ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧನವ ಗೆದ್ದವರುಂಟೆ ಜನರೊಳಗೆ ಶ್ರೀನಿವಾಸ ಪ ಕನಸಿಲಾದರು ಬಿಡದು ಕನಕದಾಶೆಯು ಈಶ ಅ.ಪ. ಹೆಂಡತಿಯ ಬಿಡಬಹುದು ಮಂಡೆಬೋಳಿಸಬಹುದು ಕಂಡ ಕಂಡವರೀಗೆ ದಂಡ ಬೀಳಲಿ ಬಹುದು ಪುಂಡರೀಕಾಕ್ಷನಿಗೆ ತೊಂಡನಾಗಲಿ ಬಹುದು ದುಡ್ಡು ಕಾಸುಗಳನ್ನು ನೀಡಲಾಗದು ಮನಸು 1 ನಾಮ ಹಾಕಲಿಬಹುದು ನೇಮಮಾಡಲಿಬಹುದು ಹೋಮಮಾಡುತಲಿ ಬಹು ಕರ್ಮಿಷ್ಟನೆನಿಸಬಹುದು ನಾಮ ಪಾಡಲಿಬಹುದು ಧರ್ಮಪೇಳಲಿ ಬಹುದು ಹೇಮದಾಶೆಯು ಬಿಡದೂ ಶ್ರೀ ಮನೋಹರನೇ 2 ಜಪಮಾಲೆಧರಿಸುತಲಿ ಉಪವಾಸ ಮಾಡಬಹುದು ತಾಪಸನು ಎನಿಸುತಲಿ ಪುರಾಣಗಳ ಪೇಳಲಿಬಹುದು ಶ್ರೀಪತಿಯ ಸೇವಿಸುತ ಜಪತಪವ ನಡೆಸಬಹುದು ರೂಪಾಯಿ ಮಮತೆ ತಾ ಮುಪ್ಪಿನಲು ತೊಲಗದೈಯ್ಯ 3 ಯಾತ್ರೆಮಾಡಲಿಬಹುದು ಸ್ತೋತ್ರ ಘಟ್ಯಾಗಿ ಹೇಳಬಹುದು ನೀತಿ ಪೇಳಲಿಬಹುದು ಪೂತನೆನಿಸಬಹುದು ಮಾತು ಮಾತಿಗೆವೇದ ಎತ್ತಿ ಪೇಳಲಿಬಹುದು ಪ್ರೀತಿ ತಪ್ಪದೂ ಯೆಂದೂ ಆಸ್ತಿ ಧನಕನಕದಲಿ 4 ಲಜ್ಜೆಬಿಡುತಲಿ ಬೇಗ ಗೆಜ್ಜೆಕಟ್ಟಲಿ ಬಹುದು ಸಜ್ಜನನುಯೆಂದೆನಿಸಿ ಮೂರ್ಜಗದಿ ಮೆರೆಯಬಹುದು ಮಜ್ಜನಕ ಜಯತೀರ್ಥ ವಾಯು ಹೃದಯದಲಿರ್ಪಜ ಗಜ್ಜನಕ “ಶ್ರೀಕೃಷ್ಣವಿಠಲ”ನೆ ನೀವಲಿವ ತನಕ 5
--------------
ಕೃಷ್ಣವಿಠಲದಾಸರು
ಲೋಕ ನಾಯಕ ಲಕ್ಷ್ಮೀಲೋಲನಾ ಸ್ಮರಣೆ ಬಿಟ್ಟೂ ಪ ವಿದಿ ಮುನ್ನೆ ಬರದಿಷ್ಟಾ ಯಡಿಯಾತಪ್ಪಾದು ತುದಿಮೊದಲಿಂದಾ ಮಾಡಿದ ದೋಷವೆಲ್ಲಾ ಬೆದರಿಸಿದರೆ ಅದು ಬಿಡಲು ಬಲ್ಲುದೆ ಕೇಳೂ ಪಾದ ಭಜನಿಯ ಬಿಟ್ಟು 1 ನಾನಾಪರಿಯ ಮನಸೂ ನಟಿಸುವದಲ್ಲಾದೆ ಏನು ಎಲ್ಲವೂ ವ್ಯರ್ಥಾ ವೇದನೆ ನಿಂದೆ ನೀನು ಮಾಡಿದಾ ಫಲ ನಿನಗುಣಿ ಸದೆ ಬಿಡದೂ ಮಾನವಾಧೀಶನಂಘ್ರಿ ಧ್ಯಾನವೆಂಬುದು ಬಿಟ್ಟು 2 ಸಕಲಕೆ ಕರ್ತನಾಗಿ ಸರ್ವೋತ್ತಮನಿರಲು ಭಕುತಿ ಭಾವನೆಯಿಂದ ಭಜಿಸಾದೆ ನಿ ವಿಕಟಯೋಚನೆಯಿಂದ ಏನುಫಲವು ಇಲ್ಲಾ ನಿಕರ `ಹೊನ್ನೆಯ ವಿಠ್ಠಲನ ' ನಾಮೋಪಾಸನೆ ಬಿಟ್ಟು 3
--------------
ಹೆನ್ನೆರಂಗದಾಸರು
ಶಾಂತನಾಗದೆ ಭವದ ಚಿಂತೆ ಬಿಡದಣ್ಣಾ ಪ ಭವ ಭವ ಭವಂಗಳೆಡೆ ಬಿಡದೂ 1 ಶಾಂತಿಯಿರದವಗೆ ದುರ್ಗತಿಗಳೊದಗುವದೂ 2 ಶಾಂತನಾದರೆ ಸದಾನಂದ ಸುಖವಹುದೂ 3
--------------
ಸದಾನಂದರು
ನರರ ವಂಚಿಸಿದನೆಂದೆಂಬ | ಪೌರುಷವೇಕೋ |ಹರಿಯ ವಂಚಿಸಲಸಾಧ್ಯವು | ನಿನಗೆ ಮರುಳೆ |ದುರುಳರೊಡನಾಟದಲಿ ದುಷ್ಟ ಕಾರ್ಯವಮಾಡು|ನರಕದಲಿ ಮುಳುಗಿಸುವ ಯಮನುನೋಡುಪಮೂಢ ಮತಿ ಕೇಳ್ ನರಗೆ ನೋಡಲೆರಡೇ ಕಣ್ಣು |ಗಾಢ ನಿದ್ರೆಯೊಳದನು ಮುಚ್ಚಿ ಮಲಗುವನೂ |ಗಾಢಾಂಧಕಾರದಲಿ | ಸೊಡರ ಹೊರತು ಕಾಣದದು |ರೂಢಿಯೊಳು ಸಹಸ್ರಾಕ್ಷ | ನನು ಮೋಸಗೊಳಿಸುವಾ |ಪಾಡೇನ ಬಲ್ಲೆ ಮರುಳೇ1ಎರಡೇಳು ಜಗವನ್ನು ಧರಿಸಿರುವ ಹೃದಯದಲಿ |ಗರುಡ ವಾಹನನಾಗಿ ಧರೆಯೊಳ್ ಚರಿಸುವನು |ತರಣಿಶಶಿನೇತ್ರನೆಂದೆನಿಸಿ ಸರ್ವವನೋಳ್ಪ |ಪರಮಾತ್ಮನಾಗಿ ಪ್ರಾಣಿಗಳ | ಹೃದಯದಲಿ |ಹರಿಯು ನೆಲೆಸಿರ್ಪ ಕೇಳು2ಇಂದೋರ್ವನನು ಮೋಸಗೊಳಿಸಿದಾ ದೋಷವಿದು |ಎಂದೆಂದಿಗೂ ನಿನ್ನ ಬೆನ್ನ ಬಿಡದೂ |ನಿಂದಿಗನು ನರಜನಕೆ ಗೋವಿಂದನಿಗೆ ದ್ರೋಹೀ |ಎಂದೆನಿಸಿ ಯಮನ ಹಂಗಿಗನಾಗಬೇಡ ನಾಳೆ3<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ಲೇಸ ಪಾಲಿಸು ಜಗದೀಶನೆ ದಯದಿ |ದೋಷರಹಿತ ಪರಮೇಶನೆ ಮುದದಿ ಪದಾಸ ಜನರ ಮನದಾಸೆಯ ಸಲಿಸುವ |ಸಾಸಿರ ನಾಮ ಸರ್ವೇಶ ಶ್ರೀಶಂಕರ ಅ.ಪಕಾಮ ವ್ಯಾಮೋಹ ಮದಾಂಧಕಾರವು ಬಂದುಪ್ರೇಮದಿ ನಿನ್ನನು ಭಜಿಸಲು ಬಿಡದೂ |ಕಾಮಹರನೆ ಕಾಯೋ ಕಾಮಿತಾರ್ಥವನಿತ್ತು |ಪ್ರೇಮ ಗಿರಿಜಾರಮಣ |ಸೋಮಶೇಖರ ನಿನ್ನ ಲೇಸ ಪಾಲಿಸು 1ಫಾಲಲೋಚನಭವ|ಭಾರನಿವಾರಣ |ಶೂಲಪಾಣಿಯೆ ಮುನಿಜಾಲಸಂರಕ್ಷಣ |ಮಹಾಲಿಂಗೇಶನೆ | ಭಕ್ತಪಾಲಕನೆಂಬುವ |ಮೂಲ ಚರಿತ್ರವಕೇಳಿಬಂದೆನು ದೇವಾ 2ಹಿಂದೆ ಮಾರ್ಕಾಂಡೇಯ ಮುನಿವರ ನಿನ್ನನು |ಚಂದದಿ ಪೂಜಿಸಿ ವಲಿಸಲಾ ಯಮನೂ |ಬಂದು ಪಾಶವ ಕೊರಳ ಸಂದಿನೋಳ್ ಸೇರಿಸ- |ಲಂದು ಮೈದೋರಿ ಗೋವಿಂದಸಖ ನೀ ಕಾಯ್ದೆ 3
--------------
ಗೋವಿಂದದಾಸ