ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡದ್ದು ಬಯಸಿ ಕಂಗೆಡು ಬೇಡಾ ಪಾದ ಬಿಡಬೇಡಾ ಪ ಕಾಲನಿನ್ನದಲ್ಲ ಕಡುಮೂರ್ಖ ಆ ಕಾಲ ಪುರುಷ ಮಾಡಿದನೇಕಾ ಪರಿಗಳಿಂದ ಇನ್ನು ಯಾಲೋಕಾದಲಿ ನಡುವುದಲ್ಲಾ ಸುಖದು:ಖ ಪಾಲಿಗೆ ಬಂದದ್ದು ಬಿಡದನಕಾ ಪ್ರಾಪ್ತಿ ಇದ್ದಷ್ಟೇ ಇಲ್ಲಧಿಕಾ ಶ್ರೀಲೋಲನ ನೀನಿರುವತನಕಾ ಸ್ಮರಿಸದೆ ಇರಬೇಡ ಅವಿವೇಕಾ 1 ಘಣಿಯಲ್ಲಿ ಬರದದ್ದು ತಪ್ಪದಲ್ಲೆ ಜಗ ಭಗವಂತ ನೀ ಮಾಡಿದಲ್ಲೆ--- -------- ನಿನ್ನದಲ್ಲೆ ಅನುಗ್ರಹ ಮಾಡುವ ಭರದಲ್ಲೆ ನಗಧರನಾ ನಾಮ ಬಲದಲ್ಲೆ ಅಘಗಳ ಕಳಿ ನೀ ತೀವ್ರದಲ್ಲೆ 2 ಇಷ್ಟಾರ್ಥ ನೀ ಮಾಡಬೇಕಂದಿ ಸಂಚಿತ ಎಲ್ಲೆಂದಿ ಕಷ್ಟವ ಪಡಕೊಂಡು ನೀ ಬಂದಿ ಕಾಮಕೆ ಸುಖವು ಇಲ್ಲೆಂದಿ ಇಷ್ಟದಿ ಶ್ರೀ ಹರಿ ಪದಹೊಂದಿ ಇರದೆ ನೀ ಇರಬೇಡಾ ಇಬ್ಬಂದಿ ಸ್ಪಷ್ಟದಿ 'ಹೊನ್ನಯ್ಯ ವಿಠ್ಠಲಂದಿ’ ಸಾರ್ವದಿ ಮುಂದಕ ನೀ ಬಂದಿ3
--------------
ಹೆನ್ನೆರಂಗದಾಸರು
ಮದ ಮತ್ಸರವ ಬಿಡದನಕಾ ವಿಧ ವಿಧದ ಸಾಧನವ ಮಾಡಲೇನೋ ಪ ವೇದ ಶಾಸ್ತ್ರಗಳೋದಲೇನು ಗಂಗಾ ಗೋದಾವರಿಯಲಿ ಸ್ನಾನವ ಮಾಡಲೇನು ಸಾಧು ಕರ್ಮವಾಚರಿಸೇನು ವಿಷ್ಣು ಪಾದದಿ ಪಿಂಡ ದಾನವ ಮಾಡಲೇನು 1 ಸನ್ಯಾಸಾಶ್ರಮ ಧರಿಸಲೇನೂ ಗೋಹಿ ರಣ್ಯಾದಿಗಳಲಿ ಮಮತೆ ಬಿಟ್ಟರೇನು ಪುಣ್ಯ ಕ್ಷೇತ್ರಕೆ ಪೋಗಲೇನು ಅನ್ನ ಕನ್ಯಾದಿ ದ್ರವ್ಯದಾನವ ಮಾಡಲೇನು 2 ಪಾಪ ಕರ್ಮವ ತೊರೆದರೇನೊ ಲಕ್ಷ ದೀಪಾರಾಧನೆ ದಿನ ದಿನ ಮಾಡಲೇನು ಶಾಪಾನುಗ್ರಹ ಶಕ್ತಿ ಇದ್ದೇನು ಪೂಜಾ ಸೋಪಸ್ಕರ ಬಹುತರವಿರಲೇನು 3 ಶ್ವಾಸ ನಿರೋಧಿಸಲೇನು ಪಕ್ಷ ಮಾಸೋಕ್ತ ಧರ್ಮ ಕರ್ಮವ ಮಾಡಲೇನು ಆಸನ ಜಯ ಸಂಪಾದಿಸಲೇನು ಉಪ ವಾಸ ವ್ರತದಿ ದೇಹ ಬಳಲಿಸಲೇನು 4 ಜ್ಯೋತಿಷ್ಟೋಮ ಮಾಡಲೇನು ಲಕ್ಷ ಶ್ರೀ ತುಳಸಿ ಅರ್ಪಿಸಲೇನು ಭೂತದಯವು ಇದ್ದರೇನು ಜಗ ನ್ನಾಥ ವಿಠಲನಂಘ್ರಿ ಪೊಂದಿದ್ದವರೊಳು 5
--------------
ಜಗನ್ನಾಥದಾಸರು