ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತನೇ ಪರಮಾತ್ಮ ಪರತತ್ತ್ವ ಪ್ರಣವನೆಂ-ದರಿತು ಪೂಜಿಸಬಾರದೆಆತನಾ ಪದತೋಯ ಶಿರಸಾ ವಹಿಸಿ ಪಾನ-ದಿಂದಧಿಕರಾದರು - ಜೀವಿಗಳು ಮನುಜ ಪ ದಾನಮುಖದಲಿ ಬಲಿಯ ಬೇಡಿ ಭುವನವನೊಂದುಪದದಿ ಅಳೆದವನಾವನುಮಾನದಾನವನ ನಾಲ್ಮೈಯ ಮುಡಿಗಟ್ಟಿವನಮಾನ ಉಳುಹಿದನಾವನುಮಾನ ಮರುಳಾದವನ ಮರ್ದಿಸಿದ ಬ್ರಹ್ಮಹತ್ಯೆಮಹಿಗೆ ಇಳುಹಿದನಾವನುಭಾನು ಮೊದಲಾದಖಿಳ ಬ್ರಹ್ಮಾಂಡಗಳಿಗೊಂದುಪಾದ ಹೊದಿಸಿದನಾವನು ? 1 ಕೊಟ್ಟ ವರಗಳನೆಲ್ಲ ಕೊಡಹಿ ಬಹು ದನುಜರನುಕುಟ್ಟಿ ಹಾಕಿದನಾವನುದಿಟ್ಟವರ ಕಾಲಾಂಣ(?) ಕಟ್ಟಿ ಮುನಿ ದೈವಗಳ ಪಟ್ಟದರಸು ಅದಾವನುಬೆಟ್ಟದಾತ್ಮಜೆ ಬೆನಕ ಪೆಸರ್ಗೊಂಡು ತನ ನಾಮಗುಟ್ಟಿನಲಿ ನೆನೆಸಿದುದಾವನುಗಟ್ಟಿಯಾಗಿ ಮುನಿಪೆಣ್ಗೆ ಕೊಟ್ಟಿದ್ದ ಶಾಪವನುಬಿಟ್ಟೋಡಿಸಿದನಾವನು ? 2 ಅಖಿಳ ಮಹಿ ನಟಿಸುವ ಮಹಾತ್ಮಕನಾದ ಸಾತ್ತ್ವಿಕನಾವನುಆದಿಯಲಿ ಜಗಂಗಳಿರದಂದು ವಟಪತ್ರಶಯನನಾದ ಮೂಲವದಾವನುಆದಿಕೇಶವ ದೈವವಲ್ಲದಿನ್ನಿಲ್ಲವೆಂದುಆಗಮವು ನುಡಿವುದಾವನನು ? 3
--------------
ಕನಕದಾಸ
ತಿಮಿರ ಭರದಿ ಬಿಟ್ಟೋಡಿತು ಪ ಶ್ರುತಿ ಶಾಸ್ತ್ರವೆಂಬ ಕಂಜಗಳತಿ ರಮ್ಯದಿಂದರಳಿದವುಕ್ಷಿತಿಯೋಳು ಕುಮುದದಂತೆ ದುರ್ಮತಗಳೆಲ್ಲ ಕುಗ್ಗಿದವು ||ಇತರ ದೇವಂಗಳಿಂತು ಭಜಿಸಿದೆ ರಘುಪತಿಯೆ ದೈವ ಮಧ್ವ ಮತವೆ ಸಿದ್ಧಾಂತವುಸತತವನು ಹರಿ ಸರ್ವೋತ್ತಮನೆಂದುತುತಿಸುವ ಕಾಂತಿಯು ತುಂಬಿತು ಜಗದೊಳು 1 ಚಕ್ರವಾಕ ಧ್ವನಿಗೈದವು ||ಸಾರಿ ಸಾರಿಗೆ ಹೊತ್ತು ಯೇರುವ ತೆರದಲಿಶ್ರೀರಮಣನ ಚರಣಾರವಿಂದವು ನಿತ್ಯಆರಾಧಿಸುವ ವಿಚಾರವಿದೆನುತಲಿತಾರತಮ್ಯ ಜ್ಞಾನ ತೋರಿದರಿಳಿಯೊಳು 2 ಅಂದವಾದಲಾದಿನ್ನೆ ಹನುಮಂತನೊಡೆಯ(ಮುಂದಿನ ಪಾದಗಳು ಸಿಕ್ಕಿಲ್ಲ)
--------------
ಮೋಹನದಾಸರು
ನಾದವಾದನು ನಾದದ ಮನೆಯಿದ್ದ ಅಚ್ಚರಿ ನೋಡಿವಾದಿಗಳನು ಗೆದ್ದು ಜಯವ ತಾ ಮಾಡಿ ನಾದವಾದನು ಪ ಸುಮನಸವೆಂದೆಂಬ ಕುದುರೆಯ ಹತ್ತಿಅಮಲವೆನಿಪ ಧೈರ್ಯದ ಕತ್ತಿಯ ಹಿಡಿದುಭ್ರಮಣೆಯಲ್ಲದ ವಿವೇಕ ಫೇರಿಯಿಂದವಿಮಲಾನಂದದಿ ದುಮುಕಿಸುತಿರುತಿಪ್ಪ ನಾದವಾದನು1 ಅಷ್ಟ ಆನೆಗಳ ತಲೆಗಳ ಹೊಡೆದುಷಷ್ಟರಧಿಕರ ಸಾಲನು ಕಡಿದುದುಷ್ಟಕುದುರೆಗಳ ಏಳರ ಕಾಲನು ಉಡಿದುಕಷ್ಟರೂಪದ ಚೋರರೈವರನು ದೂಡಿದ ನಾದವಾದನು 2 ಈಷಣತ್ರಯ ಪ್ರಧಾನರ ಜೀವವ ಕಳೆದುವಾಸನೆ ದಳವಾಯ್ಗಳೀರ್ವರ ನೆರೆ ತುಳಿದುಮೋಸಗಾರರ ದೊರೆ ನಾಲ್ವರನಳಿದುಏಸು ನುಡಿಯಲಿ ತಾನೊಬ್ಬನೇ ಉಳಿದು ನಾದವಾದನು 3 ದೋಷಕರೆಲ್ಲರ ದೇಶ ಬಿಟ್ಟೋಡಿಸೆನಾದವಾದರು ಎಲ್ಲರು ಕೊನೆಗೆ ಉಳಿದವರೆಲ್ಲಾಸಾಷ್ಟಾಂಗ ವೆರಗಿದರುವಾಸಿ ಪಂಥವ ಬಿಟ್ಟು ಕೊಂಡಾಡುತ ನಾದವಾದನು 4 ಇಂತು ರಣವ ಮಾಡಲು ಕೈಯ ಸುರಗಿಸಂತೋಷವೆಂಬ ಮೃತದಿ ತಾ ಮುಳುಗಿಶಾಂತನಾಗಿಯೆ ಚಿದಾನಂದ ಗುರುವಿಗೆರಗಿನಿಂತು ನೋಡಿಯೆ ಕಂಡನಾತನೆ ತಿರುಗಿ ನಾದವಾದನು 5
--------------
ಚಿದಾನಂದ ಅವಧೂತರು
ಯಾರೇನು ಮಾಡುವರೋ ಹರಿಯೇ ಯಾರಿಂದಲೇನಹುದು ಪ ವಾರಿಜಾಂಬಕ ಮಾರಜನಕ ಕೌಸ್ತುಭ ವಕ್ಷ ಶ್ರೀಶಾ ಅ.ಪ. ಅಜ ಈ ಜಗ ಸೃಜಿಸಿದನೆ ಶ್ರೀದೇವಿಯು ನಿಜಗುಣ ನೆಲೆಗಂಡಳೆ ಭುಜಗಭೂಷಣ ಆಯಕರ್ತನಾದರೆ ಭಜಕನಾ ಬಯಕೆ ಬಾಯಬಿಡುವದೆ 1 ಸುರಪ ಸುರರೊಡೆಯನೆ ಧರಣಿ ಈ ಉರಗೇಂದ್ರ ಪೊತ್ತಿದನೆ ದುರುಳನ ಭಯಕೆ ಪುರವ ಬಿಟ್ಟೋಡಿದ ಧರಣಿಯ ದುರುಳನೊಯ್ಯೆ ವರಾಹರೂಪದಿ ತಂದೆ ನೀ ತಂದೆ ಹರಿಯೇ 2 ಶ್ರೀಪತಿ ಸುರತತಿಯ ಸೃಜಿಸಿ ಈಪ್ಸಿತಾರ್ಥಗಳನೆಲ್ಲಾ ಅವರಿಗೆ ಸ್ವಾಪ್ನಜಾಗೃತಿಯಲಿ ಪರಿಪಾಲಿಸೆ ಮಹಾನಿಧಿವಿಠಲ ನೀನಲ್ಲದಿನ್ಯಾರೋ 3
--------------
ಮಹಾನಿಥಿವಿಠಲ
ಸ್ಮರಿಸಿ ಬದುಕಿರೊ ಸರ್ವಾನಂದ ಗುರುಗಳ ನಿರುತದಿಂದ ಇಷ್ಟಫಲವ ನೀಡೋ ವರಗಳ ಬೇಡಿ ಪ ಆದಿಕಲ್ಲಿನಲ್ಲಿ ಮಹಾದೇವ ಕರೆಯೆ ಬಂದು ನಿಂತ ಶ್ರೀದೇವಿರಮಣನ ಮುದ್ದು ಪಾದಾಂಬುಜವ ಪೂಜಿಸುವರ 1 ಉತ್ತಮವಾಗಿದ್ದ ದಿವ್ಯ ಛತ್ರ ವಿಜಯತೀರ್ಥ ನಿರ್ಮಿಸಿ ನಿತ್ಯದಲಿ ಮೃಷ್ಟಾನ್ನದಾನ ವಿಸ್ತಾರವನೆ ಪೇಳಲೊಶವೆ 2 ಕುಷ್ಠರೋಗ ವ್ಯಾಧಿ ಜ್ವರ ಚತುರ್ಥಿ(?) ಭಯಭೀತಿಗಳನ್ನೆಲ್ಲ ಬಿಟ್ಟೋಡಿಸಿ ತೀರ್ಥ ಅಂಗಾರದಲಿ ಸಮಸ್ತರ ಮಹಿ(ಮೆ)ಯ ನೋಡಿ 3 ಸಂತಾನ ಸಯುತದ ಫಲವ ನಿಂತು ಕೊಡುತ ಮಂತ್ರಾಕ್ಷತೆಯ ಗ್ರಂಥ ಪದಸುಳಾದಿಯ ಲಕ್ಷ್ಮೀಕಾಂತಗೆ ಮಾಡರ್ಪಿಸುವರ 4 ಹರಿಯ ದಿವ್ಹ್ಯಾಸಿಕÉಯ ನಾಮ ಗುರು ವಿಜಯರಾ- ಬಿಡದೆ ಭಜನೆ ಮಾಡುವವರ5
--------------
ಹರಪನಹಳ್ಳಿಭೀಮವ್ವ
ನಾರಾಯಣ ನಿನ್ನ ನಾಮದ ಸ್ಮರಣೆಯ |ಸಾರಮೃತವೆನ್ನ ನಾಲಗೆಗೆ ಬರಲಿ ಪಕೂಡುವಾಗಲು ನಿಂತಾಡುವಾಗಲು ಮತ್ತೆ |ಹಾಡುವಾಗಲು ಹರಿದಾಡುವಾಗ ||ಖೋಡಿವಿನೋದದಿ ನೋಡದೆ ನಾ ಬಲು |ಮಾಡಿದ ಪಾಪ ಬಿಟ್ಟೋಡಿ ಹೋಗುವ ಹಾಗೆ 1ಊರಿಗೆ ಹೋಗಲಿ ಊರೊಳಗಿರಲಿ-|ಕಾರಾಣಾರ್ಥಗಳೆಲ್ಲ ಕಾದಿರಲಿ ||ವಾರಿಜನಾಭನರಸಾರಥಿಸನ್ನುತ|ಸಾರಿಸಾರಿಗೆ ನಾ ಬೇಸರಿಸದ ಹಾಗೆ 2ಹಸಿವು ಇದ್ದಾಗಲಿ ಹಸಿವಿಲ್ಲದಾಗಲಿ |ರಸ-ಕಸವಿರಲಿ ಹರುಷವಿರಲಿ ||ವಸುದೇವಾತ್ಮಜ ಶಿಶುಪಾಲಕ್ಷಯ ||ಅಸುರಾಂತಕ ನಿನ್ನ ಹೆಸರು ಮರೆಯದಂತೆ 3ಕಷ್ಟದಲ್ಲಿರಲಿ ಉತ್ಕøಷ್ಟದಲ್ಲಿರಲಿ-|ಎಷ್ಟಾದರು ಮತಿಗೆಟ್ಟಿರಲಿ ||ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ |ಅಷ್ಟಾಕ್ಷರ ಮಹಾಮಂತ್ರದ ನಾಮದ 4ಕನಸಿನೊಳಾಗಲಿ ಕಳವಳಿಕಾಗಲಿ |ಮನಸುಗೊಟ್ಟಿರಲಿ ಮುನಿದಿರಲಿ ||ಜನಕಜಾಪತಿ ನಿನ್ನ ಚರಣಕಮಲವನು |ಮನಸಿನೊಳಗೆ ಒಮ್ಮೆ ನೆನೆಸಿಕೊಳ್ಳುವ ಹಾಗೆ 5ಜ್ವರ ಬಂದಾಗಲು ಚಳಿ ಬಂದಾಗಲು |ಮರಳಿ ಮರಳಿ ಮತ್ತೆ ನಡೆವಾಗಲು ||ಹರಿನಾರಾಯಣದುರಿತನಿವಾರಣ |ಇರುಳು ಹಗಲು ನಿನ್ನ ಸ್ಮರಣೆ ಮರೆಯದಂತೆ 6ಸಂತತಹರಿನಿನ್ನ ಸಾಸಿರನಾಮವ |ಅಂತರಂಗದಾ ಒಳಗಿರಿಸಿ ||ಎಂತೋ ಪುರಂದರವಿಠಲರಾಯನೆ |ಅಂತ್ಯಕಾಲದಲಿ ಚಿಂತಿಸುವಂತೆ 7
--------------
ಪುರಂದರದಾಸರು
ಬಲ್ಲವರು ಮೊರೆ ಹೋಗುವರೆ ನೀನಾವಬಲ್ಲಿದನೆಂದೆನ್ನನುಪೇಕ್ಷಿಪೆ ರಂಗ ಪ.ಸಲ್ಲದವನು ಸಾಲಗೂಳಿ ನೀ ಎಂದೆನ್ನಕ್ಷುಲ್ಲನ ಮಾಡಿ ನೀಕರಿಸದಿರೊಒಳ್ಳೆ ಸತ್ಯವ್ರತರ ಋಣ ನುಂಗಿ ಸೆರೆಸಿಕ್ಕಿಕಲ್ಹೊತ್ತು ಪುಲ್ಗಚ್ಚಿ ಹಲ್ದೆರೆದೆ ನೀನು 1ಬೇಡಿ ತಿರಿದು ಉಂಬ ಬಡವ ಛೀ ಸಾರೆಂದೀಡಾಡುವುದುಚಿತೆ ನೀ ನೃಪನೊಂಚಿಸಿಬೇಡಿ ಮನೆಯ ಕೊಂಡೆ ನೀರಿನರಸನಲ್ಲಿರೂಢಿಯ ಗೂಡ ಬಿಟ್ಟೋಡಿದೆತುಡುಗ2ನಾ ದೋಷಪೂರ್ಣನೆನುತ ಮನ ಬಲ್ಲದುನೀ ದೋಷದೂರನುಶ್ರುತಿಬಲ್ಲವುಭೂದೋಷಹರ ಪ್ರಸನ್ವೆಂಕಟೇಶ ತಿಳಿಯದೆನಾ ದಾಸನಾದೆ ನಾಮಸ್ವಾದಕ್ಹುಚ್ಚಾದೆ 3
--------------
ಪ್ರಸನ್ನವೆಂಕಟದಾಸರು