ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಲು ಬಂದಿರುವ ನಿಮ್ಮನು ಪ ಬೇಡಿದ ವರಗಳ ನೀಡುವ ದೇವನುಅ.ಪ ವಾಸುದೇವನ ಕೃಪಲೇಶವ ಪಡೆಯಲು ಅಸೇತು ಹಿಮಗಿರಿ ದೇಶಗಳಿಲ್ಲಿಹ ಸಾಸಿರ ಕ್ಷೇತ್ರ ಪ್ರವಾಸವ ಗೈವದು ಲೇಸಲ್ಲವೆನುತ ದಾಸಜನಗಳನು 1 ಬೆಡಗು ಬಿಂಕಗಳಿಲ್ಲ ಸಿಡುಕನು ಇವನಲ್ಲ ಬಡವಬಲ್ಲಿದನೆಂಬೊ ಕಡುಭೇದವಿಲ್ಲವು ಕಡಲಶಯನನಿವ ಪೊಡವಿಯಳಿಗೆ ತ ನ್ನಡಿಯಾಳುಗಳ ಕರಪಿಡಿದೆತ್ತಲೋಸುಗ2 ಒಂದು ತುಳಸಿದಳ ಬಿಂದು ಗಂಗೋದಕ ದಿಂದಲೇ ಪರಮಾನಂದವ ಪೊಂದುವ ತಂದೆ ಪ್ರಸನ್ನನು ಬಂದ ಮಂದಿರದಲಿ ಇಂದಿರೆ ತಾನಲ್ಲಿ ಎಂದೆಂದು ಇರುವಳು3
--------------
ವಿದ್ಯಾಪ್ರಸನ್ನತೀರ್ಥರು
ಶ್ರೀಪಾದರಾಯರ ದಿವ್ಯ ಶ್ರೀಪಾದವ ಭಜಿಸುವೆ ಪ. ವಾಗ್ವಜ್ರಗಳಿಂದ ಮಾಯಾವಾದಿಗಳೆಲ್ಲರ ಬಾಯಬೀಗನಿ(ವಿ?)ಕ್ಕಿ ಮುದ್ರಿಸಿದ ಬಿಂಕಗಳ ಬಿಡಿಸುವ 1 ವ್ಯಾಸರಾಯರಿಗೆ ವಿದ್ಯಾಭ್ಯಾಸವ ಮಾಡಿಸುವದಾಸರ ನಾಮಗಳಿಂದ ಲೇಸುಲೇಸೆಂದೆನಿಸಿಕೊಂಬ 2 ಮಧ್ವಮತದಲ್ಲಿ ಪುಟ್ಟಿ ಮಾಯಾವಾದಿಗಳ ಕುಟ್ಟಿಗೆದ್ದು ಮೆರೆದನು ದಿಟ್ಟ ಗುರುರಾಯ ಜಗಜಟ್ಟಿ 3 ಸುವರ್ಣವರ್ಣತೀರ್ಥರ ಸುತ ಶ್ರೀಪಾದರಾಯರಅವರ ನಾಮಗಳಿಂದ ಕಾವನಯ್ಯ ಕರುಣಾನಿಧಿ4 ವರದ ವೆಂಕಟೇಶನ್ನ ಒಲಿದು ಪೂಜಿಸುವನಕರುಣದಿಂದ ಹಯವದನ ಸಲಹೋ ಯತಿರನ್ನನ 5
--------------
ವಾದಿರಾಜ
ಸ್ಮರಿಸಿ ಬದುಕಿರೊ ಗುರುವರರಾ ನರ- ಹರಿಸ್ಮರಣೆ ಮರೆಯದಲೆ ಕೀರ್ತಿಸಿ ನಲಿದವರ ಪ ದಾಸದೀಕ್ಷೆಯ ವಹಿಸಿದವರ ಹರಿ ದಾಸರ ಕೂಡಿ ನರ್ತಿಸಿ ನಲಿದವರ ಶ್ರೀಶನ ಮಹಿಮೆ ಬಲ್ಲವರ ಭವ ಪಾಶಗಳಳಿವ ಸನ್ಮಾರ್ಗಬೋಧಕರ 1 ಬಡತನದಲಿ ಬಳಲಿದವರ ಭಾಗ್ಯ ಬಿಡದೆ ಬಂದೊದಗೆ ಹಿಗ್ಗದೆ ತಗ್ಗಿದವರ ಮೃಡಸಖನೊಲುಮೆ ಪಡೆದವರ ಬಹು ಸಡಗರದಲಿ ಹರಿ ಭಜನೆ ಮಾಡ್ದವರ 2 ಪಂಕಜಾಕ್ಷನ ಪೊಗಳಿದವರ ತಂದೆ ವೆಂಕಟೇಶ ವಿಠ್ಠಲ ದಾಸರಿವರ ಬಿಂಕದಿ ಹರಿಯ ಮರೆತವರ ಗರ್ವ ಬಿಂಕಗಳಳಿಯ ಸನ್ಮಾರ್ಗಕೆಳದವರ3 ತಾಳ ತಂಬೂರಿ ಪಿಡಿದವರ ಗೆಜ್ಜೆ ತಾಳ ಮೇಳದಿ ನರ್ತಿಸಿ ನಲಿದವರ ವ್ಯಾಳ ಶಯನನ ಭಕ್ತರಿವರ ಸಂಜೆ ವೇಳೆ ಹರಿಭಜನೆ ಮಾಡಿ ನಲಿದವರ 4 ಮಡದಿ ಮಕ್ಕಳು ಬಂಧು ಜನರ ಕೂಡಿ ಕಡು ಸಂಭ್ರಮದಿ ಹರಿಭಜನೆ ಮಾಡ್ದವರ ಕಡಲ ಶಯನನ ಭಕ್ತರಿವರು ಭಾಗ್ಯ ಬಡತನ ಸಮವೆಂದು ತಿಳಿಯ ಹೇಳ್ದವರ 5 ಹರಿಗುಣ ಕೀರ್ತಿಸಿದವರ ನರ ಹರಿಯ ಮಹಿಮೆಗಳ ಶಿಷ್ಯರಿಗೊರೆದವರ ಹರಿಯೆ ಸರ್ವೋತ್ತಮನೆಂದವರ ನಮ್ಮ ಉರುಗಾದ್ರಿವಾಸ ವಿಠ್ಠಲನ ನಂಬಿದವರ6 ಮಮತೆಯ ಬಿಡಬೇಕೆಂದವರ ದೇಹ ಮಮತೆಯ ಬಿಡುತ ಹರಿಪುರ ಸೇರಿದವರ ಕಮಲಾಕ್ಷನ ಭಕ್ತರಿವರ ನಮ್ಮಕಮಲನಾಭನ ವಿಠ್ಠಲನ ನಂಬಿದವರ 7
--------------
ನಿಡಗುರುಕಿ ಜೀವೂಬಾಯಿ