ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಂಸವಾಹನಪಿತನೆ _ ಹಂಸಾ ಢಿಭಿಕವೈರಿ ಶೌರಿ _ ಬಾ ಬಾ ಬಾ ಪ ಸಾಸಿರನಾಮದೊಡೆಯ ವಾಸವವಿನುತನೆ ಲೇಸಾಗಿಸ್ತುತಿಸುವೆ _ಬಾ ಬಾ ಬಾ ಅ ವೇದಾವಕದ್ದಂಥ ಉದ್ದಂಡ ದೈತ್ಯನ ಮರ್ಧಿಸಿ ವೇದವ ತಂದು ವೇಧನ ಸಲಹಿದ ಮತ್ಸ್ಯ ಬಾ ಬಾ ಬಾ 1 ಸಿಂಧು ವಿನೊಳಗಿದ್ದ ಮಂದರಗಿರಿಯನ್ನು ಬಂದು ಬೆನ್ನಿಲಿಪೊತ್ತು ತಂದು ಪೀಯೂಷವ ಚಂದದಿ ಸಲಹಿದ ಕೂರ್ಮಸ್ವರೂಪನೆ _ ಬಾ ಬಾ ಬಾ 2 ಕನಕನೇತ್ರನ ಕೊಂದು ಕಾಂತೆಯಹಿಡಿದೆತ್ತಿ ಕನಕಗರ್ಭನಿಗೊಲಿದ ಕಾರುಣ್ಯನಿಧಿಚಂದ್ರ ಕ್ರೋಢ ಯಜ್ಞ ಸ್ವರೂಪನೆ _ ಬಾ ಬಾ ಬಾ 3 ತರುಳನಮೊರೆಕೇಳಿ ದುರುಳನ ಕರುಳನೆ ಬಗೆದು ಕೊರಳೊಳು ಕರುಳ ಧರಿಸಿ ಸುರರನ್ನು ಪೊರೆದಂಥ ಸರ್ವವ್ಯಾಪಿ ಕರುಣಿಯೆ ಮೂರ್ತಿ _ ಬಾ ಬಾ ಬಾ 4 ಅನುಜನ ಪೊರೆಯಲು ತನುವನು ಮರೆಸಿಕೊಂಡು ದಾನವನು ಬೇಡುತ ಬಲಿ ಯನು ತುಳಿದು ಪೊರೆದ ಘನ್ನ ಮಹಿಮ ವಟು ವಾ ಮನ ರೂಪಿಯೆ _ ಬಾ ಬಾ ಬಾ 5 ಕೊಡಲಿಯ ಪಿಡಿಯುತ ಒಡೆಯರ ತರಿದು ಕಡಿದು ಮಾತೆಯ ಪಿತ ನುಡಿಯನು ಸಲಿಸಿದ ಚಂಡವಿಕ್ರಮ ಮಹಿಮ ಭಾರ್ಗವ ಮೂರುತಿ _ ಬಾ ಬಾ ಬಾ 6 ಕಾಂತೆಯನೆಪದಿಂದ ಕದನವ ಹೂಡಿಕೊಂಡು ಅಂತಕಸದನಕೆ ಅರಿಗಳ ತಳ್ಳುತ ಶಾಂತತೆ ಬೀರಿಪೊರೆದ ದಶರಥ ರಾಮನೆ _ ಬಾ ಬಾ ಬಾ 7 ಚೋರತನದಿ ಬಲು ಬೆಣ್ಣೆಯ ಮೆಲ್ಲುತ ಜಾರತನದಿ ಋಷಿ ಸ್ತ್ರೀಯರಿಗೊಲಿದಂಥ ಮಾರಜನಕ ಶ್ರೀ ರುಕ್ಮಿಣಿ ಕೃಷ್ಣ _ ಬಾ ಬಾ ಬಾ 8 ವೇದಗೋಚರ ವಿಶ್ವ ವೇದ ಬಾಹ್ಯರಿಗೆಲ್ಲ ವೇದ ವಿರುದ್ಧವಾದ ವಾದಗಳ ತೋರಿ ನಿಂದು ಬೆತ್ತಲೆ ಮೆರದ ಬೌದ್ಧ ಸ್ವರೂಪನೆ _ ಬಾ ಬಾ ಬಾ 9 ಕಲಿಬಾಧೆ ಹೆಚ್ಚಾಗೆ ಕಲಿಯುಗ ಕೊನೆಯಲ್ಲಿ ಮಲಿನಾರ ಮರ್ಧಿಸಿ ಉಳಿಸಲು ಧರ್ಮವ ಚಲುವ ರಾಹುತನಾದ ಕಲ್ಕಿ ಸ್ವರೂಪನೆ _ ಬಾ ಬಾ ಬಾ 10 ಸತ್ಯಸಂಕಲ್ಪನೆ ನಿತ್ಯಸ್ವರೂಪನೆ ಉತ್ತಮನೀನೆಂದು ಒತ್ತೊತ್ತಿ ಪೊಗಳುವೆ ಭೃತ್ಯನು ನಿನ್ನವನು ಕಣ್ಣೆತ್ತಿ ನೋಡುತ _ ಬಾ ಬಾ ಬಾ11 ಏಕರೂಪನೆ ನಿನ್ನನೇಕ ರೂಪಂಗಳ ಸಾಕಲ್ಯದಿಂದಲಿ ಶ್ರೀಕಾಂತೆ ಅರಿಯಳು ಕಾಕುಮತಿಯು ನಾನು ಎಂತು ವರ್ಣಿಸಲಯ್ಯ _ ಬಾ ಬಾ ಬಾ12 ಪೂರ್ಣಸ್ವರೂಪನೆ _ ಪೂರ್ಣ ಗುಣಾಬ್ಧಿಯೆ ಪೂರ್ಣನಂದಾನೆ ಪೂರ್ಣ ಸ್ವತಂತ್ರನೆ ಪೂರ್ಣಬೋಧರ ಪೂರ್ಣ ಕರುಣಾವ ಬೀರಿಸು _ ಬಾ ಬಾ ಬಾ 13 ಮಾತುಮಾತಿಗೆ ನಿನ್ನ ನಾಮದಸ್ಮರಣೆಯ ನಿತ್ತು ಪಾಲಿಸು ಎನ್ನ ಮೃತ್ಯೋಪಮೃತ್ಯುವೆ ದೇವ ಭಕ್ತಿಭಾಗ್ಯವನಿತ್ತು ಮನ್ನಿಸಿ ಸಲಹುತ _ ಬಾ ಬಾ ಬಾ 14 ದೋಷದೂರನೆ ನಿನ್ನ ದಾಸನುನಾನಯ್ಯ ವಾಸವ ಜಯಮುನಿ ವಾತನೊಳ್ವಾಸಿಪ ಈಶ ಸಿರಿಕೃಷ್ಣ ವಿಠಲರಾಯನೆ ಬೇಗ ಬಾ ಬಾ ಬಾ 15
--------------
ಕೃಷ್ಣವಿಠಲದಾಸರು
ಶ್ರೀಭಾವಸಂವತ್ಸರ ಸ್ತೋತ್ರ151ಭೇಶಸರ್ವೇಶ್ವರ ಶ್ರೀಪತಿಯೇ ಈಭಾವಸಂವತ್ಸರ ನಿಯಾಮಕÀನು ನಮೋ ನಮೋ ಸ್ವಾಮಿ ಪಇಲ್ಲಿ ಬರುವ ನುಡಿಗಳ ಅರ್ಥ ಅನುಸಂಧಾನಗಳಎಲ್ಲ ವೇದಆಗಮಗಾಯತ್ರಿ ಮಹಾಮಂತ್ರ ಬಾಹ್ಯರಿಗೆ ಅಲ್ಲಮೀರುವರಿಗೆ ಒಳ್ಳೇದು ಅಲ್ಲ 1ಶ್ರವಣ ಪಠನ ಫಲಮೋಕ್ಷಸಾಧನ ಜ್ಞÕನಅವಾಂತರ ಫಲ ಕೀರ್ತಿ ಯಶಸ್‍ಲಾಭ ಕಷ್ಟಕಲುಷÀನಾಶವಿವಾದ ಸಂವತ್ ಸಂಜ್ಞÕನ ಅಧೋಪ್ರಾಪ್ತಿಯಥಾಯೋಗ್ಯ2ಆಂಗೀರಸ ವರುಷ ಶ್ರವಣಕ್ಕೆ ಅನುಕೂಲ ಶ್ರೀ ಭಾವವುಮನನಕ್ಕೆ ಅನುಕೂಲ ಸಾಧನ ಈಗ ಈಭಾವಸಂವತ್ಸರ ಉತ್ತಮರೀತಿಯಲ್ಲಿ ಮಾಳು ಸುಧ್ಯಾನಕೆ 3ವೇದಪ್ರತಿಪಾದ್ಯ ಸರ್ವೋತ್ತಮ ಸರ್ವಸ್ವಾಮಿಯ ಸಾಕ್ಷಾತ್ಕಾರತನ್ನಿಚ್ಛೆ ಇಂದಲೇಈವಶ್ರೀ ವಿಷ್ಣು ಪ್ರೀತಿಕರ ಸಾಧನ4ಸದಾಗಮದಿಂದಲ್ಲೇ ಯಥಾಯೋಗ್ಯ ಸಂವೇದ್ಯ ವಿಷ್ಣುತ್ರಯೀಮಯನು ಧರ್ಮಮಯನು ತಪೋಮಯನು ಅವನೇಜಗಜ್ಜನ್ಮಾದಿ ಕರ್ತುತ್ಪಾದಿಗಳ ಕಲ್ಯಾಣತಮ ಮಹಿಮೆಗಳ 5ಶ್ರದ್ಧಾಭಕ್ತಿಯಿಂ ವಿಶೇಷ ಜಿಜ್ಞÕಸವ ಸೌಶೀಲ್ಯ ಗುಣವಂತಅಜಶಂಕರಾದಿಗಳಿಂ ಮಾಡಲ್ಪಟ್ಟ ಷಡ್ಗುಣೋಪಲಕ್ಷಿತ ಅನಂತಕಲ್ಯಾಣ ಗುಣರೂಪನಾದ ಭಗವಂತನ ಪ್ರಸಾದಲಭಿಸೇ ಸಾಧನಸುಧ್ಯಾನ 6ಭಗವಾನ್ಭೇಶಸರ್ವೇಶ್ವರ ಅಜನ ಪಿತ ಪ್ರಸನ್ನ ಶ್ರೀನಿವಾಸತನ್ನಿಚ್ಛೆ ಇಂದಲೇ ಸಜ್ಜೀವರಗೀವ ಯೋಗ್ಯತೆಅರಿತು ಅಪರೋಕ್ಷ್ಯ ಕರುಣಾಸಮುದ್ರ ಶ್ರೀಪ 7
--------------
ಪ್ರಸನ್ನ ಶ್ರೀನಿವಾಸದಾಸರು