ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೋ ಮನವೇ ನೀಹೀಂಗಾದಿ ಧ್ರುವ ಏನೋ ಮನವೇ ನೀ ಹೀಂಗಾದಿ | ಸ್ವಾನಂದ ಸುಖ ತಿಳಿಯದೆ ಬಳದಿ | ಮಾನುಭವರ ವಿಡಿನಿಜ ಹಾದಿ | ಭವ ವ್ಯಾಧಿ 1 ಮಂದ ಮತಿತನ ಬಿಡು ಗುಣದಾ | ಹೊಂದೋ ಸದ್ಗುರುವಿನ ಪಾದಾ | ಛಂದದಿ ಪಡಿಯೋ ನಿಜ ಬೋಧಾ | ಸಂದೇಹ ಬಿಡಿಸೆಚ್ಚರಿಸುವದಾ2 ಹೊಗೆ ಅಗ್ನಿಯ ಮುಸುಕಿಹ ಪರಿಯಾ | ಮಾಯಾ | ಬಿಗಿದಾವರಿಸಿಹುದು ನೋಯಾ | ಬ್ಯಾಗನೆ ತಿಳಿ ಗೆಲುವ ಉಪಾಯಾ 3 ಮುಂದ ಹಾಕಿದ ಹೆಜ್ಜೆಯನು | ಹಿಂದಕ ತಿರುಗಿಸದಿರು ನೀನು | ನಿಂದಿಸಲೊಂದಿಸಲಾರೇನು | ಮುಂದಗಿಡದೆ ಬೆರಿ ವಸ್ತವನು 4 ನಿನ್ನ ಸುದ್ದಿಯು ತಾ ನಿನಗಿಲ್ಲಾ | ಇನ್ನಾರೆ ತಿಳಿತನು ಸ್ಥಿರವಲ್ಲಾ | ಮುನ್ನಿನ ಪರಿಕೆಡುವುದು ಸಲ್ಲಾ | ಮನ್ನಿಸು ಮಹಿಪತಿ ಜನ ಸೊಲ್ಲಾ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಂಟರಾಗಿ ಬಾಗಿಲ ಕಾಯೋರು ಹರಿಯವೈಕುಂಠದಿ ರಂಗನಾಯಕನರಮನೆಯ ಪ. ಸುತ್ತ ವಿರಜಾನದಿ ಮತ್ತು ನಂದನ ವನಉತ್ತಮೋತ್ತಮ ವೈಕುಂಠಉತ್ತಮೋತ್ತಮ ವೈಕುಂಠದೊಳಗಿನ್ನುಮಿಂಚಿನಂತೆ ಹೊಳೆವೊ ಮುಕ್ತರು1 ಶ್ರೀದೇವಿ ತಾನು ಮುರಹರನ ಪುರದಾಗವಿರಜಾ ತಾನೆಂದು ಕರೆಸುತವಿರಜಾ ತಾನೆಂದು ಕರೆಸುತ ನಾನಾ ಪರಿಗಿಳಿ ಕೋಗಿಲಾಗಿ ಮೆರೆವೋಳು2 ಉತ್ತರ ದಿಕ್ಕಿನಲೆಥಳ ಥಳಿಸುವ ದ್ವಾರ ಮುತ್ತು ಮಾಣಿಕ್ಯ ಅಳವಟ್ಟಮುತ್ತು ಮಾಣಿಕ್ಯ ಅಳವಟ್ಟ ಹರಿಪುರರತ್ನದ ಝಲ್ಲೆ ಬಿಗಿದಾವೆÉ 3 ರಾಜಿ ಮಾಣಿಕ ಗೋಡೆ ಗಾಜಿನ ನೆಲಗಟ್ಟುಈ ಜೋಡು ದ್ರವ್ಯ ಎಲ್ಲಿಲ್ಲ ಈ ಜೋಡು ದ್ರವ್ಯ ಎಲ್ಲಿಲ್ಲ ಇದುನಮ್ಮ ಶ್ರೀದೇವಿಯರಸನ ಅರಮನೆ 4 ಕೇಶರ ಶ್ರೀಗಂಧ ಕಲವೆಲ್ಲ ಪರಿಮಳಬಿಸÀಜನೇತ್ರನರಮನೆಯಬಿಸಜನೇತ್ರೆಯರ ಮನೆಯಿಂದ ಕುಸುಮದ ವೃಷ್ಟಿಗರೆದಾವು5 ಉತ್ತರ ಪಾಲ್ಗಡಲೊಳು ಮುತ್ತು ಮಾಣಿಕರತ್ನಪಚ್ಚ ಕರ್ಪೂರ ಸುಳಿಗಾಳಿಪಚ್ಚ ಕರ್ಪೂರ ಸುಳಿಗಾಳಿ ಇದುನಮ್ಮ ಅಚ್ಯುತಾನಂತನರಮನೆಯ6 ಕೃಷ್ಣ ರಾಮೇಶನ ವಿಶಿಷ್ಠದ ವೈಕುಂಠಸೃಷ್ಟಿ ಮಾಡಿ ರಚಿಸಿದ ಸೃಷ್ಟಿ ಮಾಡಿ ರಚಿಸಿದ ನೋಡಲು ದೃಷ್ಟಿ ಸಾಲದು ಜನರಿಗೆ7
--------------
ಗಲಗಲಿಅವ್ವನವರು
ಸಂಪ್ರದಾಯದ ಹಾಡು ವೆಂಕಟೇಶನ ಉರುಟಣೆಯ ಹಾಡು ಭಾರ್ಗವಿ ರಮಣಾ | ಜಗದಾಭಿ ರಮಣಾ ಪ ಲೋಕನಾಯಕ ಸ್ವಾಮಿ | ವೈಕುಂಠಾದಿಂದ ಬಂದೂಏಕಾಂತವಾನಾಡಿದಾ | ಲಕ್ಷೀಯರೊಡನೆ 1 ಧರೆಗೆ ವೈಕುಂಠಾದ | ಚರ್ಯವ ತೋರುವೆನೆಂದುಶಿರಿ ಮಹಾಲಕ್ಷೀಯೊಡನೆ | ಸಂಧಿಸಿದಾನೂ 2 ಸ್ವಾಮಿ ಕಾಸಾರದಲೀ | ಧಾಮಾವ ರಚಿಸೂವೆಆ ಮಹಾ ವೈಕುಂಠಾವ | ಅಗಲೀ ಬಂದೂ 3 ವತ್ಸರ ಕಾಲದಲೊಂದು | ಉತ್ಸವ ಮಾಡುವೆನೆಂದುಇಚ್ಛೆ ಮಾಡಿದನೂ ವೆಂಕಟ ಇಂದಿರೆಗೂಡಿ 4 ನವರಾತ್ರಿ ದಿವಸದಲೀ | ವಿವಾಹ ಲಗ್ನವ ರಚಿಸೀಅವನಿಯೊಳು ಡಂಗುರವನ್ನು ಹೊಯಿಸೀದ ಸ್ವಾಮೀ 5 ಕಾಶಿ ಕರ್ನಾಟಕದ | ದೇಶಾ ದೇಶದ ಜನರುಶ್ರೀಶಾನುತ್ಸವಕೇ ಜನರು ಒದಗೀದರಾಗಾ 6 ಹದಿನಾಲ್ಕು ಲೋಕಾದ | ಪದುಮಜಾದಿಗಳೆಲ್ಲಾ ಮದುವೆಯಾ ದಿಬ್ಬಣದಾ | ಜನರು ಬಂದರಾಗಾ 7 ಗರುಡಾ ಕಂಬದ ಸುತ್ತಾ | ಪರಿಪರಿ ವೈಭವದಿಂದಗಿರಿಯಾ ವೆಂಕಟಗೇ | ಕಂಕಣ ಕಟ್ಟಿದರಾಗಾ 8 ಆಗಮಾ ಪುರಾಣ | ರಾಗ ಮದ್ದಳೆ ತಾಳಭಾಗವತರೂ ಸುತ್ತ ಮಾಡುತಿರಲೂ 9 ತಾಳ ತಮ್ಮಟೆ ಕಾಳೆ | ಭೋರೆಂಬೋ ವಾದ್ಯಗಳೂವರ ನಾರಿಯರು ಸುತ್ತಾಗ್ಹಾಡುತಿರಲೂ 10 ಚಿನ್ನದ ಕರಿಮಣಿ | ರನ್ನ ಮಂಗಳಸೂತ್ರಹಿರಿಯಾ ವೆಂಕಟನೂ ಲಕ್ಷ್ಮೀಗೆ ಕಟ್ಟಿದ ನಗುತಾ 11 ಮುತ್ತಿನಾ ಕರಿಮಣಿ | ರತ್ನ ಮಂಗಳಸೂತ್ರಾಸ್ವಾಮಿ ವೆಂಕಟ ಲಕ್ಷ್ಮೀಗೆ ಕಟ್ಟಿದ ನಗುತಾ 12 ಅಂತರಾ ಮಾರ್ಗದೊಳೂ | ನಿಂತು ದೇವತೆಗಾಳು ಸಂತೋಷದಿಂದಲಿ ಜಯ ಜಯವೆಂದು ಪಾಡಿದರಾಗ 13 ಅಂಗಾನೆ ಶ್ರೀ ಭೂಮಿ | ರಂಗಾಮಂಟಪದೊಳಗೆಬಂಗಾರ ಗಿರಿಯಾ ವೆಂಕಟ ಒಪ್ಪಿದ ಸ್ವಾಮೀ 14 ಅತಿರಸಾ ಮನೋಹರ | ಮಿತಿಯಿಲ್ಲದ ಪದಾರ್ಥಗಳೂಸತಿಯರೆಲ್ಲರು ಭೂಮಕೆ ತಂದು ಬಡಿಸಿದರಾಗ 15 ಬೆರದ ನಾರಿಯರೆಲ್ಲ | ಹರಿಭೂಮಾ ನಂತರದೀಭರದಿ ಉರುಟಣಿಗೆ ಅಣಿ ಮಾಡಿದರಾಗಾ 16 ಮಿತ್ರೆ ಲಕ್ಷ್ಮೀಗೆ ತಕ್ಕ | ಹಿರಿಯರು ಪೇಳಲುಛಂದದಿಂದಲಿ ಅರಿಷಿನ ಕಲಸಿ ನಿಂತಳಾಗ 17 ಪನ್ನಗ ನಗವಾ | ಸೇರಿದ ಮಹರಾಯದುಡ್ಡು ದುಡ್ಡಿಗೆ ಬಡ್ಡಿಯನ್ನು ದುಡಿವಾ ಲೋಭಿ 18 ವಂಚಿಸಿ ಜನರನ್ನು | ಲಂಚಾ ಲಾವಣಿ ತೆಗೆದುಹಿಂಚಾಸಿ ವರ ಕೊಡುವಾ ಹಿತದಾ ದೇವಾ 19 ಬಡವಾ ಬಲ್ಲಿದರೆಂದು | ಬಿಡದಾಲೆ ಅವರಿಂದಮುಡುಪು ಹಾಕಿಸಿಕೊಂಡು (ಮುಂದಕೆ) ಬಿಡುವೋ ದೇವಾ 20 ಅನ್ನವೆಲ್ಲವ ಮಾರಿ | ಹೊನ್ನು ಕಟ್ಟುವೆಯಲ್ಲೊಅನ್ನದಾನವ ಮಾಡಲೊಲ್ಲಿ ಅನ್ಯಾಕಾರಿ 21 ಹೊನ್ನು ಸಾಲವ ತೆಗೆದು | ಎನ್ನಾ ಕಟ್ಟಿಕೊಂಡುಮನೆ ಮನೆಗೆ ಭಿಕ್ಷವ ಬೇಡುವ ಮಾನವಂತಾ 22 ಹೊನ್ನು ಸಾಲದು ಎಂದು | ಎನ್ನ ಸಾಕುವೆ ಹೇಗೋನಿನ್ನಾ ಕೃಪಣತನಕೆ ನಾನು ಎಣೆಗಾಣೆನೋ 23 ಇಪ್ಪತ್ತು ದುಡ್ಡೀಗೆ | ಸೇರು ತೀರ್ಥವ ಮಾರಿದುಡ್ಡು ಕಟ್ಟಿ ಜಾಳಿಗೆ ಗಳಿಸುವ ಜಾಣ ನೀನೂ 24 ಅಟ್ಟಾ ಮಡಿಕೆಯಲ್ಲಾ | ಕುಟ್ಟಿ ನಾಮವ ಮಾಡಿಗಟ್ಟಿಯಾಗಿ ಗಂಟು ಗಳಿಸುವ ಘನವಂತಾ 25 ದೇಶದೊಳು ನಿಮ್ಮಂಥಾ | ಆಸೆ ಉಳ್ಳವರಿಲ್ಲಕಾಸು ಕಟ್ಟಿ ಕವಡೆ ಗಂಟು ದುಡಿವ ಲೋಭಿ 26 ಮಡದಿ ನಾನಿರಲಿಕ್ಕೆ | ಕಡಿಮೆ ಏನಾಗೋದುಬಡತನ ನಿನಗೆ ಯಾತಕೆ ಬಂತೂ ಸ್ವಾಮೀ 27 ನಾರೀಯಾ ನುಡಿ ಕೇಳಿ | ವಾರೆ ನೋಟದಿ ನೋಡಿಮೋರೆ ತಗ್ಗಿಸಿ ವೆಂಕಟ ಮುನಿದು ನಿಂತಾ 28 ಕಡುಕೋಪಾ ಮಾಡುವರೆ | ಹುಡುಗನಂತಾಡುವರೆಕೊಡಲೀಯ ಪಿಡಿವಾರೆ ನಾನು ನುಡಿದಾ ನುಡಿಗೇ 29 ಕಣ್ಣಾನೆ ಬಿಡಬ್ಯಾಡ | ಬೆನ್ನ ತೋರಲಿ ಬ್ಯಾಡಾಇನ್ನು ಮುಖವಾ | ತಗ್ಗಿಸಬ್ಯಾಡ ಇತ್ತ ನೋಡೂ 30 ಎನ್ನರಸಾ ಹೊನ್ನರಸಾ | ಚೆನ್ನಿಗ ವೆಂಕಟರಾಯಾನಿನ್ನ ಪೋಲುವರ್ಯಾರೊ | ಜಗದೊಳು ನೀಲಗಾತ್ರಾ 31 ಎನ್ನರಸಾ ಚೆನ್ನರಸಾ | ಚೆನ್ನಿಗ ವೆಂಕಟರಮಣಾನಿನ್ನ ಮುದ್ದು ಮುಖವ ತೋರೊ ಅರಿಷಿಣ ಹಚ್ಚೇನು 31 ಎನ್ನುತ ಅರಿಷಿಣ | ಹಚ್ಚಿ ಕುಂಕುಮವಿಟ್ಟುರನ್ನ ಹಾರವ ಹಾಕಿ ತಾನು ಕುಳಿತಾಳಾಗ 33 ಮಂದರಧರ ತಾನೂ | ಛಂದದರಿಶಿನ ಪಿಡಿದೂಇಂದಿರಾದೇವಿಯನ್ನು ಮಾತನಾಡಿಸಿದಾ 34 ಎನ್ನರಸಿ ಹೊನ್ನರಸಿ | ಚೆನ್ನಿಗ ಮಾಯಾದೇವಿನಿನ್ನ ಮುದ್ದು ಮೊಗವಾನೆ ತೋರು ಅರಿಷಿನ ಹಚ್ಚೇನು 35 ಭಿಡೆಯಾ ನೋಡದೆ ಇಂಥಾ | ನುಡಿಗಳಾಡಿದ ಮ್ಯಾಲೆನಡುಗಿ ಮೋರೆಯ ತಗ್ಗಿಸಲಿಹುದೆ ನಾಚಿಕೆ ಯಾಕೆ 36 ಭಾಗ್ಯಾದ ಮೊಬ್ಬಿಲಿ | ಬಾಗಿ ನೀ ನಡೆಯಾದೇಅಗ್ಗಳಿಕೆ ಮಾತುಗಳನ್ನು ಆಡಿದೆಯಲ್ಲೇ 37 ಮಿಂಚಿನಂದದಿ ಬಹಳಾ | ಚಂಚಲ ಬುದ್ಧ್ಯವಳೇವಂಚಿಸೂವಳೆ ಜಗವಾ ವಾರಿಜಾಕ್ಷೀ 38 ಬಂಗಾರಾ ಮುಡುಪಿಗೆ | ಎನ್ನ ಕಂಗೊಳಿಸೀಗಾ ಹಿಂಗಾದೆ ಮಂಕು ಮಾನವರ ಮಾಡುವುದರಿದೇ 39 ಕಂಚುಕ ವೆಂಕಟ ಬಿಗಿದಾ ನಗುತಾ 40 ತಾಂಬೂಲವನೆ ಮೆದ್ದು | ಮಡದಿಯಾ ಮುಖ ಸೂಸೆಇಂಬೀಲ್ಹಚ್ಚೆ ಬರೆದರಾಗ ಅತಿ ಸಂಭ್ರಮದೀ 41 ತಿರುಮಲೇಶನು ತನ್ನ | ಮಡದೀಯನು ಎತ್ತಿಭರದಿಂದಾ ತನ್ನರಮನೆಗಾಗಿ ತೆರಳಿದಾನು 42 ದ್ವಾರದಾದಡಿಯಲ್ಲಿ | ನಾರೇರೆಲ್ಲರು ನಿಂತುವಾರಿಜಾಕ್ಷಿ ಪತಿಯ ಹೆಸರಾ ಹೇಳೆಂದರು 43 ಕಿರುನಗೆಯಿಂದ ಲಕ್ಷ್ಮೀ | ಗಿರಿಯಾ ವೆಂಕಟನೆನಲೂಹರಿಯೆ ನಿನ್ನ ರಮಣಿ ಹೆಸರಾ ಹೇಳೆಂದರೂ 44 ಜಾತಿ ನಾಚಿಕೆ ತೊರೆದು | ಶ್ರೀ ತರುಣಿ ಎನುತಾಲೆಪ್ರೀತಿಯಿಂದಲಿ ಸಿಂಹಾಸನದಿ ಕುಳಿತರಾಗಾ 45 ಮತ್ತೆ ನಾರಿಯರೆಲ್ಲಾ | ಮುತ್ತಿನಾರತಿ ಪಿಡಿದೂಸತ್ಯಾಭಾಮೆಗೆ ಜಯ ಜಯವೆಂದರಾಗ 46 ವಿಭುವಿನ ಗುಣವನ್ನು ವಿಸ್ತರ ಪೇಳಿದ ಜನಕೆಸಮಯದಂಥ ಭಾಗ್ಯವನಿತ್ತು ಸಲಹುವ ಸ್ವಾಮಿ 47 ಮಂಗಳ ವೆಂಕಟರಾಯಾ | ಮಂಗಳ ಮಾಧವರಾಯಾಮಂಗಳ ಮಾನಸಗೇಯಾ | ಮಂಗಳ ಮಾಧವರಾಯಾ 48 ಧರೆಯೊಳಧಿಕನಾದ | ದೊರೆ ವ್ಯಾಸವಿಠಲಾನುಪರಮ ಭಕ್ತಿ ಸುಜ್ಞಾನವನು ಪಾಲಿಸೂವಾ 49
--------------
ವ್ಯಾಸವಿಠ್ಠಲರು
ಸಿರಿದೇವಿ ಹರಿಯ ದಯವು | ಆವಾವ ಪರಿ ಪಾಲಿಸೆ ಪ ಆಲದೆಲೆಯಲಿ ಅಂದು | ನಿನ್ನಯ ಮ್ಯಾಲೆ ಮಲಗಿಪ್ಪ ಹರಿಯ ತೋಳು ಬಿಗಿದಾಲಂಗಿಸಿ | ಸೃಷ್ಟಿಯ ಲೀಲೆಯನು ಮಾಡಿಸಿದ ತಾಯೆ 1 ವಕ್ಷವಾಲಯವ ಮಾಡಿದೆ | ಆವಾಗ ದಕ್ಷಣಾದೇವ್ಯೆನಿಸಿದೆ ಲಕ್ಷ್ಯವಿಲ್ಲದೆ ಭಾಗ್ಯವ | ಭಕ್ತರಿಗೆ ವೀಕ್ಷೆಯಿಂದಲ್ಲಿ ಈವೆ 2 ದೇವತಾಜನ ಸ್ತುತಿಸೆ | ನೀ ಎನ್ನ ಭಾವ ಹರಿಯಲಿ ನಿಲ್ಲಿಸೆ ಕಾವ ಭಾರವು ನಿನ್ನದೆ | ಶ್ರೀ ವಾಸು ದೇವವಿಠಲನ್ನ ರಾಣಿ 3
--------------
ವ್ಯಾಸತತ್ವಜ್ಞದಾಸರು
ಬಲಿಯ ದಾನವಬೇಡಿ | ಚೆಲುವಕಾರವಾಗಿದೆ |ನೆಲನಾ ನಿರಡಿಯಾ ಮಾಡಿದಾಡೆ ನಾನಾ|ಲಲಾನೆ ಮಾಡಿಯಾಲಿಟ್ಟುಶಿರಾ ವಾನೊರಾಸೂಕ್ತ | ಮೊಲೆಯಾನೂಡುವಾ ಪುಣ್ಯ ಹೀಗೆಪಡೆದಾಳೋ | ಮಗಾನೆಂದೂ ಪಮಗಾನೆಂದಾಡಿಸುವಾಳು | ಮೊಗಾನೊಡಿನಗೂವಾಳು |ಮಿಗೆ ಹರೂಪದಾಲಿ ಲೊಲಾಡುವಾಳೂ |ಜಗಾದೂರಂಗಾಗಿ | ಮೊಗ ಬಂದು ರಕ್ಷಕ |ಬಿಗಿದಪ್ಪೊ ಪುಂಣ್ಯ ಹೇಗೆ ಪಾಡದಾಳೊ 1ಪಶೂಪಾಲೆಯರೂ | ಬ್ರಂಹ್ಮವನೂ ನೂರಮುನಿಗಳು |ವಸುಧಯ ಮಲುಳಿದಾವರೆಲ್ಲಾರು | ಶಶಿಮೌಖಿಸಾವಿರಾ |ವರಹಾವಿತ್ತವಾನೆಂದೂ | ಕೊಸಾರಾನಿಡುವಾ ಪುಣ್ಯಹೇಗೆ ಪಡದಾಳೊ 2ಸಾಗಾರಾ ಸುತಿಯಾರು |ಭೋಗಿ ಯನಾನಾ |ಯೋಗಾನಿದ್ರೆಯೊಳದ್ಯ ದೇವನಾ |ಆಗಾಮಾ ಶೃತಿಗಾಳು | ಆರಾರೆ ಕಾಣದ ವಾಸ್ತುವ |ಕೂಗಿದಾಳೆ ಪುಂಣ್ಯ ಹೇಗೆ ಪಾಡದಳೋ 3ಕಾಲಲಂದ್ಹುಗೆಕಿಂಕಿಣಿ ಹೊಂನ್ನು ಕಿರೂಗೆಜ್ಜೆ |ಹಾರಾಸಾರದಾ ಕೊರಾಳಾ ಪಾದಾಕಾ | ಬಾಲದೊಡಿಗೆಸಮ್ಮಬಾಲಾನಾಯತ್ತಿಕೊಂಡು | ಹಾಲಾಕೂಡಿಸುವಾ ಪುಂಣ್ಯಹೇಗೆ ಪಾಡಾದಾಳೊ 4ತೋಳಂನಾಡೆಲೊ ಕೃಷ್ಣ ಕೊಳಂನಾಡಿಸುಕಾಲಿ |ಭಾಮೆರೂಕಮಿಣಿ ಬಿಗಿದಪ್ಪುವಾ |ಭಾಮರೂಕೂಮಿಣಿ ಬಿಗಿದಾಪ್ಪುವಾ ನೆಲನಾ ತೊಳಂನಾಡಿಸುವಪುಣ್ಯ ಹೇಗೆ ಪಾಡದಾಳೊ 5ಆನೆಯೊಡೆಲೊ ಕೃಷ್ಣ | ಆನೆಯೊಡೆನೂಲಾಲಿರಾಯರಾಯರೂಗಾಗೆಲಿದಂತ | ರಾಯಾ ರಾಯಾಕೂ ಗಾಲಾ ಪಟ್ಟದಾನೆಯಾಡಿಸುವ ಪುಂಣ್ಯಹೇಗೆ ಪಡದಾಳೋ 6
--------------
ಪುರಂದರದಾಸರು