ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಷ್ಟ ಕಷ್ಟವೋ ಕೃಷ್ಣ ದೃಷ್ಟಿಯಲಿ ನೋಡದಿರೆ ತುಷ್ಟಿಪಡಿಸಲು ನಿನ್ನ ನಾನೆಷ್ಟರವನಯ್ಯ ಪ ಭ್ರಷ್ಟನಾಗಿಹೆ ನಾ ಅಷ್ಟಾಂಗಯೋಗವ ತಿಳಿಯೆ ಒಂ- ದಿಷ್ಟು ಭಕುತಿಯ ಕೊಟ್ಟು ಕಡೆಹಾಯಿಸಯ್ಯ ಅ.ಪ ಸತ್ಯ ಅಸ್ತೇಯ ಬ್ರಹ್ಮಚರ್ಯ ಅಹಿಂಸಾ ಧೃತಿ ದಯಾ ಕ್ಷಮಾರ್ಜಿತ ಮಿತಭುಕ್ತವು ನಿತ್ಯ ಬಾಹ್ಯಾಂತರ ಶೌಚಾದಿ ದಶಗುಣ ಯುತವಾದಯಮ ಉಪಾಸನೆಗಳಿನಿತಿಲ್ಲವೋ ದೇವಾ 1 ನಿಯಮ ಮೊದಲಿಲ್ಲ ಜಪತಪ ಸಂತೃಪ್ತಿ ನಿಯತ ಸಿದ್ಧಾಂತ ಶ್ರವಣ ಲಜ್ಜಮತಿಯು ಶ್ರೀಯಃಪತಿಯ ಪೂಜನ ಆಸ್ತಿಕ್ಯವ್ರತ ದಾನೋ- ಪಾಯವಿಲ್ಲದೇ ಕಡೆ ಹಾಯ್ವುದೆಂತಯ್ಯ 2 ಘಾಸಿಯಾಗಿಹುದಯ್ಯ ಷಡ್ವಿಧಾಸನಗಳೂ ಸ್ವಸ್ತಿಕ ಭದ್ರಪದ್ಮ ಅರ್ಧಾಂಗಾಸನದಿ ಸಿದ್ಧ ಪರ್ಯಂಕಗಳೆಂಬ ಆಸನದಿ ಕುಳಿತು ನಾ ಧೇನಿಸಲರಿಯೆ ಹರಿಯೇ 3 ಪ್ರಾಣಾಯಾಮವ ಕ್ರಮವು ರೇಚಕ ಪೂರಕವು ದಣಿವಿಲ್ಲದೆ ಕುಂಭಕದ ಕ್ರಮವಿಲ್ಲ ತ್ರಾಣವಿಲ್ಲವೋ ವಾಯುಬಂಧ ಮಾಡಲರಿಯೆ ಪ್ರಾಣಪತಿ ನಿನ್ನ ಕರುಣವಿಲ್ಲದಾತನಕ 4 ವಿಷಯಾಭಿಲಾಷೆಯಿಂದ್ಹರಿದು ಹೋಯಿತು ಮನಸು ವಿಷಮವಾಗಿಹುದಯ್ಯ ಮತ್ಸಾಧನ ಪ್ರತ್ಯಾಹಾರ ಸಾಧನವಿಲ್ಲ ಕೃಷಿಮಾಡಿ ಸ್ಥಿರಮನದಿ ಧೇನಿಸಲು ನಾನರಿಯೆ 5 ಧಾರಣೋಪಾಯದೊಳು ಅಣುಮಾತ್ರ ನಾನರಿಯೆ ನರಕ್ರಿಮಿಯಾಗಿ ನಾ ಧರೆಯೊಳುಳಿದೆ ಅರಿಯೆ ಬಾಹ್ಯಾಂತರದಿ ಭೂತಪಂಚಕವಿರುವ ಪರಿ ತಿಳಿದು ಪ್ರಾಣವಾಯು ಸಡಿಲಬಿಡಲರಿಯೆ 6 ಧ್ಯಾನಿಸಲು ಏಕಾಗ್ರಚಿತ್ತವೇ ಎನಗಿಲ್ಲ ಸಂಸ್ತುತಿಸೆ ಸಂಪ್ರಜ್ಞಾ ಅಸಂಪ್ರಜ್ಞವೆಂಬ ಘನಸಮಾಧಿಯೊಳ್ ಪರಿವಿಲ್ಲದಲೆ ನಿನ್ನ ಕರುಣವೆಂತಾಗುವುದೋ ಶ್ರೀ ವೇಂಕಟೇಶಾ 7 ಶುದ್ಧವಾದ ದ್ವೈತತ್ರಯ ತಿಳಿಯದಲೆ ಮುಗ್ಧನಾಗಿಹೆ ನಾನಪರಿಶುದ್ಧನೊ ಶಬ್ದಗೋಚರ ನಿನ್ನ ಪರಿಶುದ್ಧ ಭಾವದಿಂ ಬುದ್ಧಿಪೂರ್ವಕ ತಿಳಿಯೆ ಬದ್ಧಪಾಮರನಯ್ಯ 8 ಕರಣತ್ರಯದಲಿ ಮಾಳ್ವ ಕ್ರಿಯೆಗಳೆಲ್ಲವು ಸತತ ಹರಿಯೇ ಬಿಂಬಕ್ರಿಯವ ನಾನರಿಯದೇ ಕರುಣಶರಧಿಯೆ ನೀ ಕೃಪೆಮಾಡಿ ಪೊರೆಯದಿರೆ ಉರಗಾದ್ರಿವಾಸವಿಠಲ ನಿನ್ನ್ಹ್ಹೊರತು ಗತಿಯುಂಟೆ 9
--------------
ಉರಗಾದ್ರಿವಾಸವಿಠಲದಾಸರು
ಇದೀಗ ಭಕುತಿಯು ಮತ್ತಿದೀಗ ಮುಕುತಿಯುಪ.ಮಧುದ್ವಿಷನ ಪದಕಮಲಕೆಮಧುಪನಂತೆ ಎರಗುತಿಹುದು ಅಪಶ್ರೀಕಾಂತ ಮೂರುತಿ ಬಾಹ್ಯಾಂತರದಿಏಕಾಂತದಿ ನೆನೆದಾನಂದ ತುಳುಕಾಡಿ ||ಮುಖ ವಿಕಾಸದಿ ತನುವ ಮರೆದುವಿಕಳ ಭಾವದಿ ಉಬ್ಬುಬ್ಬಿ ಕುಣಿವುದು 1ಡಂಭವ ಸಾರುವರತ್ತತ್ತಜಡಿದುಕುಂಭಕ ರೇಚಕ ಪೂರಕವಿಡಿದು ||ಅಂಬುಧಿಶಾಯಿ ಪದಾಂಬುಜ ವೀಕ್ಷಿಸಿಬಿಂಬವ ಕಾಂಬುವ ಹಂಬಲವಿಡಿವುದು 2ಕಂಡವರ ಕಾಲಿಗೆ ಕುಮನುಜರಿಗೆಮಂಡೆಯ ಬಾಗದೆ ಪರೇಶ ಕೊಟ್ಟಷ್ಟು ||ಉಂಡು ಸಜ್ಜನರ ಕಂಡು ಸುಖಿಸಿ ಪಾಷಂಡ ಸಂಭಾಷಣೆ ಸೋಕದೆ ಬಾಳ್ವುದು 3ತಪುತಾರ - ಕಂಬುಲಾಂಛನ ಪಿಡಿದುಗುಪಿತ ಮಂತ್ರಗಳೊರೆವ ಗುರುಗ -ಳುಪದೇಶ ಕ್ರಮವ ಮೀರದೆ ಇತರಕಪಟಬಿಟ್ಟು ನಲಿದು ಸುಖಿಪುದು4ಸದ್ಭಕ್ತಿ ಸದ್ಧರ್ಮ ಮಾಡುತ ನೋಡುತಸದ್ವಿಷ್ಣು ಸಚ್ಛಾಸ್ತ್ರ ಹೇಳುತ ಕೇಳುತ ||ದುಗ್ಧ ಸಮುದ್ರೇಶ ಪುರಂದರವಿಠಲಗೆಇದ್ದ ಸಂಪದವ ತಪ್ಪದೆ ಒಪ್ಪಿಸುವುದು 5
--------------
ಪುರಂದರದಾಸರು