ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿತು ಭಜಿಪರ್ಯಾರಯ್ಯ ರಂಗಯ್ಯ ನಿನ್ನ ಪ ಸಿರಿದೇವಿಯು ಕಿರುಬೆರಳಲ್ಲಿರುವ ಸೊಬಗನ್ನುಅರಿಯಲಾರಳೊ ದೇವಅ ಇಂದಿರಾದೇವಿಯು ಅರಿಯಲಾರಳು ದೇವಬೃಂದಾರಕರೆಲ್ಲ ನಿಂದು ಯೋಚಿಪರುನಂದತೀರ್ಥರ ಮತದೊಳಗೆ ಬಂದವರೆಲ್ಲಎಂದಿಗಾದರು ಪರಮಾನಂದ ಪೊಂದುವರು1 ಮಾನವರು ಹೀನಮಾರ್ಗದೊಳು ಮುಳುಗಿಹರುಜ್ಞಾನಿಗಳು ನಿಂದು ಧ್ಯಾನಿಪರು ನಿನ್ನನೀನೆ ದಯಮಾಡಿ ಸಲಹೊ ಎನ್ನನು ಕೃಷ್ಣಕಾನನದೊಳು ಕಣ್ಣುಮುಚ್ಚಿ ಬಿಟ್ಟಿಹರೊ 2 ಜಲದೊಳಗಿನ ಕಪ್ಪೆ ಜಲದ ಸವಿಯರಿಯದುಜಲದ ಸುಗಂಧವ ಜಲವರಿಯದುನೆಲೆಯ ಕಂಡವರ್ಯಾರು ನೆಲೆಯಾದಿಕೇಶವನೆಸುಲಲಿತ ತತ್ತ್ವವನು ಸುಲಭ ಮಾರ್ಗದಿ ತೋರೊ 3
--------------
ಕನಕದಾಸ
ಚಾರು ನವರತುನ ಮಣಿ ಮಂಟಪಕೆ ಪ ನೀರಜಾಕ್ಷ ಆ ರುಕುಮಣಿ ಭಾ ಮೆಯರೊಡಗೂಡಿ ಅ.ಪ ಹೇಮದ ತಂಬಿಗೆ ಬಿಂದಿಗೆಗಳಲಿ ನೇಮದಿ ಉದಕವ ತುಂಬಿಹರೊ ಕೋಮಲ ತುಳಸೀ ಮಲ್ಲಿಗೆ ಸಂಪಿಗೆ ಪೂಮಳೆಗರೆಯಲು ತಂದಿಹರೊ ಸ್ವಾಮಿ ನಿನಗೆ ಪರಿಮಳ ದ್ರವ್ಯಗಳನು ಪ್ರೇಮದಿಂದಲರ್ಪಿಸಲಿಹರೊ ಚಾಮರ ಸೇವೆಯ ಅರ್ಪಿಸುವರು ಹರಿ ನಾಮ ಹಾಡಿ ಸ್ವಾಗತ ಬಯಸುವರೊ 1 ಮೇಳದ ಮಂಗಳವಾದನ ಒಂದೆಡೆ ಕಹಳೆ ಶಂಖ ದುಂದುಬಿ ಧ್ವನಿಯು ತಾಳ ತಂಬೂರಿ ಮೃದಂಗದ ಶೃತಿಗಳ ಮೇಳನದಲಿ ದಾಸರ ಗಾನ ಶೀಲರಿವರು ಸುಸ್ಸರದಲಿ ವೇದವ ಪೇಳಲು ಕಾಲಕೆ ಕಾದಿಹರೊ ಬಾಲರು ಸಂಭ್ರಮದಲಿ ಝಾಂಗಟೆ ಕೈ ತಾಳಗಳನು ಕರದಲಿ ಪಿಡಿದಿಹರೊ 2 ಲಾಡು ಜಿಲೇಬಿಯ ರಾಶಿಗಳನು ಹೊಸ ಗೂಡೆಗಳಲಿ ತುಂಬಿಟ್ಟಿಹರೊ ನೋಡಲೆ ದಣಿಸುವ ತೆರದಲಿ ಚತುರರು ಮಾಡಿದರೋ ಪಕ್ವಾನ್ನಗಳ ಜೋಡಿಸಿ ಕರಗಳ ಕಾದಿರುವರೋ ಬಲು ನಾಡುನಾಡುಗಳ ಮಂದಿಗಳು ಈಡೇರಿಸುವದು ಭಕುತ ಮನೋರಥ ರೂಢಿಯು ನಿನ್ನದು ಶರಣ ಪ್ರಸನ್ನನೆ 3
--------------
ವಿದ್ಯಾಪ್ರಸನ್ನತೀರ್ಥರು