಹೆ ಹರುಷ ಕಾಣದೆ ನಿಜದೆ ಕೃಶನಾದೆ ಹರಿಯೆನ್ನ ಕೈಪಿಡಿದು ಉದ್ಧರಿಸೊ 2 ಗುಣವಿಲ್ಲ ದೋಷಿಲ್ಲದೆಡೆಯಿಲ್ಲ ಎನ್ನಲ್ಲಿ ದನುಜಾರಿ ನಿನ್ನವರ ಕರುಣ ಉಂಟೊ ಪ್ರಣತಾರ್ಥಿ ಹರ ಶ್ರೀ ಜಯೇಶವಿಠಲನಲ್ಲಿ ವಿನುತ 3
--------------
ಜಯೇಶವಿಠಲ
ತನ್ನ ತಾ ತಿಳಿಯುವದೆ ಜ್ಞಾನ ಮನಮುಟ್ಟು ಪೂರ್ಣ ಚೆನ್ನಾಗಿ ಸದ್ಗುರುವಿನ ಕೇಳಿರೊ ಖೂನ ಧ್ರುವ ತನು ಮನವಿಟ್ಟು ತಿಳಿವದೀ ಗುರುಗುಟ್ಟು ಧನ ದ್ರವ್ಯಾರ್ಜಿತವನಿಟ್ಟು ಕೇಳಿ ಕಿವಿಗೊಟ್ಟು ಅನುಬವದ್ಹೆಚ್ಚಿ ಮೆಟ್ಟು ಸಾಧಿಸಿ ವೈರಾಗ್ಯ ಕೊಟ್ಟು ಖೂನಮಾಡಿಕೊ ಬೇಕಿಟ್ಟು ಅನುಮಾನ ಬಿಟ್ಟು 1 ಗಿಳಿಯಾಡಿದಂತೆ ನುಡಿಯಾತಕ ಬಾಹುದು ನೋಡಿ ಹೇಳ್ಯಾಡಕೊಂಬುದೀಡ್ಯಾಡಿ ಮಾತಿನ ರೂಢಿ ಬೆಳಗಿನೊಳು ಬೆರದಾಡಿ ಘನಕ ಘನ ಕೂಡಿ 2 ನುಡಿ ನಡಿ ಒಂದಾದರೆ ವಸ್ತು ತಾನಿಹುದು ದೂರ ಬಿಡಲರಿಯದು ಹಾಂಗಾದರ ಎಂದಿಗಾರು ಒಡಗೂಡಿ ನೋಡಿದರೆ ತನ್ನೊಳು ತಾಂ ನಿಜ ಖರೆ ಸಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತನ್ನ ಪ್ರಾಪ್ತಿಯ ಫಲವ ತಾನರಿಯದೆ ಪ ಇನ್ನು ನುಡಿವುದು ಮೂರ್ಖತನವಲ್ಲದೆ ಅ ಸರಸಿಜೋದ್ಭವನು ಫಣೆಯೊಳು ಬರೆದು ನಿರ್ಮಿಸಿದತೆರನೊಂದು ಬೇರುಂಟೆ ತಾನರಿಯದೆಕೆರಕೊಂಡು ಕಂಡವರ ಕೂಡೆ ತಾನಾಡಿದರೆನೆರೆ ದುಃಖವಿದು ಬಿಟ್ಟು ಕಡೆಗೆ ತೊಲಗುವುದೆ 1 ವಿಧಿ ಬೆನ್ನ ಬಿಡಲರಿವುದೆಅಡಿಗಡಿಗೆ ಶೋಕದಲಿ ಅವರಿವರಿಗುಸುರಿದರೆಬಡತನವು ತಾ ಬಿಟ್ಟು ಕಡೆಗೆ ಕದಲುವುದೆ2 ದೆಸೆಗೆಟ್ಟು ನಾಡದೈವಂಗಳಿಗೆ ಎರಗಿದರೆನೊಸಲ ಬರೆಹವ ತೊಡೆದು ತಿದ್ದಲಳವೆವಸುಧೇಶ ಕಾಗಿನೆಲೆಯಾದಿಕೇಶವಸನಂಘ್ರಿಬಿಸಜವನು ಕಂಡು ನೀ ಸುಖಿಯಾಗು ಮನುಜ3
--------------
ಕನಕದಾಸ
ನವನೀತ ಚೋರ ಎಲ್ಲರ ಭುಲ್ಲೈಸಿದಿ ನಂದಕುಮಾರ ಧ್ರುವ ಪರಿಪರಿ ಅಡಿಸಿದಿ ನೀ ಪರನಾರಿಜಾರ ಮರುಳು ಮಾಡಿದಿ ನಮ್ಮ ಗೊಲ್ಲತೇರ ಕರಗೂಡುತಲಿ ತಿಂದ್ಯೋ ನೀ ಪಾಲ್ಮೊಸರ ಆರಿಗೆ ಹೇಳಬೇಕು ನಿನ್ನ ದೂರ 1 ಮಾಡದ ಮಾಡಿದಿ ನೀ ಮನಬಂದ್ಹಾಂಗೆ ಪಡೆದು ಲೋಕದಲುಸುರಗುಡದ್ಹಾಂಗೆ ಹಿಡಿದೇನಂದರ ನೀ ಕೈಗೂಡಿ ಬ್ಯಾಗೆ ತುಡುಗತನ ಮಾಡಿದಿ ನಿನಗಕ್ಕು ಹಾಂಗೆ 2 ಬಿಡಲರಿ ಯೆವು ನಿನ್ನ ತಿಳಿಕೊ ವಿಚಾರ ಮಾಡಲಿಕ್ಕಾಗದು ಇದಕೆ ತಾ ಪರಿಹಾರ ಹಿಡಿದೇವು ನಿನ್ನಾಟ ಕಂಡು ಕಣ್ಣಾರ ಮೂಢ ಮಹಿಪತಿಗಾಯಿತು ತಾ ಮನೋಹರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನಹುದೋ ಘನ ಮಹಿಮ ಮುನಿಜನರೊಡಿಯ ಪೂರ್ಣ ದೀನದಯಾಳು ನೀನೆ ಹರಿಯೆ 1 ಪತಿತಪಾವನನೆಂದು ಶ್ರುತಿ ಸಾರುವರು ಕೇಳಿ ಅತಿ ಹರುಷದಲಿ ಬಂದೆನೊ ಹರಿಯೆ 2 ಮತಿ ಹೀನನವಗುಣವ ಕ್ಷಿತಿಯೊಳು ನೀ ನೋಡದೆ ಪಥವಗೊಳಿಸುವದು ಎನಗೆ ಹರಿಯೆ 3 ಮರೆಯ ಹೊಕ್ಕಿಹೆ ನಿಮ್ಮ ಚರಣಕಮಲಕೆ ಪೂರ್ಣ ಕರುಣದ ಅಭಯ ತೋರೊ ಎನಗೆ ಹರಿಯೆ 4 ಅರಿಯೆ ನಾ ನಿಮ್ಮ ವಿನಾ ಬ್ಯಾರೆ ಇನ್ನೊಂದು ಪಥ ಶಿರವ ನಮಿಸಿಹೆನೊ ನಿಮಗೆ ಹರಿಯೆ 5 ಶರಣಾಗತರ ಹೊರೆವ ಬಿರದು ನಿಮ್ಮದು ಪೂರ್ಣ ಸಾರುವದು ತಿಳಿದುಕೊಳ್ಳೊ ಹರಿಯೆ 6 ಬಿಡಲರಿಯೆ ನಾ ನಿಮ್ಮ ಪಿಡಿದು ಶ್ರೀಪಾದವನು ನೋಡಿ ದಯಮಾಡೊ ಎನಗೆ ಹರಿಯೆ 7 ಬ್ಯಾರೆ ಗತಿ ಕಾಣೆ ನಿಮ್ಮ ಚರಣಕಮಲದಾಣೆ ಸಿರಿ ಸಕಲಪದವು ನೀನೆ ಹರಿಯೆ 8 ಭಿನ್ನವಿಲ್ಲದೆ ನೋಡಿ ಚೆನ್ನಾಗಿ ಮಹಿಪತಿಯ ಧನ್ಯಗೈಸೊ ಪ್ರಾಣವ ಹರಿಯೆ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪ್ರಾಚೀನ ಕರ್ಮವಿದು ಬಿಡಲರಿಯದುಯೋಚನೆಯ ಮಾಡಿ ಬಳಲುವುದೇಕೆ ಮನುಜ ಪ ಕೌಪೀನ ಬಿಡಿಸಲಿಲ್ಲ ಹರಿಯು 1 ಲೋಕಾದಿಲೋಕಗಳ ಚರಿಸುವ ರವಿರಥಕೆಏಕಗಾಲಿಯು ಏಳುಕುದುರೆಗಳ ಕಟ್ಟಿಲೋಕಲೋಕಗಳನೆಲ್ಲ ಚರಿಸುವ ಅರುಣನಿಗೆಬೇಕೆಂದು ಚರಣಗಳ ಕೊಡಲಿಲ್ಲ ಹರಿಯು 2 ಸಾಸಿರ ನಾಮದ ಒಡೆಯಾದಿಕೇಶವನಬೇಸರಿಸದೆ ಹೆಗಲ ಮೇಲಿರಿಸಿಕೊಂಡುಆಕಾಶ ಮಾರ್ಗದಲಿ ಚರಿಸುವ ಗರುಡನಿಗೆನಾಸಿಕದ ಕೊನೆಡೊಂಕು ತಿದ್ದಲಿಲ್ಲ ಹರಿಯು 3
--------------
ಕನಕದಾಸ
ಮಂದಮತಿ ನಾನಯ್ಯ ಮಂಗಳಾಂಗಾ ಒಂದಾದರೂ ಗತಿ ಧರ್ಮ ಚಿಂತಿಸಲಿಲ್ಲಾ ಪ ಜಪತಪಗಳರಿಯೆ ಉಪವಾಸಗಳರಿಯೆ ಕೃಪೆ ಮಾಡಲರಿಯೇ ಪರಿಜನಗಳಲ್ಲಿ ಕುಪಿತವನು ಬಿಡಲರಿಯೆ ಅಪರಿಮಿತವಾಗಿದ್ದ ಅಪರಾಧಗಳ ಮಾಡಿ ತಪಿಸುವೆನು ಭವದೊಳಗೆ 1 ಯಾತ್ರೆ ಮಾಡಲರಿಯೆ ತೀರ್ಥ ಮೀಯಲರಿಯೆ ಗಾತ್ರದಂಡಣಿಯ ಮಾಡಲರಿಯೆ ಗಾತ್ರ ಲಘು ನೋಡಿ ಸ ತ್ಪಾತ್ರರನು ಭಜಿಸದೆ ವ್ಯರ್ಥ ಕಾಲವ ಕಳೆವ2 ಅನ್ನದಾನವರಿಯೆ ಮನ್ನಣೆ ಮಾಡಲರಿಯೆ ಚನ್ನಾಗಿ ಬಂಧುಗಳು ಪೊರಿಯಲರಿಯೆ ಎನ್ನ ಮನದೊಡಿಯ ಶ್ರೀ ವಿಜಯವಿಠ್ಠಲರೇಯಾ ನಿನ್ನ ಭಕುತಿ ಒಮ್ಮೆ ಪಡಿಯಲರಿಯೆ 3
--------------
ವಿಜಯದಾಸ
ಪ್ರಾಚೀನ ಕರ್ಮವು ಬಿಡಲರಿಯದುಯೋಚನೆಯ ಮಾಡಿ ನೀ ಬಳಲಬೇಡ ಪ.ಮುನ್ನಮಾಡಿದಕರ್ಮ ಬೆನ್ನಟ್ಟಿ ಬರುತಿರಲುತನ್ನಿಂದ ತಾನೆ ತಿಳಿಯಲರಿಯದೆಇನ್ನು ದೇಹವನು ಆಶ್ರಯಿಸಿ ಫಲವೇನುಉನ್ನತ ಹರುಷದಲಿ ಮನದಿ ಯೋಚಿಸುವ 1ಲೋಕಾದಿ ಲೋಕಗಳ ತಿರುಗುವರವಿ ರಥಕೆಏಕಗಾಲಿಗೆ ಏಳು ಕುದುರೆಕಟ್ಟಿಆಕಾಶ ಮಾರ್ಗದಲಿ ತಿರುಗುವ ಅರುಣನಿಗೆಬೇಕಾದ ಚರಣಗಳ ಕೊಡಲಿಲ್ಲ ಹರಿಯು 2ಸೇತುವೆಯುಕಟ್ಟಿ ಲಂಕೆಗೆ ಹಾರಿ ಹನುಮಂತಖ್ಯಾತಿಯನೆ ಮಾಡಿ ರಾವಣನ ಗೆದ್ದುಸೀತೆಯನು ತಂದು ಶ್ರೀರಾಮನಿಗೆ ಕೊಡಲಾಗಿಪ್ರೀತಿಯಿಂ ಕೌಪೀನವ ಬಿಡಸಲಿಲ್ಲ ಹರಿಯು 3ನಿತ್ಯದಲಿ ಗರುಡ ಸೇವೆಯ ಮಾಡಿ ವಿಷ್ಣುವನುಹೊತ್ತುಕೊಂಡು ಇದ್ದ ಜಗವರಿಯಲುಅತ್ಯಂತ ಸೇವಕನೆಂದು ಮೂಗಿನಡೊಂಕುಎತ್ತಿ ನೆಟ್ಟಗೆ ಮಾಡಲಿಲ್ಲ ಶ್ರೀ ಕೃಷ್ಣ 4ಇಂತೆಂದು ಈಪರಿ ತಮ್ಮೊಳಗೆ ತಾವು ತಿಳಿದುಭ್ರಾಂತನಾಗದೆ ಬಯಕೆಗಳನುಜರಿದುಶಾಂತ ಮೂರುತಿಸಿರಿ ಪುರಂದರವಿಠಲನ
--------------
ಪುರಂದರದಾಸರು