ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಮಾಡಿದರೇನು ನಾನಾ ಸಾಧನೆಗಳನು | ಜ್ಞಾನಿಗಳ ಕೂಡದನಕಾ ಮರುಳೇ ಪ ಸಕಲ ಸಾಮಗ್ರಿಯನು ತಂದಿರಲೇನು ಪಾ | ಕಕೆ ವಹ್ನಿ ಇಲ್ಲದನಕಾ ಮರುಳಾ 1 ಪ್ರಕಟವಾಗಿರಲು ನಯನಾದಿಂದ್ರಿಯಗಳಿಗೆ ಐಂ | ದ್ರಿಕ ಬೆಳಗವಿಲ್ಲದನಕಾ ಮರುಳೇ 2 ಹಸನ ಭೂಮಿಯ ಮಾಡಿ ಬೀಜ ಉಡಿಗಟ್ಟಿರಲು | ವಸೆದು ಮಳೆಯಾಗದನಕಾ ಮರುಳೇ 3 ಪ್ರಕಟಿಸಿದ ಅನ್ನ ಭಕ್ಷದಿ ಶಾಖಗಳಿರಲು | ಯಶವಾಜ್ಯ ಬಡಿಸದನಕಾ ಮರುಳೇ 4 ತುಂಬಿ ಕುಳಿತೇನು ದೊಡ್ಡವರೆಲ್ಲಾ ನಾವಿಯೊಳು | ಅಂಬಿಗನು ಬಾರದನಕಾ ಮರುಳೇ 5 ನಂಬಿ ಗುರು ಮಹಿಪತಿಸುತಸ್ವಾಮಿ ಶ್ರೀಚರಣ | ದಿಂಬವನು ಪಡೆಯದನಕಾ ಮರುಳೇ 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮನ್ನಿಸಯ್ಯ ಮದನಜನಯ್ಯ ಘನ ಮುನ್ನೀರಶಯ್ಯ ಸ್ವಾಮಿ ಹಯವದನರಾಯಾ ಪ ಬಾರಿಬಾರಿಗೂ ಈತನ ಮಂದಿರದಲಿ ನಿನ್ನ ಚೆನ್ನಿಗ ರೂಪವ ತೋರೋ ನಿನ್ನ ಕರುಣದಿ ಅ.ಪ. ಈಶಾ ಭವಪಾಶಾ ಎಂಬೋ ಬೀಸಿದ ಬಲೆಯೊಳು ಗಾಸಿಗೆರೆದೆನೂ ರಂಗಾ ಕೃಪಾರಿಣ ವಾಸಿ ಪಂಥಗಳು ವಾಸುದೇವನೆ ಲೇಸ ಮಾರ್ಗವ ಕಾಣೆ ನಿನ್ನಾಣೆ ದಾಶರಥಿಯೇ ನಿನ್ನ ದಾಸರ ಕೂಡಿ ಸಂತೋಷಪಡುವ ಸಿರಿಯೆನಗಿತ್ತು ಸಲೆ ಮೀಸಲವ ಮಾಡೋ ದೇವರ ದಯಾಳೊ1 ಪಂಚಭೂತಗಳಲಿ ಪಂಚಾಗ್ನಿಗಳಲಿ ಪಂಚದ್ವಿಗುಣ ಪಂಚರಲಿ ಮತ್ತೆ ಪಂಚಪ್ರಾಣದಲಿ ಪಂಚವಿಂಶತಿ ಮಾರ್ಗ ತೋರೋ ಶ್ರೀಕಾಂತಾ ಪಂಚ ಹಿಡಿಸಿ ಪಂಚೊಂದೋಡಿಸಿ ಪಂಚನಾಲಕು ಭಕ್ತಿ ಕೊಂಚವಾಗದ ಹಾಗೆ ಸಂಚಿತಾಗಮಾ ಮುಂಚೆ ಓಡಿಸೋ ಶ್ರೀವತ್ಸಲಾಂಛನನೇ2 ಶ್ರೀನಿವಾಸನೇ ನಿನ್ನ ಧ್ಯಾನಮಾತ್ರದಿ ಬರುವೋ ಬಿಗನು ಅಘನಾಶÀನವೆಂದೊ ನಾನಿಂದೂ ಬೆಂಬಿದ್ದ ಅಬಲನ ಮನ್ನಿಸೋದಲ್ಲದೆ ಹೀಗೆ ಮುನಿಸೋರೇನೋ ಶ್ರೀಹರೆ ನಿನ್ನ ಸನ್ನಿಧಿಗೊಪ್ಪಿಸಿದೆನೊ ಮನ ಬಂದುದು ಮಾಡೊ ಘನತೆ ನಿನ್ನದು ದೇವಾ ದೀನ ದಯಾನಿಧೆ ಉರಗಾದ್ರಿವಾಸಾ 3
--------------
ಮಹಾನಿಥಿವಿಠಲ
ಹೆಂಗಳೆಯರು ನಾವು ರಂಗೈಯ್ಯ ಮಾನಂಗಳ ಕಾಯಬೇಕೋ ಭಂಗ ಬಡುವೆವು ಮಂಗಚೇತನದಂಬಿಗನು ವಾಸಂಗಳನು ನೆರೆ ಸೆಳೆದಿಹಾನು ಪ ಗೋಪಿವೃಂದವು ಕೂಡಿ ಚಿತ್ತದ ಸಂತಾಪ ನೀಗಲು ಮಾಡಿ ತೋಷಗೊಳಿಸಲು ಪಾಪಿಯಂಬಿಗ 1 ಬಯಕೆಯಾ ಹಾರವನು ನಾವೆಲ್ಲರು ವಯನಾಗಿ ಕಟ್ಟಿದ್ದೆವೋ ಮಾಡ್ದೆವು ಮತಿಯು ಪೋದುದು ನಯನದಿಂದವುಗಳನೆ ನೋಡದೆ ಬಯಲುಮಾಡಿದೆವಿತ್ತೀಕಂಗೆ 2 ಎಷ್ಟು ಬಳಲುತಿಹೆವೊ ಶ್ರೀಕೃಷ್ಣ ನಿನ್ನಿಷ್ಟಕ್ಕೆ ಬಂದುದೇನೋ ಇಷ್ಟು ಪರಿಯಲ್ಪರಿವುದೇತಕೆ ಇಷ್ಟ ಮೂರುತಿ ಕೃಷ್ಣನೀಗಲೆ ದುಷ್ಟ ಅಂಬಿಗನಂಗ ತೊಲಗಿ ಶಿಷ್ಟ ನರಸಿಂಹ ವಿಠ್ಠಲಾದ 3
--------------
ನರಸಿಂಹವಿಠಲರು