ಒಟ್ಟು 6 ಕಡೆಗಳಲ್ಲಿ , 1 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ನಮ್ಮ ವೃತ್ತಿ ಸದ್ಗುರುಭಾವಭಕ್ತಿ ಧ್ರುವ ಇದೇ ನಮ್ಮ ಮನೆಯ ಸದ್ಗುರು ಸ್ಮರಣಿಯ ಇದೇ ನಮ್ಮ ವರ್ತನೆಯು ಸದ್ಗುರು ಪ್ರಾರ್ಥನೆಯು 1 ಇದೇ ನಮ್ಮ ಗ್ರಾಮ ಸದ್ಗುರು ದಿವ್ಯನಾಮ ಇದೇ ನಮ್ಮ ಸ್ತೋಮ ಸದ್ಗುರು ಆತ್ಮಾರಾಮ 2 ಇದೇ ನಮ್ಮ ಭೂಮಿ ಸದ್ಗುರು ಘನಸ್ವಾಮಿ ಇದೇ ನಮ್ಮ ಸೀಮಿ ಸದ್ಗುರು ಅಂತರ್ಯಾಮಿ 3 ಇದೇ ನಮ್ಮ ದೇಶ ಸದ್ಗರು ಉಪದೇಶ ಇದೇ ನಮ್ಮಭ್ಯಾಸ ಸದ್ಗುರು ಜಗದೀಶ 4 ಇದೇ ನಮ್ಮ ವಾಸ ಸದ್ಗುರು ಸಮರಸ ಗ್ರಾಸ ಸದ್ಗುರು ಪ್ರೇಮರಸ 5 ಇದೇ ನಮ್ಮ ವ್ಯವಸನ ಸದ್ಗುರು ನಿಜಧ್ಯಾಸ ಇದೇ ನಮ್ಮ ಆಶೆ ಸದ್ಗುರು ಸುಪ್ರಕಾಶ6 ಇದೇ ನಮ್ಮಾಶ್ರಮ ಸದ್ಗುರು ನಿಜದ್ಯಾಸ ಇದೇ ನಮ್ಮುದ್ದಿಮೆ ಸದ್ಗುರು ಸಮಾಗಮ 7 ಇದೇ ನಮ್ಮ ಭಾಗ್ಯ ಸದ್ಗತಿ ಸುವೈರಾಗ್ಯ ಇದೇ ನಮ್ಮ ಶ್ರಾಧ್ಯ ಸದ್ಗುರು ಪಾದಯೋಗ್ಯ 8 ಇದೇ ನಮ್ಮ ಕುಲವು ಸದ್ಗುರು ದಯದೊಲವು ಇದೇ ನಮ್ಮ ಬಲವು ಸದ್ಗುರು ದಯಜಲವು 9 ಇದೇ ನಮ್ಮಾಭರಣ ಸದ್ಗುರು ದಯ ಕರುಣ ಇದೇ ದ್ರವ್ಯ ಧನ ಸದ್ಗತಿ ಸಾಧನ 10 ಕಾಯ ಸದ್ಗುರುವಿನುಪಾಯ ಇದೇ ನಮ್ಮ ಮಾಯ ಸದ್ಗುರುವಿನ ಅಭಯ 11 ಇದೇ ನಮ್ಮ ಪ್ರಾಣ ಸದ್ಗುರು ಚರಣ ಇದೇ ನಮ್ಮ ತ್ರಾಣ ಸದ್ಗುರು ದರುಶನ 12 ಇದೇ ನಮ್ಮ ಜೀವ ಸದ್ಗುರು ವಾಸುದೇವ ಇದೇ ನಮ್ಮ ದೇವ ಸದ್ಗುರು ಅತ್ಮಲೀವ್ಹ 13 ಇದೇ ನಮ್ಮ ನಾಮ ಸದ್ಗುರು ಸದೋತ್ತಮ ಇದೇ ನಮ್ಮ ನೇಮ ಸದ್ಗುರು ಸರ್ವೋತ್ತಮ 14 ಇದೇ ನಮ್ಮ ಕ್ಷೇತ್ರ ಸದ್ಗುರು ಬಾಹ್ಯಂತ್ರ ಗಾತ್ರ ಸದ್ಗುರು ಘನಸೂತ್ರ 15 ಇದೇ ನಮ್ಮ ತೀರ್ಥ ಸದ್ಗುರು ಸಹಿತಾರ್ಥ ಇದೇ ನಮ್ಮ ಸ್ವಾರ್ಥ ಸದ್ಗುರು ಪರಮಾರ್ಥ 16 ಇದೇ ನಮ್ಮ ಮತ ಸದ್ಗುರು ಸುಸನ್ಮತ ಪಥ ಸದ್ಗುರುಮಾರ್ಗ ದ್ವೈತ 17 ಇದೇ ನಮ್ಮ ವೇದ ಸದ್ಗುರು ಶ್ರೀಪಾದ ಇದೇ ನಮ್ಮ ಸ್ವಾದ ಸದ್ಗುರು ನಿಜಬೋಧ 18 ಇದೇ ನಮ್ಮ ಗೋತ್ರ ಸದ್ಗುರು ಸರ್ವಾಂತ್ರ ಸೂತ್ರ ಸದ್ಗುರು ಚರಿತ್ರ 19 ಇದೇ ಸದ್ಯ ಸ್ನಾನ ಸದ್ಗುರು ಕೃಪೆ ಙÁ್ಞನ ಇದೇ ಧ್ಯಾನ ಮೌನ ಸದ್ಗುರು ನಿಜಖೂನ 20 ಇದೇ ಜಪತಪ ಸದ್ಗುರು ಸ್ವಸ್ವಸೂಪ ಇದೇ ವೃತ್ತುದ್ಯೋಪ ಸದ್ಗುರು ಸುಸಾಕ್ಷೇಪ 21 ಇದೇ ನಿಮ್ಮ ನಿಷ್ಠಿ ಸದ್ಗುರು ಕೃಪಾದೃಷ್ಟಿ ಇದೇ ನಮ್ಮಾಭೀಷ್ಠಿ ಸದ್ಗುರು ದಯಾದೃಷ್ಟಿ 22 ಇದೇ ಪೂಜ್ಯಧ್ಯಕ ಸದ್ಗುರು ಪ್ರತ್ಯಕ್ಷ ಇದೇವೆ ಸಂರಕ್ಷ ಸದ್ಗುರು ಕಟಾಕ್ಷ 23 ಇದೇ ನಮ್ಮ ಊಟ ಸದ್ಗುರು ದಯನೋಟ ಇದೇ ನಮ್ಮ ಆಟ ಸದ್ಗುರು ಪಾದಕೂಟ 24 ಮಾತೃಪಿತೃ ನಮ್ಮ ಸದ್ಗುರು ಪರಬ್ರಹ್ಮ ಭ್ರಾತೃಭಗಿನೀ ನಮ್ಮ ಸದ್ಗುರು ಪಾದಪದ್ಮ 25 ಇದೇ ಬಂಧು ಬಳಗ ಸದ್ಗುರುವೆ ಎನ್ನೊಳಗೆ ಇದೇ ಸರ್ವಯೋಗ ಬ್ರಹ್ಮಾನಂದ ಭೋಗ26 ಇದೇ ಸರ್ವಸೌಖ್ಯ ಮಹಿಪತಿ ಗುರುವಾಕ್ಯ ಇದೇ ನಿಜ ಮುಖ್ಯ ಸದ್ಗತಿಗಿದೆ ಐಕ್ಯ 27
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎನ್ನಪರಾಧವೇನು ನಿನ್ನ ಸೂತ್ರಾಡಿಸಿದ್ಹಾಂಗ ಆಡುವೆ ಹರಿ ಧ್ರುವ ಆಡಿಸಿದರಾಡುವೆ ನೋಡಿಸಿದರೆ ನೋಡುವೆ ಮಾಡಿಸಿದರೆ ಮಾಡುವೆ ಪ್ರೇರಿಸಿದ್ಹಾಂಗ 1 ನಡೆಸಿದರ ನಡೆಯುವೆ ಕೂಡಿಸಿದರ ಕೂಡುವೆ ನುಡಿಸಿದರೆ ನುಡಿಯುವೆ ಚೇತರಿಸಿದಂತೆ 2 ಉಡಿಸಿದರೆ ಉಡುವೆ ತೊಡಿಸಿದರೆ ತೊಡುವೆ ಇಡಿಸಿದರೆ ನಾ ಇಡುವೆ ಸರ್ವಭೂಷಣ 3 ಹೇಳಿಸಿದರೆ ಹೇಳುವೆ ಕೇಳಿಸಿದರೆ ಕೇಳುವೆ ಆಳಿಸಿದರೆ ಆಳುವೆ ಅನುವಾದ್ಹಾಂಗ ನೀ 4 ಮಲಗಿಸಿದರೆ ಮಲಗುವೆ ಸುಖಗೈಸಿದ್ಹಾಂಗ 5 ನೇಮಿರೆ ನೀವಂದು ನಾ ಮಾಡುವದಿನ್ನೊಂದು ನಿಮಿತ್ಯಮಾಡಿದೋರುದು ಸೋಜಿಗಿದೊಂದು 6 ಎನ್ನ ಬಾಹ್ಯಂತ್ರ ಪೂರ್ಣ ಚನ್ನಾಗಿರೆ ನೀ ಕರುಣ ಅನುದಿನ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಾಕರನೀತ ಕರಿಭಯ ಹರಿದಾತ ಹರಿಪರಂದೈವೀತ ಗುರುನಾಥ ಧ್ರುವ ಮೂರುಗುಣರಹಿತ ಮೂರುಲೋಕ ವಂದಿತ ಮುರಹರನಹುದೀತ ಗುರುನಾಥ 1 ಸುರಜನ ಪೂಜಿತ ಪರಮಾನಂದಭರಿತ ತಾರಕನಹುದೀತ ಗುರುನಾಥ 2 ಪತಿತಪಾವನೀತ ಪಿತಾಮಹನ ಪಿತ ದಾತನಹುದೀತ ಗುರುನಾಥ 3 ಅನುದಿನ ಸಾಕ್ಷಾತ ದೀನದಯಾಳುನೀತ ಗುರುನಾಥ 4 ಭಕ್ತವತ್ಸಲನೀತ ಶಕ್ತಸದ್ಗುರುನಾಥ ಮುಕ್ತಿದಾಯಕನೀತ ಗುರುನಾಥ 5 ಜನವನದೊಳಗೀತ ಮನೋಭಾವಪೂರಿತ ಆನಂದೋ ಬ್ರಹ್ಮನೀತ ಗುರುನಾಥ6 ಗುಹ್ಯಕೆ ಗುಹ್ಯನೀತ ಬಾಹ್ಯಂತ್ರ ಸದೋದಿತ ಮಹಾಮಹಿಮನೀತ ಗುರುನಾಥ 7 ಇಹಪರ ನಮಗೀತ ಮಹಿಪತಿ ಪ್ರಾಣನಾಥ ಸಹಾಕರನಹುದೀತ ಗುರುನಾಥ 8
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯಬೇಕೆನ್ನ ಶ್ರೀ ದೇವಾಧಿದೇವಿಣಿ ದಯವುಳ್ಳಸ್ವಾಮಿ ಸಹಕಾರಿ ನಾರಾಯಣಿ ಧ್ರುವ ಕರುಣಾನಂದಗುಣ ಶರಣ ಸಂರಕ್ಷಣಿ ದುರಿತ ವಿಧ್ವಂಸಿನಿ 1 ಘನಸುಖದಾಯಿಣಿ ದೀನ ಉದ್ಧಾರಣಿ ಶಿಖಾಮಣಿ ನೀನೆ ಶ್ರೀ ಲಕ್ಷುಮಿಣಿ 2 ಬಾಹ್ಯಂತ್ರ ವ್ಯಾಪಿಣಿ ಮಹಾಗುರು ಸ್ವರೂಪಿಣಿ ಸಾಹ್ಯದಲಿ ನೀ ಪೂರ್ಣ ಮಹಿಪತಿಯ ಸ್ವಾಮಿಣಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವಾಧಿದೇವ ನೀನಹುದು ಸಾಕ್ಷಾತ ಭಾವಿಸುವರಾತ್ಮ ಭಜಕರ ಪ್ರಾಣದಾತ ಧ್ರುವ ಸುಜನ ಮನೋಹರ ಮೂಜಗ ಆಧಾರ ಭಜಕ ಭಯಹರ 1 ಕರುಣಸಾಗರ ಪರಮ ಉದಾರ ದುರಿತ ಸಂಹಾರ 2 ಬಾಹ್ಯಂತ್ರಲಿವ್ಹ ಇಹಪರ ಕಾವ ಮಹಿಪತಿಯ ರಕ್ಷಿಸುವ ಶ್ರೀ ದೇವ ದೇವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಕಲಸುಖ ಸಂತೋಷ ಸುಲಭದಲ್ಯಾಹುದು ಭವಭವಯದ ನಾಶ 1 ಕರೆಸುವದಾನಂದ ಹರುಷ ಹರಿಸುವದು ಕಲಿಮಲಕಲುಷ ಪರಿಶೋಷಿಸುವದು ಮಹಾಪಾತಕ ದೋಷ 2 ಸ್ವಹಿತ ಸಾಧನದಸು ಉಪದೇಶ ಬಾಹ್ಯಂತ್ರ ದೋರುವ ಪ್ರಕಾಶ ಮಹಿಪತಿಗಿದೆ ನಿತ್ಯಾನುಭವದುಲ್ಲಾಸ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು