ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸೆನ್ನ ವೇಲಾಪುರ ಚೆನ್ನ ಪ ಪಾಲಿಸು ಕರುಣಾ ನಿಲಯನೆಂದು ನಾ ಕೇಳಿ ಬಂದೆ ಬಹು ಸುಂದರಕಾಯ ಅ.ಪ ಅರಿ ಮುದದಿ ಗದಾಧರ ಪದಪದುಮದಿ ಮನ ಒದಗಿಸಿ ಬೇಗ 1 ಪೀತಾಂಬರ ಶ್ರೀವತ್ಸ ಕೌಸ್ತುಭದಿ ಅತಿಶೋಭಿಪನೀ ಸ್ತುತಿಗೊಲಿಯುತಲಿ 2 ಚನ್ನಕೇಶವ ಬಿನ್ನೈಸುವೆನೋ ಬೆನ್ನ ಬಿಡದಲಿ ಮನ್ನಿಸಿ ತ್ವರದಿ 3 ಕಂದನ ಕುಂದುಗಳೊಂದೆಣಿಸಲೆ ಬಂದು ಚಿಂತನಕೆ ಇಂದಿರೆರಮಣ 4 ಮೀನಕೇತುಪಿತ ಶ್ರೀ ನರಹರಿಯೆ ಜ್ಞಾನ ಭಕುತಿಯಿತ್ತು ಮೌನದಿಂದ ನೀ5
--------------
ಪ್ರದ್ಯುಮ್ನತೀರ್ಥರು
ಶ್ರೀ ಹರಿ ಹರಿಯೇ ಬಾರೋ ತ್ವರಾ ಘೋರಾರಣ್ಯದಿ ಸೇರಿ ದಾರಿ ತೋರದೀಗ ಸಾರಿಕರೆವೆ ಅ.ಪ ಪಾಶದಿಂದ ಮುಂದಕ್ಕೆ ಬಿಡದಲಿಹರು ನೊಂದು ಬೆಂದು ಬಾಯಿ ಬಿಡುವೆ 1 ಹಿಂದೆ ವ್ಯಾಘ್ರ ಮುಂದೆ ಪಾವು ನಿಂದು ಕಾದು ನೋಡುತಿಹವು ಬಂದು ನೀನು ಕಾಯದಿರಲು ತಂದೆ ಇನ್ನಾರುಗತಿಯೋ 2 ನಂದಸುತ ಗೋವಿಂದ ಶಾಮಸುಂದರನೆ ನಿನ್ನ ನಾಮ ಮಂದ ಭಾಗ್ಯನಾದೆನಯ್ಯೋ 3
--------------
ಶಾಮಸುಂದರ ವಿಠಲ
ಕೆಂಡಕ್ಕೆ ಗೊರಲಿ ಮುತ್ತುವುದುಂಟೆಪಾಂಡುರಂಗನ ದಾಸರಿಗೆ ಭಯವುಂಟೆ ? ಪ.ಆನೆ ಸಿಂಹನ ಕೂಡ ಅಣಕವಾಡುವುದುಂಟೆಶ್ವಾನಗೆ ಹುಲಿಯೊಳು ಸರಸವುಂಟೆ ?||ಏನೆಂಬೆ ಎರಡಿಲ್ಲದಿರುಳು ಹಗಲು ನಿನ್ನಧ್ಯಾನ ಮಾಡುವರಿಗೆ ನರಕವುಂಟೆ ? ಸ್ವಾಮಿ ? 1ಕತ್ತಲೆ ರವಿಯನು ಕವಿದು ಮುಚ್ಚುವುದುಂಟೆಹತ್ತಿ ಸರ್ಪನ ಕಪ್ಪೆ ನುಂಗುವುದುಂಟೆ ? ||ಅತ್ತಿತ್ತ ಮನವನು ಹರಿಬಿಡದಲಿ ಏಕಚಿತ್ತದಿ ನೆನೆವಗೆ ನರಕವುಂಟೆ ಸ್ವಾಮಿ 2ಆ ಮಾರುತನ ಗುದ್ದಿ ಹದ್ದು ನೋಯಿಸಲುಂಟೆಹೇಮಗಿರಿಗೆವಜ್ರ ಸಿಡಿಯಲುಂಟೆ ?ಸ್ವಾಮಿ ಶ್ರೀ ಪುರಂದರವಿಠಲರಾಯನೆ ನಿನ್ನನಾಮಧಾರಿಗಳಿಗೆ ನರಕವುಂಟೆ ಸ್ವಾಮಿ ? 3
--------------
ಪುರಂದರದಾಸರು