ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಿಕ್ಷಾಂ ದೇಹಿಮೇ ಸ್ವಾಮಿನ್ ಕುಕ್ಷಿಯು ತುಂಬುವ ತೆರದಲಿ ಭಕ್ತಿಯ ಪ ಭಿಕ್ಷೆಯ ಬೇಡಲು ಶಿಕ್ಷಿತನಲ್ಲವೊ ಕುಕ್ಷಿಯು ಬರಿದಾಗಿಹುದು ಭಕ್ತಿಯ ಅ.ಪ ಆರುಮಂದಿ ಶತ್ರುಗಳಿರುವರು ಬಲು ಕ್ರೂರರಿವರು ಎನ್ನನು ಬಿಡರೊ ದೂರ ಕಳುಹಲಾಹಾರವು ಸಾಲದು ಶಮ ದಮ 1 ನಮ್ಮವರಿರುವರು ಹತ್ತುಮಂದಿಗಳು ಸುಮ್ಮನಿರರು ಒಂದರಘಳಿಗೆ ಸಮ್ಮತಿಗೊಡದಿರೆ ಬಳಲಿಸುವರು ಇವ ರ್ಹಮ್ಮನು ಮುರಿಯುವೆ ವಿಷಯ ವಿರಕ್ತಿಯ 2 ಕತ್ತಲೆಯಲಿ ಬಂದಿರುವೆನು ಹೊಟ್ಟೆಯು ಹತ್ತಿ ಹೋಯಿತೊ ಹಸಿವಿನಲಿ ಎತ್ತ ಸುತ್ತಿದರೂ ತುತ್ತನು ಕಾಣೆನೊ ಭಕ್ತ ಪ್ರಸನ್ನ ದಯಾಜಲನಿಧೇ ಜ್ಞಾನ 3
--------------
ವಿದ್ಯಾಪ್ರಸನ್ನತೀರ್ಥರು
ಬಂದೆಯಾ ಬಾರೊ ಗೋಪಾಲ ಕೃಷ್ಣಬಂದೆಯಾ ಬಾರೊ ಪ.ಇಲ್ಲಿಯ ಗೊಲ್ಲತೇರೆಲ್ಲರುಬಲ್ಲಿದಕಾಮುಕ ನಲ್ಲೇರುಫುಲ್ಲಲೋಚನ ನಿನ್ನ ಮುದ್ದಿನ ಮೊಗವಮೆಲ್ಲನೆ ಚುಂಬಿಸಿ ಬಿಡರೊ ಮಗುವೆ 1ಚಿಕ್ಕವನೆಂದಾಡಿಸಿ ನಿನ್ನಚಕ್ಕಂದಿಲಿ ಬಾಡಿಸಿ ಚಿನ್ನಸಕ್ಕರೆ ಮಾತಲಿ ಬಿಗಿದಪ್ಪುವರೊಕಕ್ಕಸಕುಚದಂಗನೆ ಗೋಪಿಯರೊ 2ಇರುಳ್ಹಗಲೆನ್ನ ಕಂದನ್ನಮರುಳಿಕ್ಕುವರೆಂದಂಜುವೆ ನಾತರಳನ ಕಾಲಿಂಗೆರಗುವೆ ನೋಡೋತರಳೇರೊಡಗೂಡಾಡಲಿ ಬೇಡೊ 3ನಿಲ್ಲದೆ ನಿನ್ನ ಬರಮಾಡುವರೊಚೆಲ್ವಹ ಹಣ್ಣುಗಳ ನೀಡುವರೊಒಳ್ಳೆ ನಾರೇರನುದಿನ ನಿನ್ನಬುಲ್ಲಿ ಬೆಲ್ಲಕೆ ಮನಸೋತಿಹರಣ್ಣ 4ವಿಗಡೇರ ದೃಷ್ಟ್ಯಾಗಲೆತಗಲಿದವೈ ನಿನ್ನ ಮೈಯಲಿಅಗಲದಿರೆನ್ನ ಪ್ರಸನ್ನವೆಂಕಟನಗಪತಿ ಬಡವರ ಧನವೆ ಕೃಷ್ಣ 5
--------------
ಪ್ರಸನ್ನವೆಂಕಟದಾಸರು
ಮಾಧವಮಧುಸೂದನ- ಯಾದವಕುಲರನ್ನ ಯ-|ಶೋದೆ ಕರೆದಳು ಬಾರೆಂದು- ಮುದ್ದಿಸಿ ಮಗನ ಪಸಂಗಡಿಗರನೆಲ್ಲ ಬಿಟ್ಟು ಬಾರೈ ಚೆಲುವ |ಮುಂಗೈಯವಾಕು ಬೆರಳ ಹೊನ್ನುಂಗರ ||ಝಂಗಿಪ ಹುರಿಗೆಜ್ಜೆ ಉಡೆದಾರವನು ಕಂಡು |ಅಂಗನೆಯರು ನಿನ್ನನೊಯ್ವರೊ ||ಕಂಗಳ ಸಿರಿಯೆ ನೀ ಕಲ್ಪವೃಕ್ಷವೆ ಎಂದು |ಡಿಂಗರಿಗರು ಕಂಡರೆ ಬಿಡರೊ ನಿ- ||ನ್ನಂಘ್ರಿಯ ಮೇಲೆ ನೊಸಲನಿಡುವೆ ಕೃಷ್ಣ |ಕಂಗಳ ಸಿರಿಯೆ ಬಾರೋ- ರಂಗಯ್ಯ 1ಬಾಲಕರೊಡನಾಟ ಸಾಕು ಬಾ ಬಾರೈಯ |ನೀಲಾಂಗ ನಿನ್ನ ಮುಂದಲೆ ಮುತ್ತಿನರಳೆಲೆ ||ಕೀಲುಮಾಗಾಯಿ- ಮಾಣಿಕ ಪುಲಿಯುಗರ ಕಂಡು |ಸೋಲ್ವರೊ ನಿನಗೇಸೋ ಸೋಗೆಯರು ||ಶ್ರೀಲೋಲ ನಿನ್ನಲಿ ಕಂಸನ ತುಂಬಿದೊ-|ಡ್ಡೋಲಗದೊಳು ರಕ್ಕಸರು ಪಂಥವನಾಡೆ ||ವೀಳ್ಯವ ಪಿಡಿದೆ ಕೊಲುವೆನೆಂದು ನಿನ್ನಯ |ಕಾಲಿಗೆ ಎರಗುವೆ ಬಾರೊ-ರಂಗಯ್ಯ 2ಬೊಮ್ಮದ ಮರಿಯೆ ವಿಶ್ವವನೆಲ್ಲ ಹೃದಯದೊ-|ಳೊಮ್ಮೆ ತೋರುವನೆಂದು ಕಂಡು ನಾ ಬಲ್ಲೆ ||ಎಮ್ಮ ಮನಕೆ ಅಹಲ್ಲಾದನು ನೀನೆ |ಉಮ್ಮಯದಿಂ ಭಾಗವತರ ಪಾಲಿಸುತಿಪ್ಪ-||ಗಮ್ಯಗೋಚರ ಸಿರಿಪುರಂದರವಿಠಲ ತೊರೆ-|ದಮ್ಮೆಯ ಕೊಡುವೆನು ಬಾರೋ-ರಂಗಯ್ಯ 3
--------------
ಪುರಂದರದಾಸರು