ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೂ ಸಂಗಡ ಬಾಹೋರಿಲ್ಲ ಪ ನಾರಾಯಣ ನಾಮ ನೆರೆ ಬಾಹೋದಲ್ಲದೆ ಅ ಪರಿಯಂತ ಗರ್ಭದಲಿಹೆತ್ತು ಅತ್ಯಂತ ನೋವು ಬೇನೆಗಳಿಂದಲಿತುತ್ತು ವಸ್ತ್ರವನಿಕ್ಕಿ ಸಲಹಿದಾ ತಾಯ್ತಂದೆಹೊತ್ತುಗಳೆವರಲ್ಲದೆ ಬೆನ್‍ಹತ್ತಿ ಬಹರೆ 1 ಹರಣ ದಾರು ಗತಿಯೆಂದಳುವಳು2 ಮನೆ ಮಕ್ಕಳು ತಮ್ಮ ಧನಕೆ ಬಡಿದಾಡುವರುಧನಕಾಗಿ ನಿನ್ನನೆ ನಂಬಿದವರುಅನುಮಾನವೇಕೆ ಜೀವನು ತೊಲಗಿದಾಕ್ಷಣದಿಇನ್ನೊಂದು ಅರಗಳಿಗೆ ನಿಲ್ಲಗೊಡರು 3 ಸುತ್ತಲು ಕುಳ್ಳಿರ್ದ ಮಿತ್ರ ಬಾಂಧವರೆಲ್ಲಹೊತ್ತು ಹೋದೀತು ಹೊರಗೆ ಹಾಕೆನುವರುಹಿತ್ತಲಾ ಕಸಕಿಂತ ಅತ್ತತ್ತ ಈ ದೇಹಹೊತ್ತುಕೊಂಡೊಯ್ದು ಅಗ್ನಿಯಲಿ ಬಿಸುಡುವರು 4 ಹರಣ ಹಿಂಗದ ಮುನ್ನು ಹರಿಯ ಸೇವೆಯ ಮಾಡಿಪರಗತಿಗೆ ಸಾಧನವ ಮಾಡಿಕೊಳ್ಳೊಕರುಣನಿಧಿ ಕಾಗಿನೆಲೆಯಾದಿಕೇಶವರಾಯನನಿರುತದಲಿ ನೆನೆನೆನೆದು ಸುಖಿಯಾಗೊ ಮನುಜ5 * ಈ ಕೀರ್ತನೆ ಪುರಂದರಾಸರ ಅಂಕಿತದಲ್ಲೂ ಇದೆ.
--------------
ಕನಕದಾಸ
ಎಳ್ಳು ಕಾಳಿನಷ್ಟು ಭಕ್ತಿ ಎನ್ನೊಳಗಿಲ್ಲ ಪ ಕಳ್ಳರಿಗೆ ಕಳ್ಳನಂತೆ - ಬೆಳ್ಳಕ್ಕಿಯಂದದಿ ಡಂಭಅ ಗಾಣದೆತ್ತಿನಂತೆ ಕಣ್ಣಮುಚ್ಚಿ ಪ್ರದಕ್ಷಿಣೆಯ ಮಾಡಿಕಾಣದೆ ತಿರುಗುವೆನೆರಡು ಕಣ್ಣಿದ್ದು ನಾನುಮಾಣಿಕ್ಯದ ರಾಶಿಯಲ್ಲಿ ಅಂಧಕರೈವರು ಕೂಡಿಆಣಿಮುತ್ತ ಹಿಡಿದು ಹಿಡಿದು ಬಿಡುವ ಭ್ರಮಿತನಯ್ಯ1 ಗುಂಡು ಮುಳುಗನ ಹಕ್ಕಿಯಂತೆ ಕಂಡ ಕಂಡ ನೀರ ಮುಳುಗಿಮಂಡೆ ಶೂಲೆ ಬಾಹೋದಲ್ಲದೆ ಗತಿಯ ಕಾಣೆನೊಮಂಡೂಕನಂದದಲಿ ನೀರ ತಡಿಯಲಿ ಕುಳಿತುಕೊಂಡುಮುಂಡೆ ಮುಸುಕನಿಕ್ಕಿ ಮೂಗು ಹಿಡಿದು ಬಿಡುವ ಭ್ರಮಿತನಯ್ಯಾ 2 ಇಕ್ಕುಳದ ಕೈಯಲ್ಲಿ ಹಿಡಿದ ಕಾದ ಕಬ್ಬಿಣದಂತೆಸಿಕ್ಕಿ ಸಿಡಿಮಿಡಿಗೊಂಬೆ ಗತಿಯ ಕಾಣದೆಹೊಕ್ಕುಳ ಹೂವಿನ ಬಾಡದಾದಿಕೇಶವನ ಮೊರೆಹೊಕ್ಕೆನಿಂದು ಮನ್ನಿಸಿ ಕಾಯೋ ದೇವದೇವೋತ್ತಮನೆ 3
--------------
ಕನಕದಾಸ
ದಾಸನಾಗೋ ಭವಪಾಶನೀಗೋ - ವಿಶೇಷನಾಗೋ ಪ ಏಸೊ ಕಾಯಂಗಳ ಕಳೆದು ಎಂಬತ್ತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದೆ ಈ ಶರೀರ ತಾನಲ್ಲ ತನ್ನದಲ್ಲಆಶೆಯು ತರವಲ್ಲ ಸ್ಥಿರವಲ್ಲ ಮುಂದೆ ಬಾಹೋದಲ್ಲಆಶಾಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನಪಾಶಕ್ಕೊಳಗಾಗದೆ ನಿರ್ದೋಷಿಯಾಗೊ - ಸಂತೋಷಿಯಾಗೊಅ ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರಏಸು ದೇಶ ತಿರುಗಿದರೆ ಬಾಹೋದೇನೊ - ಅಲ್ಲಿ ಆಹೋದೇನೊದೋಷನಾಶೆ ಕೃಷ್ಣವೇಣಿ ಗಂಗೆ ಗೋದಾವರಿ ಭವನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ - ಉಪವಾಸದಲ್ಲಿಮೀಸಲಾಗಿ ಮಿಂದು ಜಪತಪ ಹೋಮನೇಮಗಳಏಸು ಬಾರಿ ಮಾಡಿದರೂ ಫಲವೇನೊ - ಇದು ಚೆಲುವೇನೊವಾಸುದೇವನೆಂಬ ಒಳಗಿಹ ಹಂಸನ ಸೇರಿಲೇಸನುಂಡು ಮೋಸಗೊಳದೆ ಮುಕ್ತನಾಗೊ - ನೀ ಶಕ್ತನಾಗೊ1 ಅತ್ತಲೋ ಇತ್ತಲೋ - ಎತ್ತಲೋ ಈ ಸಂಸಾರಬತ್ತಲೆಗೆ ಬತ್ತಲೆ ನಿತ್ಯವಲ್ಲ - ಪರಿಮಿತಿ ಇಲ್ಲಕತ್ತಲೆ ಕಾವಳದೊಳು ಕಾಣಲಾರದೆ ನೀನುಸತ್ಯವೆಂಬ ದಾರಿಯನು ಸೇರಲಿಲ್ಲ - ಲೇಸು ತೋರಲಿಲ್ಲಉತ್ತಮ ಅ ಉ ಮ ಎಂಬ ಓಂಕಾರ ಬೀಜಾಕ್ಷರಚಿತ್ತದಲಿ ಗ್ರಹಿಸು ನೀ ಬಿಡಬೇಡ - ಬಿಟ್ಟು ಕೆಡಬೇಡಹೊತ್ತಾರೆಯಲೊ ಬೈಗಿನಲೊ ಆಗಲೊ ಈಗಲೊ ಕಾಯನಿತ್ಯವೆಂದು ಸ್ಥಿರವೆಂದು ನಂಬಬೇಡ - ನಿನಗೆ ಡಂಬ ಬೇಡ 2 ಆಯಿತೊ ಹೋಯಿತೊ ಏನಾಯಿತೊ ಈ ದೇಹಕ್ಕೆತಾಯಿ ಯಾರೊ ತಂದೆ ಯಾರೊ ಮಡದಿ ಯಾರೊ ಮಕ್ಕಳ್ಯಾರೊಮಾಯದೊಳು ಸಿಲುಕಿ ಬಲು ಕಾಲದಿಂದ ಶ್ರೀರಘುರಾಯನೆಂಬ ವಸ್ತುವಿನ ಸ್ಮರಣೆ ಬಿಟ್ಟು - ಭವದಿ ಮಮತೆ ಇಟ್ಟುನಾಯ ಬಾಯ ಅರಿವೆಯಂತೆ ನಾನಾ ಕೋಟಲೆಯಲಿ ಬಿದ್ದುಬಾಯಿ ಬಾಯಿ ಬಿಡುತಲಿ ಸಾವುದೇನೊ - ನೀ ನೋವುದೇನೊತ್ರಾಯಿ ತ್ರಾಯಿ ತ್ರಾಯಿಯೆಂದು ತ್ರೈಲೋಕ್ಯದೊಡೆಯ ಪುಣ್ಯದಾಯಕನ ಹೊಂದಿ ನೀ ಧನ್ಯನಾಗೊ - ಮುಕ್ತ ಮಾನ್ಯನಾಗೊ 3 ಸಿರಿ ಕಮಲೇಶನನ್ನುಒಂದು ಬಾರಿ ಅರುಹಿಂದ ನೆನೆಯಲಿಲ್ಲ - ಮನ ತಣಿಯಲಿಲ್ಲಬಂದು ಬಂದು ಭ್ರಮೆಗೊಂಡು ಮಾಯಾಮೋಹಕೆ ಸಿಕ್ಕಿನೊಂದು ಬೆಂದು ಒಂದರಿಂದ ಉಳಿಯಲಿಲ್ಲ - ಬಂಧ ಕಳೆಯಲಿಲ್ಲಸಂದೇಹವ ಮಾಡದಿರು ಅರಿವು ಎಂಬ ದೀಪ ಹಿಡಿದುಇಂದು ಕಾಣು ದೇಹದಲಿ ಪಿಂಡಾಂಡ - ಹಾಗೆ ಬ್ರಹ್ಮಾಂಡಇಂದಿರಾ ರಮಣನ ಧ್ಯಾನವನ್ನು ಮಾಡಿ ವಿವೇಕದಿ ಮುಕುಂದನಿಂದ ಮುಕುತಿಯ ಬೇಡು ಕಂಡ್ಯ - ನೀ ನೋಡು ಕಂಡ್ಯ 4 ತುಂಬಿ ಲಂಡ
--------------
ಕನಕದಾಸ
ನೆಚ್ಚಿದಿರೋ ಪ್ರಾಣಿ ಸಂಸಾರ ಸ್ಥಿರವೆಂದುಹುಚ್ಚು ಬುದ್ದಿಯಲಿ ನೀ ಕೆಡಬೇಡ ಪ.ಎಚ್ಚರಿತುಕೊಂಡು ಧರ್ಮದಿ ನಡೆ ಕಣ್ಣನುಮುಚ್ಚಿದ ಮೇಲುಂಟೆ - ನರಜನ್ಮ ಸ್ಥಿರವಲ್ಲ ಅಪಅಷ್ಟಕಂಬವನಿಕ್ಕಿ ತಾಕದುಪ್ಪರಿಗೆಯಕಟ್ಟಿದ ಮನೆ ಇದ್ದಂತಿಹುದುಹೊಟ್ಟೆತುಂಬ ಉಣದೆ ಧನವ ಗಳಿಸಿ - ಬಚ್ಚಿಟ್ಟಲ್ಲಿರದೆ ಸಂಗಡ ಬಾಹೋದಲ್ಲ 1ಅತಿ ಪ್ರೀತಿಯಿಂದ ಮದುವೆಯಾದ ಮೋಹದಸತಿ ತನ್ನ ಮರಣದ ಕಾಲಕ್ಕೆಗತಿಯಾವುದೆನುತಲೆ ಮರುಗಿದಪ್ಪಳಲ್ಲದೆಜತೆಯಾಗಿ ನಿನ್ನ ಸಂಗಡ ಬಾಹಳಲ್ಲ 2ಒಂದೊಂದು ಪರಿಯ ಬುಧ್ಧಿಯ ಪೇಳಿ ಸಲುಹಿದಕಂದ ನಿನ್ನಾವಸಾನ ಕಾಲಕೆಮುಂದೇನು ಸಂಸಾರ ನಡೆಸಲುಪಾಯವೇನೆಂದು ಚಿಂತಿಸುವ ಸಂಗಡ ಬಾಹನಲ್ಲ 3ನಾಟರಿಷ್ಟರು ಬಂಧು - ಬಳಗವುಹರಿ ಕೊಟ್ಟುದುಂಟಾದರೆ ಬಂದು ಉಣ್ಣುವರುಕಂತಕ ಬಂದರೆ ಹೊತ್ತು ಕಾಷ್ಠದೊಳಿಟ್ಟುಕಂತಿಯ ತಂದೊಟ್ಟಿ ಸುಡುವರು ಕಾಣೊ 4ಇಂತಿದು ಒಂದು ಪ್ರಯೋಜನ ನಿನಗಿಲ್ಲಅಂತ್ಯಕಾಲಕ್ಕೆ ಸಂಗಡ ಬಾಹುದುಕಂತುಜನಕ ನಮ್ಮ ಪುರಂದರವಿಠಲನಸಂತತ ಧ್ಯಾನದೊಳಿರು ಕಾಣೋ ಮನುಜಾ 5
--------------
ಪುರಂದರದಾಸರು