ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನಗೆಲ್ಲಿಯ ಕೊರತೆ ನಿನ ನಂಬಿದ ಮೇಲೆ ಮನಸಿಜನೈಯ್ಯಾ ಶ್ರೀ ರಂಗೇಶವಿಠಲ ಪ ಕೊಡುವ ಕರ್ತನು ನೀನು ಎಡಬಿಡದಿರುವಾಗ ಬಡತನವೆನಗ್ಯಾಕೆ ರಂಗೇಶವಿಠಲ 1 ಸತಿಯು ಸುತರು ಎನಗೆ ಹಿತವ ಬಯಸಲಿಲ್ಲ ಗತಿಯು ಎನಗೆ ನೀನೆ ರಂಗೇಶವಿಠಲ 2 ಮಂದಮತಿಯು ನಾನು ಸಿಂಧುಶಯನ ನಿನ್ನ ಕಂದನೆಂದು ತಿಳಿಯೊ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ಪಾದ ಪರಮಭಕ್ತಿಲಿ ಎನ್ನ ಶಿರದ ಮೇಲ್ಪೊತ್ತು ಬಿಡದಿರುವೆನನವರತ ಪ ತಾಳಿ ವಿಮಲಭಕ್ತಿ ತಾಳದಂಡಿಗೆ ಸ ಮ್ಮೇಳದೊಡನೆ ತ್ರಿಕಾಲವು ಬಿಡದೆ ನೀಲವರ್ಣನ ಭಜನೆ ಮೇಲಾಗಿ ಮಾಡುವ ರಾಲಯದಿ ನಲಿದಾಲಿಸಾನದಿಂದಪ 1 ನಿಲಯದಂಗಳದೊಳು ತುಲಸಿವನವ ರಚಿಸ ನಿತ್ಯ ಜಲಜನಾಭಂಗೆ ಮಲತ್ರಯಂಗಳ ನೀಗಿ ಮಲಿನಗುಣವ ಕಳೆದು ಸಲಿಸಿ ಶ್ರೀಪಾದಮಂ ಒಲಿಸಿ ಸುಖಿಸುತಿರ್ಪ 2 ತಿಳಕೊಂಡು ಸಂಸಾರ ಕಳವಿನಿಂದುಳಕೊಂಡು ಹೊಳೆವ ಜ್ಞಾನಜ್ಯೋತಿ ಬೆಳಗಿನೋಳ್ನಲಿಯುತ ನಿಲಿಸಿ ಹರಿಪಾದದಿ ಚಲಿಸದೆ ಮನ ಹಂ ಬಲಿಸಿ ತಪವ ಶೇಷಾಚಲಯಾತ್ರೆ ಮಾಳ್ಪಂಥ 3 ಮರೆವು ಮಾಯವ ನೀಗಿ ಅರಿವಿನಾಲಯದೊಳು ಸಿರಿಯರರಸನ ನಿಜ ಚರಿತಂಗಳರಸುತ ಪರಮಸಾಲಿಗ್ರಾಮದ್ವರಮಹಿಮೆಯನರಿತು ನಿರುತದಿಂ ಪೂಜಿಸಿ ಪರಮಪಾವನರೆನಿಪ 4 ಕಾಮಿತಂಗಳ ನೀಗಿ ಕೋಮಲ್ಹøದಯರಾಗಿ ಪ್ರೇಮಪಿಡಿದು ಸರ್ವಭೂಮಿ ಜೀವಂಗಳೊಳ್ ನೇಮನಿತ್ಯದಿ ನಿಸ್ಸೀಮರಾಗಿ ಸತತ ಸ್ವಾಮಿ ಶ್ರೀರಾಮನಾಮಾಮೃತ ಸುರಿಯುವ 5
--------------
ರಾಮದಾಸರು
ಮಾಡೋ ಪರಮೇಶ್ವರ ಗುರುಧ್ಯಾನಾ ಬಿಡದಿರುವದು ಭಜನಾ ||ನೋಡೋ ನಿನ್ನೊಳು ನಿಜ ಖೂನಾ | ಪೂರ್ಣೈಕ್ಯದ ಜ್ಞಾನಾ ಪ ಅಪರೂಪದ ನಿಜ ತನುವಿದು ನೋಡೋ ಸೆಡಗರದೀ ಪಾಡೋ ||ಅಪಹಾಸ್ಯವ ಮಾಡದೆ ನೀ ಕೂಡೋ ಘನ ಚಿನ್ಮಯ ಗೂಡೋ 1 ಆಜ್ಞಾ ಚಕ್ರದ ಬಳಿಯಲ್ಲೀ | ಎರಡೂ ಕಮಲದಲ್ಲೀ |ಪ್ರಾಜ್ಞಾ ಝಗ ಝಗಿಸುವ ಬೆಳಕಲ್ಲೀ | ತಿಳಿ ನಿನ್ನೊಳಗಿಲ್ಲೀ 2 ಮೇಲಿನ ಸ್ಥಾನದ ಸಹಸ್ರಾರ | ಗುರುತತ್ತ್ವದ ಸಾರಾ ||ಪೇಳಲಳವಲ್ಲವು ಸುಖ ಪೂರಾ | ಶಂಕರ ಪದವಿವರಾ | ಭೀಮಾ ಶಂಕರ ಪದವಿವರಾ 3
--------------
ಭೀಮಾಶಂಕರ
ಶ್ರೀರಮಾರಮಣ ಶರಣಾರ್ತಿನಿವಾರಣಾ ಪ ಸಾರಸಾಕ್ಷ ಕರುಣಾರಸಪೂರ್ಣ ಭೂರಿ ಸುವೈಭವ ಭುವನರಕ್ಷಣಅ.ಪ ನಾನು ನಿನ್ನೊಳು ಮೊರೆಯಿಡುತಿರುವೆನೊ ನೀನೆನ್ನೊಳು ದಯೆದೋರು ಹರಿಯೆ ದೀನಪಾಲನಾಪರ ನೀನೆನ್ನುತ ಲಾನು ಬಂದೆನೊ ಶ್ರೀನಿಕೇತನ 1 ಹಿಂದೆಯನೇಕರ ಕಾಪಾಡಿರುವೆ ಮುಂದೆಯು ಭಕ್ತರ ಬೆಂಬಿಡದಿರುವೈ ತಂದೆ ಬಂದು ಗಜರಾಜನ ಸಲಹಿದೆ ಯೆಂದು ನಂಬಿದೇ ಮಂದರಾದ್ರಿಧರ 2 ಸುಧಾಮ ಅಜಮಿಳ ಅಂಬರೀಷ ದ್ರೌ ಪದಿಯರ ಸಮಯದಿ ಕಾಯ್ದವನೇ ವಿಧಿಪಿತ ನೀನದುಭುತಮಹಿಮನಯ್ಯ ಸುಧಾ[ಮ] ನ ಬಂಧುವೆ ಜಾಜೀಶಾ 3
--------------
ಶಾಮಶರ್ಮರು
ಸತ್ಯಸಂಕಲ್ಪ ತ್ವಚಿತ್ತಾನುಸಾರ ತ್ವ ಚಿತ್ತ ವೃತ್ತಿಯು ನಿನಗೆ ಸರ್ವÀತ್ರದಿ ಪ ಉತ್ತಮೋತ್ತಮ ನೀನೆಗತಿ ಎಂ- ಉತ್ತರಿಸು ಭವಶರಧಿಯಲಿ ಎತ್ತಿ ಕಡೆಹಾಯಿಸುವುದೀಗಲೆ ಅ.ಪ ಜಗದಾಖ್ಯವೃಕ್ಷಕ್ಕೆ ಆದಿಕಾರಣನಾಗಿ ಜಗದೇಕವಂದ್ಯ ನೀನಾಧಾರನೋ ತ್ವಗಾದಿ ಜ್ಞಾನೇಂದ್ರಿಯಗಳೆಂಬೀ ಐದು ಬಿಳಲುಗಳೂ ಪಡೂರ್ಮಿಗಳೂ ಮೇಧ ಹೊದಿಕೆಗಳು ಪಂ ಮನ ಅಹಂಕಾರವೆಂದು ಪೊಟ್ಟರೆಗಳು 1 ಪ್ರಾಣಾದಿಪಂಚಕವು ಕೂರ್ಮ ಕೃಕಳಾದಿ ಪಂಚವಾಯುಗಳು ಪರ್ಣಗಳು ಹತ್ತೆನಿಸಿ ವೃಕ್ಷಕೆ ದುಃಖ ಸುಖವೆಂಬೆರಡು ಮೋಕ್ಷಗಳೆಂಬÉೂ ರಸಗಳು ಪಕ್ಷಿಗಳು ವಿಹರಿಸುತಲಿಹವು ಕರ್ಮಫÀಲವನು ಕಟಾಕ್ಷವಿಲ್ಲದೆ 2 ಅಡಿ ಮೇಲಾಗಿಹ ಗಿಡದೊಡೆಯ ನೀ ಗಿಡದೊಳು ಅಡಿಗಡಿಗೆ ಜೀವರೊಡಗೂಡಿ ಬಂದವರನು ನಿನ್ನೊಡಗೂಡಿ ಒಂದೇ- ಕಡೆಯಾಡುತಿಹ ಬಡಜೀವಿ ನಾನಯ್ಯ ಪಡೆದ ಫಲವದು ಬೆಂಬಿಡದೆ ಭೋಗಕೆ ಬರುತಲಿಹುದಯ್ಯ ಬಡಿದು ಉಣಿಸುವೆಯೊ ಬಿಡದಿರುವೆ ಎನ್ನೊಡೆಯಾ ಒಡೆಯ ನಿನ್ನೆದುರಿನಲಿ ನಾ ಪರಿಹರಿಸಿ ರಕ್ಷಿಸೊ ಮೃಡನುತ ಶ್ರೀ ವೇಂಕಟೇಶಾ 3
--------------
ಉರಗಾದ್ರಿವಾಸವಿಠಲದಾಸರು
ಸಿಂಧು ಶೋಷಿಪೇಕ್ಷಣ ಕಲ್ಯಾಣಗಾತ್ರ ಪ ಪವಮಾನ ಪ್ರಿಯ ಪುತ್ರ ಕಾರುಣ್ಯನೇತ್ರ ಅ.ಪ. ನಿರವದ್ಯ ಭೂದೇವ ನಿರುತ ಸುಖಭರಿತ ಭಾವ ಶರಣ ಜನರನು ಕಾವ ಶಪಥ ಭಾವ ಪರ ಸೇವಾ ನಿರುತ ಮಂಗಳ ಭಾವ ಸಂಜೀವ 1 ತನುಮನವ ಹರಿಗಿತ್ತ ಗುಣನಿಧಿ ಮಹಗುಪ್ತ ಅಣುಘನದಿ ಹರಿದೀಪ್ತ ತನುನೋಳ್ಪ ಶಕ್ತ ಘನ ಕೃಷ್ಣವರ್ಯಾಪ್ತ ಮನೋವಾಕ್ಕಾಯಸ್ತ ಗುಣಾಪೂರ್ಣಾ ಹರಿಕೃತ್ಯವನು ಎಣಿಪ ತೃಪ್ತ 2 ಬಲುಭಕ್ತಿ ಭಾರನತ ಬಲಿತ ವಿಜ್ಞಾನರತ ಲಲಿತ ಮಂಗಳಚರಿತ ನಲಿವನು ಪ್ರೀತ ಕ- ಮಲಾ ಅಪಹರ್ತ ಕಲ್ಯಾಣ ಸಂಭರಿತ ಪುಲ್ಲಾಕ್ಷ ಮಮನಾಥ ಕೃಷ್ಣಾಂಘ್ರಿದೂತ 3 ಪರಮ ಸೌಭಗ ಪೂಜ ಪರಭಕ್ತಿ ನಿವ್ರ್ಯಾಜ ಚರಿಸಿ ಶ್ರೀ ಗುರುರಾಜ ವರಕಲ್ಪಭೂಜ ಸರುವ ತತ್ವಗಳೋಜ ವಶಗೊಂಡ ಮಹರಾಜ ಸರುವ ಸಿದ್ಧಿಗೆ ದೊರಿ ಎನಿಪ ವಿರಜ 4 ಸಂತಾಪಹರ ಶಾಂತ ಸೌಭಾಗ್ಯಕರವಂತ ಸ್ವಾಂತದಲಿ ನಿಶ್ಚಿಂತ ಸರಸಿ ಶ್ರೀಮಂತ ಧ್ವಾಂತ ಹರ ಶ್ರೀ ಜಯೇಶವಿಠಲನ ಏಕಾಂತ ಪಂಥ ಬಿಡದಿರುವಂಥ ಪೂರ್ಣ ಜಯವಂತ 5
--------------
ಜಯೇಶವಿಠಲ
ಸುಮ್ಮನೆ ದೂರಿದರೆ ನಾನೆಂಬೆನು ರಂಗಂ ಗುಮ್ಮ ಬಂದನು ಎಂದರಂಜುವನು ಪ ಸುಳ್ಳು ಸಟೆಯನಾಡಬೇಡಿರೇ ಜಾತಿ ಗೊಲ್ಲತಿ ಯರು ನೀವಾದರೆ ಎಲ್ಲನಾರಿಯರೊಂದು ಗೂಡಿರೆ ಕಟ್ಟಿ ಕಳ್ಳ ಕೃಷ್ಣನ ತಂದು ತೋರಿರೆ 1 ಮುತ್ತಿ ಚಂಡಾಟವಾಡುವ ನಂದ ನೊತ್ತಿಲಿ ಪಾಲ್ಬೆಣ್ಣೆ ಮೆಲ್ಲುವ ಪಣಿಗೆ ವತ್ತು ಪೊಂಗಳಲ ನುಡಿಸುವ 2 ಕಾಲೊಳಂದಿಗೆ ಗಜ್ಜೆ ಧ್ವನಿ ಮಾಡುವ ತನ್ನ ತಾಳ ಗತಿಗೆ ತಾನೆ ಕುಣಿದಾಡುವ ನಂದ ನೋಲಗವನ್ನು ಕ್ಷಣ ಬಿಡದಿರುವ ಲಕ್ಷ್ಮೀ ಲೋಲ ತನ್ನೊಳು ತಾನೆ ನಲಿದಾಡುವ 3
--------------
ಕವಿ ಪರಮದೇವದಾಸರು