ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನಸು ಕಂಡೆನು ನಾನು ಸಂತೋಷದಿ| ಕನಸು ಕಂಡೆನು ನಾನು ಅರನಿಮಿಷದೊಳು ಹರಿಯ ಮನಸಿನಲಿ ಸ್ಮರಿಸಿ ಮಹಾರೂಪವನು ಕೂಡ ಪ ವೆಂಕಟರಮಣನ ಯಾತ್ರೆಗೆ ಹೋದ್ಹಾಗೆ ಶಂಕೆ ಇಲ್ಲದೆ ಪರಶಿಜನಕ ಕಂಡ್ಹಾಗೆ ಬಿಂಕದಿಂದಲಿ ದೇವಸ್ಥಾನ ಪವಳಿಯ ಸುತ್ತ ಅಂಕುರಾರ್ಪಣ ಧ್ವಜಸ್ತಂಭದಲಿ ನಿಂತ್ಹಾಗೆ 1 ಅಡಗಿ ಶಾಲೆಯ ಅನ್ನಪೂರ್ಣೆಯನ್ನು ಕಂಡ್ಹಾಗೆ ದೃಢದಿ ಶ್ರೀನಿವಾಸ ದೇವರ ನೋಡಿದ್ಹಾಗೆ ಕಡು ಹರುಷದಲಿ ತೊಟ್ಲ ತೀರ್ಥ ಸೇವಿಸದ್ಹಾಗೆ ಸಡಗರದ ಮಧ್ಯರಂಗದಲಿ ನಿಂತ್ಹಾಗೆ 2 ಶಿರzಲ್ಲಿ ಕಿರೀಟ ಲಲಾಟ ತಿಲಕ ವಿಟ್ಟ್ಹಾಗೆ ಕೊರಳೊಳ್ ಮುತ್ತೀನಹಾರ ಪದಕ ತೋರಿದ ಹಾಗೆ ಕರದಲ್ಲಿ ಶಂಖಚಕ್ರ ಧರಿಸಿ ಕೊಂಡಿರುವ ಹಾಗೆ ಉರದಲ್ಲಿ ಶಿರಿಲಕುಮಿ ವಾಸವಿದ್ಹಾಗೆ 3 ಹೊನ್ನ ಹೊಸ್ತಿಲ ದಾಟಿ ವಳಗ್ಹೋಗಿ ನಿಂತ್ಹಾಗೆ ಚಿನ್ಮಯನ ರೂಪವನು ಚಿಂತಿಸಿದ ಹಾಗೆ ಅನ್ನ ಪ್ರಸಾದಾತಿ ರಸದÉೂೀಶಿ ಕೊಟ್ಹಾಗೆ ಪನ್ನ ಗಾದ್ರಿ ವಾಸನ ಕಣ್ಣಿಂದ ನೋಡಿದ್ಹಾಗೆ 4 ನಡುವಿನಲಿ ಒಡ್ಯಾಣ ಪೀತಾಂಬರವನುಟ್ಹಾಗೆ ಯಡಬಲದಿ ಜಯು ವಿಜಯ ನಿಂತಿರೋಹಾಗೆ ಪೊಡವಿಯೊಳ್ 'ಹೆನ್ನೆವಿಠ್ಠಲ’ ವೆಂಕಟೇಶನ್ನ ಕಡು ಹರುಷದಲಿ ಕಂಡು ಕೈಮುಗಿದು ನಿಂತ್ಹಾಗೆ 5
--------------
ಹೆನ್ನೆರಂಗದಾಸರು
ನಿತ್ಯ ಶುಭಮಂಗಳಂ ಪ. ವಸುದೇವತನಯನಿಗೆ ವೈಕುಂಠನಿಲಯನಿಗೆಕುಸುಮನಾಭನಿಗೆ ಕೋಮಲರೂಪಗೆಯಶೋದೆನಂದನಗೆ ವಸುಧೆಯ ರಮಣನಿಗೆನಸುನಗೆಯೊಳೊಪ್ಪುವ ನರಸಿಂಹಗೆ1 ಕೌಸ್ತುಭ ಹಾರಗೆಕನಕಾಂಬರಧರನಿಗೆ ಕಾರುಣ್ಯರೂಪನಿಗೆಸನಕಾದಿ ಮುನಿವಂದ್ಯ ನರಸಿಂಹಗೆ2 ಪಂಕಜನಾಭನಿಗೆ ಪಾಂಚಾಲಿರಕ್ಷÀಕಗೆಲಂಕೆಯನು ವಿಭೀಷಣನಿಗಿತ್ತವಗೆಕುಂಕುಮಾಂಕಿತನಿಗೆ ಕುವಲಯನೇತ್ರನಿಗೆಬಿಂಕದಿಂದಲಿ ಮೆರೆವ ನರಸಿಂಹಗೆ 3 ಪಕ್ಷಿವಾಹನನಿಗೆ ಪರಮಪಾವನನಿಗೆಕುಕ್ಷಿಯೊಳು ಜಗವನಿಂಬಿಟ್ಟವನಿಗೆಲಕ್ಷುಮೀಕಾಂತನಿಗೆ ಲಕ್ಷಣವಂತನಿಗೆಲಕ್ಷಣದೊಳೊಪ್ಪುವ ನರಸಿಂಹಗೆ4 ಭಕ್ತವತ್ಸಲನಿಗೆ ಭವದುಃಖದೂರನಿಗೆಮುಕ್ತಿದಾಯಕಗೆ ಚಿನ್ಮಯರೂಪಗೆಮಿತ್ರೆರುಕ್ಮಿಣಿ ಸತ್ಯಭಾಮೆಯರರಸನಿಗೆನಿತ್ಯಕಲ್ಯಾಣ ಶ್ರೀಹಯವದನಗೆ 5
--------------
ವಾದಿರಾಜ
ಪಾಲಿಸು ಶ್ರೀಶನೆ ಪರಮ ಪವಿತ್ರನೆ ಪಾವನ್ನ ಚರಿತನೆ ಪಾಲಿಸೆನ್ನ ಪ ಕಾಲಕಾಲಕೆ ನಿನ್ನ ಮಹಿಮೆಯ ತೋರಿಸಲಹುದು ಸರ್ವವ್ಯಾಪಕ ಮಾಯಾದೇವಿಯರಮಣ ಶ್ರೀಪತೆ ಕಾಯೊ ಶ್ರೀಹರಿವಾಸುದೇವನೆಅ.ಪ ವಾಸುದೇವನೆ ನಿನ್ನ ಸೋಸಿಲಿ ಭಜಿಪರ ಕ್ಲೇಶಗಳ್ಹರಿಸಿ ಸಂತೋಷವಿತ್ತು ದೋಷದೂರನ ನಾಮ ಆಸೆಯಿಂದ ಭಜಿಪರಸಂಗವನೂ ನೀಡೆನುತ ಬಿನ್ನೈಸುವೆನೂ ಎನ್ನೊಡೆಯ ನೀನೆಂದೆನುತ ಅಡಿಗಳಿಗೆರಗುವೆನೂ ಧೃಡಭಕುತಿ ನಿನ್ನೊಳಗಿರಿಸಿ ರಕ್ಷಿಪುದೆಂದು ಬೇಡುವೆನೂ ನುಡಿನುಡಿಗೆ ನಿನ್ನಯ ನುಡಿಗಳನು ನುಡಿವಂಥ ಭಕ್ತರ ಅಡಿಗಳಾಶ್ರಯ ಕೊಟ್ಟು ಕಾಯ್ವುದು ಬಡವನೆನ್ನಲಿ ಬೇಡ ಎನ್ನನು ಬಡವರಾಧಾರಿ ಶ್ರೀಹರಿ 1 ಶಂಖು ಚಕ್ರವು ಪದ್ಮಗದೆಯು ಹೊಳೆಹೊಳೆಯುತ್ತ ಬಿಂಕದಿಂದಲಿ ನಿಂತು ನೋಡುತಲಿ ಮಂಕುಮತಿಗಳನ್ನು ಶಂಕೆಯೊಳಗೆ ತಳ್ಳಿನೋಡುತ್ತ ನಿನ್ನಯ ಸದ್ಭಕ್ತರ ಶಂಕೆಗಳೆಲ್ಲವನು ಕ್ಷಿಪ್ರದಿ ಕಳೆಯುತ್ತ ಶ್ರೀಹರಿ ನಿನ್ನ ಪಾದ ಪಂಕಜಗಳೆ ಚಿಂತಿಸುವರಿಗೆ ಹರುಷ ನೀಡುತ್ತ ವೈರಿ ನಿನ್ನಯ ವಿಧವಿಧದ ಲೀಲೆಗಳ ತೋರುತ್ತ ಉದಯ ಭಾಸ್ಕರನಂತೆ ಪೊಳೆಯುತ್ತ ಮುದದಿ ಸಿರದಿ ಕಿರೀಟ ಹೊಳೆಯುತ್ತ ಸದಮಲಾತ್ಮಕ ಸತ್ಯಮೂರುತಿ2 ಹೃದ್ಗೋಚರನಾಗು ಪದ್ಮಾನಾಭ ಉದ್ಧರಿಸೆನ್ನನು ಉದ್ಧವಸಖನೆಂದು ನಂಬಿರುವೆ ಮನ್ಮನದ ಭಯಗಳವದ್ದು ಬಿಸುಡುತ ಸಲಹೊ ನರಹರಿಯೆ ಮಮಸ್ವಾಮಿ ನಿನ್ನಯ ಪದ್ಮ- ಪಾದಕೆ ನಮಿಪೆ ಶ್ರೀಹರಿಯೆ ಮೋಹಕ ಬಂಧವ ಬಿಡಿಸಿರಕ್ಷಿಸುತೆನ್ನ ಸಲಹು ಮಾಯಾಪತಿಯೆ ಬಹು ವಿಧದಿ ಪ್ರಾರ್ಥಿಪೆ ತೋಯಜಾಕ್ಷನೆ ತೋರು ನಿನ್ನಯ ಚಾರು ಚರಣಕೆ ಬಾಗಿ ನಮಿಸುವೆ ಕಾಯ್ವುದೆನ್ನನು ಕಮಲನಾಭವಿಠ್ಠಲನೆ ಶ್ರೀಹರಿ ವಾಸುದೇವನೆ 3
--------------
ನಿಡಗುರುಕಿ ಜೀವೂಬಾಯಿ
ಹಣ್ಣು ತಾ ಬೆಣ್ಣೆ ತಾರೆ - ಗೋಪಮ್ಮ-|ಹಣ್ಣು ತಾ ಬೆಣ್ಣೆ ತಾರೆ ಪಅಡವಿಯೊಳಗೆ ಅಸುರನ ಕೊಂದ ಕೈಗೆ |ಮಡುವಿನೊಳಗೆ ಮಕರನ ಸೀಳ್ದ ಕೈಗೆ ||ಪೊಡಿವಿಯೊಳಗೆ ಚೆಂಡನಾಡಿದ ಕೈಗೆ |ಸಡಗರದಲಿ ಭೂಮಿ ಬೇಡಿದ ಕೈಗೆ 1ಶಂಖ ಚಕ್ರಗಳ ಪಿಡಿದಂಥ ಕೈಗೆ |ಶಂಕೆಯಿಲ್ಲದೆ ಮಾವನ ಕೊಂದ ಕೈಗೆ ||ಬಿಂಕದಿಂದಲಿ ಕೊಳಲೂದುವ ಕೈಗೆ |ಪಂಕಜಮುಖಿಯರ ಕುಣಿಸುವ ಕೈಗೆ 2ದಿಟ್ಟತನದಲಿಬೆಟ್ಟವೆತ್ತಿದ ಕೈಗೆ|ಸೃಷ್ಟಿಯ ದಾನವ ಬೇಡಿದ ಕೈಗೆ ||ದುಷ್ಟಭೂಪರನೆಲ್ಲ ಮಡುಹಿದ ಕೈಗೆ |ಕೆಟ್ಟ ದಾನವರನು ಸದೆಬಡಿದ ಕೈಗೆ 3ಕಾಳಿಯ ಮಡುವನು ಕಲಕಿದ ಕೈಗೆ |ಸೋಳಸಾಸಿರ ಗೋಪಿಯರಾಳಿದ ಕೈಗೆ ||ಮೇಳದ ಭಕ್ತರುದ್ಧರಿಸುವ ಕೈಗೆ |ಏಳು ಗೂಳಿಯ ಗೆದ್ದ ಯದುಪನ ಕೈಗೆ 4ಬಿಲ್ಲು - ಬಾಣಗಳನು ಪಿಡಿದಂಥ ಕೈಗೆ |ಮಲ್ಲಸಾಧನೆಯನು ಮಾಡಿದ ಕೈಗೆ ||ಎಲ್ಲ ದೇವರದೇವ ರಂಗನ ಕೈಗೆ |ಬಲ್ಲಿದಪುರಂದರವಿಠಲನ ಕೈಗೆ5
--------------
ಪುರಂದರದಾಸರು