ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಫಲಾಹಾರವ ಮಾಡೊ ಪರಮಪುರುಷನೆ ಲಲನೆ ಲಕುಮಿಯ ಕರಕಂಜದಿಂದ ಪ. ಕದಳಿ ಕಾಮಾರೆ ಖರ್ಜುರ ಕಿತ್ತಳೆ ಕಂಚಿ ಬದರಿ ಬೆಳಲು ಬಿಕ್ಕೆ ಹಲಸು ದ್ರಾಕ್ಷಿಗಳು ಮಧುರಮಾವು ಮಾದಳ ತೆಂಗಿನಕಾಯಿ ತುದಿಮೊದಲಾದ ಪರಿಪರಿ ಫಲಗಳು 1 ಉತ್ತತ್ತೆ ಜೇನು ಅಂಜೂರ ಸೇಬು ದಾಳಿಂಬೆ ಮತ್ತಾದ ತುಮರೆ ಪರಗಿ ಕಾರೆ ಕವಳಿ ಕತ್ತರಿಸಿದ ಕಬ್ಬು ಜಂಬುನೇರಳೆಹಣ್ಣು ಒತ್ತಿದ ಬೇಳೆ ನೆನೆಗಡಲೆ ಕರ್ಬುಜೀಹಣ್ಣು 2 ಹಾಲು ಸಕ್ಕರೆ ಬೆಣ್ಣೆ ತುಪ್ಪ ಸೀಕರಣೆಯು ಸಾಲುರಸಾಯನ ಸವಿಯೆಳನೀರು ಮೂಲೋಕದೊಡೆಯ ಹಯವದನ ವೆಂಕಟರೇಯ ಪಾಲಿಸೊ ಲಕುಮಿಯ ಕರಕಂಜದಿಂದ 3
--------------
ವಾದಿರಾಜ
ಬಾಲನಾಗಿ ಬಂದ ಶ್ರೀಹರಿಲೀಲೆಯಿಂದ ತೋರಲೀಪರಿಮೂಲ ಕೊಲೆಗಳಿಲ್ಲದಾತಗೋಲವ್ಯಾಪಿ ನಿರಾಕಾರಿ ಪ ಪಾದ ನೆಲವಬಿಕ್ಕೆಬೇಡಿಯವನು ಹತ್ತಿಕ್ಕಿ ತಳಕೆ ತುಳಿಯಲೆಂದು 1 ಇಡಿಯ ಜಗವ ತನ್ನೊಡಲಿನಲ್ಲಿಹಿಡಿಯ ಪರಿಯ ಬಾಯ ತೆರೆದು ಜಡೆದು ತೋರಿ ಯಶೋದೆಯತೊಡೆಯ ಮೇಲೆ ಆಡಲೆಂದು 2 ಹಾಳುಮಾಡಿ ಹೂಡಿದಾಟಕಾಲ ಬೆರಳು ಬಾಯೊಳಿಟ್ಟುಆಲದೆಲೆಯ ಮೇಲೆಮಲಗೆ ಗದುಗು ವೀರನಾರಾಯಣ 3
--------------
ವೀರನಾರಾಯಣ
ಸಾಲವನು ಕೊಳುವಾಗ ಸಡಗರದ ಸಿರಿಯೋ ಸಾಲಿಗನು ಬಂದು ಕೆಳಲಾಗಡರಿತುರಿಯೋ ಪ ಡಬ್ಬುಗೈದಿದ್ದವನೊಳ್ ಎಬ್ಬಿಸಿ ಹಣತಂದು ಉಬ್ಬುಬ್ಬಿ ಸತಿಮುಂದೆ ಹೆಬ್ಬುಲಿಯ ತೆರದಿ ಒಬ್ಬರೀಡಿಲ್ಲೆನಗೆಂದಬ್ಬರಿಸುತ್ಹೇಳುವನು ತಬ್ಬಲು ಧಣಿಬಂದು ಮಬ್ಬಿನೊಳೆದ್ದೋಡ್ವ 1 ಹಣತಂದ ದಿನ ಅವನ ಮನೆಯೊಳಗೆ ಹಬ್ಬೂಟ ವನಿತೆಯೊಳೆನುತಿಹ್ಯನು ನನಗಾರು ಸರಿಯೆ ಹಣಕೊಟ್ಟ ಧಣಿಬಂದು ಮನೆಮುಂದೆ ಕುಳ್ಳಿರಲು ಹೆಣಇರುವ ಮನೆಗಿಂತ ಘನದು:ಖಕೇಳೊ 2 ಕಡುಹಿಗ್ಗಿನಿಂದೊಸನ ಒಡವೆ ಉದ್ದರಿತಂದು ಬಡಿವಾರ ಬಿಂಕ ಕೊಡುವ ವಾಯಿದೆ ಕಳೆದು ಬಡಿಗೆಯು ಬರಲಾಗ ಮಡದಿ ಸತ್ತವನಂತೆ ಇಡುವ ತಲಿ ಬುವಿಗೆ 3 ಅಕ್ಕಿಬೇಳೆ ಬೆಲ್ಲತಂದು ಅಕ್ಕರದಿಂ ಸತಿಸುತರಿ ಗಿಕ್ಕುವಾಗ ನೋಡವನವಕ್ಕರಂಗಳನು ಮಕ್ಕಮಾರಿಯಂದದಿ ತಿಕ್ಕುವಾಗಕೊಟ್ಟವರು ಸಿಕ್ಕದೆ ತಿರುಗುವನು ಬಿಕ್ಕೆ ಬೇಡುಣುತ 4 ಮನೆಮುರಿದು ಹೋಗಲಿ ವನಿತೆಯರು ಜರಿಯಲಿ ಎನಗೆಡರು ಬಂದೊದಗಿ ಅನ್ನ ಸಿಗದಿರಲಿ ಘನಮಹಿಮ ಶ್ರೀರಾಮ ಮಣಿದುಬೇಡುವೆ ನಿನಗೆ ಋಣದ ಬಾಳುವೆ ಬೇಡ ಜನಮಜನುಮಗಳಲಿ 5
--------------
ರಾಮದಾಸರು