ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಷ್ಟಹರಿಸೊ ಪರಮೇಷ್ಟಿಪಿತನೆ ನೀ ಕೈ ಬಿಟ್ಟರೆ ಸೃಷ್ಟಿಯೊಳು ಪಾರುಗಾಣುವುದೆಂತೂ ಪ ಇಷ್ಟದಿಂದಲೋ ಅನಿಷ್ಟದಿಂದಲೋ ನಾನೇ ಹುಟ್ಟಿಬಂದೆನೆ ದೇವ-ನಿನ್ನಿಷ್ಟದಿಂದಲ್ಲವೇ ಅ.ಪ ಬಿಂಬನೆನಿಸಿದೆ ಎನಗೆ ಪ್ರತಿಬಿಂಬ ನಾ ನಿನಗೆ ಬಿಂಬ ಪ್ರತಿಬಿಂಬಕೆ ಉಪಾಧಿಯು ನಿತ್ಯ- ವೆಂಬನ್ವಯಕೆ ಗುಣತ್ರಯಬದ್ಧವೇ ಕಾರಣ- ವೆಂಬ ಗುಣಜೀವಸ್ವರೂಪೋಪಾಧಿಯು ಬೆಂಬಲನೀನಿದ್ದೂ ಗುಣಕಾರ್ಯಕನುವಾಗಿ ಇಂಬುಕೊಡುವೆ ಫಲಭೋಗಿಸಲೀವೇ ಎಂಬನುಡಿ ಶ್ರುತಿಶಾಸ್ತ್ರಸಿದ್ಧವು ನಂಬಿಹುದು ಜಗವೆಲ್ಲ ಸತ್ಯವು ಶಂಬರಾಂತಕ ಪಿತನೆ ಎನ್ನ ಹೃದ- ಯಾಂಬರದಿ ನಿನ್ನ ಬಿಂಬ ತೋರೈ 1 ಕಾಲಕರ್ಮಾದ್ಯಷ್ಟಗುಣಗಳೆಲ್ಲವು ನಿಜ- ವೆಲ್ಲಜಡಗಳು ಮತ್ತು ಅಚೇತನಂಗಳೈ ಶೀಲ ಮೂರುತಿ ನೀ ಪರಮ ಚೇತನನಾಗಿ ಎಲ್ಲ ಕಾಲದಿ ನಿನ್ನ ನಿಯಮನಂಗಳೈ ಕಾಲಕರ್ಮಗುಣಂಗಳೇನಿಹುದೆಲ್ಲ ಫಲಪ್ರದಾನವ ಮಾಡೆ ಶಕ್ತಿ ಜಡಕೆಂತಿಹುದಯ್ಯ ಕಾಲನಾಮಕ ನೀನೆ ಸರ್ವ ಕಾಲದಲಿ ಸ್ವಾತಂತ್ರ್ಯ ನಿನ್ನದೋ ಇಲ್ಲ ಘನ ಸಮರಿಲ್ಲ ಸರ್ವಕರ್ಮ ಫಲವೆಲ್ಲ ನೀನೆ ದಾತೃವೋ 2 ಮರ್ಮವರಿಯೆನೊ ದೇವ ಧರ್ಮಭ್ರಷ್ಟನಾದೆ ಕರ್ಮಫಲಾನುಭವಮಾಡಿ ಬೆಂಡಾದೆನು ಕರ್ಮ ತಾ ಶಿಕ್ಷಿಸಲರಿಯದು ನ್ಯಾಯ ಧರ್ಮಾಧಿಪತಿ ಭೀಕರ ಫಲಕೊಟ್ಟು ಶಿಕ್ಷಿಪಂತೆ ಧರ್ಮಮೂರುತಿ ಶುದ್ಧನಿಷಿದ್ಧಕರ್ಮಂಗಳಿಗೆ ಪೂರ್ಣಫಲವಿತ್ತು ಸಮನೆಂದೆನಿಸಿರುವೆ ಕರ್ಮಮೋಚಕ ನೀನೆ ಸಕಲ ಕರ್ಮಪ್ರದನೆಂದೆನಿಸಿ ಪೂರ್ವ- ಕರ್ಮಫಲ ಭೋಗಿಸಲು ಜನ್ಮವನಿತ್ತು ಕರ್ಮಪ್ರವಹದೊಳಿಡುವೇ 3 ವಿಮುಖನಾಗಿಹೆ ಶ್ರುತಿಸ್ಮøತಿಶಾಸ್ತ್ರಧರ್ಮಕೆ ಪ್ರಮುಖನಾಗಿಹೆ ದುಷ್ಕರ್ಮ ಮಾರ್ಗದಲ್ಲಿ ಕರ್ಮಕಲಾಪದ ಧರ್ಮ ಮರ್ಮವನರಿಯೆ ಹೆಮ್ಮೆಯಿಂದಲಿ ನಾನಾ ಕರ್ಮಕೂಪದಲಿರುವೆ ಪೆರ್ಮೆಗೋಸುಗ ಅಧರ್ಮವೆಷ್ಟೋ ಮಾಡ್ದೆ ಒಮ್ಮೆಗಾದರು ಸದ್ಧರ್ಮಾಚರಿಸಲಿಲ್ಲ ಕರ್ಮ ಅಕರ್ಮ ವಿಕರ್ಮ ಪರಿಚಯವಿಲ್ಲ ಜನ್ಮಕೆ ಧರ್ಮಪುತ್ರನೆ ದ್ವಂದ್ವಕರ್ಮಸಮರ್ಪಿಸಲು ಸನ್ಮತಿಯ ಕೊಟ್ಟಿನ್ನು 4 ಬೆಟ್ಟದೊಡೆಯನೆ ಶ್ರೀ ವೇಂಕಟೇಶ ನೀ ತುಷ್ಟಿಯಾದರೆ ನಿನ್ನಿಷ್ಟದಂತೆ ಫಲವು ಸೃಷ್ಟಿಯೊಳು ಪುಟ್ಟಿಸಿ ದುಷ್ಟಕರ್ಮದ ಪಾಶ ಕಟ್ಟಿನೊಳಿಟ್ಟೆನ್ನ ಕಷ್ಟಪಡಿಸುವರೇ ಸೃಷ್ಟೀಶ ಉರಗಾದ್ರಿವಾಸ ವಿಠಲ ಎನ್ನ ನೀನಿಟ್ಟಿರುವಷ್ಟುಕಾಲ ಧಿಟ್ಟಭಕುತಿಯ ಕೊಟ್ಟು ದಿಟ್ಟ ರಕ್ಷಿಸು ಇಷ್ಟಮೂರುತಿಯೆ ಇಷ್ಟದಾಯಕನೆಂದು ನಾನಿಷ್ಟು ನುಡಿದೆನೋ ನಿನ್ನ ಎನ್ನ ಮನೋಭೀಷ್ಟೆ ಸಲಿಸೆ ನಿನ್ನಿಷ್ಟವಯ್ಯ5
--------------
ಉರಗಾದ್ರಿವಾಸವಿಠಲದಾಸರು
ಮುಕ್ತನಲ್ಲವೇ ಭವದಿ ಮುಕ್ತನಲ್ಲವೇ ಪ ಶಕ್ತನಾದ ಹರಿಯ ಪರಮ ಭಕ್ತಿಯಿಂದ ಭಜಿಪ ನರನು ಅ.ಪ. ಮಧುವಿರೋಧಿಯಮಲ ಗುಣವ ನಲಿದು ಪಾಡುವವನು 1 ಕೇಶವಗೆ ರಮಾಬ್ಜಭವ ಸದಾಶಿವ ಶಕ್ರಾದಿ ಸುರರು ದಾಸರು ಎವೆ ಇಡುವ ಶಕ್ತಿ ಲೇಶವಿಲ್ಲವೆಂಬ ನರನು 2 ಒಂದಧಿಕ ದಶೇಂದ್ರಿಯಗಳಿಗಿಂದಿರೇಶ ವಿಷಯವ ಸಮ ಬಂಧಗೈಸಿ ವೈಷಯಿಕ ಸುಖ ತಂದು ಕೊಡುವನೆಂಬ ನರನು 3 ಈ ಪರಿಯಲಿ ತಿಳಿದು ಪುಣ್ಯ ಪಾಪಕರ್ಮ ದುಃಖಸುಖ ಜ ಯಾಪಜಯ ಮಾನಾಪಮಾನ ಶ್ರೀಪ ಕೊಡುವನೆಂಬ ನರನು 4 ವೇದ ಶಾಸ್ತ್ರಗಳಲಿ ಇಹ ವಿರೋಧವಾಕ್ಯಗಳನು ಶ್ರೀ ಪ್ರ ಮೋದ ತೀರ್ಥರುಕ್ತಿಯಿಂದ ಶೋಧಿಸುತಲಿ ಸುಖಿಪ ನರನು 5 ಕರ್ಮ ವಿಹಿತ ಅಸಜ್ಜನರು ಮಾಳ್ಪ ವಿಹಿತವಾದ ಕಾಲಕದು ಅವಿಹಿತವೆಂದು ತಿಳಿಯುವವನು6 ಸ್ವರ್ಗ ಭೂಮಿ ಕರ್ಮ ಹರಿಸುವ ಹರಿಯೆಂಬ ನರನು7 ಪರಮ ಪುರುಷಗರ್ಪಿಸುತಲಿ ಹರುಷ ಬಡುತಲಿಪ್ಪ ನರನು 8 ಈ ಶರೀರದರಸು ಶ್ರೀನಿವಾಸಾ ಮಾತೆ ಪ್ರಾಣ ಪಾರ್ವ ತೀಶರಿಹರು ಎಂದೀ ದೇಹ ಪೋಷಿಸುತಲಿ ತೋಷಿಸುವನು 9 ಪ್ರಿಯ ವಸ್ತುಗಳೊಳಗೆ ಅನ್ನಮಯನೆ ಪ್ರೀಯನೆಂದು ಅನ್ಯ ಬಯಕೆಗಳನು ಜರಿದು ಹರಿಯ ದಯವ ಬಯಸುತಿಪ್ಪ ನರನ 10 ಶತ್ರುತಾಪಕನುಳಿದು ಅನ್ಯ ಮಿತ್ರರಿಲ್ಲವೆಂದು ಅಹೋ ರಾತ್ರಿಯಲ್ಲಿ ಬಿಡದೆ ಜಗದ್ಧಾತ್ರನ ಗುಣ ತುತಿಪ ನರನು11 ಬಿಂಬನೆನಿಸಿ ಸರ್ವರ ಹೃದಯಾಂಬರದೊಳಗಿದ್ದು ಜನವಿ ಡಂಬನಾರ್ಥ ಕರ್ಮಗಳ ಆರಂಭ ಮಾಳ್ಪೆನೆಂಬ ನರನು 12 ಅಕ್ಷರೇಢ್ಯ ಬ್ರಹ್ಮ ವಾಯು ತ್ರ್ಯಕ್ಷಸುರಪ ಸುರರೊಳಗ ಧ್ಯಕ್ಷ ಸರ್ವ ಕರ್ಮಗಳಿಗೆ ಸಾಕ್ಷಿಯೆಂದು ಸ್ಮರಿಸುವವನು 13 ಅಂಬುಜ ಭವಾಂಡದೊಳು ಮಹಾಂಬರವಿಪ್ಪಂತೆ ಶ್ರೀ ನಿ ತಂಬಿನಿ ಸಹ ಸರ್ವರೊಳಗೆ ತುಂಬಿಹನೆಂದರಿತ ನರನು 14 ಅದ್ವಿತೀಯನಪೇಕ್ಷ ಭಕ್ತ ಹೃದ್ವನಜ ನಿವಾಸಿಯೆನಿಸಿ ಕದ್ದೊಯ್ದವರಘವನುಣಿಪನದ್ವಯತನೆಂಬ ನರನು 15 ಜಾಂಬವತೀರಮಣ ವಿಷಯ ಹಂಬಲವನು ಬಿಡಿಸಿ ತನ್ನ ಕಾಂಬ ಸುಖವನಿತ್ತು ನಿಜ ಕುಟುಂಬದಿಡುವನೆಂಬ ನರನು 16 ಅಣು ಮಹತ್ಪದಾರ್ಥ ವಿಲಕ್ಷಣ ವಿಶೋಕ ಜೀವರೊಡನೆ ಜನಿಸಿ ಪುಣ್ಯ ಪಾಪ ಫಲಗುಳುಣದೆ ಉಣಿಪನೆಂಬ ನರನು 17 ಕರ್ಮ ಸುದತಿಯರೊಡಗೂಡಿ ಸಮಾ ಶೂನ್ಯ ಮಾಳ್ಪನೆಂದು ಪದೇ ಪದೆಗೆ ಸ್ಮರಿಸುವವನು18 ಸ್ವಾತಿವರುಷ ವಾರಿಕಣವ ಚಾತಕ ಹಾರೈಸುವಂತೆ ಶ್ವೇತವಾಹನ ಸಖನ ಕಥೆಯ ಪ್ರೀತಿಯಿಂದ ಕೇಳ್ಪ ನರನು 19 ಲೋಕಬಂಧು ಲೋಕನಾಥ ಲೋಕಮಿತ್ರ ಲೋಕರೂಪ ಲೋಕರಂತೆ ಲೋಕದೊಳು ವಿಶೋಕ ಮಾಳ್ಪನೆಂಬ ನರನು20 ಶಾತಕುಂಭವರ್ಣ ಜಗನ್ನಾಥ ವಿಠಲನೆಂಬ ಮಹ ದ್ಭೂತ ಬಡಕರಾವು ಇವನ ಭೀತಿ ಬಿಡದು ಎಂಬನರನು 21
--------------
ಜಗನ್ನಾಥದಾಸರು
ವಾಸುದೇವ ಎನ್ನ ಘಾಸಿಗೊಳಿಸದೆ ನೀ ಸಲಹಲಿ ಬೇಕೊ ಪ. ಈ ಶರೀರದೊಳು ಮಾಯಾಸಹಿತ- ದಿ ಶ್ವಾಸನಾಡಿಯೊಳು ವಾಸವಾಗಿಹ ಅ.ಪ. ಅನಿರುದ್ಧ ನಾಮದಿ ಅನುದಿನ ಸಲಹುತಲಿ ದನುಜನಾದ ಪಾಪಾತ್ಮನ ನಾಭಿಯೊಳ್ ಅನಿಲನಿಂದಲಿ ಶೋಷಿಸುವೆ ಪ್ರದ್ಯುಮ್ನ 1 ಹೃದಯದಿ ರಕ್ತವರ್ಣದಲಿ ನೀನಿರುತಲಿ ಸಂಕರ್ಷಣನೆನಿಸಿ ಪದೋಪದಿಗೆ ಪಾಪಾತ್ಮಕನನು ಸುಟ್ಟು ಸದಮಲ ಹೃದಯವ ಶುದ್ಧಿಗೈಯ್ಯುವ 2 ಮಧ್ಯದಿ ನಾಡಿಯ ಮಧ್ಯದ ಹೃದಯ ಪದ್ಮ ಮಧ್ಯ ಎಂಟು ದಳದಿ ವಿದ್ಯಮಾನನಾಗಿ ಬಿಂಬನೆನಿಸಿ ನಿನ್ನ ಪೊದ್ದಿಹ ಜೀವರ ಭಾವನೆಯಂತೆ ಕಾಂಬೆ 3 ಕೊಳಲನೂದುವ ನಿನ್ನ ಚಲುವರೂಪದ ಕಾಂತಿ ಪೊಳಲೆಲ್ಲ ತುಂಬುವುದೊ ನಳಿನಾಕ್ಷಿಯರ ಕೂಡಿ ಥಳಥಳಪ ನಿನ್ನ ಬಲು ಸಂಭ್ರಮದೊಳು ಸುರರೆಲ್ಲ ಸ್ತುತಿಪರೊ 4 ಸಿರಿ ಸಹಿತದಿ ಇರುವೆ ವರನಾಡಿ ಮಾರ್ಗದಿ ಅರಿತು ಭಜಿಸೆ ಮುಕ್ತಿ ಪೊರೆಯುವ ಬಿರುದುಳ್ಳ ಗೋಪಾಲಕೃಷ್ಣವಿಠ್ಠಲ5
--------------
ಅಂಬಾಬಾಯಿ