ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೇವಮ್ಮ ರಂಗನಾ |ಕಂಡೇವಮ್ಮಾ ಕೃಷ್ಣನಾ ಪ ಹೃದಯದೊಳಗಿನ ಸದಮಲ ಬ್ರಹ್ಮನಾ 1 ಬಿಡದೆವೆ ಗೋಕುಲದಿ ಸಂಚರಿಪನಾ 2 ಗುರುಮಹಿಪತಿ ಪ್ರಭು ಕರುಣ ಕಟಾಕ್ಷದಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಡಂಭಕ ಹರಿದೂರ ಪ್ರಾಣೀ ಪ ಅಂಬುಜನಾಭನ ಇಂಬನ ಪಡಿಯದೇ| ಡೊಂಬನ ಪರಿಯಾಚಾರ ಪ್ರಾಣೀ ಅ.ಪ ಅಬ್ಧಿಶಯನ ಸಿರಿನಾಥನ ಒಲುಮೆಯ| ಲಬ್ಧ ದೊರೆಯದೆ ವಿಚಾರಾ|| ಲಬ್ಧನಾಗಿ ಧನ ಮಾನಕಬಿಟ್ಟಿನೀ| ಶಬ್ದದಂಗಡಿ ಪ್ರಸರಾ|ಪ್ರಾಣೀ 1 ಪೊಡವಿಯೊಳಗ ಉಗ್ರಸಾಧನದಿಂದಲಿ| ಬಿಡದೆವೆ ತವಶರೀರಾ||ಒಡನೆ ಮರೆದು ರಿಧ್ಧಿಸಿಧ್ಧಿಯ ಬಲದಲಿ| ಹಿಡದಿ ಮನದಿ ಅಹಂಕಾರ|ಪ್ರಾಣೀ 2 ಅದಿತತ್ವದಾಗಲೆ ಸಾಧಿಸೇನೆಂದರೆ| ಸಾಧನ ಕೇಳು ಸುಸಾರಾ|| ಭೇದಿಸು ಮಹಿಪತಿ ನಂದನ ಸಾರಿದ| ಸಾಧು ರಾಶ್ರಯ ಮನೋಹರ|ಪ್ರಾಣೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂದಕಂದನ ನೋಡಿರೇ| ಅಂದದಿ ಛಂದದಿ ಪಾಡಿರೇ ಪ ದುಡುದುಡುಕೆಂದು ಕಡೆಯಲು ಗೋಪಿ| ಒಡನೊಡನಾಲಿಸಿ ಶಬ್ದವಾ|| ದುಡುದುಡು ಬಂದ ಕಡಗೋಲ ಪಿಡಿದು ಬಿಡದೆವೆ ಬೆಣ್ಣೆಯ ಬೇಡುವಾ1 ಅಂದುಗೆ ಗೆಜ್ಜೆಗಳಾ| ಘಿಲು ಘಿಲುಕೆಂದು ನುಡಿಸುವಾ| ಎಳೆಯಳೆಗೆಳೆರ ಮೇಳದಲಾಡಿ| ನಲಿನಲಿದಾಡುತಲೊಪ್ಪುವಾ 2 ಅಚ್ಚರಿ ಬಗೆಯಲಿ ಗುರುಮಹಿಪತಿ ಪ್ರಭು ಸಚ್ಚರಿತಾಮೃತ ಬೀರುವಾ|| ಪಟ್ಟದ ಬೊಂಬೆಯ ನಿಚ್ಚಳ ಭಾಸುವ| ಅಚ್ಯುತನಾಕೃತಿ ದೋರುವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು