ಒಟ್ಟು 9 ಕಡೆಗಳಲ್ಲಿ , 1 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ನಾನೊಂದು ಸುವಸ್ತ ಮಂಡಲದೊಳು ಸದ್ಗುರು ದಯದಲಿ ಸಾಭ್ಯಸ್ತ ಧ್ರುವ ನೆನವಿನ ಕೊನೆಯಲಿ ಅನುವಾಗಿ ದೋರತದೆ ಘನ ದೀಪ್ತಿಯಲಿ ಬೀರುತಿದೆ ಮನದ ಮುಗುಟ 1 ಪ್ರಣವನ ಮೂಲಾಗ್ರಹಲಿ ಪರಿಪೂರ್ಣತಾನಾಗೆÀದ ಘನವೆ ಘನವಾಗ್ಹೊಳೆಯುತದೆ ಪ್ರಾಣಪದಕ 2 ಮಹಿಪತಿ ಬಾಹ್ಯಾಂತ್ರದೊಳು ವಸ್ತು ವಿರಾಜಿಸುತದೆ ಮಹಿಮರೆ ಬಲ್ಲರೀಸುಖ ನಾಮಾಮೃತದ ಸ್ವಾನುಭವದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂಥಾದೆಲ್ಲದೆ ತಾಂ ನೋಡಿ ಸತ್ಸಂಗದಸುಖಾ ಇಂಥಾ ಅಂಥಿಂಥವರಿಗಿಂಥಾದೈಲ್ಲದೆ ನೋಡಿ ಧ್ರುವ ಒಂದೊಂದುಪರಿ ಕೇಳಿಸುವ ಹ ನ್ನೊಂದರ ಮ್ಯಾಲಿನ್ನೊಂದರ ಘೋಷ ಧೀಂ ಧೀಂ ಧೀಂ ಧೀಂ ಧೀಂ ಧೀಂ ಧೀಂ ಧೀಂ ಮಿಡುಗತಿಹ್ಯ ಆನಂದಸುಖ 1 ಉದಯಾಸ್ತಿಲ್ಲದೆ ಬೆಳಗಿನ ಪ್ರಭೆಯು ತುದಿಮೊದಲಿಲ್ಲದೆ ತುಂಬಿತು ಪೂರ್ಣ ಬುಧಜನರನುದಿನ ಸೇವಿಸುತಿಹ್ಯ ಸದಮಲವಾದ ಸದಾ ಸವಿಸುಖ2 ವಿಹಿತ ವಿವೇಕದ ಅನುಭವಗೂಡಿ ಬಾಹ್ಯಾಂತ್ರದ ಘನದೋರುತಲಿಹ್ಯ ಸ್ವಹಿತಸುಖದ ಸುಧಾರಸಗರೆವ ಮಹಿಪತಿಗುರು ಕರಣದ ಕೌತುಕ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ಇದೇ ಬ್ರಹ್ಮಮಯ ಸದಮಲಾನಂದೋದಯ ಉದಯಾಸ್ತಮಾನವಿಲ್ಲದೆ ಸದೋದಿತ ಭಾಸುತಿದೆ ಧ್ರುವ ವಸ್ತುವಿದೆ ನಿತ್ಯವಾದ ಅತ್ತ್ಯೋತ್ತಮಾನಂದಬೋಧ ಎತ್ತ ನೋಡಿದರತ್ತ ಹತ್ತಿಲೆ ಸೂಸುತಲ್ಯದೆ 1 ಸತ್ಯಸದಾನಂದೋಬ್ರಹ್ಮ ನಿತ್ಯತೃಪ್ತ ನಿರುಪಮ ಅತ್ತಿತ್ತಲಾಗದೆ ಪೂರ್ಣಮತ್ತವಾಗ್ಯೆನ್ನೊಳಗದೆ 2 ಗುಪಿತ ನಿಜ ಸಕಲಾಗಮ ಪೂರಿತ ಶುಕಾದಿಗಳೂ ಸೇವಿತ 3 ಸರ್ವಸಾಕ್ಷಿ ಸರ್ವಾಧಾರ ಸರ್ವರೊಳು ಸರ್ವೇಶ್ವರ ಸರ್ವಮಿದÀಂ ಖಲುಬ್ರಹ್ಮವೆಂದು ಶ್ರುತಿ ಸಾರುತಿದೆ 4 ಇಹಪರ ಪರಿಪೂರ್ಣ ಮಹಾಗುರು ನಿರಂಜನ ಮಹಿಪತಿ ಬಾಹ್ಯಾಂತ್ರದೊಳು ಸಹಕಾರ ಸಾಕ್ಷಾತ್ಮವಿದೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದತ್ತವಧೂತ ಶ್ರೀ ಗುರು ಸಾಕ್ಷಾತ ನಿತ್ಯವಾಗಿಹ್ಯ ನಿಜ ನಿರ್ಗುಣನೀತ ಪ ನಿರ್ಗುಣ ನಿಶ್ಚಲ ಗಗನಾಕಾರ ಸುಗುಣದಲಿ ತಾನೆ ಸಹಕಾರ 1 ಸಹಕಾರನಹುದು ಸದ್ಗುರುನಾಥ ಬಾಹ್ಯಾಂತ್ರದಲಿ ತಾನೆ ಪ್ರಖ್ಯಾತ 2 ಪ್ರಖ್ಯಾತನಹುದು ತ್ರಿಗುಣರಹಿತ ಮುಖ್ಯಮುನಿಗಳಿಗೆ ಮೋಕ್ಷ ಸುದಾತ 3 ದಾತನಹುದು ತ್ರೈಲೋಕ್ಯದೊಳೀತ ಈತನೆ ವಿಶ್ವದೊಳಗೆ ದೈವತ 4 ದೈವತನಹುದು ದೇವಾದಿಗಳಾತ್ಮ ಮೂರ್ತಿ ಶ್ರೀಹರಿ ಸರ್ವಾತ್ಮ 5 ಹರಿ ಸರ್ವಾತ್ಮನಾಗಿಹ ನಿಜಪೂರ್ಣ ಪರಿಪರಿ ಆಗುವ ಅಗಣಿತಗುಣ 6 ಅಗಣಿತಗುಣ ಅಗಾಧ ಅಪಾರ ನಿಗಮಗೋಚರ ನಿರುಮಪ ನಿರ್ಧಾರ 7 ನಿರ್ಧಾರನು ನಿಜನಿಷ್ಟರಪ್ರಾಣ ಸಾಧಕರಿಗೆ ಸದ್ಗತಿ ಸಾಧನ 8 ಸಾಧನದೊಡೆಯನಹುದು ಶಾಶ್ವತ ಆದಿದೇವ ಸಕಲಾಗಮ ಪೂಜಿತ 9 ಪೂಜಿತ ಬ್ರಹ್ಮಾದಿಗಳ ಕೈಯ ಮೂಜಗದೊಳು ರಾಜಿಸುತಿಹ 10 ರಾಜಿಸುತಿಹ ತಾ ರಾಜರಾಜೇಂದ್ರ ಸುಜನರ ದೃಷ್ಟಿಯೊಳಿಡದಿಹ ಸಾಂದ್ರ 11 ಸಾಂದ್ರವಾಗಿಹನು ಸಾರ್ವಭೌಮ ಇಂದ್ರಾಧಿಕÀರೊಂದಿತ ಮಹಿಮ 12 ಮಹಿಮನಹುದು ಮುನಿಜನ ಮಂದಾರ ಧ್ಯಾಯಿಸುವರ ನಿಜ ಸಾಕ್ಷಾತಾರ 13 ಸಾಕ್ಷಾತಾರ ಶ್ರೀಗುರು ಜಗದೀಶ ಮೋಕ್ಷಾಧಿಕರಿಗಳಾತ್ಮ ಉಲ್ಹಾಸ 14 ಉಲ್ಹಾಸವೆ ನಿಜ ವಸ್ತುವೆ ತಾನು ಕಲ್ಪದ್ರುಮ ನಿಜ ಕಾಮಧೇನು 15 ಕಾಮಧೇನುವಾಗಿ ರಕ್ಷಿಸುವ ಬ್ರಹ್ಮನಿಷ್ಠರ ಹೃದಯದಲಿ ಭಾಸಿಸುವ 16 ಭಾಸುವ ಭಾಸ್ಕರಕೋಟಿ ಪ್ರಕಾಶ ಋಷಿ ಮುನಿಗಳ ನಿಜಮಾನಸ ಹಂಸ 17 ಹಂಸನಾಗಿ ವಿಶ್ವಂಭರಿತ ಸೂಸುವ ಸರ್ವಾಂತ್ರಲಿ ಅನಂತ 18 ಅನಂತ ಕೋಟಿ ಬ್ರಹ್ಮಾಂಡನಾಯಕ ಅನುಭವಿಗಳಿಗೆ ದೋರುವ ಕೌತುಕ 19 ಕೌತುಕದೋರಿದ ಕರುಣದಲ್ಯನಗೆ ಜೀವಪಾವನಗೈಸಿದ ಜಗದೊಳಗೆ 20 ಜಗದೊಳು ಸ್ತುತಿಸುವೆನು ಅನುದಿನ ಶ್ರೀಗುರು ದತ್ತವಧೂತ ಪೂರ್ಣ 21 ಪೂರ್ಣ ಸ್ಮರಿಸುವೆನು ಮನದೊಳು ನೋಡಿ ಪುಣ್ಯ ಪ್ರಭೆಯ ನಿಜ‌ಘನ ಒಡಗೂಡಿ22 ಒಡಗೂಡಿದ ನಿಜಾನಂದದ ಗತಿಯು ಕ್ಷಿತಿಯೊಳು ಕೊಂಡಾಡಿದ ಮಹಿಪತಿಯು 23
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡು ಮನವೆ ನಿನ್ನೊಳಾತ್ಮನ ನೋಡು ಮನವೆ ಧ್ರುವ ಸಾಧುಸಂಗವ ನೀ ಮಾಡಿ ಭೇದ ಬುದ್ಧಿಯ ಹೋಗಾಡಿ ಆದಿತತ್ವವ ನೀ ನೋಡಿ ಸದಮಲಾನಂದ ಕೂಡಿ1 ಕಾಮಕ್ರೋಧವ ಕಳೆದು ಮಮತಾ ಮಾಯವನಳಿದು ತಾಪ ತೊಳೆದು ಶಮದಮಾದಿ ತಿಳಿದು 2 ನಾನು ನೀನೆಂಬುದು ನೀಗಿ ಜ್ಞಾನದಿಂದ ಗುಪ್ತನಾಗಿ ಭಾನುಕೋಟಿತೇಜನಂಘ್ರಿ ಬೆರೆದು ನಿಶ್ಚಿಂತನಾಗಿ 3 ಅವಿದ್ಯುಪಾಧಿಯ ಜರಿದು ಮೂವಿಧ ಮದ ಮುರಿದು ಪವಿತ್ರ ಪ್ರಣವರಿದು ಸುವಿದ್ಯ ಸುಖಬೆರೆದು 4 ಬಾಹ್ಯಾಂತ್ರದೊಳಿಹ ಪೂರ್ಣ ಮಹಾಗುರುನಿರಂಜನ ಇಹ ಪರತ್ರ ಸಾಧನ ಮಹಿಪತಿ ಅಂತರಾತ್ಮನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾದ ನಾ ನಿಮ್ಮ ಧ್ರುವ ಮಹಾಮಹಿಮೆ ನೀ ದಾನತಹುದೋ ಶ್ರೀ ಅವಧೂತ ಗುಹ್ಯಗುಪಿತ ಶ್ರೀನಾಥ ಸುಹೃದಯದಲಿ ಸಾಕ್ಷಾತ 1 ಅನಾಥರ ಸಹಕಾರ ಮುನಿಜನರ ಮಂದಾರ ಘನಗುರು ಜ್ಞಾನಾಸಾಗರ ದೀನಜನರ ಉದ್ಧಾರ 2 ಮಹಾಗುರು ನಿಜನಿಧಾನ ಬಾಹ್ಯಾಂತ್ರದಲಿ ಪರಿಪೂರ್ಣ ಮಹಿಪತಿ ಜೀವನಪ್ರಾಣ ಇಹ್ಯಪರ ನೀ ಭೂಷಣ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಫುಗಡಿ ಹಾಕಿ ಹೀಂಗ ಸುಗಮದಿಂದ ಬ್ಯಾಗ ತ್ರಿಗುಣ ತಿಗಡತನ ಬಿಟ್ಟು ಮಿಗಿಲಮಿರುವ್ಹಾಂಗ ಧ್ರುವ ಬಿಗಿದ ಗಚ್ಚಿಕಟ್ಟಿ ಜಗದೊಳ್ಹಾಕಿ ಫುಗಡಿ ಬಗೆದು ಸಾಧುಸಂಗದೊಳಾಡಿದಾಕಿ ಸುಗಡಿ ಇಗಡತನ ಬಿಟ್ಟು ನೀಗಿ ನಿಜಗೂಡಿ ದುಗುಡ ಭಾವೆಲ್ಲ ಬಿಟ್ಟು ಫುಗಡಿ ಫೂಯೆಂದಾಡಿ 1 ದೇಹ ಭಾವಮರೆದು ಫುಗಡಿ ಹಾಕಿ ಬ್ಯಾಗೆ ಗುಹ್ಯಗೂಢವಿದೆ ನೋಡಿ ರಾಜಯೋಗ ಸೋಹ್ಯದೋರಿಗೊಡುವ ಸದ್ಗುರು ನಿನ್ನೊಳೀಗ ಬಾಹ್ಯಾಂತ್ರದೊಳು ಭಾಸುತಿಹ್ಯ ಬ್ರಹ್ಮಭೋಗ 2 ಫುಗಡಿ ಇದೇ ನೋಡಿ ಯೋಗಸಾಧನ ಮಾಡಿ ಹುಗುವರಿಯನೇ ಹೋಕು ಜಗದ್ಗುರುವಿನ ಕೂಡಿ ಜಗದೀಶನ ಮಹಿಮೆ ಬಗೆಬಗೆಯ ಕೊಂಡಾಡಿ ಸುಗಮಸಾಧನವೆಂದು ಮಹಿಪತಿ ಬೆರೆದ ಕೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ಸದ್ಗುರುವೆ ನಿಮ್ಮ ದಯದಕ್ಷಿ ಸುಭಿಕ್ಷ ದ್ರುವ ನಿಮ್ಮ ಅಭಯ ಹಸ್ತ ಬ್ರಹ್ಮಾನಂದದ ಸುಪ್ರಸ್ತ ನಮ್ಮ ಜೀವಕೆ ಪ್ರಶಸ್ತ ನಿಮ್ಮಿಂದೆ ಸ್ವಸ್ತ 1 ನಿಮ್ಮ ದಯಕರುಣ ಸಮ್ಯಙÁ್ಞನದ ಸ್ಫುರಣ ನಮ್ಮ ಜನ್ಮದುದ್ಧರಣ ನಿಮ್ಮಿಂದ ಪೂರ್ಣ 2 ಸಾಹ್ಯಮಾಡುವ ನಿಮ್ಮ ಬಾಹ್ಯಾಂತ್ರದಲಿ ಸಂಭ್ರಮ ಮಹಿಪತಿಗಾನಂದೋ ಬ್ರಹ್ಮ ಇಹಪರ ಸುಪ್ರೇಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹೊಂದಬೇಕು ನಿಜನೋಡಿ ತಂದೆ ಗುರುನಾಥ ಬೋಧ ಧ್ರುವ ಪರಧನ ಪರಸತಿಯರ ಬಿಟ್ಟರೆ ಸಾಕು ಹೇಸಿ ತೋರುವುದು ತನ್ನೊಳು ಪ್ರತ್ಯಕ್ಷ ವಾರಣಾಸಿ ಸುರಿಮಳೆಗರೆವುದು ಹೆಜ್ಜೆಜ್ಜಿಗೆ ಪುಣ್ಯದ ರಾಶಿ ಅರಿತು ಏಕರಸವಾಗಿ ಸದ್ಗುರು ಸ್ಮರಿಸಿ 1 ಜನ್ಮಕೆ ಬಂದ ಮ್ಯಾಲೆ ಪುಣ್ಯಪಥ ಸಾಧಿಸಿ ಸನ್ಮತ ಸುಖಸಾರದೊಳು ಮನಭೇದಿಸಿ ಉನ್ಮನವಾಗಿ ಜೀವನ ಸದ್ಗತಿಗೈದಿಸಿ ಜನ್ಮಕೆ ಬೀಳುವ ಭವಬಂಧನ ಛೇದಿಸಿ 2 ಸಾಯಾಸದಿಂದ ಸಾಧಿಸಬೇಕು ಸಾಧುಸಂಗ ಗುಹ್ಯಗುರುತ ನೋಡಲಿಬೇಕು ಅಂತರಂಗ ಬಾಹ್ಯಾಂತ್ರದೋರುತಿದೆ ಸದ್ಗುರು ಪ್ರಾಣಲಿಂಗ ಭವ ಭಂಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು