ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತುಪಾಕಿ ಬಾರೊ ಮಾಡೊ ಮನುಜ ತುಪಾಕಿ ಬಾರೊ ಮಾಡೊ ಪ ತುಪಾಕಿ ಬಾರೊ ಮಾಡೊ ಸೊಬಗಿನಿಂದ ನೀ ಭುಜಗಶಯನ ಶ್ರೀಹರಿಯ ಧ್ಯಾನವೆಂಬ ಅ.ಪ ಚಿತ್ತಶುದ್ಧಿಯೆಂಬ ಮದ್ದು ತುಂಬಿ ಭರ್ತಿಮಾಡಿಕೊಳವೆಯ ಸತ್ಯಗುಣವೆಂಬ ಛಡಿ ಪಿಡಿ ದೊತ್ತಿ ಜಡಿಯೊ ಭಕ್ತಿ ಬಾಹ್ವಿನಿಂದ ಎತ್ತಿ ಸಾಮಥ್ರ್ಯದಿ ಮಿಥ್ಯದೇಹವನು ಹತ್ತಿ ಬೇಂಟೆನಾಡೊ 1 ಅಂಟಿಕೊಂಡು ಬರುವ ಬೇಗ ತಿಳಿ ಎಂಟು ಕೋಣನ ಸುಳಿವ ಗಂಟಲಕ್ಕೆ ಹಾರುತಿರುವ ಆರುಹುಲಿ ಬಂಟನಾಗಿ ತರಿಯೆಲವೊ ವೈ ಕುಂಠನ ಕೃಪೆಯೆಂಬ ಬಂಟಬಲವು ಕೂಡಿ ಬೇಂಟೆನಾಡೆಲೊ 2 ಮೂರುಮಂದಿರವ ಕಟ್ಟಿಕೊಂಡು ಧೀರನಾಗಿ ನಲಿಯೊ ಸಾರಿಬರುವ ಏಳು ಕೊಳ್ಳಗಳ ಹಾರಿ ಮುಂದಕೆ ನಡೆಯೊ ಘೋರ ದುರ್ಗುಣ ಮೃಗ ಸೂರೆಮಾಡಿ ಮಹಧೀರ ಶ್ರೀರಾಮನ ಚಾರುಚರಣ ಸೇರು 3
--------------
ರಾಮದಾಸರು
ತೊಡಕ ಹರವ ಮಾಡಿಕೊಳ್ಳಿರೊ ಹುಟ್ಟಿ ಬಾಹ್ವ ಮನುಜರೆಲ್ಲ ಧ್ರುವ ನಾನು ನನ್ನದೆಂದು ಜ್ಞಾನಹೀನನಾಗಿ ಬಾಳುತಿಹ್ಯ ಗಾಣ-ದೆತ್ತಿನಂತೆ ಮುಂದೆಗಾಣದಿಹ್ಯ ಭ್ರಮೆಯದ 1 ಜೀವ ಶಿವ ದಾವದೆಂದು ಠಾವಿಕಿಲ್ಲ ದಿಹ್ಯದಾಗಿ ನಾವು ನೀವು ಎಂದು ಹ್ಯಾವ ಹೊಮ್ಮಿ ಹೊಡೆದಾಡುವ 2 ಸಂಚಿತ ಪ್ರಾರಬ್ಧ ಕ್ರಿಯಮಾಣದೊಳು ಸಿಲ್ಕಿ ಪ್ರ ಪಂಚ ಪರಮಾರ್ಥ ದಾವದೆಂದು ಮುಂಚೆ ತಿಳಿಯದ 3 ತನವು ತಾನೆಂದು ಘನವು ಮರೆದು ದಣಿದು ತಿರುಗುತಿಹ್ಯ ಮನದ ಮಾಯದೊಳು ಸಿಲ್ಕಿ ತನಗೆ ತಾಂ ತಿಳಿಯದೆ 4 ತೊಡಕು ಹರವ ಮಾಡಿಗೊಳ್ಳಿ ಪಡದು ಙÁ್ಞನಭಕ್ತಿಯಿಂದ ಮೂಢ ಮಹಿಪತಿಯನ್ನೊಡೆಯ ಬಿಡದೆ ನೆಲೆಗೊಳ್ಳುವ್ಹಾಂಗೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಾವಗಿಲ್ಲ ಖೂನ ತನ್ನೊಳಗ ಅವಗೆಲ್ಲಿಯ ಜ್ಞಾನ ಜಗದೊಳಗ ಧ್ರುವ ತಿಳಿದುಕೊಳ್ಳದವ ಆತ್ಮವಿಚಾರ ಕಳೆದು ಕೊಂಡವನೆ ಹಿತ ಅಪಾರ ಹೊಳಿಯದವಗ ಎಂದು ವಸ್ತುದಾಧಾರ 1 ದಾವಗಿಲ್ಲ ಖೂನ ಗುರುಮುಖ ಅವನೆ ತಾಳಿ ಬಾಹ್ವ ಜನ್ಮ ಅನೇಕ ಭಾವಿಸದು ದಾವಗಿನ್ನ ವಿವೇಕ ಅವಗೆಲ್ಲಿಹದು ನೋಡಿ ಸ್ವಸುಖ 2 ಖೂನ ತನ್ನ ತಿಳಿವದು ತ್ವರಿತ ಅನುಭವಕಿದೆ ತಾಮ ಸನ್ಮತ ದೀನ ಮಹಿಪತಿಗೆ ಸ್ವಹಿತ ಭಾನು ಕೋಟೆ ತೇಜನಾದ ಉದಿತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾತು ಬಿಡಬೇಕು ನೀತಿ ಹಿಡಿಬೇಕು ಪ್ರೀತಿಯಿಂದಧ್ಯಾತ್ಮ ನಿಜಸ್ಥಿತಿಗೂಡಬೇಕು ಧ್ರುವ ಕೋಟಿ ಮಾತಾದೇನು ಕೋಟಿಲಿದ್ದಾವೇನು ನೋಟ ನೆಲೆಗೊಳದ ಶಾಸ್ತ್ರಪಾಠ ಮಾಡಿನ್ನೇನು 1 ಸಂಜೀವ ಗಿಡಮೂಲವ್ಯಾತಕೆ ಸರ್ವ ನಡಿಯು ಙÁ್ಞನವರಿಯದಿಹ ನುಡಿಯಾತಕೆ ಬೀರ್ವ 2 ನಡೆನುಡಿ ಒಂದೇ ಮಾಡಿ ದೃಢ ಭಾವನೆ ಕೂಡಿ ಒಡನೆ ಬಾಹ್ವ ಮಹಿಪತಿ ಒಡಿಯ ಕೈಗೂಡಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮುಖ್ಯಬೇಕು ಗುರುಭಕ್ತಿಗೆ ತಾ ಸದ್ಭಾವನೆ ಸಪ್ರೇಮ ಸಿಕ್ಕಿ ಬಾಹ್ವ ಸಾಧಿಸಿ ತನ್ನೊಳು ಶ್ರೀಗುರುಸರ್ವೋತ್ತಮ ಧ್ರುವ ಸೋಹ್ಯ ತಿಳಿದರೆ ಸಾಧಿಸಿಬಾಹುದು ಶ್ರೀಗುರುವಿನ ಶ್ರೀಪಾದ ದೇಹ ನಾನಲ್ಲೆಂಬು ಭಾವನಿ ಬಲಿವುದು ತಾ ಸರ್ವದಾ ಗುಹ್ಯಮಾತು ಗುರುತಕೆ ಬಾಹುದು ಸದ್ಗುರು ಸುಪ್ರಸಾದ ಬೋಧ 1 ಕೀಲು ತಿಳಿದರೆ ಕಿವಿ ಸಂದಿಲ್ಯಾದೆ ಮೂಲಮಂತರದ ಖೂನ ಕೂಲವಾದರೆ ಗುರುದಯದಿಂದಲಿ ಕೇಳಿಸುವದು ಪೂರ್ಣ ಮ್ಯಾಲೆ ಮಂದಿರದೊಳು ತಾ ತುಂಬೇದ ಥಳಥಳಿಸುವ ವಿಧಾನ ಶೀಲ ಸುಪಥ ಸಾಧಿಸಿ ಸದ್ಗತಿ ಸಾಧನ 2 ಟೂಕಿ ಬ್ಯಾರ್ಯಾದೆ ಏಕೋಭಾವದಿ ಕೇಳಿರೊ ನೀವೆಲ್ಲ ಹೋಕು ಹೋಗಿ ಹುಡುಕಿದರೆ ತಾ ಎಂದಿಗೆ ತೋರುವದಲ್ಲ ಶೂನ್ಯ ಜೋಕೆಯಿಂದ ಜಾಗಿಸಿಕೊಡುವಾ ಮಹಿಪತಿಗುರು ಮಹಾಮಲ್ಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು