ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎತ್ತಿಕೊಂಡ್ಹೋಗುವೆನೆ ಈ ಕೂಸಿನ್ನ ಎತ್ತಿಕೊಂಡ್ಹೋಗುವೆನೆ ಪ ಎತ್ತಿಕೊಂಡ್ಹೋಗುವೆ ಮುತ್ತಿನಂಥಾ ಕೂಸುಹತ್ತಲಿ ಬರುವುದು ಚಿತ್ತಬಿಟ್ಟಗಲದು ಅ.ಪ. ಗುಂಡು ಬಿಂದಲಿ ಕೈಯೊಳು ಮುತ್ತಿನ ದಿವ್ಯ ಚೆಂಡುಪಿಡಿದ ಬಿಡನುಹಿಂಡು ಬಾಲರ ಕೂಡಿಕೊಂಡು ಆಡುವ ಕೂಸುಇಂಥ ಕಂದನ್ನ ಪಡೆದಿಯೇನೇ ಗೋಪಮ್ಮ ನೀ 1 ನೀಲ ಮಾಣಿಕ ಗೆಜ್ಜೆಯುಭಾಳ ಕಡೆಗೆ ಪೋಗಿ ಲೋಲಾಡುವ ದೃಷ್ಟಿಮಾಲೆಯನ್ಹಾಕಿ ತಾರೆ ಗೋಪಮ್ಮ 2 ಅರಳೆಲೆನಿಟ್ಟಿಹದು ಮುಂದಲೆಯಲ್ಲಿ ಜರದ ಕುಂಚಿಗೆ ಇಹುದುತೆರದ ಕಣ್ಣು ಮುಚ್ಚಿ ತೆರೆದು ನೋಡುತಲಿದ್ದಎರೆದು ಮಲಗಿಸಿದೆಯೇನೆ ಗೋಪಮ್ಮ ನೀ 3 ಎಷ್ಟು ಜನ್ಮದ ಪುಣ್ಯವು ಬಂದೊದಗೀತ ಪುಟ್ಟಿದೆ ಇಂಥ ಕೂಸುಪುಟ್ಟ ಬಾಲಗೆ ಉಮ್ಮಕೊಟ್ಟು ಬಟ್ಟಲಿ ನಾನುದೃಷ್ಟಿಯು ಮುರಿಯುವೆನೇ ಗೋಪಮ್ಮ ನಾ 4 ಮಂದಿ ಕೈಯಲಿ ಕೊಡೆನೆ ಈ ಕೂಸಿನ್ನ ತಂದು ಕೊಡುವೆನೆ ನಾನುಇಂದಿರೇಶನ ಬಿಟ್ಟು ನಿಂದಲಾರದ ಮನಇಂಥ ಕಂದನ್ನ ಪಡೆದಿಹೆನೆ ಗೋಪಮ್ಮ ನೀ 5
--------------
ಇಂದಿರೇಶರು
ದಾರ ಕಂದನಮ್ಮ ಕೇರಿಗೆ ಬಂದು ಗಾರುಮಾಡುವ ನೋಡಲಾರೆ ಗೋಪ್ಯಮ್ಮ ಈರೇಳು ಲೋಕದೊಡೆಯನೊ ದಾರಮ್ಮ ಪ ಪಿಡಿದಿದ್ದ ಕೊಳಲೂದುವ ಬಾಯಲಿ ಬೆಣ್ಣೆ ಕಡಗೋಲ ಪಿಡಿದಿದ್ದ ಬೆಡಗು ನೋಡಮ್ಮ ಬಿಡಿಮುತ್ತಿನ ಉಡಿದಾರವು ಉಡಿಗಂಟೆ ಮುಡಿದ ಮಲ್ಲಿಗೆ ಕುಸುಮಗಳು ನೋಡಮ್ಮ ಕುಡಿಹುಬ್ಬು ಕಡೆಗಣ್ಣನೋಟದ ಚೆಲುವ ತಾ ಹುಡುಗರಂತಾಡುವ ತುಡುಗ ತಾನಮ್ಮ 1 ಕಮಲ ನಕ್ಷತ್ರದ ಪತಿಯಂತೆ ಇಪ್ಪೊ ವಜ್ರದ ಪದಕಗಳ ನೋಡಮ್ಮ ಅರ್ಕನಂತಿರಲತಿ ಕೋಮಲಪಾದಕೆ ಶುಕ್ಲಗೆ ಮಿಗಿಲಾದ ಗುರು ಕೇಳಮ್ಮ ಕತ್ತಲೊಳಗೆ ಕಳ್ಳತನದಿಂದೋಡಾಡುತ ಕಟ್ಟಿದ ಪಂಜಿನಂತ್ಹೊಳೆವೊ ಕೇಳಮ್ಮ 2 ಕಟ್ಟಿದ ನೆಲವಿನೊಳ್ ಮಕ್ಕಳ ಮಲಗಿಸಿ ಎಷ್ಟು ಘಾತಕÀ ತಾ ಕೈಬಿಟ್ಟ ನೋಡಮ್ಮ ತೊಟ್ಟಿಲೊಳಗೆ ಕೆನೆಮೊಸರಿನ ಚಟ್ಟಿಗೆ ಇಟ್ಟು ತೂಗುತ ಮೆಲ್ಲುವನು ಕೇಳಮ್ಮ ಕಟ್ಟಿದ್ದಾಕಳ ಕಣ್ಣಿ ಬಿಚ್ಚಿ ಮೊಲೆಗೆ ಬಾಯ್ಹಚ್ಚಿ ಕ್ಷೀರವ ಸುರಿದುಂಬುವನಮ್ಮ 3 ತೋಳ ಬಾಪುರಿ ವಂಕಿ ತೋಡ್ಯ ಬಿಂದಲಿ ಚಕ್ರ- ಪಾಣಿಯಲ್ಲೊ ್ಹಳೆವೊ ಮುದ್ರಿಕೆಯ ನೋಡಮ್ಮ ಆಣಿ ಮುತ್ತಿನ ಸರ ಅರಳೆಲೆ ಪದಕವು ಕಾಲ ಕಿಂಕಿಣಿ ನಾದಗಳ ಕೇಳಮ್ಮ ತೋರ ಮುತ್ತುಗಳೋಣಿಯಲುದುರುತ ಒ- ಯ್ಯಾರದೊಲಪಿನ ಚೆದುರ್ಯಾರು ಪೇಳಮ್ಮ4 ಮನ್ಮಥನಿಗೆ ಮಿಗಿಲಾದ ಸ್ವರೂಪಲಾವಣ್ಯನೆ ನೀಲದ ವರ್ಣ ಕೇಳಮ್ಮ ಹುಣ್ಣಿಮೆ ಚಂದ್ರಮನ್ನ ಸೋಲಿಸೋಮುಖ ಇನ್ನು ಇವನÀ ಸೌಂದರ್ಯ ನೋಡಮ್ಮ ಹೆಣ್ಣು ಮಕ್ಕಳ ಸೆರಗನ್ನು ಕೈಯ್ಯಲಿ ಸುತ್ತಿ ಬೆನ್ನು ಬೆನ್ಹತ್ತಿ ತಾ ತಿರುಗುವನಮ್ಮ 5 ಚೀನಿ ಅಂಗಿಯ ಮ್ಯಾಲೆ ಚಿತ್ರದ ನಡುಕಟ್ಟಿ ಜಾರ ಜರದ ಛಾದರವ ನೋಡಮ್ಮ ಸೋಗೆ ನವಿಲು ಗಿಳಿ ಕೋಗಿಲೆ ಸ್ವರದಂತೆ ವೇಣು ಕೊಳಲ ಗಾಯನವ ಕೇಳಮ್ಮ ಮೇಘಮಂಡಲ ತಲೆತಾಕುವ ಹರಿಯದೆ ತಾ ಜಿಗಿದಾಡೋನಂಗಳದಿ ಕೇಳಮ್ಮ 6 ಎಷ್ಟು ಹೇಳಿದರೀ ಮಾತು ಮನಕೆ ನಿಜ ಹುಟ್ಟವಲ್ಲದೇನೀಗ ಬಾರೆ ಗೋಪಮ್ಮ ಬಿಟ್ಟು ಕೆಲಸ ಭೀಮೇಶಕೃಷ್ಣಗೆ ಬುದ್ಧಿ ಎಷ್ಟು ಹೇಳುವಿ ಮುಂದ್ಹೇಳಲೇಕಮ್ಮ ಸಿಟ್ಟು ಮಾಡುವರೇನೆ ಸಿರಿಪತಿ ಆಟ ನಿನ್ನ ದೃಷ್ಟಿಂದ ನೋಡೆ ನಿಜಹುಟ್ಟುವುದಮ್ಮ7
--------------
ಹರಪನಹಳ್ಳಿಭೀಮವ್ವ
ಭವ ಭಂಗ ಪ. ಥಳ ಥಳಿಸುತ ಗೆಳತಿಯರು ಸಹಿತಾಗಿಚಳತೆಂಬೊ ದಿವ್ಯ ಆಭರಣಚಳತೆಂಬೊ ದಿವ್ಯಾಭರಣ ಭೂಷಿತರಾಗಿಕುಳಿತ ನಾರಿಯರು ಕಡೆಯಿಲ್ಲ1 ಕುಂತಲ ಕದುಪಿನ ಕಾಂತೆಯರು ಹರುಷದಿಕಂತುನಯ್ಯನ ಮುಖನೋಡಿಕಂತುನಯ್ಯನ ಮುಖನೋಡಿಮೈಮರೆದು ನಿಂತ ನಾರಿಯರು ಕಡೆಯಿಲ್ಲ 2 ಅಂದುಗಿ ಅರಳೆಲೆ ಬಿಂದಲಿ ಭಾಪುರಿಅಂದವಾಗಿದ್ದ ಅಸಲಿಅಂದವಾಗಿದ್ದ ಅಸಲಿ ಕಟ್ಟಿದಕಂದರಿನ್ನೆಷ್ಟು ಕಡೆಯಿಲ್ಲ3 ಕಾಲಲಂದುಗೆ ಗೆಜ್ಜೆ ತೋಳಲಿ ತಾಯತಲಾವಳಿಗೆ ಮುತ್ತು ಅಲುಗುತಲಾವಳಿಗೆ ಮುತ್ತು ಅಲುಗುತಸುಳಿದಾಡೊ ಬಾಲರಿನ್ನೆಷ್ಟು ಕಡೆಯಿಲ್ಲ 4 ಹಸಿರು ಪಚ್ಚದ ಕಂಭ ಕುಸುರಾದ ಗಿಳಿಬೋದುಗೆಎಸಕೊ ಮಾಣಿಕದ ಜಗುಲಿಯ ಎಸಕೊ ಮಾಣಿಕದ ಜಗುಲಿ ಸಿಂಹಾಸನದಿ ವಸುದೇವ ತನಯ ಕುಳಿತಾನೆ 5 ಬಿಸÀಜನೇತ್ರಿಯರ ಮುಂದೆ ಕುಶಲದ ಮಾತ್ಹೇಳುತವಸುದೇವ ತಾನು ಕುಳಿತಾನವಸುದೇವ ತಾನು ಕುಳಿತಾನ ದೇವಕಿಯಸೊಸೆಯರ ಕಂಡು ಹರುಷಾಗಿ 6 ಚಲುವ ರಾಮೇಶನ ಬಲದ ಭಾಗದಿಬಂದು ಹಲವು ಮಾತುಗಳು ಕಿವಿಯೊಳುಹಲವು ಮಾತುಗಳು ಕಿವಿಯೊಳುಹೇಳುತ ಬಲರಾಮ ತಾನೆ ಕುಳಿತಾನೆ7
--------------
ಗಲಗಲಿಅವ್ವನವರು
ಭಾಗೀರಥೀ ಜನಕಗೆ ಭಾಗವತಪ್ರಿಯಗೆ ಆಗ ನೀರೆರೆದರವಿಂದಲೋಚನನಿಗೆ ಗೋಪಿ 1 ಸಾಗರಶಯನನ ತೂಗಿ ತೊಟ್ಟಿಲೊಳಿಟ್ಟು ನಾಗಮುರಿಗೆ ವಂಕಿ ನಂದಗೋಪನ ಸುತಗೆ ಬೆರಳಿಗುಂಗುರ ಕೋಟಿಭಾಸ್ಕರತೇಜಗೆ ಹೊಳೆವೊ ಬಿಂದಲಿ ಗುಂಡು ಭುಜಕೀರ್ತಿ ಭೂಷಣ 2 ಮಲಕು ಮುತ್ತಿನ ಹಾರ ಪದಕ ಪಚ್ಚೆಯ ಕಾಂತಿ ಕೌಸ್ತುಭ ರತ್ನ ಥಳಥಳಿಸುವ ಕರ್ಣದಲ್ಲಿ ಬಾವುಲಿ ಚೌಕುಳಿ ಚಳತುಂಬು ಮುತ್ತಿನಬಟ್ಟು ಮುಂದಲೆಗೆ 3 ಹೊಸ ವಜ್ರದರಳೆಲೆ ಹುಲಿಯುಗುರು ತಾಯಿತ ಕುಸುಮನಾಭಗೆ ಕಿರುಗೆಜ್ಜೆ ಕಾಲಲಂದಿಗೆ ಮಿಸುಣಿ ಮಾಣಿಕ್ಯದುಡಿದಾರದಡ್ಡಿಕೆ ಕಟ್ಟಿ ಗೋಪಿ 4 ಕಂಜನಯ್ಯನ ನೋಡೆ ಕಂಗಳಿನ್ನೆರಡಿಲ್ಲ ಜಿಹ್ವೆ ಒಂದೆ ಸಾಲದೆನಗೆಂದು ಅಂಗಿಟೊಪ್ಪಿಗೆ ಹಾಕ್ಯಾಲಿಂಗನೆ ಮಾಡುತ ಸತಿ ತಾನಂದಾನಂದಭರಿತಳಾಗಿ5 ತನ್ನ ಮಗನ ಮುದ್ದು ತಾ ನೋಡಿ ಸಾಲದೆ ಹೊನ್ನ ಪುತ್ಥಳಿಯಂತೆ ಹೊಳೆವೊ ಕೂಸನು ಎತ್ತಿ ನಿನ್ನ ಮಗನ ಆಟ ನೀ ನೋಡೆಂದೆನುತಲಿ ತನ್ನ ಪತಿಯ ತೊಡೆಯಲ್ಲಿಟ್ಟು ನಲಿಯುತ 6 ಹೊನ್ನ ಪುತ್ಥಳಿಗೊಂಬೆ ಹೊಸ ಚಿನ್ನದರಗಿಳಿಯೆ ಹೊನ್ನು ತಾ ಗುಬ್ಬಿತಾರಮ್ಮಯ್ಯ ಎನುತಲಿ ಬಣ್ಣ ಬಣ್ಣದ ಆಟ ವರ್ಣಿಸುತಲಿ ನೀಲ- ವರ್ಣನ ತನ್ನ ತೋಳಿಂದಪ್ಪಿ ನಲಿಯುತ 7 ಸೃಷ್ಟಿಮಾಡುವರಿಲ್ಲೀ ಶಿವ ಬ್ರಹ್ಮರೊಡೆಯನ ಸೃಷ್ಟಿಕರ್ತನಾದನನ್ಹುಟ್ಟಿಸಿದ ನಾಭಿಯಿಂದಿವನು ಹೊಟ್ಟೆಲೀರೇಳು ಜಗವಿಟ್ಟು ಸಲಹುವ ಎಷ್ಟು ಸರ್ವೋತ್ತಮ ಈಗಿಲ್ಲ್ಯವತರಿಸಿದ 8 ಚತುರವದನಗೆ ವೇದ ತಂದಿಟ್ಟು ಸಾಗರ ಮಥಿಸಿ ಮಂದರವನು ಪೊತ್ತು ಅಮೃತವ ಹೀರಿ ಪೃಥಿವಿಯನು ತಂದ ಕೋರೆಯಲಂದ್ಹಿರಣ್ಯಾಕ್ಷನ ಹತವ ಮಾಡಿದ ತಾ ಭೂಪತಿ ಎಂದೆನಿಸಿದಿವನು 9 ಪರಮಭಕ್ತನು ಕರೆಯೆ ಬಿರುದು ಕಂಬದಿ ಬಂದು ಕರುಳ ಬಗೆದ ಪುಟ್ಟ ತÀರÀಳ ರೂಪವ ನೋಡಿ ಮರುಳಾಗಿ ಬಲಿ ಮೂರು ಚರಣ ದಾನ ನೀಡೆ ಬೆಳೆದು ಬ್ರಹ್ಮಾಂಡಕ್ಕೆ ಭುವನ ವ್ಯಾಪಿಸಿಕೊಂಡ10 ಕ್ಷತ್ರ ಸಂಹಾರಿ ತಾ ಎತ್ತಿ ಧನುವ ಸೀತಾ ಸೌ- ಮಿತ್ರಿಸಹಿತ್ವನದಲ್ಲಿ ಇರುತಿರಲಾಗ ಪತ್ನಿ ಒಯ್ಯಲು ಅಸುರನ್ಹತ್ತು ಶಿರಗಳ ತರಿದ ದುಷ್ಟ- ರಂತಕನೆ ನಿರ್ದುಷ್ಟ ಸಜ್ಜನಪ್ರಿಯ 11 ದೇವಾಧಿದೇವ ದೇವಕ್ಕಿ ಜಠರದಿ ಬಂದು ಮಾಯಾ- ಪೂತಣಿಯನ್ನು ಕೊಂದು ವಿಷಮೊಲೆನುಂಡು ಕಾಲಲಿ ಶಕಟನ ಕೆಡವಿದ ಯದುವೀರ ತಾ- ಗೋಪಾಲಕ ಗೋಪೀಸುತನೆಂದೆನಿಸಿಕೊಂಡ12 ವಿಪರೀತ ಮಾಯದಿ ತ್ರಿಪುರದ ಜನರಿಗೆ ದುರ್ಮತವ ಬೋಧಿಸಿ ಅಸುರಾರಿ ಮೋಹಕ ತೋರಿ ಚಪಲ ಚೆನ್ನಿಗ ಖಡ್ಗಪಿಡಿದು ತೇಜಿಯ- ನೇರಿ ಕಪಟನಾಟಕ ಕಲಿಮರ್ದನ ಕರಿಗ್ವರವಿತ್ತ13 ಜನ್ಮಕರ್ಮವು ಜರಾಮರಣಗಳಿವಗಿಲ್ಲ ಜಗದೋ- ಪರಬ್ರಹ್ಮನ ಪಾದಾಂಘ್ರಿಸ್ಮರಣಿ (ಣೆಯಿ?)ರೆ ಪರಮಾ- ದರದಿ ಕರೆದೊಯ್ವ ತನ್ನ (ಬಳಿಯ)ಲ್ಲೆ 14 ಏಸುಜನ್ಮದ ಫಲವಿನ್ನೆಷ್ಟು ಜನ್ಮದ ಸುಕೃತ ಈ ಸಮಯದಿ ಫಲಿಸಿತೀತ ಇಲ್ಲುದಿಸಿರಲು ದೋಷವರ್ಜಿತನೆ ಸಂತೋಷಭರಿತನಿವ ಭೀ- ಮೇಶಕೃಷ್ಣ ಯಶೋದೆ ಕೂಸೆಂದೆನಿಸಿಕೊಂಡ15
--------------
ಹರಪನಹಳ್ಳಿಭೀಮವ್ವ
ಕೇಶವ ಬಾ ನಾರಾಯಣ ಬಾ ಬಾಮಾಧವಬಾ ಮಧುಸೂದನ ಬಾಪಗೋವಿಂದ ಬಾ ಬಾ ಗೋಪಾಲ ಬಾ ಬಾಗೋವರ್ಧನ ಗಿರಿಧಾರಿಯೆ ಬಾ ಅ.ಪರಂಗನೆ ಅಂದಿಗೆ ಗೆಜ್ಜೆಯಕಟ್ಟಿಚುಂಗುಬಿಟ್ಟು ರುಮಾಲನೆ ಸುತ್ತಿಶೃಂಗಾರದ ಹಾರ ಪದಕಗಳ್ಹಾಕಿಅಂಗಳದೊಳಗಾಡಲು ಕಳುಹುವೆನು 1ಚಂಡು ಬುಗುರಿ ಗೋಲಿ ಗಜ್ಜುಗ ಹರಿಯೆಗುಂಡು ಬಿಂದಲಿನಿಟ್ಟಿ ಕರದಲಿ ಕೊಡುವೆಹಿಂಡುಗೋಪಾಲರ ಕೂಡಿಸುವೆಪುಂಡರಿಕಾಕ್ಷನೆ ಪಾಲಿಸು ದೊರೆಯೆ 2ಹಸುಳೆ ನಿನಗೆ ಹೊಸ ಬೆಣ್ಣೆಯ ನೀವೆಬಿಸಿ ಬಿಸಿ ಕಡುಬು ಕಜ್ಜಾಯವ ಕೊಡುವೆಶಶಿಮುಖಿಯರ ಕೂಡಾಡದಿರೆನುವೆಮೊಸರು ಬೆಣ್ಣೆ ಪಾಲ್ಸಕ್ಕರೆ ಕೊಡುವೆ 3ಜರದವಲ್ಲಿ ಅಲಂಕರಿಸುತ ನಲಿವೆಪರಿಪರಿ ಗೆಳೆಯರ ಕೂಡಿಸಿ ಕೊಡುವೆಮುರಳಿ ನುಡಿಸೆನ್ನುತಕರಮುಗಿವೆಪರಮಾತ್ಮನೆ ಜಗನ್ಮೋಹನ ಹರಿಯೆ 4ಕಮಲಭವೇಂದ್ರಾದ್ಯಮರರು ಪೊಗಳೆಕಮಲಪುಷ್ಪ ಮಲ್ಲಿಗೆ ಮಳೆ ಕರೆಯೆಕಮಲನಾಭ ವಿಠ್ಠಲ ಶ್ರೀಹರಿಯೆಶ್ರಮ ಪರಿಹರಿಸೆನ್ನುತ ಪ್ರಾರ್ಥಿಸುವೆ 5
--------------
ನಿಡಗುರುಕಿ ಜೀವೂಬಾಯಿ
ಬಾರೋ ನಮ್ಮ ಮನೆಗೆ ಬೇಗನೆ ಗೋಪಾಲಕೃಷ್ಣಬಾರೋ ಶ್ಯಾಮ ಸುಂದರಾಂಗನೆ ಪಬಾರೊ ಭಾಮೆ ರುಕ್ಮಿಣೀಶ ಬಾರೊಯೋಗಿಹೃದಯವಾಸಬಾರೊ ದ್ವಾರಕಾಪುರೀಶ ಬಾರೊ ಭಕ್ತಜನರ ಪೋಷ ಅ.ಪಅಂದಿಗೆ ಕಾಲ್ಗೆಜ್ಜೆ ಸರಪಣಿ ಪಾಡಗರುಳಿಯುಕೆಂದಾವರೆಯು ಪೋಲ್ವಪಾದದಿನಂದಗೋಪತನಯಗೋಪವೃಂದದೊಳಗೆ ಕುಣಿದು ನಲಿದುಇಂದಿರೇಶ ಶ್ರೀಶನೆ ಬಂದೊಂದುಹೆಜ್ಜೆನಿಡುತ ಮುದದಿ 1ಉಟ್ಟದಟ್ಟಿಯು ಪಟ್ಟೆಚಲ್ಲಣ ಹವಳಕಟ್ಟುಗಟ್ಟಿ ಸರಪಣಿ ಕಿರುಗಂಟೆಯುಕಟ್ಟಿದ ಉಡುದಾರಗೆಜ್ಜೆಶ್ರೇಷ್ಠತನದಿ ಮೆರೆಯುತಿರಲುಪುಟ್ಟಬಾಲರೊಡನೆ ಪುಟ್ಟಪುಟ್ಟ ಹೆಜ್ಜೆನಿಡುತ ನಲಿದು 2ದುಂಡು ಕರಕೆ ಗುಂಡು ಬಿಂದಲಿ ಮುಂಗೈಮುರಿಗೆಉಂಗುರಗಳು ಶೋಭಿಸುತಲಿಬಂದಿ ಬಾಪುರಿಗಳು ತೋಳಬಂದಿ ನಾಗಮುರಿಗಿ ಕರದಿಚಂದ್ರನನ್ನು ಪಿಡಿದು ನಲಿದಸುಂದರಾಂಗ ಚೆಲುವ ಕೃಷ್ಣ 3ಪದಕ ಮುತ್ತಿನ ಸರಗಳ್ಹೊಳೆಯುತವೈಜಯಂತಿಮಾಲೆಸರಿಗೆ ಏಕಾವಳಿಗಳೊಲಿಯುತಪದುಮನಾಭ ನಿನಗೆ ದಿವ್ಯಮುದದಿಕೌಸ್ತುಭಮಾಲೆ ಹೊಳೆಯೆಯದುಕುಲೇಶ ಉಡುಪಿವಾಸಉದದಿ ಶ್ರೀಶಉದ್ಧವಸಖನೆ4ಸೋಮಸೂರ್ಯರ ಕಾಂತಿ ಸೋಲಿಪ ಮುಂಗುರುಳು ಮುಖವುಕಾಮಜನಕ ಕಮಲಲೋಚನಹೇಮಮಣಿ ಕಿರೀಟಕುಂಡಲಪ್ರೇಮತೋರ್ವ ಫಣಿಯ ತಿಲಕಶ್ರೀ ಮಹೀಶ ಶ್ರೀಶನೆ ಶ್ರೀ-ಕಮಲನಾಭ ವಿಠ್ಠಲ ಒಲಿವ 5
--------------
ನಿಡಗುರುಕಿ ಜೀವೂಬಾಯಿ