ಒಟ್ಟು 6 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನಿವನು ಈಗ ಬರಲಿದಕೆ ಬಗೆಯೇನುಚೆನ್ನಾಗಿ ಪೇಳೆ ರಮಣಿ ಪ ಮನ್ನಿಸಿ ಮಮತೆಯಲಿ ಮನವ ಸೆಳಕೊಂಡೊಯ್ದುಅನ್ಯರನು ಕೂಡುವನೆ ಕೆಳದಿ ಅ.ಪ. ಬಣ್ಣದ ಗಿಣಿ ಬರೆದ ಸಣ್ಣ ಕುಪ್ಪಸವುಳ್ಳಚಿನ್ನದ ಶ್ರೀರೇಖೆ ಸೀರೆಬಿನ್ನಣವುಳ್ಳ ಬಿಳಿಯೆಲೆ ಅಡಿಕೆ ಕೆನೆಸುಣ್ಣಕರ್ಪೂರ ಕಾಚಿನುಂಡೆಕಣ್ಣಿಗಿಂಪಾದ ಕಡು ಚೆಲ್ವ ಮಲ್ಲಿಗೆ ಮೊಗ್ಗೆ ಉನ್ನತವಾದ ದಂಡೆಇನ್ನು ಈ ಪರಿಮಳವು ಬಗೆಬಗೆಯ ಆಭರಣರನ್ನ ಕೆತ್ತಿಸಿದ ಗೊಂಡೆಮುನ್ನ ಸಿಂಗರ ಮಾಡಿ ಎದೆಹಿಡಿದು ಬಿಗಿಯಪ್ಪಿನಿನ್ನ ಈ ವೇಳೆ ಕೂಡಿದೆ ದೃಢದೆ 1 ಈಗಾಗು ಬಾಹನೆಂತಿರುವೆ ತಾನೂರಿದ್ದಉಗುರು ಗುರುತನು ನೋಡುತಸೋಗೆಗಣ್ಣಿನ ಕಾಡಿಗೆಯ ಕಲಕಿದನೆಂದುಬೇಗ ನಟನೆಯ ಮಾಡುತರಾಗದಿಂದದಲಿ ರವಿಕೆ ನೆರಿಯನು ಬದಲುಟ್ಟುಭೋಗಕ್ಕೆ ಅನುವಾಗುತಹಿಂಗೆ ಸಿಂಗರಿಸಿಕೊಂಡಿಷ್ಟು ಹೊತ್ತನು ಕಳೆದೆಹೇಗೇ ಸೈರಿಪೆ ಕೂಡದೆ ಮುಂದೆ 2 ಇಂದಲ್ಲದಿರೆ ನಾಳೆ ಬಹನೆಂದು ಇದ್ದರೆಕಂದರ್ಪ ಕಾಡುತಿಹನೆತಂದು ತೋರಿಸು ತನ್ನ ತಂದೆಯನೆಂದು ಪೂ-ವಿಂದ ಬಾಣವ ಎಸೆವನೆಇಂದುಬಿಂಬವು ಮಂದ ಮಾರುತವು ಸುಮದ ಮಳೆ-ಯಿಂದ ಸೆಕೆಗಾನಾರೆನೆಒಂದು ನಿಮಿಷದಲಿ ಶ್ರೀರಂಗ ವಿಠ್ಠಲನನ್ನುಹೊಂದಿಸೆನ್ನಗಲದಂತೆ ಕಾಂತೆ 3
--------------
ಶ್ರೀಪಾದರಾಜರು
ಉಗಾಭೋಗ ಚಿಕ್ಕ ಮಗುವಾದ ಪ್ರಹ್ಲಾದ ದೇವನನು ರಕ್ಕಸನು ಪಿಡಿದತಿ ಹಿಂಸೆಪಡಿಸುವದ ನೋಡಿ ಉಕ್ಕಿಬರುತಿಹ ಕೋಪದಿಂ ಕಿಡಿಕಿಡಿಯಾಗಿ ಉಕ್ಕಿನ ಕಂಬದಿಂ ಉರಿಯ ಕಾರುತ ಬಂದು ಪಕ್ಕಿದೇರನು ಹಿರಣ್ಯಕಶಿಪನ ಪಿಡಿದು ತಾ ಉರ ಬಗೆದು ಕರುಳ ಮಾಲೆಯ ಗಕ್ಕನೆ ಗಳಕಿಕ್ಕಿಕೊಂಡು ಆರ್ಭಟಿಸಿದಂದು ಲಕ್ಕುಮಿಯಾದಿಯಾಗಿ ಮುಕ್ಕೋಟಿ ದೇವತೆಗಳು ಬೆದರಿ ದಿಕ್ಕೆಟ್ಟು ಗಡ ಗಡ ನಡುಗುತಿರಲಾಗ ಅಕ್ಕರದ ಭಕುತ ಪ್ರಹ್ಲಾದ ಬರೆ ಬಿಗಿಯಪ್ಪಿ ತಕ್ಕೈಸಿ ಮುಂಡಾಡಿ ಪ್ರಸನ್ನನಾದನು ತನ್ನ ಭಕ್ತರೊಳಿನ್ನೆಷ್ಟು ಪ್ರೀತಿಯೋ ರಂಗೇಶವಿಠಲಗೆ
--------------
ರಂಗೇಶವಿಠಲದಾಸರು
ನಿಮ್ಮ ನುಡಿಗಳ ಕೇಳಲೆನಗೆ ಹೊತ್ತೆಲ್ಲಿಯದುನಮ್ಮ ಗೃಹಕೃತ್ಯಗಳು ಬಹಳವಾಗಿಹವೊ ಪನಮ್ಮಯ್ಯನೊಂದು ಗ್ರಾಮವನೇಕಸ್ವಾಮ್ಯದಲಿತಮ್ಮ ದಂಪತಿಗಳುಪಭೋಗಕೆಂದುತಮ್ಮಲ್ಲಿ ತಾವೆ ಸಂವಾದಿಸಿದರವರಲ್ಲಿಹಮ್ಮು ಕಡೆಯಾದ ಹದಿಮೂವರುದಿಸಿದರೂ 1 ಕ್ಲೇಶ ಬಡಿಸುವರು 2ಸ್ತ್ರೀ ಕಾಮನೆ ರಾಗ ಪ್ರತಿಕೂಲದಿಂ ದ್ವೇಷ ಬೇಕೆಂಬದನೆಕಾದುನುಳಿಯೆ ಕ್ರೋಧಾಆಕ್ರಮಿಸಿ ಸಕಲವನು ಬಚ್ಚಿಡುವನವ ಲೋಭಸಾಕು ಗುರುಹಿರಿಯರೆಂಬವರರಿಯೆ ಮೋಹಾ 3ನಿತ್ಯವಲ್ಲದ ಸಿರಿಯ ನಂಬಿ ಬೆರೆತಿಹಮದನುಉತ್ತಮರ ಕೂಡೆ ಸೆಣೆಸುವನು ಮತ್ಸರನುಮತ್ತೆ ಈಷ್ರ್ಯನು ದುಃಖನನ್ಯರಿಗೆ ಬಗೆಯುತಿಹವ್ಯರ್ಥದಿಂ ಬಸವಳಿಯುತಿಹನಸೂಯಕನು 4ದಂಭವನೆಂಬವನಲ್ಲಿ ಪುರುಷಾರ್ಥವಿಸಿಕಿಲ್ಲಹಂಬಲಿಸುತಿಹ ದರ್ಪಕೊಬ್ಬಿ ಬರಿದೆಉಂಬರೊಬ್ಬರಿಗಿಲ್ಲ ಸಕಲವೂ ನನಗೆಂದುದೊಂಬಿಯಲಿ ನಾ ಸಿಕ್ಕಿ ಬಳಲುತಿಹೆನಾಗಿ 5ವೃತ್ತಿಯೆರಡದರಲ್ಲಿ ಫಲವೆರಡು ಜನ್ಮಕ್ಕೆಬಿತ್ತಿ ಬೆಳೆವರೆ ಚೌಳು ಜಲವ ಕಾಣೆಒತ್ತರಿಸಿ ಬರುತಿರುವ ಜ್ಞಾತಿಗಳ ಬೆಂಕಿಯಲಿಹೊತ್ತು ಹೊತ್ತಿಗೆ ಬರಿದೆ ದಹಿಸುತಿಹೆನಾಗೀ 6ಬರಿಯ ಭ್ರಾಂತಿನ ಬಲೆಯ ಬೀಸಿ ನೋಡುತ್ತಿರುವತಿರುಪತಿಯ ವೆಂಕಟನ ಚರಣಗಳನುಕರಗಳಲಿ ಬಿಗಿಯಪ್ಪಿ ಶಿರವೆರಗಿ ಗುರುಮುಖದಿಅರುಪಿದುದ ನಿಲಿಸೆಂದು ಬೇಡಿಕೊಳುತಿಹೆನು 7ಕಂ||ತನುವಿನೊಳಭಿಮಾನವಿರಲೀಘನತರ ಸಂಸಾರ ದುಃಖ ತೊಲಗದು ಸತ್ಯತನು ನಿತ್ಯತೆದೋರ್ದಕಾರಣಮನದೊಡನಿಂತೆಂದು ಜೀವನನು ವಾದಿಸಿದಂ
--------------
ತಿಮ್ಮಪ್ಪದಾಸರು
ಮಕ್ಕಳ ಮಾಣಿಕವೆ ಮೋಹನ್ನ ಬಾ ರಂಗೈಯ್ಯಾ ಮಕ್ಕಳ ಮಾಣಿಕವೆ ಮೋಹನ್ನ ಎನ್ನಕ್ಕರದ ಗುಣನಿಧೆ ಬಾ ರಂಗೈಯ್ಯಾ ಪ. ಅಪ್ಪುತಪ್ಪು ಹೆಜ್ಜೆನಿಕ್ಕುತ ಬಾಯೊಳು ಜೊಲ್ಲು ಸುಪ್ಪಾಣಿಮುತ್ತಂತೆ ಸುರಿಯುತಾ ಬಾರಂಗೈಯ್ಯಾ ನಿನಗೊಪ್ಪುವಾಭರಣ ನೀಡುವೆನೊ ಅದನೊಲ್ಲದಿದ್ದರೆ ತುಪ್ಪಾಕಜ್ಜಾಯ ಕೊಡುವೆನೂ 1 ಅಂದಿಗೆ ಕಿರುಗೆÉಜ್ಜೆ ಅಲಗೊತ್ತು ಕೈಯೊಳಗಿದ್ದು ಬಿಂದುಲಿ ಬಾಜುಬಂದು ತಿರುಹೂತ ಬಾರಂಗೈಯ್ಯಾ ಬಂದೆನ್ನ ಬಿಗಿಯಪ್ಪಿಕೊಳ್ಳಯ್ಯ ಅದನೊಲ್ಲದಿದ್ದರೆ ಅಂದವಾದ ಒಂದು ಮುದ್ದು ತಾರಯ್ಯ 2 ಓಡಿಓಡಿ ಬಾರೋ ವಸುದೇವನಂದನಾ ಕಂದ ನೋಡಿ ನೋಡಿ ನಗುತ ಬಾರೊ ರಂಗಯ್ಯ ಕೋಡಗಲ್ಲವಾಸ ವೆಂಕಟ 3
--------------
ಹೆಳವನಕಟ್ಟೆ ಗಿರಿಯಮ್ಮ
ಮರವೆ ಮುಸುಕಿದುದುತಾ ಪರಮ ಕೃಪೆವಂತ ಬಂದು ಪ್ರಳಾಪವೇನಿದುಯೆಂದು ನನ್ನಯತಾಪವನು ತಂಪಿಸುತ ಬಿಗಿಯಪ್ಪಿದನು ದೇಶಿಕನು 1ಕಂಗಳೊಳಗಾನಂದಜಲ ಸುರಿದಂಗದೊಳು ರೋಮಾಂಚವಾಗಿಯೆಮಂಗಳಾಕೃತಿಗಂಡು ಚರಣಕ್ಕೆರಗಿದೆನು ಮರಳಿಕಂಗಳೊರತೆಯ ತೊಡೆದು ದಿವ್ಯ ಕರಂಗಳಿಂದಲಿ ಶಿರತಡ' ಸರ್ವಾಂಗವನು ಬಿಗಿಯಪ್ಪಿಯಭಯವನಿತ್ತ ದೇಶಿಕನು 2ನಿನ್ನೊಳಾನಿಹೆನೆಲ್ಲಿ ಪೋಪೆಡೆಯನ್ನು ತೋರಿಸು ನನಗೆ ನೀನಾರೆನ್ನ ಮನ ನಿನ್ನುವನುಳಿದು ನಿಲಬಲ್ಲುದೇ ಮಗನೇಇನ್ನು ಧೈರ್ಯವ ಮಾಡು ಗಿರಿಗುಹೆಯನ್ನು ಸೇರ್ವೆನು ನಾನು ಜನತತಿಯನ್ನು ಹೊದ್ದುವದಿಲ್ಲವೆಂದುಸುರಿದನು ದೇಶಿಕನು 3ಇರಿಸಿರುವೆನೀ ಪಾದುಕೆಗಳನು ಹರುಷದಿಂದರ್ಚಿಸುತ ಭಾ'ಸುಬರಿಯ ಭ್ರಾಂತಿಯ ಬಿಟ್ಟು ಭಕ್ತಿಯ ಬಲದಿ ಮಂತ್ರವನುನಿರುತ ಜಪಿಸುತ್ತಿರು ಯಥೇಚ್ಛೆಯೊಳರಿವು ಸುಖಸಂಪತ್ತಿ ಲಭಿಪುದುಪರಮ ಭಕತನು ನೀನೆನುತ ವಾಚಿಸಿದನು ದೇಶಿಕನು 4'ಜಯದಶ'ುಯ ದಿವಸ ಲಭಿಸಿತು 'ಜಯಕರ ಮುಂದಿನ್ನು ನಿನಗೆಲೆದ್ವಿಜನೆ ಸುತ ಪೌತ್ರಾದಿ ಕುಲಪಾರಂಪರೆಗೆ ನಿನ್ನಾಸುಜನತೆಯ ಕರುಣಿಪುದು ಭಕ್ತವ್ರಜದೊಲೋಲಾಡುವದು ತಪ್ಪದು'ಜಯಸಾರಥಿ ನಿನ್ನ ವಶವೆಂದನು ಗುರೂತ್ತಮನು 5ಅನಿತರೊಳು ಜನಸಂದಣಿಯ ಧ್ವನಿಯನು ತಿಳಿದು ನಾನೆದ್ದೆ ಬೇಗದಿಘನಕೃಪಾನಿಧಿ ಗುರುವ ಕಾಣದೆ ಮತ್ತೆ ಬಳಲಿದೆನುಇನನುದಿಸಿದೊಂದರೆಘಳಿಗೆ ತಲೆಯನು ಬಿಡದೆುದ್ದಲ್ಲಿ ಪಾದುಕೆಯನು ಶಿರದಿ ತಾಳಿದೆನು ಮನೆಗೈದಿದೆನು ಹರುಷದಲಿ 6ತಿರುಪತಿಯ ವೆಂಕಟನು ಸುಖವನು ಕರುಣಿಸಲು ದೇಶಿಕನ ತನುವನುಧರಿಸಿ ಪಾದುಕೆುತ್ತು ಸಲ'ದನೊಲಿದು ಕೃಪೆುಂದಹರುಷದಿಂದೀ ದಿವಸ ಶ್ರೀ ಗುರುವರನ ಪೂಜಾಕಾರ್ಯವೆನಿಪುದುನಿರುತ ಭಜಿಸುವರಿಂಗೆ ಸಕಲೇಷ್ಟಾರ್ಥ ಸಿದ್ಧಿಪುದು * 7
--------------
ತಿಮ್ಮಪ್ಪದಾಸರು