ಒಟ್ಟು 6 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನ್ನೊಳು ತಿಳಿಯೊ ಪ್ರಾಣಿ ಪುಣ್ಯಸಾಧನಿ ಧ್ರುವ ತನ್ನಿಂದಲೆ ತಾ ನೋಡುವ ಖೂನ ಚೆನ್ನಾಗ್ಯದನುಭವ ಜ್ಞಾನ ಸನ್ಮತ ಸುಖದೋರುವ ಚಿದ್ಫನ ಭಿನ್ನವಿಲ್ಲದೆ ನೋಡುವದುನ್ಮನ 1 ಮೂಲವಿಡಿದು ನಿಜ ನೋಡುವದರಿಂದ ಮ್ಯಾಲೆ ದೋರುತಲದೆ ಬ್ರಹ್ಮಾನಂದ ಕೀಲು ತಿಳಿದರೆ ಸದ್ಗುರು ಕೃಪೆಯಿಂದ ಒಲಿದು ಬಾಹನು ತಾ ಮುಕುಂದ 2 ಸೆರಗವಿಡಿದು ನೋಡುಲು ಗುರುಮುಖ ಮೂರು ಲೋಕಕ ಬಲು ಪರಮ ವಿವೇಕ ತರಳ ಮಹಿಪತಿ ಆತ್ಮಾನುಭವ ಸುಖ ದೋರುತಲದೆ ತಾ ಘನ ಕೌತುಕ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದತ್ತ ದತ್ತೆನ್ನಲು ಹತ್ತಿ ತಾಂ ಬಾಹನು ಚಿತ್ತದೊಳಾಗುವಾ ಮತ್ತ ಶಾಶ್ವತನು ದತ್ತ ಉಳ್ಳವನ ಹತ್ತಿಲೇ ಈಹನು ವೃತ್ತಿ ಒಂದಾದರೆ ಹಸ್ತಗುಡುವನು 1 ಎತ್ತ ನೋಡಿದರೆ ಮೊತ್ತವಾಗಿಹ ತಾಂ ಉತ್ತಮೊತ್ತಮತಾನೆತ್ತುತಾ ಈತಾ ಅತ್ತಲಿತ್ತಾಗದೆ ಹತ್ತಿಲೆ ಸೂಸುತ ಮುತ್ತಿನಂತಿಹ್ವನು ನೆಲಿಲೆ ಭಾಸುತಾ 2 ದತ್ತನೆಂದೆನ್ನಲು ಕತ್ತಲೆಣ್ಯೋಗುದು ಮೃತ್ಯು ಅಂಜುತಲಿ ಭೃತ್ಯನಾಗಿಹುದು ಉತ್ತಮರಿಗೆ ತಾ ಸತ್ಯ ಭಾಸುದು 3 ಒತ್ತಿ ಉನ್ಮನಿಯಾವಸ್ಥಿ ಯೊಳಾಡುವದು ಸ್ವಸ್ತಮನಾದರೆ ವಸ್ತು ಕೈಗೂಡುದು ಬಿತ್ತಿ ಮನ ಗುರುಭಕ್ತಿ ಮಾಡುವದು ದತ್ತ ತನ್ನೊಳು ತಾನೆವೆ ಭಾಸುವದು 4 ದತ್ತ ದತ್ತೆಂದು ತಾ ಅರ್ತ ಮಹಿಪತಿಯ ಬೆರ್ತ ನೋಡಿದ ಮನವು ಸುಮೂರ್ತಿಯು ಮರ್ತದೊಳಿದುವೆ ಸುಖವಿಶ್ರಾಂತಿಯು ಮರ್ತುಹೊಗುವದು ಮಾಯದ ಭ್ರಾಂತಿಯು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪ್ರೀತಿಡುವುದು ಘನವಸ್ತು ಶ್ರೀಸದ್ಗುರುಪಾದದಲಿ ಧ್ರುವ ನಿಜಧನವು ಮುನಿಜನರಿಗಿದೆ ಸಾಧನವು ಅನುಭವದಾ ಗುಣವು 1 ಭಾವಿಟ್ಟರೆ ಬಾಹನು ನೋಡಿ ದೇವಾಧಿದೇವನೆ ತಾ ಮೂಡಿ ಠವಿಠವಿಸುವ ದಯಮಾಡಿ ಈವ್ಹನು ಕೈಗೂಡಿ2 ಗುರು ನಿಜಗೂಡಿ ಹಿತದೋರುವ ತನ್ನೊಳು ಒಡಮೂಡಿ ಅತಿಹರುಷದಿಗೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬೆಜ್ಜರವಿಡಿಯಲು ಗುರುಭಕ್ತಿಗೆ ತಾ ಹೆಜ್ಜೆಜ್ಜಿಗೆ ನಿಧಾನ ಸಜ್ಜನರನುದಿನ ಕೊಡುವರು ಸುಖ ಸಾಮ್ರಾಜ್ಯದ ಸುಸನ್ಮಾನ ಧ್ರುವ ಅಂಜಿಕೆಂಬುದು ಅಂಜನ ಕಣ್ಣಿಗೆ ಕಂಜನಾಭನ ಖೂನ ರಂಜಕವೆಂಬುದು ಇದೇ ಭಕ್ತರಿಗೆ ನಿಜತತ್ವದ ಸಾಧನ ರಂಜನೆದೋಲು ಒಣ ಭಂಜನೆ ತಾ ಪ್ರಾಂಜಳಾಗುರು ಙÁ್ಞನ ನಿರಂಜನ ಸೇವೆಯ ಮಾಡುದೆ ಪೂರ್ಣ 1 ಭಕ್ತಿಗೆ ಸಲಿಗಿ ಕೆಲಸಕೆ ಬಾರದು ಯುಕ್ತಿವಂತರು ನೋಡಿ ಶಕ್ತನಾದರೆ ಬಾಗಿರಬೇಕು ಅಹಂ ಭ್ರಮ ಈ ಡ್ಯಾಡಿ ಯುಕ್ತಿಗಿದೊಂದೇ ಕೀಲು ದೃಢ ಭಕ್ತಾಶ್ರಯ ಮಾಡಿ ಭೋಕ್ತಭಾವದ ಸದ್ಗುರುರಾಯ ತಾ ಬಾಹನು ಕೈ ಗೂಡಿ 2 ಅಂಜಂಜಿ ನಡೆದಮ್ಯಾಲೆ ಮಹಿಪತಿ ನಿಶ್ಯಂಕ ನೀನಾಗೊ ಅಂಜುವ ಭವಭಯ ನೀಗೊ ಗುಂಜಾಗಿಹ ಕರ್ಮದ ಬಾಧಿಯೊಳು ಸಿಲಕುವದೆಲ್ಲ ಸೋಂಗೊ ರಂಜಿಸುತಿ ಹ್ಯ ಸದ್ಗುರು ಪಾದಕೆ ನೀ ವಾಜಿಲಿ ಶರಣ್ಹೋಗೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಂಗಮಾಡೆಲೋ ಶ್ರೀಹರಿ ದಾಸರಾ ಹಿಂಗಿ ಹೋಹುದು ತಾಭವದಾಸರಾ ಮಂಗಳ ಮಂಗಳಾತ್ಮಕ ಕೈಗೂಡಿ ಬಾಹನು ಅಂಗಜ ಜನಕ ಸಚತುರ್ಬಾಹನು 1 ಅವರ ವಾಕ್ಯ ಸುಧಾರಸ ಪಾನವಾ ಶ್ರವಣದಿಂದಲಿ ಮಾಡೆಲೊ ಪಾನವಾ ಭವದ ಜನ್ಮ ಜರಾಲಯ ಜಾರುವೀ ತವಕದಿಂದ ಚಿತ್ಸುಖ ಸೇರುವಿ 2 ಹಲವು ಸಾಧನಭರಿಗೆ ಬೀಳದೇ ಕಲಿತ ವಿದ್ಯತ್ವ ಗರ್ವವ ತಾಳದೇ ಬಲಿದು ಭಕ್ತಿಯ ಹೋಗದೆ ಸಿಂತರಾ ನೆಲಿಯ ಕೇಳೆಲೋಭಾವದಿ ಸಂತರಾ 3 ಮರಹು ಕತ್ತಲಿವೆಂಬುದು ಹಾರಿಸೀ ಅರಿಗಳಾರರೆ ಸಂಕಟ ಹಾರಿಸೀ ಅರಹು ಭಾಸ್ಕರ ತೋರುವ ಬೋಧಿಸಿ ಹೊರವ ಸಜ್ಜನ ಸಂಗವ ಸಾಧಿಸಿ 4 ನೆಲಿಯ ಹೊಂದುವ ಪರಿಯನಿಲ್ಲದೇ ಸುಲಭಸಾಧನ ತೋರಿಪರಲ್ಲದೇ ಬಳಲುವಾಬಾಹಳ ಸಾಪೇಳರು ಬಲಿದು ಪಾಯವ ಸಂತರ ಕೇಳರು 5 ಹರಿಕಥಾ ಮೃತಸಾರಸ ಪೇಳುತಾ ದುರಿತ ದುಷ್ಕøತ ತರುಗಳ ಶೀಳುತಾ ಪರಮ ಭಕ್ತಿಯ ಭಾಗ್ಯವ ಕುಡುವರು ಅರಿತು ಸಂತರ ಸಂಗವ ಬಿಡುವರು 6 ಏಳು ಭೂಮಿಕಿ ಮಾರ್ಗವ ತೋರಿಸಿ ಮಾಲ ಚಿತ್ಸುಖ ಮಂದಿರ ಸೇರಿಸಿ ಕಾಲಕರ್ಮದ ಕೋಟಲೆ ವಾರಿಸೀ ಪಾಲಿಸುವರು ಭವದಿಂತಾರಿಸಿ 7 ಸಂಗದಿಂ ಚಂದನಾಹದು ಪಾಮರಾ ಜಂಗಮೊತ್ತಮನಾಗನೇಪಾಮರಾ ಅಂಗದಿಂಮಾಡು ಸಂತರ ವಂದನಾ ಇಂಗಿಥೇಳಿದ ಮಹಿಪತಿ ನಂದನಾ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು