ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದಾ ಬಂದಾ ಉಡುಪಿಲಿ ನಿಂದ ನಿಂದಾ ಪ. ಬಂದ ಗೋಪೇರ ವೃಂದಗಳ ತಾ ನಂದು ದಣಿಸುತ ಸುಂದರಾಂಗನು ಮಂದರೋದ್ಧರ ಬೃಂದೆಯಿಂದಲಿ ಅ. ಮುದ್ದುಸುರಿಸುತ ಗೋಕುಲದೊಳಿರೆ ಕದ್ದು ಬೆಣ್ಣೆಯ ತಿಂದನೆನುತಲಿ ಸುದ್ದಿ ತಾಯಿಗೆ ಪೇಳಿ ಸತಿಯರು ಗದ್ದಲದಿ ತನ್ನ ಗಾರು ಮಾಡಲು ಮುದ್ದು ಯತಿಗಳು ಎದ್ದು ಪೂಜಿಸಿ ಮುದ್ದಿ ಬೆಣ್ಣೆ ನೇವೇದ್ಯವಿಡುತಿರೆ ಸದ್ದು ಇಲ್ಲದೆ ತಿಂದು ಸುಖದಲಿ ಇದ್ದೇನೆಂಬುವ ಬುದ್ಧಿಯಿಂದಲಿ 1 ಭಾರವಿಳುಹಲು ಕೋರೆ ಭೂಮಿಯು ನಾರದಾದ್ಯರ ನುತನು ತಾ ಬರೆ ನಾರಿಯರು ಮನ ಬಂದ ತೆರದಲಿ ಜಾರ ಚೋರನೆನುತ್ತ ಬೈಯ್ಯಲು ಧೀರ ಯತಿಗಳು ಸೇರಿ ಪರಬೊಮ್ಮ ಶ್ರೀರಮಣನೆನ್ನುತ ಸ್ತುತಿಸುವೋ ವಾರುತಿಗೆ ಮೈದೋರಿ ಭಕುತರ ಪಾರಿಗಾಣಿಪೆನೆಂಬ ನೆವದಲಿ 2 ಹಸಿದುಗೋಪರÀ ಯಜ್ಞವಾಟಕೆ ಅಶನ ಬೇಡಲು ಕಳುಹೆ ಗೊಲ್ಲರ ಪಸುಳರಿಗೆ ನೈವೇದ್ಯವಿಲ್ಲದೇ ವಶವೆ ಕೊಡಲೆಂದೆನ್ನೆ ಋಷಿಗಳು ವಸುಧಿಪತಿ ಸರ್ವೇಶನೆಂದರಿ ದಸಮಯತಿಗಳು ಕ್ಷಣ ಕ್ಷಣಕ್ಕೆ ಷ ಡ್ರಸದ ಆರೋಗಣೆಯ ಮಾಡಿಸೆ ಕುಶಲದಲಿ ಮೃಷ್ಟಾನ್ನ ಭುಜಿಸಲು 3 ಬಾಲ ಕಂದಗೆ ತೊಡಿಗೆ ತೊಡಿಸಲು ಲೀಲೆಯಿಂದಲಿ ಗೋಪಿದೇವಿಯು ಕಾಳ ಮಡುವಿಲಿ ಧುಮಿಕಿ ಎಲ್ಲವ ಕಳೆದು ಬರೆ ಆಟಗಳ ಪರೆವೆಲಿ ಶೀಲಯತಿಗಳು ವಾರ ವಾರಕೆ ಬಾಲ ತೊಡಿಗೆ ಶೃಂಗಾರಗೈಯ್ಯಲು ಆಲಯವ ಬಿಟ್ಟೆಲ್ಲಿ ಪೋಗದೆ ಓಲಗವ ಕೈಕೊಳ್ವೆನೆನ್ನುತ 4 ಗೋಪಜನ ಗೋವ್ಗಳನೆ ಕಾಯಲು ಗೋಪಿಯರು ತನ್ನ ಗುಲ್ಲು ಮಾಡಲು ಪಾಪಿ ಕಂಸ ಅಟ್ಟುಳಿಯ ಪಡಿಸಲು ಭೂಪತಿಯ ಪದವಿಲ್ಲದಿರಲು ಈ ಪರಿಯ ಬವಣೆಗಳ ತಾಳದೆ ಗೋಪ್ಯದಿಂದಿಲ್ಲಡಗಿ ನಿಂತು ಗೋಪಾಲಕೃಷ್ಣವಿಠಲ ಯತಿಗಳ ಗೌಪ್ಯಪೂಜೆಯಗೊಂಬ ವಿಭವಕೆ 5
--------------
ಅಂಬಾಬಾಯಿ
ಎಂದಿಗೆ ಬಹನೆ ಕೃಷ್ಣ ಮಂದಸ್ಮಿತಾನನೆ |ಅಂದದಿಂದಿರುವ ತನ್ನಯ ವೃಂದಾವನ ಬಿಟ್ಟಿಲ್ಲಿಗೆ ತವಕದಿ ಪತರುಣೀ, ಗೋಕುಲದೊಳಗಿಹ ಸಖಿಯರು ಎಂಥಾ ಧನ್ಯರೆ |ಪರಮಾತ್ಮನ ಪೊಂದಿ ಇತರ ಕರಕರಿ ಅರಿಯಳೆ ||ಹರಿಯಿಂತೊಲಿದಿರಲವರೇನು ಸುರಲೋಕದ ಸ್ತ್ರೀಯರೇ |ಪರಿಪರಿ ಸುಖ ಸಾಗರದೊಳಗಿರುವರುಜರಿದುಮಧುರೆಯಲ್ಲಿಹದೆಂದು 1ಅಮ್ಮೆಏನೊಳ್ಳೆವರವರಾಳ್ವರು ಸಮ್ಮಾತಾಂತಲ್ಲವೆ |ನಮ್ಮನೆಯವರವರಂತೆ ಸುಮ್ಮನೆ ಇರುವರೆ ||ಬೊಮ್ಮನ ಜನಕೆಮೊಲಿಸಿದರೆ ಒಮ್ಮೆಗೆ ಪೇಳಿರೆ |ಸಮ್ಮಸಿ ಕೊಳ್ಳಲು ಮನದಿ ಸುಕರ್ಮದ ಪ್ರಬಲಿಗೆ ಘಮ್ಮನೆ ಬಹಸಖಿ 2ಅಲ್ಲೀ ಸ್ತ್ರೀಯರಕಿಂತಿತಿಶಯ ಚಲ್ವೆರ್ನಾವಲ್ಲವೆ |ಸುಳ್ಳಲ್ಲಿಂತಾಭರಣಾಂಬರವೆಲ್ಲಿ ಕಂಡಿಹರೆ ||ಗೊಲ್ಲಿತಿಯರು ನಮ್ಮಂದದಿ ಸೊಲ್ಲಿಸಬಲ್ಲರೆ |ಮಲ್ಲಮರ್ದನ ಪ್ರಾಣೇಶ ವಿಠಲೆಮ್ಮನು ಬಿಟ್ಟೆಲ್ಲಿ ಪೋಗನು 3
--------------
ಪ್ರಾಣೇಶದಾಸರು