ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೈಯ ಬಿಡದಿರೋ ನಾರಾಯಣ ಜೀಯಾ ಕಾಯೆಂದು ಶರಣುಬಂದೆನ್ನ ಪ ಲೋಕದಂತೆ ನಡೆಯಲೆನುತ ಬೇಕಾದುದಿಲ್ಲವೆಂದು ತೊಳಲಿ ಶೋಕಸಾಗರದೊಳಗೆ ಮುಳುಗಿ ಶ್ರೀಕಾಂತ ನಿನ್ನ ಕಾಣಬೇಕೆಂಬೆನ್ನ 1 ಹೊಟ್ಟೆ ಬಟ್ಟೆಗಳಿಗೆ ದುಡಿಯ ಲೆಷ್ಟೆ ಕಷ್ಟಪಟ್ಟು ಬಳಲಿ ಸೃಷ್ಟಿಪಾಲಕ ಬಾಯಬಿಡುತ ಇಷ್ಟದೈವವ ಸೇರಬೇಕೆಂಬೆನ್ನ 2 ಆಶೆಯೆಂಬ ಪಾಶವೆನ್ನ ಮೋಸದಿಂದ ಬಂಧಿಸಿಹುದು ಲೇಸಕಾಣೆನು ಜಾಜೀಕೇಶವ ಪೋಷಿಸೆಂದು ಮರೆಯಹೊಕ್ಕೆನ್ನ 3
--------------
ಶಾಮಶರ್ಮರು
ಯಾಕ ವದಗಲೊಲ್ಲೆಯನ್ನಯ ಬಿನ್ನಹಕ ಲೋಕ ರಕ್ಷಕ ಬಂದು ಯನ್ನ ನುದ್ದರಿಸಯ್ಯಾ ಪ ಅರಿಯದ ಶಿಶು ಮಹಾನದಿ ಜಲದೊಳು ಪೋಕ್ಕು ತರಿಸಲರಿಯದಸು ದೊರೆಯುತಿದೆ ಇರಲು ತಾರಕದಡಿಯಲಿ ಸುಮ್ಮನೇದಯಾ ಜರಿದು ನೆಲಿಯಾ ನೋಡುತಹುದೇನಯ್ಯಾ 1 ಅರಿಗಳು ಪಟಳದಿಂದೋರ್ವ ಮನುಜಾ ಅರತು ನೃಪರಬೆನ್ನಬೀಳಲು ಭರದಿಂದಾ ಪಡಿತಂದವರಾಕೈಯ್ಯಲಿಕುಡೆ ಧರೆಯೊಳುಸಕಲ ಜನರು ಏನೆಂಬು ವರೈಯ್ಯಾ 2 ಪತಿತರ ಪಾವನ ಮಾಡುವಾಧೊರಿಯೆಂದು ಶೃತಿ ನಾಲ್ಕರಲಿ ಕೊಂಡಾಡುತಿರೆ ಮತಿಹೀನ ನೆಂದು ಕೈಯ್ಯಾ ಬಿಡದಿರೋ ಮಹೀ | ಮತಿ ಸುತಪ್ರಭು ಪರಿಚರೆನಿಸುವ ಬಳಿಕಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು