ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿಂದ ಬಂದಿದ್ದೆಲೆ ಖೋಡಿ ನೀ ನೆಲ್ಲಿಗೆ ಹೋಗ್ತಿದ್ದಿ ತ್ವರೆಮಾಡಿ ಪ ಕಲ್ಲುಮುಳ್ಳೆನ್ನದೆ ಮುಂದೆ ನೋಡಿ ಜರ ನಿಲ್ಲದೆ ಹೋಗ್ತಿದ್ದಿ ಓಡೋಡಿ ಅ.ಪ ಏಳುಗೇಣಿನ ಕುದುರೇರಿದ್ದಿ ಭವ ಮಾಲೆ ಕೊರಳಿಗೆ ಹಾಕಿದ್ದಿ ಮೂಲ ಲಗಾಮವೆ ತೆಗೆದಿದ್ದೀ ನೀ ಬೀಳುವ ಎಚ್ಚರ ಮರೆತಿದ್ದಿ 1 ಶೀಲ ಸನ್ಮಾರ್ಗವ ಬಿಟ್ಟಿದ್ದಿ ಮಹ ಕಾಳು ಕತ್ತಲೆಹಾದ್ಹಿಡಿದಿದ್ದಿ ಕಾಲನಾಳಿನ ಕೈಗೆ ಸಿಗುತಿದ್ದಿ ಬಹು ಗೋಳಿನೊಳಗೆ ಹೋಗಿ ಬೀಳುತಿದ್ದಿ2 ಅಸ್ಥಿರ ಕುದುರೆ ಹತ್ತಿದ್ದಿ ಬಲು ಮಸ್ತಿಲಿಂದ ಕಣ್ಣು ಮುಚ್ಚಿದ್ದಿ ಪುಸ್ತಿಯಿಲ್ಲದ ದಾರ್ಹಿಡಿದಿದ್ದಿ ಮುಂದೆ ಸ್ವಸ್ಥತೆ ನೀ ಹ್ಯಾಂಗೆ ಪಡೀತಿದ್ದಿ 3 ಯಾರನ್ನ ಬೇಡಿ ಬಂದಿದ್ದಿ ನೀ ನಾರಸೇವೆ ಕೈಕೊಂಡಿದ್ದಿ ದಾರಿ ತಪ್ಪಿದಾರ್ಹಿಡಿದಿದ್ದಿ ಸುವಿ ಚಾರ ಪಥವ ಧಾರೆರೆದಿದ್ದಿ 4 ಬಂದಕಾರ್ಯವನು ತೊರೆದಿದ್ದಿ ಮನ ಬಂದಂತೆ ಕುಣಿಕುಣಿದಾಡುತಿದ್ದಿ ತಂದೆ ಶ್ರೀರಾಮನ ಮರೆತಿದ್ದಿ ಈ ಬಂಧುರಸಮಯ ವ್ಯರ್ಥ ಕಳೀತಿದ್ದಿ 5
--------------
ರಾಮದಾಸರು
ಮರೆವಿನೊಳಗೆ ಮನೆಮಾಡಿದ್ದಿ ಮನ ಅರಿವಿನ ಆಲಯ ಬಿಟ್ಟಿದ್ದಿ ಪ ಹರಿದುಹೋಗುವಂಥ ಸಿರಿಗೆ ಒಲಿದು ನೀ ಪರಮ ಹರಿಯ ಪಾದಕ್ಹೊರತಿದ್ದಿ ಅ.ಪ ಮಂದಿಮಕ್ಕಳೆಂದು ನೆಚ್ಚಿದ್ದಿ ನಿನ್ನ ಹಿಂದೆ ಬರುವರೇನು ಅಂತಿದ್ದಿ ಕುಂದುವ ಜಗ ಮಾಯದಂದಗೆಟ್ಟು ಒಬ್ಬ ನೊಂದಿನ ಹೋಗ್ವುದು ಮರೆತಿದ್ದಿ 1 ಸಿರಿಸಂಪತ್ತಿಗೆ ಹಿಗ್ಗಿದಿ ಇದು ಸ್ಥಿರವಲ್ಲೆಂಬುದು ಅರಿಯದ್ಹೋದಿ ಎರೆದೆಣ್ಣಿರುವನಕುರಿವ ದೀವಿಗೆಯೋಲ್ ವರ ಪುಣ್ಯಿರುವನಕಿರುತದೆ ಸಿರಿಯದು 2 ಹೇಳಿದಮಾತನು ಕೇಳದ್ಹೋಗಿ ಮನ ಮೂಳನಾಗಬೇಡೆಲೆ ಗೂಗಿ ಹಾಳುಯೋಚನೆ ಬಿಟ್ಟು ಮೇಲುಪದವಿ ಪಡಿ ಶೀಲ ಶ್ರೀರಾಮಗೆ ತಲೆಬಾಗಿ 3
--------------
ರಾಮದಾಸರು