ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಣಲಿಲ್ಲವೆಂದೆನಬೇಡಿ ಪ ಜಾಣನವನು ನಿಮ್ಮ ಕೋಣೆಯೊಳಗಿರುವಾ ಗು ಡಾಣವ ತುಡುಕುವ ನೆರೆನೋಡಿ ಅ.ಪ ಸುಲಭನು ನಿಮಗವನೊಲಿವನು ನಿಮ್ಮೆಡೆ ನಿಲುವನು ನಲಿವನು ಕೈನೀಡೀ ಸಲಿಸಿರಿ ಬೆಣ್ಣೆಯ ಮೆಲುವನು ಕಿಲಕಿಲ ನುಲಿವನು ಚಲಿಸಲು ಬಿಡಬೇಡಿ 1 ಅಳುಕುತ ಬಳುಕತ ಬಳಲುತ ಸುಳಿಯುತೆ ಘಳಿಲನೆ ಪೋಪನೆಚ್ಚರವಿರಲಿ ಎಳನಗೆಯಿಂದ ಪಾಲೆರೆಯಿರಿ ಮನ ದೊಳಚ್ಚಳಿಯದ ಮೋದವು ನೆಲೆಸಿರಲಿ 2 ಮನವೆಂಬುವುದೇ ವನರುಹವಮ್ಮಾ ಕನಸುನೆನಸಿನೊಳಾ ವನಜವನರ್ಪಿಸೆ ನೀನೆಂಬುದನೇ ಮರೆಯುವಿರಮ್ಮಾ [ತನುಮನ ಅವನಡಿ ಸೇರುವುದಮ್ಮಾ] 3 ಪಡಸಾಲೆಯೊಳಿವ ನಿಲ್ಲುವನಲ್ಲಾ ಅಡಿಗೆಯ ಕೋಣೆಯ ಬಿಡುವನಲ್ಲ ಒಡೆಯ ಶ್ರೀಮಾಂಗಿರಿಪತಿಯನು ನೋಡದ ಮಡದಿಯಿಲ್ಲವೆಂಬುದು ಸಟೆಯಲ್ಲ 4 ನೀವಿರುವಾಯೆಡೆ ಪಾಲ್ಗಡಲಮ್ಮಾ ನೀವಡಿಯಿಡುವುದೇ ಕಡೆಗೋಲಮ್ಮಾ ದಧಿ ನವನೀತವು ನೀವಿರೆ ಮಾಂಗಿರಿರಂಗನುಂಟಮ್ಮಾ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಧ್ವಮತದ ಸಿದ್ದಾಂತದ ಪದ್ಧತಿ |ಬಿಡಬೇಡಿ ಬಿಡಬೇಡಿ ಪ.ಹರಿ ಸರ್ವೊತ್ತಮನಹುದೆಂಬ ಙ್ಞÕನವ |ತಾರತಮ್ಯದಲಿ ತಿಳಿವ ಮಾರ್ಗವಿದು 1ಘೋರ ಯಮನ ಬಾಧೆ ದೂರಕೆ ಮಾಡಿ ಮು -ರಾರಿಯ ಚರಣವ ಸೇರುವ ಮಾರ್ಗವು 2ಭಾರತೀಶ ಮುಖ್ಯ ಪ್ರಾಣಾಂತರ್ಗತ |ನೀರಜಾಕ್ಷನಮ್ಮ ಪುರಂದರವಿಠಲನ3
--------------
ಪುರಂದರದಾಸರು
ಶ್ರೀ ವೆಂಕಟೇಶನ ಬಿಡಬೇಡಿ ಪ.ಹಲವು ದೈವಕೆ ಹಲ್ಲು ತೆರೆಯದೆ ಹೊಗಳದೆಛಲದೆ ಮನದಣಿಯೆ ಕೊಂಡಾಡಿ 1ಸುರಭಿಯ ಬಿಟ್ಟು ಕಂಡಾವಿನ ಬೆಂಬತ್ತಿತಿರುಗದೆ ಕಣ್ಣುದಣಿಯೆ ನೋಡಿ 2ಸ್ಥಿರವಲ್ಲ ಮಿಕ್ಕವರ ವರಂಗಳು ಚರಂಗಳುಪರಸನ್ನವೆಂಕಟಪತಿಯ ಬೇಡಿ 3
--------------
ಪ್ರಸನ್ನವೆಂಕಟದಾಸರು