ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘಾಸಿ ತಿಮಿರದಿನಪ ಪ ಈಶನ ವರಸುತ ದಾಸ ಜನರ ಹಿತ ಪಾಶಾಂಕುಶ ಹಸ್ತ ಅ.ಪ ವಿದ್ಯೆ ಪ್ರದಾಯಕ ಬುದ್ಧಿ ಪ್ರಬೋಧಕ ಸಿದ್ಧಿದ ಶ್ರೀ ಬೆನಕ ಹೊದ್ದಿ ನೆನೆವ ಭಕ್ತರುದ್ಧರಿಸುವ ಶಕ್ತ ಮುದ್ದು ಮುಖವ ತೋರಿತ್ತ 1 ಗಿರಿಜೆ ಸತ್ಕುವರನೆ ದ್ವಿರದ ಸುವದನನೆ ಶರಣರ ಪಾಲಿಪನೆ ಪೊರೆಯನ್ನ ಸದ್ದಯದಿ 2 ಕಿಂಕರ ಶಂಕರ ಶತ್ರುಭಯಂಕರ ಶಂಖಚಕ್ರಾಬ್ಜಧರ ಪಂಕಜ ಮುಖವ ತೋರ 3 ರಕ್ತ ವಸ್ತ್ರಾನ್ವಿತ ರಕ್ತ ಗಂಧಾಕ್ಷತ ರಕ್ತ ಮಾಲಾದಿಧೃತ ಭಕ್ತ ಜನಾವನ ಶಕ್ತನೆ ನೀ ಎನ್ನ ಚಿತ್ತದಿ ಪೊಳೆಯೊ ಘನ್ನ 4 ವೇದನಿಕರ ಸುಗೀಯ ಸಾಧು ಸಜ್ಜನ ಸಮ್ಮತ 5 ಇಂಬಿಟ್ಟಿಯೆಂದು ನಿನ್ನ ಅಂಬರೊ ಸುಗುಣಸಿಂಧು 6 ವಕ್ರವ ತುಂಡಿಪ ಕತದಿಂದಲಪ್ಪ ವಕ್ರತುಂಡನು ನೀನಪ್ಪ ಶಕ್ರ ಪೂಜಿಸಿದನು ವೃತ್ರನ ವಧೆಗಿನ್ನುಪಕ್ರಮದಲೆ ತಾನಿನ್ನು 7 ಪರಿವಾರಸಹಿತ ಘನ್ನ ಧುರದಲ್ಲಿ ಬಿದ್ದನು ವರ ಧರ್ಮ ಗೆದ್ದನು ಎರಗಿ ಅರ್ಚಿಸಿ ನಿನ್ನನು 8 ದುರಳ ದಶಾನನ ಸರಕುಮಾಡದೆ ನಿನ್ನ ಗರುವದಿಂದಿರಲವನ ಪರಿಭವ ಕಾರಣವಾದುದೆಂಬರು ಕಣ ಶರಣಜನಾಭರಣ 9 ನೇಮದಿರುತಿದ್ದು ಹೇ ಮಹಿಮ ಖರ ದಶಶಿರನನ್ನು ಧುರದಲ್ಲಿಗೆದ್ದನು ಕರುಣೆಯೆ ಒರೆಯಲೇನು 10 ಕೋರಲು ಸಿದ್ಧಿ ಅಂದು ತೋರಿದೆ ಕರುಣವ ಚಾರುಕರದಿ ಅವನಾರೈಸಿ ಕರುಣಾರ್ಣವ 11 ಮುಪ್ಪುರ ಗೆದ್ದನು ಮುಕ್ಕಣ್ಣ ನಿನ್ನನು ತಪ್ಪದೆ ನೆನೆದವನು ಅಪ್ಪನೆ ನಿನ್ನಯ ಗೊಪ್ಪ ಚರಿತ್ರೆಯ ಇಪ್ಪಂತೆ ಪೇಳಿಸಯ್ಯ 12 ಸೃಷ್ಟಿಕರ್ತನು ತನ್ನ ಸೃಷ್ಟಿಗೈಯ್ಯಲು ಮುನ್ನ ಮುಟ್ಟಿಭಜಿಸಿದ ನಿನ್ನ ಎಷ್ಟೆಂತ ಪೇಳಲಿ ಶ್ರೇಷ್ಠಗುಣಾವಳಿ ಅಷ್ಟೆಲ್ಲ ನೀನೆ ಬಲ್ಲಿ 13 ಮಾಧವ ಪೊಂದಿದ ನಿನ್ನನವ ದ್ವಂದ ವಿವಾಹಾದುದು 14 ಭಾರತ ಬರೆಯಲು ಆಕಾರ ನೋಡಲು ತೋರದೆ ಇರುತಿರಲು ಶೂರನೆ ನಿನ್ನನು ಅರಿಸಿ ವ್ಯಾಸನು ಬೀರಿದ ಮಹಿಮೆಯನು 15 ಏನು ಕರುಣವಯ್ಯ ಶ್ರೀನಿಕೇತನಿಗೈಯ್ಯಾ ತಾನೆ ಇತ್ತಿಹನಯ್ಯ ಆನತಿಸಲು ಇಷ್ಟ ಮಾಣಲು ಸಂಕಟ ನೀನು ಕೊಡೆನುತದಟ 16 ಭಜಿಪರ ಭಾಗ್ಯದ ಯಜಿಪರಭೀಷ್ಟದ ತ್ಯಜಿಪರ ಸಂಕಟದ ಪಡಿ 17 ಜಯ ಜಯ ಕಾಪಿಲನೆ ಫಾಲ ಜಯ ಗಜಮುಖನೆ 18 ದ್ವಾದಶ ನಾಮವ ಆದರದಿಂದಾವ ಓದುವ ಕೇಳುವವ ಆದಿ ಪೂಜಿತನೊಲಿವ 20 ವಿದ್ಯಾರಂಭದಿ ಮುದ್ದು ವಿವಾದÀದಿ ಪೊದ್ದಲ್ಲಿ ನಿರ್ಗಮದಿ ಯುದ್ಧದಿ ನಿನ್ನನು ಬದ್ಧದಿ ನೆನೆವನು ಗೆದ್ದಪನೈ ಅವನು 21 ಏಕವಿಂಶತಿಪದ ಕೋಕನಪುಷ್ಪದ ಶ್ರೀಕರ ಮಾಲೆ ಇದ ಶ್ರೀಕಾಂತ ವರಭಕ್ತ ನೀ ಕರುಣಿಸೆಂದಿತ್ತ ಸ್ವೀಕರಿಸೈ ಮಹಂತ 22 ಬೆಂಗಳೂರಿನಲಿ ತುಂಗರೂಪದಲ್ಲಿ ಕಂಗೊಳಿಸುತಲಿಲ್ಲಿ ಹಿಂಗದೆ ಪೊರೆವೆನೆಂದ 23 ಬಾಲಕೃಷ್ಣಾರ್ಯರ ಬಾಲ ಲಕ್ಷ್ಮೀನಾರಾಯಣನೆಂಬ ಸತ್ಪೆಸರ ತಾಳಿದ ಶರಣನು ಮೇಳೈಸೀನುತಿಯನು ಓಲಗಿಸಿದ ನಿನ್ನನು 24 ಪೊಂದುವ ಮೋದವನು ಇಂದುಧರನ ಸುತನಂದದಿ ಸದ್ಭಕ್ತವೃಂದ ರಕ್ಷಿಪ ಸಂತತ 25 ನಮೋ ಸಾಕುವ ಮಹಿಮ ನಮೋ ಭೀಕರ ಬಿಡಿಸೆನ್ನ ನೀ ಕರುಣಿಸು ಮುನ್ನ ಶ್ರೀಕಾಂತ ಭಕ್ತಿಘನ್ನ 26 ಮಂಗಳ ಸದ್ವಿದ್ಯಾಬುದ್ಧಿದ ಜಯ ಜಯ ಮುಂಗಳ ಸಿದ್ಧದನೆ ಮಂಗಳ ವರ್ಧಿತನೆ 27
--------------
ಲಕ್ಷ್ಮೀನಾರಯಣರಾಯರು
ನೋಡೆ ಗೋಪ್ಯಮ್ಮ ಕೃಷ್ಣಂಚಾಳಿಯ ನೀ ಮಾಡಿಬಿಟ್ಟಿಯೆ ಇಂಥ ಗೂಳಿಯ ಇಂಥ ಧಾಳಿಯ ಪ ಹಾಲು ಮೊಸರ ಕೆನೆ ಬೇಡುವ ಕಡ- ಗೋಲಿಂದ್ಹೊಡೆದು ನಮ್ಮನ್ನೋಡುವ ಬಂದು ಕಾಡುವ1 ತುಪ್ಪದ ಕೊಡ ಧಪ್ಪನೊಡೆದಾನೆ ಕಂ- ದರ್ಪನಪ್ಪನು ಈತೇನ್ಹುಡುಗನೆ ಇಂಥ ತುಡುಗನೆ 2 ಕರೆದು ಕೈಯಲಿ ಬೆಣ್ಣೆಯ ಮುದ್ದೆ ನೀ ಕೊಟ್ಟೆ ್ಹೀಳೆ ಭೀಮೇಶ ಕೃಷ್ಣಗೆ ಬುದ್ಧಿ 3
--------------
ಹರಪನಹಳ್ಳಿಭೀಮವ್ವ
ಸೃಷ್ಟಿಯೊಳಗೆಲ್ಲ ದುಷ್ಟರ ಪ್ರಭೆಯಾಗಿ ನಿಷ್ಠರುದೋರದಂತಾದರು ಮಾ ಧ್ರುವ ಭ್ರಷ್ಟರು ಬೂಟಿಕಿ ಶಿಷ್ಠರೆ ಕೈಕೊಂಡು ನಿಷ್ಠರಿಗಾಟ್ಲಿ ತಂದರು ಮಾ ತುಟ್ಟಿಲೆ ಮಿಸುಕದೆ ಗುಟ್ಟಿಲಿದ್ದವರ ಬಟ್ಟೆಗ್ಯಳದಿನ್ನು ತಾಹರು ಮಾ ಹೊಟ್ಟೆಯೊಳು ಹೊಕ್ಕು ಕಟ್ಟಲೆ ಕುಳಿತಿನ್ನು ನೆಟ್ಟ ನೇರಿಷ್ಟ ನೇಮಿಸುರು ಮಾ ಇಟ್ಟ ತೊಟ್ಟವರನು ಕೆಟ್ಟದೃಷ್ಟಿಲೆ ನೋಡಿ ದಿಟ್ಟತನದಿ ಪ್ರಾಣಕೊಂಬರು ಮಾ 1 ಕೊಟ್ಟು ಹಣಹೊನ್ನು ಇಟ್ಟದ್ದು ಬೇಡಲು ಕುಟ್ಟಿ ಅವನಬಾಯಿ ಹಾರರು ಮಾ ತುಟ್ಟಿಲೆ ವಂದಾಡಿ ಹೊಟ್ಟಲೆ ವಂದಿಟ್ಟು ನೆಟ್ಟನೆ ಘಾಸಿಮಾಡರು ಮಾ ಗಂಟುಳ್ಳವರ ಕಂಡು ಕಟ್ಟಿದಂಡಗಳನ್ನು ನಷ್ಟತನದಿ ಹೊಟ್ಟೆ ಹೊರುವರು ಮಾ ಬಟ್ಟಿಲೆ ತೋರಲು ಬಿಟ್ಟಿಯ ಹಿಡಿದಿನ್ನು ಹೆಟ್ಟಿ ಅವನ ಮುಂದೆ ನಡೆಸುರು ಮಾ 2 ಶುದ್ದಿಯು ಇಲ್ಲದೆ ರಾಜ್ಯಾಧಿಪತಿಗಳು ಇದ್ದು ಇಲ್ಲದಂತಾದರು ಮಾ ಮಂದಮತಿಗಳು ಅಂದಣವೇರಿನ್ನು ಬುದ್ಧಿವಂತರೀಗ್ಹೀನತಂದರು ಮಾ ಮುದ್ರಾಧಾರಿಗಳೆಲ್ಲ ಕ್ಷುದ್ರದೃಷ್ಟಿಯು ಮಾಡಿ ಕ್ಷುದ್ರತನದಿ ಕೆಡುತಿಹರು ಮಾ ಸಿದ್ಧಸಾಧಕರೆಲ್ಲ ಗುದ್ದನೇ ಹೊಕ್ಕರು ಇದ್ದರೆ ಬುದ್ಧಿಹೀನರು ಮಾ 3 ಉಳಿಯಮುಟ್ಟಿದ ದೈವ ಉಳಿಯದೇ ಹೋದವು ಉಳಿಗಾಲ ವಿಲ್ಲದಂತಾಯಿತು ಮಾ ತಿಳಿವಳಿಕುಳ್ಳವರೆಲ್ಲ ತಲೆಮುಸಕ್ಹಾಕಿನ್ನು ಕಳ್ಳರೆ ಸಾಜರು ಆದರು ಮಾ ಒಳ್ಳೆಯವರ ನುಡಿ ಎಳ್ಳಷ್ಟು ಮಾಡುತ ಸುಳ್ಳರು ನಿಜನುಡಿವೆಂಬುರು ಮಾ ಉಳ್ಳವರು ಖಳಬುದ್ಧಿ ಕೈಕೊಂಡು ಇಳೆಯೊಳು ಧರ್ಮವ ಜರೆದರು ಮಾ 4 ಸಾಧುಸಜ್ಜನರೆಲ್ಲ ಭೇದವ ಅಡಗಿಸಿ ಮೇಧಿನಿಯಲು ಗುಪ್ತರಾದರು ಮಾ ಇದ್ದರ ಘನಸುಖ ಸಿದ್ಧರ ನೆರೆಯಲಿ ಬುದ್ಧಿಹೀನರು ತಾವು ಅರಿಯರು ಮಾ ಸದ್ಗುರು ಕೃಪೆಯಿಂದ ಸದ್ಬ್ರಹ್ಮದ ನೆಲೆಯ ಸತ್ ಶಿಷ್ಯಮಹಿಪತಿ ತಿಳಿದನು ಮಾ ಎಂದಿಗೆ ಬೇಡಿನ್ನು ದುರ್ಜನರ ಸಂಗವು ತ್ರಾಹಿ ತ್ರಾಹಿ ತ್ರಾಹಿ ಎಂದನು ಮಾ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು