ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸಿಯಾಗುವೆನೇ ಗುರುವಿನ ಮನೆಯಾ | ನಿ | ರ್ದೋಷ ಪದವಿ ಈವ ನಿಜ ದೊರೆಯಾ ಪ ಮನೋಮಂಟಪದೊಳಗೆ ಅನುಮಾನ ಕಸನೀಗಿ | ಅನುದಿನ ನಿಶ್ಚಲದ ತಳಿಯಾ ಬಿಂಬಿಸಿ | ಮುನಿಯ ಸೇವೆ ಹಾರೈಸುವೆ ಬಿನಗು ಶಬ್ದಜ್ಞಾನಿಗಳ | ಮನಿಲಿ ನಿಂತು ಹೊತ್ತಂಗಳಿಯೆ ನೆನವಿಲಿರುತಾ 1 ತುಂಬಿ | ಸಾವಧಾನ ಸಿಂಬಿಲಿರಿಸಿಕೊಂಡು ಬರುತಾ | ದೇವ ಗುರುರಾಯ ನಡಿದಾವರೆಯ ಊಳಿಗಕ | ಆವಾಗ ತಂದೆರೆವೆನು ಹರುಷದಲಿ 2 ಅರಹು ಎಂಬ ಸೀರೆಯುಟ್ಟು ಕುರುಹುವೆಂಬ ಕುಪ್ಪಸದಲಿ | ಬೋಧ ಪಡಿಯದನ್ನ ಉಣುತಾ | ವರದ ತಂದೆ ಮಹಿಪತಿ ಚರಣವ ನೋಲೈಸಿ ಇಹಪರ | ವೆರಡು ಗೆಲಿದು ನಿಜಗತಿ ಪಡೆವೆನೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣು ಶರಣುರಾಯಾ | ಸರಸಿ-ಜಾಲಯ ಪ್ರೀಯಾ | ಶರಣು ಪಾವನಕಾಯಾ | ಸಲಹುನಮ್ಮಾ ಪ ಸ್ತುತಿಯ ಮಾಡಲರಿಯೇ | ಯತಿ ಛಲಗುಣ ವರಿಯೇ | ಪಾವನ ದೇವ ದಯಾನಿಧಿಯೇ 1 ಶಿರಿವಧು ರಮಣನಾ ಚರಿತವ ಪೇಳುವೆ | ಕರುಣದಿ ಶ್ರೀಹರಿ ನುಡಿಸಿದಂತೆ | ಕೇಳಿ | ಧರಿಯೊಳು ಭಾಗವತರು ಯಲ್ಲಾ 2 ಬನ್ನಿ ಸಾತ್ವಿಕ ಗುಣ ಸಂಪನ್ನ ಮುತ್ತೈದೇರು | ಅನ್ಯ ಭಾವನೆಗಳಿಗೆ ತೊಡಕದೇ | ಯನುತಲಿ | ಉನ್ನತ ಸಂಭ್ರಮದಿ ನೆರೆದರು 3 ದಿವ್ಯಾಂಬರವನುಟ್ಟು ದಿವ್ಯಾಭರಣನಿಟ್ಟು | ದಿವ್ಯಾಕೃತಿಯಲಿ ವಪ್ಪುತಿಹಾ | ಮುನಿ | ಮದನ ಲಾವಣ್ಯನು 4 ಅನಾದಿ ಮಹಿಮ ಮೋಹನನಾದ ಕೃಷ್ಣನು | ಜ್ಞಾನಾಂಗನೇ ರುಕ್ಮಣಿ ವಧುವಿನಾ | ಈರ್ವರಾ | ಅನುಭವ ದೂಟಣಿಯನ್ನು ಮಾಡಲಾರಿ 5 ಸಡಗರದಿಂದಾ ಹೃದಯಾ ಪೊಡವಿಯೊಳೊಪ್ಪುದಾ | ದೃಢ ವಜ್ರದಿಂದಲಿ ರಚಿಸಿದಾ | ಜಗದಲಿ | ಒಡನೆ ರತಿ ರತ್ನಾಸನ ಹಾಕಿ 6 ಮ್ಯಾಲ ಭಾವಕಿಯರು ಮೂಲೋಕವಂದ್ಯರಾ | ಲೋಲವಧು ವರರನು ಕುಳ್ಳಿರಿಸಿ | ಹರುಷದಿ | ಮೇಲೆನಿಸಿ ಊಟಣಿಯ ಮಾಡಿಸಲು 7 ಶುದ್ಧ ಮತಿವಂತಿಯರು ಅಧ್ಯಕ್ಷರತರಾಗಿ | ಸಿರಿ | ಮುದ್ದು ಶ್ರೀ ಕೃಷ್ಣನು ವಲಿವಂತೇ 8 ನಾನಾ ಗಂಟಗಳುಳ್ಳಾ ಕಠಿಣವಾದಾ ಅಭಿ | ಮಾನ ಅರಿಷಿಣವನು ಸಣ್ಣ ಮಾಡೀ | ಈಗಾ | ಏನುಳಿಯದ್ಹಾಂಗ ವಿವೇಕದಿಂದ 9 ಹಮ್ಮಿನರಿಷಿಣವನು ಸಮ್ಯಜ್ಞಾನದ ಕದಿ | ಕಮ್ಯ ದೋರುವಂತೆ ಕಲಿಸುತಾ | ಶ್ರೀವರ | ಬ್ರಹ್ಮನ ಪಾಪಕ ಅರ್ಪಿಸಿದರು 10 ತ್ವರಿತ ಲಕ್ಷ್ಮೀ ಕಾಲಾ ಪರವಾ ವಪ್ಪಿಲೆ ಹಚ್ಚಿ | ಭರದಿಂದಾಕ್ಷಣ ಕ್ಷಣಕ ರುಕ್ಮಣಿ ಯಾಮುಖದಿಂದ | ಹರಿಯಾ ನಾಮಗಳನು ನುಡಿಸುತಾ 11 ಭಾವನಿಂದ ರಂಜಿಸುವ ಕುಂಕುಮ ಮ್ಯಾಲೆ | ಆ ವಿಮಲ ಮುಕ್ತಿಯ ಶೇಶೇ ನಿಟ್ಟು ಧ್ಯಾನಾ | ಲೇವಿಗಂಧವಾ ಲೇಪಿಸಿದರು 12 ಪರಿಮಳ ಸುವಾಸನೆಯ ಬೇರದ ಸುಮನ ಸರವಾ | ಕೊರಳಿಗೆ ಹಾಕಿದೆ ಪರಿಯಿಂದಾ ಕೃಷ್ಣನಾ | ಕರದಿ ನೇಮಿಸಿದರು ರುಕ್ಮಣಿಗೆ 13 ಆರ್ತ ಜಿಜ್ಞಾಸನು ಧನಾರ್ಥಿಯು ಬೈಲಿ ಘಳಿಗೆ | ಅರ್ತು ಮುಖದಲಿ ಕೊಟ್ಟು ಬಿಸುಡಿದರು ಬುಧರು | ನಿರ್ತದಿಂದಲಿ ನೋಡಿ ಇಬ್ಬರಿಂದ 14 ಮಗುಳೆ ಸಂಕಲ್ಪಾದಾ ಬಗೆದಾ ಕುಪ್ಪಸಿನ | ಬಿಗಿ ಬಿಗಿದು ಕಟ್ಟಿದಾ ಗಂಟವನು ಒಂದೇ | ಜಗದೀಶನಾ ಕೈಯಿಂದ ಬಿಡಿಸಿದರು 15 ಹರಿಯಾ ತೊಡೆಯ ಮ್ಯಾಲ ನಿಂದಿರಿಸಿ ರುಕ್ಮಿಣಿಯನು | ಕರದಿ ಶಾಂತಿ ಅಂಬಿ ಬಿಂಬಿಸಿದರು | ನೋಡಿ | ಧರಿಯೊಳಾನಂದವ ತೋರುವಂತೆ 16 ತನುವಿನಾರತಿಯೊಳು ಘನದೆಚ್ಚರ ದೀಪದಿ | ಮನದಿಂದಾ ಜಯಾ ಜಯಾವೆಂದೂ ಬೆಳಗೀ | ಮರಹು | ಅನುವಾಗಿ ತಾವು ನಿವಾಳಿಸಿದರು 17 ಮರೆವಾ ಪ್ರಕೃತಿ ಪುರುಷರ ಶರಗಂಗಳಾ ಯರಡಾ | ಭರದಿಂದ ಕಟ್ಟಿ ಸುವೃತ್ತಿಂದಾ | ಬಳಿಕಾ | ತ್ವರಿತ ನಿಜ ಮಂದಿರವ ಸಾರಿದರು 18 ಇಂತಿ ಪರಿಯಾಗಿಹ ಅಂತರನು ಭವದಾ | ಕಂತುಪಿತ ಲಕ್ಷ್ಮಿಯ ಚರಿತವನು | ನೋಡಿ | ಸಂತತ ಸುಖವನು ಪಡೆದರೆಲ್ಲಾ 19 ಇನಿತು ಸುಖ ಕರವಾದಾ ಅನುಭವ ದೂಟಣಿಯನು | ಅನುವಾಗಿ ನುಡಿಸಿದಾ ಯನ್ನ ಮುಖದೀ | ಈಗಾ | ಘನ ಗುರು ಮಹಿತಪಿ ಸುತ ಸ್ವಾಮಿ 20 ತಂದೆ ತಾಯಿ ಮಿತ್ರ ಬಂಧು ಬಳಗನಾದಿ | ಎಂದೆಂದೂ ಶರಣರ ಸಲಹುವಾ | ದೇವನೇ | ಇಂದೆನ್ನ ನುದ್ಧರಿಸು ದತ್ತಾತ್ರೇಯಾ 21
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಕ್ತವತ್ಸಲನಹುದೊ ವೆಂಕಟರೇಯಭಕ್ತವತ್ಸಲನಹುದೊ ಪ.ಕರಿಯ ಮೊರೆಯನರಿದು ಸಿರಿಯಜರಿದುಗರುಡನ ಕರೆಯದೆ ಭರದೊಳರಿಯಿಂದರಿ ಬಾಯ ಮುರಿಗೆಯ ಹರಿದ್ಯೆಂದುನಾರದಾದ್ಯರು ನಿನ್ನ ಬಿರುದು ಸಾರುವರೊ 1ಅಂಬುಜಾಂಬಕನಂಬಿದೆನೆಂಬೆ ದಯಾಂಬುಧಿಹರಿನಿನ್ನಿಂಬುದೋರೆ ನಲವಿಲಂಬಲದಿ ಕಂಬದಿ ಬಿಂಬಿಸಿ ಡಂಬನಡಿಂಬವ ಬಿಗಿದೆ ಪೀತಾಂಬರಧರನೆ 2ಚಿನ್ನ ತನ್ನ ತಾತನ್ನ ಜರಿದವನನ್ನವನುಣ್ಣದೆ ನಿನ್ನ ಬಣ್ಣಿಸಲವನುನ್ನತ ಭಕುತಿಗೆ ಮನ್ನಿಸಿ ಪೊರೆದೆ ಪ್ರಸನ್ನವೆಂಕಟರನ್ನ ಮೋಹನ್ನ 3
--------------
ಪ್ರಸನ್ನವೆಂಕಟದಾಸರು