ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನಿವನು ಈಗ ಬರಲಿದಕೆ ಬಗೆಯೇನುಚೆನ್ನಾಗಿ ಪೇಳೆ ರಮಣಿ ಪ ಮನ್ನಿಸಿ ಮಮತೆಯಲಿ ಮನವ ಸೆಳಕೊಂಡೊಯ್ದುಅನ್ಯರನು ಕೂಡುವನೆ ಕೆಳದಿ ಅ.ಪ. ಬಣ್ಣದ ಗಿಣಿ ಬರೆದ ಸಣ್ಣ ಕುಪ್ಪಸವುಳ್ಳಚಿನ್ನದ ಶ್ರೀರೇಖೆ ಸೀರೆಬಿನ್ನಣವುಳ್ಳ ಬಿಳಿಯೆಲೆ ಅಡಿಕೆ ಕೆನೆಸುಣ್ಣಕರ್ಪೂರ ಕಾಚಿನುಂಡೆಕಣ್ಣಿಗಿಂಪಾದ ಕಡು ಚೆಲ್ವ ಮಲ್ಲಿಗೆ ಮೊಗ್ಗೆ ಉನ್ನತವಾದ ದಂಡೆಇನ್ನು ಈ ಪರಿಮಳವು ಬಗೆಬಗೆಯ ಆಭರಣರನ್ನ ಕೆತ್ತಿಸಿದ ಗೊಂಡೆಮುನ್ನ ಸಿಂಗರ ಮಾಡಿ ಎದೆಹಿಡಿದು ಬಿಗಿಯಪ್ಪಿನಿನ್ನ ಈ ವೇಳೆ ಕೂಡಿದೆ ದೃಢದೆ 1 ಈಗಾಗು ಬಾಹನೆಂತಿರುವೆ ತಾನೂರಿದ್ದಉಗುರು ಗುರುತನು ನೋಡುತಸೋಗೆಗಣ್ಣಿನ ಕಾಡಿಗೆಯ ಕಲಕಿದನೆಂದುಬೇಗ ನಟನೆಯ ಮಾಡುತರಾಗದಿಂದದಲಿ ರವಿಕೆ ನೆರಿಯನು ಬದಲುಟ್ಟುಭೋಗಕ್ಕೆ ಅನುವಾಗುತಹಿಂಗೆ ಸಿಂಗರಿಸಿಕೊಂಡಿಷ್ಟು ಹೊತ್ತನು ಕಳೆದೆಹೇಗೇ ಸೈರಿಪೆ ಕೂಡದೆ ಮುಂದೆ 2 ಇಂದಲ್ಲದಿರೆ ನಾಳೆ ಬಹನೆಂದು ಇದ್ದರೆಕಂದರ್ಪ ಕಾಡುತಿಹನೆತಂದು ತೋರಿಸು ತನ್ನ ತಂದೆಯನೆಂದು ಪೂ-ವಿಂದ ಬಾಣವ ಎಸೆವನೆಇಂದುಬಿಂಬವು ಮಂದ ಮಾರುತವು ಸುಮದ ಮಳೆ-ಯಿಂದ ಸೆಕೆಗಾನಾರೆನೆಒಂದು ನಿಮಿಷದಲಿ ಶ್ರೀರಂಗ ವಿಠ್ಠಲನನ್ನುಹೊಂದಿಸೆನ್ನಗಲದಂತೆ ಕಾಂತೆ 3
--------------
ಶ್ರೀಪಾದರಾಜರು
ಏನು ಕಾರಣ ಮತಿಯಿಲ್ಲ ಮನವೆ ಪ ಹೀನಾಯವಾಡದಿರು ಪರರ ಗುಣಗಳ ಎಣಿಸಿ ಅ.ಪ ಅವನ ಗೊಡವೆಯೇಕೆ ಅವನಾರು ನೀನಾರು | ಅವನ ಪಾಪಕ್ಕೆ ನೀ ಭಾಗಾದಿಯೆ | ಅವನುತ್ತಮನಾದಡವನೆ ಬದುಕಿದ ಕಾಣೊ ಅವ ಪುಣ್ಯಮಾಡಿದರೆ ಅವನ ಕುಲ ಉದ್ಧಾರ 1 ನಿನಗೆ ಕೊಡುವುದರೊಳಗೆ ಬೇಡ ಬಂದವನಲ್ಲ | ನಿನಗೆ ಅವನಿಗೆ ಏನು ಸಂಬಂಧವೊ | ಮನೆ ಒಡವೆ ವಸ್ತುಗಳ ಹಂಚಿಕೊಂಬುವುದಲ್ಲ | ಕ್ಷಣ ಕ್ಷಣಕೆ ಕ್ಲೇಶವನು ಮಾಡಿಕೊಂಬುದು ಸಲ್ಲ 2 ನಿನ್ನ ಗತಿ ಮಾರ್ಗಕ್ಕೆ ಅವನಡ್ಡ ಬಾಹನೆ | ನಿನ್ನಿಂದ ಪರಲೋಕ ಅವನಿಗುಂಟೆ | ನಿನ್ನೊಳಗೆ ನೀ ತಿಳಿದು ವಿಜಯವಿಠ್ಠಲನ್ನ | ಸನ್ನುತಿಸಿ ಭವರೋಗ ಬನ್ನವನು ಕಳೆಯೊ 3
--------------
ವಿಜಯದಾಸ