ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಲಕ್ಷ್ಮೀಸ್ತುತಿ ನಿವಾಸಿನಿ ಸಿರಿಯೆ ಪ ಬಾರೆ ಬಾರೆ ಕರವೀರ ನಿವಾಸಿನಿ ಬಾರಿಬಾರಿಗು ಶುಭ ತೋರು ನಮ್ಮ ಮನಗೆ ಅ.ಪ ಲೋಕಮಾತೆಯು ನೀನು ನಿನ್ನ ತೋಕನಲ್ಲವೆ ನಾನು ಆಕಳು ಕರುವಿನ ಸ್ವೀಕರಿಸುವಪರಿ ನೀ ಕರುಣದಿ ಕಾಲ್ಹಾಕು ನಮ್ಮ ಮನಗೆ 1 ನಿಗಮ ವೇದ್ಯಳೆ ನಿನ್ನ ನಾ ಪೊಗಳಲಾಪೆನಲ್ಲ ಮಗನಪ ರಾಧವ ತೆಗೆದೆಣೆಸದಲೆ ಲಗು ಬಗೆಯಿಂದಲಿ ಪನ್ನಗವೇಣಿ2 ಕಡೆಗೆ ನಮ್ಮನೆ ವಾಸ ಒಡೆಯ 'ಅನಂತಾದ್ರೀಶ' ಒಡೆಯನಿದ್ದಲ್ಲಿಗೆ ಮಡದಿಯು ಬಾಹೊದು ರೂಢಿಗುಚಿತವಿದು ನಡೆ ನಮ್ಮ ಮನೆಗೆ 3
--------------
ಅನಂತಾದ್ರೀಶರು
ಅಂತಕನ ದೂತರಿಗೆ ಕೃಪೆಯಿಲ್ಲವದರಿಂದ |ಚಿಂತೆಯನು ಬಿಟ್ಟು ಶ್ರೀ ಹರಿಯೆ ನೆನೆ ಮನವೆ ಪ.ದಿವರಾತ್ರಿಯೆನ್ನದೇ ತಿರುಗಿ ಲಂಪಟನಾಗಿ |ಸವಿಗಂಡ ಊಟಗಳ ಉಣಲರಿಯದೆ |ಅವನ ಕೊಂದು ಇವನ ಕೊಂದು ಅರ್ಥವನು ಗಳಿಸಿಕೊಂಡು |ಜವನ ದೂತರು ಬಂದು ಎಳೆವ ಹೊತ್ತರಿಯೆ 1ಮೊನ್ನೆ ಮದುವೆಯಾದೆ ಕರೆವುವು ಒಂದೆರಡಮ್ಮೆ |ನಿನ್ನೆ ಕೊಂಡೆನು ಕ್ಷೇತ್ರ ಫಲಬಾಹೊದು ||ಹೊನ್ನು ಹಣವುಂಟೆನಗೆ ಸಾಯಲಾರೆನು ಎನಲಾ |ತನ್ನ ದೂತರು ಬಂದು ಎಳೆವ ಹೊತ್ತರಿಯೆ 2ಹೊಸ ಮನೆಯ ಕಟ್ಟಿದೆನು ಗೃಹಶಾಂತಿ ಮನೆಯೊಳಗೆ |ಬಸಿರೆ ಹೆಂಡತಿ ಮಗನ ಮದುವೆಯು ನಾಳೆ ||ಹಸನವಾಗಿದೆ ಬದುಕು ಸಾಯಲಾರೆನು ಎನಲು |ವಿಷಮ ದೂತರು ಬಂದು ಎಳೆವ ಹೊತ್ತರಿಯೆ 3ಪುತ್ರ ಹುಟ್ಟಿದ ದಿವಸ ಹಾಲು ಊಟದ ಹಬ್ಬಮತ್ತೊಬ್ಬ ಮಗನ ಉಪನಯನ ನಾಳೆ ||ಅರ್ಥಿಯಾಗದೆ ಬದುಕು ಸಾಯಲಾರೆನು ಎನಲು |ಮೃತ್ಯು ಹೆಡತಲೆಯಲಿ ನಗುತಿಹುದರಿಯೆ 4ಅಟ್ಟಡಿಗೆ ಉಣಲಿಲ್ಲ ಇಟ್ಟ ನೀರ್ಮೀಯಲಿಲ್ಲ |ಕೊಟ್ಟ ಸಾಲವ ಕೇಳ್ವ ಹೊತ್ತ ಕಾಣೆ ||ಕಟ್ಟಕಡೆಯ ದಿವಸ ತಂಬಿದ ಬಳಿಕಿರಲಿಲ್ಲ |ಇಷ್ಟರೊಳು ಪುರಂದರವಿಠಲನ ನೆನೆಮನೆವೆ 5
--------------
ಪುರಂದರದಾಸರು