ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೈ ಜೈ ವೆಂಕಟರಾಯ ಸಲಹು ಗಡ ಪ ಶುಭ ಕಾಯ ಐಹಿಕ ಮಹಮಾಯವ ಬಿಡಿಸಯ್ಯಅ.ಪ ಪಂಕಜಾಕ್ಷ ಹರಿ ಸಂಕರುಷಣ ಭವ ಸಂಕಟ ಪರಿಹಾರ ಶುಭಕರ ಶಂಖಶಕ್ರಧರ ಮಂಕುದನುಜಹರ ಕಿಂಕರಘದೂರ ಶಂಖಸುರನ ಬಲು ಬಿಂಕಮುರಿದ ಬಲದಂಕ ಅದಟವೀರ ಶೂರ ಅಂಕುರಿಸೆನ್ನೊಳಾತಂಕತಾರದೆ ಪೊರೆ ಲಂಕಾ ವಿಜಯಕಾರ 1 ದಾತ ಮೂರುಜಗನಾಥ ಪರಮ ಅ ದ್ಭೂತ ಮಹಿಮೆಗಾರ ಚದುರ ಪ್ರೀತ ಭಕುತ ಭವಭೀತರಹಿತ ಮಾಯಾ ಪೂತನಿ ಸಂಹಾರ ನೀತಿಕೋವಿದ ವಿಧಿತಾತ ಅಸಮ ವಿ ಖ್ಯಾತ ಕರುಣನಿಕರ ಸುಂದರ ಘಾತಿಸಿ ಕಂಸನ ಮಾತಪಿತರ ಕಾಯ್ದ ಪಾತಕ ನಿವಾರ 2 ಬಾಲನಂತರಿಯದೆ ಆಲಯಗಳ ಪೊಕ್ಕು ಪಾಲು ಮೊಸರು ಕದಿದ ಸವಿದ ಬಾಲೆರುಡುವ ದುಕೂಲ ಕದಿದು ತಾ ಮೇಲು ಮರವನೇರ್ದ ಕಾಲಿಂದಿ ಧುಮಕಿದ ಕಾಳಿಯಮೆಟ್ಟಿದ ಕಾಳರಕ್ಕಸರೊದೆದ ಸದೆದ ಲೀಲಾ ಜಾಲ ನಂದ ಬಾಲನಾಗಿ ಬಲು ಬಾಲಲೀಲೆಗೈದ 3 ಪರಮ ಪರಾತ್ಪರ ಪರಮಪುರುಷ ಸಿರಿ ಪರಮ ಪಂಚಪ್ರಾಣ ದುರಿತ ಹರಣಜನನಮರಣ್ಹರಸುರವಿನಮಿತ ಧರಣಿಗಧಿಕ ತ್ರಾಣ ಕರಿಧ್ರುವರಿರ್ವರನು ಭರದಿ ನೀಡಿ ನಿಂತು ಪೊರೆದ ಪಾಂಚಾಲೀಮಾನ ಜಾಣ ಶರಣಜನರ ಮೈನೆರಳು ನಿಗಮಾತೀತ ನಿರಂಜನ 4 ಸೋಮವದನ ಸತ್ಯಭಾಮಾರಮಣ ಸುಖ ಧಾಮ ಸುಜನಹೃದಯನಿಲಯ ಕಾಮಜನಕ ಪುಣ್ಯನಾಮ ರಕ್ಕಸಕುಲ ಭೀಮ ಪಾಲಿಸಭಯ ಶಾಮವರ್ಣ ಮಮಸ್ವಾಮಿ ಭಜಿಪೆ ಶ್ರೀ ರಾಮಪಿಡಿಯೋಕಯ್ಯ ಸದಯ ಕಾಮಿತ ವರ ಸುಪ್ರೇಮದಿ ಇತ್ತೆನ್ನ ಪ್ರೇಮದುದ್ಧರಿಸಯ್ಯ 5
--------------
ರಾಮದಾಸರು
ನಮೋ ಹನುಮ ಜೈ ಬಲವಂತ ನಮೋ ಪರಾಕ್ರಮ ಧೀಮಂತ ಪ ಹಾರಿ ಮಹಾಸಾಗರ ಸೇರಿ ದುರುಳನಪುರ ಮೀರಿದ ಬಲು ಶೃಂಗಾರದಿ ಶೋಭಿಪ ಸೂರಗೈದೆಲೋ ವನ 1 ಬಿಂಕಮುರಿದು ಅಶಂಕ ದನುಜಕುಲ ಪಂಕಜಮುಖಿಪಾದಪಂಕಜಕೆರಗಿ ಲಂಕೆ ದಹನ ಗೈದ್ಯೋ 2 ಸ್ವಾಮಿ ಶ್ರೀರಾಮನ ಪ್ರೇಮ ಪಡೆದು ನಿ ಸ್ಸೀಮನೆ ಎನ್ನನು ಪ್ರೇಮದಿ ಪೊರೆಯೈ ಸ್ವಾಮಿ ಮೂರುತಿ 3
--------------
ರಾಮದಾಸರು
ನಾಮ ಭಜೇ ಹರಿನಾಮ ಭಜೇಹರಿನಾಮ ಭಜೇಹರಿನಾಮ ಭಜೇಪಕಾಮಿತದಾಯಕ ಕಾಮಧೇನು ಭಕ್ತಪ್ರೇಮಮಂದಿರನ ನಾಮ ಭಜೇ ಅ.ಪವಂದಿತ ಅಜಹರಮಂದರಗಿರಿಧರಸುಂದರಮೂರುತಿಪಾದ ಭಜೇಸಿಂಧುಶಯನ ಗೋಪೀಕಂದ ಮುಕ್ಕುಂದಗೋವಿಂದನ ಆನಂದ ನಾಮ ಭಜೇ 1ಪಂಕಜಪಾಣಿಪಾದ ಕಿಂಕರಪಾಲಕಳಂಕಮಹಿಮನಾಪಾದ ಭಜೇಕೊಂಕಿನ ದೈತ್ಯರ ಬಿಂಕಮುರಿದ ಮಹಶಂಖಪಾಣಿಯ ನಾಮ ಭಜೇ 2ಶೇಷಶಯನ ಜಗದೀಶ ಪರಮಪ್ರಕಾಶ ನಿರಂಜನಪಾದ ಭಜೇವಾಸುದೇವಭವನಾಶ ಜಾನಕಿಪ್ರಾಣೇಶನ ವಿಮಲನಾಮ ಭಜೇ 3ನೀಲಮೇಘಶ್ಯಾಮಶೂಲಪಾಣಿಸಖಬಾಲಗೋಪಾಲನ ಶ್ರೀಪಾದ ಭಜೇಪಾಲ ಮೂಲೋಕನ ಮೇಲು ಮೇಲೆನ್ನುತಕಾಲಕಾಲದಿಸುನಾಮಭಜೇ4ಜಯ ಜಯಅಚ್ಯುತಜಯ ಜಯ ಸಚ್ಚಿತ್ತಜಯ ಜಯಾನಂತನಪಾದಭಜೇಜಯ ಜಯ ಸ್ಮರಪಿತ ಜಯ ಜಯ ಮುಕ್ತೀನಾಥಜಯವೆಂದು ಶ್ರೀರಾಮ ನಾಮ ಭಜೇ 5
--------------
ರಾಮದಾಸರು