ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ | ಕೋಲು ಸದ್ಗುರುವಿನಾ ಬಲಗೊಂಬೆ ಕೋಲೆ ಪ ಶರಣು ಶರಣು ಗುರುವೇ ಶರಣರ ಸುರತರುವೆ | ಶರಣರ ಹೃದಯದೊಳಗಿರುವೇ ಕೋಲೆ | ಅನುದಿನ | ಕರುಣದ ಮಳೆಯಾಗರೆವುತ ಕೋಲೆ 1 ಕರಣ ತೃಯದಿನಂಬಿ ಸ್ಮರಣೆಯ ಮಾಡಲು | ಧರಣಿಯಲಿಷ್ಟಾರ್ಥ ಕೊಡುತಿಹ ಕೋಲೆ | ಧರಣಿಯಲಿಷ್ಟಾರ್ಥ ಕೊಡುತಿಹ ಜನದಂತ ಕರಣದೊಳಗೆ ಬಯಕೆ ನಿಲದಂತೆ ಕೋಲೆ 2 ಚರಣ ಸರಸಿಜಕ ಶರಣ ಹೋಗಲು ಜನ್ಮ | ಮರಣದ ಭಯಕಂಜಿ ಜನರು ಕೋಲೆ | ಮರಣದ ಭಯಕಂಜಿ ಜನರು ಬರೆ ಕಂಡು | ಕರುಣಾ ಕಟಾಕ್ಷದಿ ನೋಡುವ ಕೋಲೆ 3 ಕರದಿಂದ ಪಿಡಿದವನ ತರಣೋಪಾಯದ ಬೋಧಾ | ಭರದಿಂದ ಬೀರುವೆ ಮನಸಿಗೆ ಕೋಲೆ | ಭರದಿಂದ ಬೀರುವೆ ಮನಸಿಗೆ ಭವದೊಳು | ಮರಳ್ಯವ ಸಿಕ್ಕದಂತೆ ಮಾಡುವೆ ಕೋಲೆ 4 ಜ್ಞಾನವೆಂಬಂಜನೆ ಸೂನಯನಕ ಊಡಿ | ಹೀನ ಅಜ್ಞಾನವ ಹರಿಸೂವ ಕೋಲೆ ಹೀನ ಅಜ್ಞಾನವ ಹರಿಸುವೆ ಬೇಗದಿ | ಸ್ವಾನುಭವದ ಸುಖ ಬೀರುವೆ ಕೋಲೆ 5 ನಾನಾ ಹಂಬಲವನ ಏನೆನುಳಿಯದ್ಹಾಂಗ | ತಾನಿದ್ದ ಬದಿಯಲಿ ಇಹಪರ ಕೋಲೆ | ತಾನಿದ್ದ ಬದಿಯಲಿ ಇಹಪರ ಸುಖಗಳ | ನೀನಿದಿರಿಡುತಿಹೆ ಸದಮಲ ಕೋಲೆ 6 ಎಂಟು ಸಿದ್ಧಿಗಳು ಉಂಟಾಗಿ ಬಂದರೆ | ವೆಂಟಣಿಸಿ ಅದರ ಕಡೆಗೇ ಕೋಲೆ | ವೆಂಟಣಿಸಿ ಅದರ ಕಡೆಗೇ ನೋಡ ನಿನ್ನ | ಬಂಟನೆಯ ಮಹಿಮೆಯ ಜಗದೊಳು ಕೋಲೆ 7 ನಿನ್ನ ಮಹಿಮೆಯನ್ನು ಇನ್ನು ನಾ ಪೊಗಳಲು | ಎನ್ನಳವಲ್ಲಾ ಜಗಕಲ್ಲಾ ಕೋಲೆ | ಎನ್ನಳವಲ್ಲಾ ಜಗಕಲ್ಲಾ ಸದ್ಗುರು | ನಿನ್ನ ಮಹಿಮೆ ಬಲ್ಲೆ ನೀನವೆ ಕೋಲೆ 8 ಮಹಿಗೆ ನೀ ಪತಿಯಾಗಿ ವಿಹರಿಸುತಿಹೆ ದೇವಾ | ಸಹಕಾರನಾಗಿ ಭಕ್ತರ್ಗೆ ಕೋಲೆ | ಸಹಕಾರನಾಗಿ ಭಕ್ತರ್ಗೆ ಅನವರತ | ಅಹಿತರವಂಡಣೆ ಮಾಡುತ ಕೋಲೆ 9 ಮುನ್ನಿನಪರಾಧವ ಇನ್ನೇನು ನೋಡದೇ | ಎನ್ನನುದ್ಧರಿಸು ದಯದಿಂದ ಕೋಲೆ | ಎನ್ನನುದ್ಧರಿಸು ದಯದಿಂದ ಮತಿಕೊಟ್ಟು | ನಿನ್ನ ಕೀರ್ತಿಯ ಕೊಂಡಾಡುವಂತೆ ಕೋಲೆ 10 ಎಂದೆಂದು ನಿಮ್ಮ ಪದ ಹೊಂದಿದ್ದವನು ನಾನು | ಕುಂದ ನೋಡದೇ ಸಲಹಯ್ಯಾ ಕೋಲೆ ಕುಂದ ನೋಡದೇ ಸಲಹಯ್ಯಾ ಮಹಿಪತಿ | ಕಂದನು ಮುಗ್ಧನೆಂದು ಬಿಡಬ್ಯಾಡಿ ಕೋಲೆ 11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸತ್ಯಾದ ನಡಿ ಹಿಡಿರೋ ಮನಜರು ಸತ್ಯದಾ ನಡಿಗಿನ್ನು ಮತ್ತೊಂದು ಭಯವಿಲ್ಲ ಧ್ರುವ ಸತ್ಯದಾನಡಿಗಿನ್ನು ಸತ್ಯ ನುಡಿಯಲು ಬೇಕು ಸತ್ಯಂ ಸತ್ಯ ಶರಣರೆಲ್ಲಾ ಎತ್ಯಾಡಿಸುವಂತೆ ಮೈಯೊಳಗಿಹ ಕಾವನೈಯನ ಮರಿಯಬ್ಯಾಡಿ 1 ಹುಸಿಯಾಡಿ ನೀವಿನ್ನು ಘಾಸಿಗೆ ಬೀಳಲಿ ಬ್ಯಾಡಿ ವ್ಯಸನಕಾಗಿ ಬಿದ್ದು ದೆಶೆಗೆಟ್ಟು ಹೋಗಬ್ಯಾಡಿ 2 ಅಶೆಯಕೊಟ್ಟು ನಿರಾಶಯೆ ಮಾಡಲಿಬ್ಯಾಡಿ ಘಾಸಿ ಮಾಡಲಬ್ಯಾಡಿ 3 ಘಟ್ಟಿಸಿ ಒಬ್ಬರ ಹೊಟ್ಟೆಹೊರಿಯಬ್ಯಾಡಿ ಸಿಟ್ಟಿಲಿ ನೆಂಟರು ತುಟ್ಟಿಸಿ ಬಿಡಬ್ಯಾಡಿ4 ಗುಟ್ಟಿನೊಳಿಹ ಮಾತು ತುಟ್ಟಿಗೆ ತರಬ್ಯಾಡಿ ಹೊಟ್ಟೆಲೆ ಹಡೆದವರ ಕಟ್ಟಿಗೆ ತರಬ್ಯಾಡಿ 5 ಲೆತ್ತಪಗಡಿ ಅಡಿ ಹೊತ್ತುಗಳಿಯಬ್ಯಾಡಿ ತುತ್ತುಕುಡಿಯೊಳಿದ್ದಾ ಪತ್ತಬಡಲಿಬ್ಯಾಡಿ 6 ಹರಿಹರ ಭಕ್ತಿಗೆ ಬ್ಯಾರೆ ನೋಡಲಿಬ್ಯಾಡಿ ಗುರುಕೃಪೆ ಪಡೆದಿನ್ನು ಗುರುತಿಟ್ಟು ನೋಡಿರೋ 7 ಅನ್ನಬೇಡಿದವ ಗಿಲ್ಲೆನ ಬ್ಯಾಡಿ ಹೊನ್ನು ಹೆಣ್ಣಿನ ಮ್ಯಾಲೆ ಕಣ್ಣಿಟ್ಟು ಕೆಡಬ್ಯಾಡಿ 8 ಅಂತರಾತ್ಮದ ಪರಮಾತ್ಮನ ತಿಳಕೊಳ್ಳಿ ಸ್ವಾತ್ಮ ಸುಖದ ಸವಿ ಸೂರ್ಯಾಡಿಕೊಳಲಿಕ್ಕೆ 9 ಸ್ವಹಿತ ಸುಖದ ಮಾತು ಸಾಧಿಸಿಕೊಳಲಿಕ್ಕೆ ಮಹಿಪತಿ ಹೇಳಿದ ಮಾತು ಮನ್ನಿಸಿ ತಿಳಿಕೊಳ್ಳಿ 10
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಿಡಿ ಹಿಡಿರಿಂದು ಸಿಕ್ಕಿದ ಕಳ್ಳನಾ ಬಿಡಬ್ಯಾಡಿರೆಂದಿಗೆ ಹಜ್ಜೆನೆಲಿಗೆ ತಾರನಾ | ಮೈಯ್ಯ ದೋರನಾ ಪ ಹೃದಯದೋಳಗಿನಾ ಗಂಟವ ಬಿಡುತಾ ಮುದದಿಕುಳ್ಳಿರಲಲ್ಲಿ ಬಂದು ನೋಡುತಾ ಇದರ ಚಿತ್ತ ಪೇಠಾರಿಗೆ ಕೈಯ್ಯಾನೀಡುತಾ ಒದಗಿಕದ್ದೊಯ್ದತಿರಗದೆ ಧನಿ ಮಾಡುತಾಧನಿ ಮಾಡುತಾ 1 ಖೂನ ತನ್ನಯ ಬಲ್ಲಾಸಾಧುಜನವಾ ಕಾಣುತಾರ್ಜಿತ ಶೆಳೆದು ಕೊಂಡು ಧನವಾ ಏನ ಹೇಳಲಿ ಬಿಡನು ಅವರ ಪ್ರಾಣವಾ ವನವಾಕೊಂಡು ಗೋಧನವಾ 2 ಅಡದಾರಿಯಾ ನಡದು ಹೋಗಿ ಬಿದ್ದನಾ ನಡುವೆ ತೊಳಲಿಸುವನು ವಿರುದ್ಧನಾ ಹಿಡಿ ಗುರು ಮಹಿಪತಿ ಪ್ರಭು ಪ್ರಸಿದ್ಧನಾ ಬಿಡದೆ ಭಂಡಾರಕಾಯಲಿಡುವ ಪ್ರಬುದ್ಧನಾ ವಾಜಿಲಿದ್ದನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು