ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಡಿ ಓಡಿ ಬಾ ಅಂಕದೊಳಾಡೋ ಕೂಸೇ ಬಾ ಪ ನೋಡುವೆ ನಿನ್ನ ರಾಮರ ಮುಖದಿ ಕೂಡಿ ಕರುಣಿಯೆ ಬಾ ಅ.ಪ. ಚೆಂಡು ಕೊಡುವೆನು ಬಾ ಗೋಲಿಗುಂಡು ಕೊಡುವೆನು ಬಾದುಂಡು ಕರದೊಳ್ ಗುಂಡು ಬಿಂದುಲಿ ಉಂಗುರನೀಡುವೆ ಬಾ 1 ಬೆಣ್ಣೆ ಕೊಡುವೆನು ಬಾ ಬಾಳೆಹಣ್ಣು ಕೊಡುವೆನು ಬಾಸಣ್ಣ ಸಣ್ಣ ಹೆಜ್ಜೆನಿಕ್ಕುತ ಮನ್ಮಥಪಿತನೆ ಬಾ 2 ನಾರಿವತ್ಸೆ ಬಾ ಮುತ್ತಿನ ಹಾರ ಹಾಕುವೆ ಬಾಪಾರಿಜಾತ ಮುಡಿಸಿದ ರುಕ್ಮಿಣಿಧೀರ ಕೃಷ್ಣನೆ ಬಾ 3 ಮುರಳೀಧರನೆ ಬಾ ಮುಂಗುರಗಳ ಭೂಷಿತ ಬಾಪರಿಪರಿವಸ್ತ್ರವನಿಟ್ಟು ನೋಡುವೆ ಮರಳಿ ಮರಳಿ ಬಾ 4 ನಂದನ ಕಂದನೆ ಬಾ ಮನಕಾನಂದಪಡಿಸುತ ಬಾನಿಂದಿರಲಾರೆ ನಿನ್ನನು ನೋಡದೆ ಇಂದಿರೇಶನೆ ಬಾ 5
--------------
ಇಂದಿರೇಶರು
ಬರುವ ಸಂದಣಿ ಭಾಳೆ ಭಾಳವೆ ಅಲ್ಲಿ ರಂಭೆ ಊರ್ವಶಿಯರ ಸಮ್ಮೇಳವೆ ಪ. ವರಗಿರಿ ವಾಸನ ಕರೆಯ ಬರುವ ಸೊಬಗು ಧರೆಯ ಮ್ಯಾಲಿಲ್ಲ ಸುಂದರಿಯೆ ರುಕ್ಮಿಣಿಯೆ 1 ಪಾಂಚಾಲಿ ಮೊದಲಾದ ಕೆಂಚೆಯರ ಆಭರಣವುಮಿಂಚಿನಂತೆ ಹೊಳೆಯುತ ಸಿದ್ಧರಾಗಿಹರಮ್ಮ ಚಂಚಲೆಯರು2 ಕಾಲಿಂದಿ ಮೊದಲಾದವರು ಭಾಳ ವಸ್ತಗಳಿಟ್ಟುವೈಯಾರಿಯರು ಒಲಿಯುತ ವ್ಯಾಳಾಶಯನನ ಬಳಿಗೆ 3 ಭದ್ರೆ ಮೊದಲಾದವರು ತಿದ್ದಿ ತಳಪಿಟ್ಟು ಶುದ್ಧ ವಸ್ತಗಳಿಟ್ಟುಸಿದ್ಧರಾಗಿಹರಮ್ಮ ಅನಿರುದ್ದನ ಕರೆಯಲು4 ಮಂದಗಮನೆಯರು ಗಂಧಕಸ್ತೂರಿ ಪುಷ್ಪಅಂದಾಗಿ ಧರಿಸಿ ಆನಂದವಾಗಿಹರಮ್ಮ5 ಕಾಲಂದುಗೆಗೆಜ್ಜಿ ತೋಳಲೆ ತಾಯಿತ ಭಾರಿ ವಸ್ತಗಳಿಟ್ಟು ಲೋಲ್ಯಾಡುತಿಹರಮ್ಮ6 ಅಚ್ಚಮುತ್ತಿನ ವಸ್ತ ಸ್ವಚ್ಚತೋರುವಂತೆ ಬಿಚ್ಚಿ ಚಾದರ ಹೊತ್ತು ಮಚ್ಚನೇತ್ರಿಯರೆಲ್ಲ 7 ಅಂದುಗೆ ಅರಳೆಲೆ ಬಿಂದುಲಿ ಭಾಪುರಿ ಕಂದರಿಗೊಸ್ತಗಳಿಟ್ಟು ಆನಂದವಾಗಿಹರಮ್ಮ8 ಮುತ್ತಿನ ಝಲ್ಲೆ ವಸ್ತಗಳಿಟ್ಟು ಫುಲ್ಲನಾಭನ ಕರೆಯಲು ಎಲ್ಲರೂನಿಂತಾರೆ9 ಶ್ರೇಷ್ಠ ರಾಮೇಶನ ಅಷ್ಷೊಂದು ಕರೆಯಲು ಪಟ್ಟಾವಳಿಗಳನುಟ್ಟು ಧಿಟ್ಟೆಯರು ನಿಂತಾರೆ10
--------------
ಗಲಗಲಿಅವ್ವನವರು
ಮಕ್ಕಳ ಮಾಣಿಕವೆ ಮೋಹನ್ನ ಬಾ ರಂಗೈಯ್ಯಾ ಮಕ್ಕಳ ಮಾಣಿಕವೆ ಮೋಹನ್ನ ಎನ್ನಕ್ಕರದ ಗುಣನಿಧೆ ಬಾ ರಂಗೈಯ್ಯಾ ಪ. ಅಪ್ಪುತಪ್ಪು ಹೆಜ್ಜೆನಿಕ್ಕುತ ಬಾಯೊಳು ಜೊಲ್ಲು ಸುಪ್ಪಾಣಿಮುತ್ತಂತೆ ಸುರಿಯುತಾ ಬಾರಂಗೈಯ್ಯಾ ನಿನಗೊಪ್ಪುವಾಭರಣ ನೀಡುವೆನೊ ಅದನೊಲ್ಲದಿದ್ದರೆ ತುಪ್ಪಾಕಜ್ಜಾಯ ಕೊಡುವೆನೂ 1 ಅಂದಿಗೆ ಕಿರುಗೆÉಜ್ಜೆ ಅಲಗೊತ್ತು ಕೈಯೊಳಗಿದ್ದು ಬಿಂದುಲಿ ಬಾಜುಬಂದು ತಿರುಹೂತ ಬಾರಂಗೈಯ್ಯಾ ಬಂದೆನ್ನ ಬಿಗಿಯಪ್ಪಿಕೊಳ್ಳಯ್ಯ ಅದನೊಲ್ಲದಿದ್ದರೆ ಅಂದವಾದ ಒಂದು ಮುದ್ದು ತಾರಯ್ಯ 2 ಓಡಿಓಡಿ ಬಾರೋ ವಸುದೇವನಂದನಾ ಕಂದ ನೋಡಿ ನೋಡಿ ನಗುತ ಬಾರೊ ರಂಗಯ್ಯ ಕೋಡಗಲ್ಲವಾಸ ವೆಂಕಟ 3
--------------
ಹೆಳವನಕಟ್ಟೆ ಗಿರಿಯಮ್ಮ
ಗೋಪಿಯ ಭಾಗ್ಯವಿದು |ಆ ಪರಮಾತ್ಮನ ಅಪ್ಪಿ ಮುದ್ದಿಡುವುದು ಪಅಂಬೆಗಾಲಿಡು ಹರಿಕುಣಿದಾಡೈ ತೋ-|ಳಂಬಲಿ ತಾ ಹೊಂಗುಬ್ಬಿಯನು ||ಅಂಬುಜನಾಭ ನೀನಾನೆಯನಾಡೆಂದು |ಸಂಭ್ರಮದಿಂದ ಮುದ್ದಾಡುವಳೊ 1ನಿತ್ಯನಿರ್ಮಲನಿಗೆ ನೀರನೆರೆದು ತಂದು |ಎತ್ತಿ ತೊಡೆಯೊಳಿಟ್ಟು ಮುದ್ದಿಸುತಾ ||ಸತ್ಯಲೋಕವನಾಳುವ ವಿಧಿಜನಕನ |ಪುತ್ರನೆಂದರಿತು ತಕ್ಕೈಸುವಳೊ 2ಪಾಲುಗಡಲು ಮನೆಯಾಗಿ ಮೂಲೋಕವ |ಪಾಲಿಸುತಿಪ್ಪ ನಾರಾಯಣನ ||ಕಾಲಮೇಲೆ ಮಲಗಿಸಿ ಬಟ್ಟಲ ತುಂಬ |ಹಾಲು ಕುಡಿಸಿ ಸಂತೈಸುವಳೊ 3ಹರಿನಿತ್ಯತೃಪ್ತನೆಂದರಿಯದೆ ಹೊನ್ನಿನ |ಹರಿವಾಣದೊಳಗೆ ಮೃಷ್ಟಾನ್ನವನು ||ನೊರೆಹಾಲು ಘೃತ-ಸಕ್ಕರೆ ಕೂಡಿಸಿ ಕರೆ-|ಕರೆದು ಉಣಿಸಿ ತೃಪ್ತಿ ಬಡಿಸುವಳೊ 4ಅಂಗಜಪಿತನಿಗೆ ಮೋಹದಿಂದ ಹೊಸ |ಅಂಗಿಯ ತೊಡಿಸಿ ಟೊಪ್ಪಿಗೆ ಇರಿಸಿ ||ಬಂಗಾರದರಳೆಲೆ ಬಿಂದುಲಿಗಳನಿಟ್ಟು |ಸಿಂಗರವನು ಮಾಡಿ ನೋಡುವಳೊ 5
--------------
ಪುರಂದರದಾಸರು