ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾರು ಇಕ್ಕುವರೆಂದು ಹಾರೈಸುವೈ ಆತ್ಮ ಸೋರುತಿದೆ ಮನೆಯೆಲ್ಲ ನಾರುತಿದೆ ಸ್ಥಳವು ಪ ಒಲೆಯೊಳಗೆ ಉರಿಯಿಲ್ಲ ಜಲವಿಲ್ಲ ಬಾವಿಯೊಳು ಕಲಹ ಮಾಳ್ಪಳು ತನ್ನ ಕುಲವನಿತೆಯು ಹೊಲುಬುದಪ್ಪಿಯೆ ಇಲ್ಲಿ ಬರಬಹುದೆ ನೀನೀಗ ಫಲವುಳ್ಳ ಮನೆಗಳನು ಸೇರೆಲವೊ ಆತ್ಮ 1 ಬಾಗಿಲಿಲ್ಲದ ಮನೆಯು ಬಹಳ ಕಗ್ಗತ್ತಲೆಯು ಕೂಗುವುದು ಹುಲಿ ಕರಡಿ ಇದಿರಿನೊಳಗೆ ಬೇಗದೊಳು ಇಲ್ಲಿಂದ ಸಾಗುವುದೆ ಸೌಖ್ಯಗಳು ನಾಗಶಯನನ ಗುಡಿಯ ಸೇರೆಲವೊ ಆತ್ಮ 2 ಒಟ್ಟೆಗಡಿಗೆಯ ಒಳಗೆ ಇಟ್ಟಿರ್ದ ಬುತ್ತಿಗಳು ಕೆಟ್ಟ ಕ್ರಿಮಿಗಳು ಬಂದು ಬಹಳ ಹಳಸಿದವು ಬಟ್ಟಲಿಡುವವರಿಲ್ಲ ಮುಟ್ಟಿ ಬಳಸುವರಿಲ್ಲ ಹೊಟ್ಟೆ ತುಂಬುವುದುಂಟೆ ದುಷ್ಟರೊಳು ಆತ್ಮ 3 ಹಾಳು ಮನೆಯನು ನಿನಗೆ ತೋರಿಕೊಟ್ಟವರಾರು ಬೀಳುವುದು ಮೇಲೆ ಹದಿನಾರು ಭಿತ್ತಿಗಳು ಏಳು ಇಲ್ಲಿರಬೇಡ ಕಾಳಸರ್ಪನು ಬಂದು ಕಾಲ ಕಚ್ಚ್ಚುವನಲ್ಲೊ ಎಲೆ ದುಷ್ಟ ಆತ್ಮ 4 ಮೂರು ಮಾತನು ಮೇಲೆ ಯಾರ ಕೂಡಾಡಿದೆಯೊ ಆರು ಪಥದಲಿ ನೀನು ಮೀರಿ ನಡೆದೆ ಕೇರಿಯಾಗಿರ್ದ ಹದಿನೆಂಟು ಅಂಗಡಿಯೊಳಗೆ ಆರ ವ್ಯಾಪಾರವನು ಕೇಳಿದೈ ಆತ್ಮ 5 ಹತ್ತು ತಾಸಿನ ಮೇಲೆ ತುತ್ತು ಕೊಡುವವರಾರು ಬತ್ತುವುದು ಕೈಕಾಲು ಬಳಲಿಕೆಯೊಳು ಮತ್ತೇಳು ಮಂದಿ ತಾವತ್ತತ್ತ ಸಾರುವರು ಕರ್ತುಗಳ ನಾ ಕಾಣೆ ನೀ ಕೇಳೊ ಆತ್ಮ 6 ಎಂಟು ಮಂದಿಯು ತನಗೆ ನೆಂಟರೆಂಬಾಶೆಯೊಳು ಗಂಟ ಕಟ್ಟಿಯೆ ಮನದಿ ಮರುಗುತಿರಲು ಗಂಟಲೊಣಗಿಯೆ ವಾಯು ಕಂಠದೊಳು ಪೋಪಾಗ ನಂಟರನು ನಾ ಕಾಣೆ ಆಲಿಸೈ ಆತ್ಮ 7 ಆಯವಿಲ್ಲದ ಮನೆಯು ಛಾಯೆ ಇಲ್ಲದ ಮಡದಿ ದಾಯವಿಲ್ಲದ ಊರು ಕರಕಷ್ಟವು ಬಾಯ ಹೊಯ್ಯೆಂಬರೊಳು ನ್ಯಾಯ ಸೇರುವುದೆ ಉ- ಪಾಯದಲಿ ಸಾರೆಲೆವೊ ಸಾರಿದೆನು ಆತ್ಮ 8 ಮೂಡಗಿರಿವಾಸನೊಳು ಬೇಡಿಕೊಂಡರೆ ನಿನಗೆ ನೀಡುವನು ಧರ್ಮವನು ಧೈರ್ಯನಾಗಿ ಬೀಡುಬಿಟ್ಟಲ್ಲಿಂದ ಓಡುವುದು ಸುಖದೊಳಗೆ ಕೂಡುವುದು ವರಾಹತಿಮ್ಮಪ್ಪನೊಳು ಆತ್ಮ 9
--------------
ವರಹತಿಮ್ಮಪ್ಪ
ನೆಲದಲ್ಲಿ ಪಸರಿಸಿದ ಪಾಲಮೇಲೊರಗಿದ್ದಹಳೆಯ ಹಾವ ಕಂಡೆನದರಲದ್ಭುತವ ಕಂಡೆ ಪ.ನಡುಗಡಿದ ಸಿಂಗಡಿಯ ಬಿಲ್ಲ ಕಂಡೆನದರಮೇ-ಲ್ಗಡೆಯಲಧೋಮುಖದ ತುಂಬಿಗಳ ಹಿಂಡ ಕಂಡೆಮಡುವೆರಡ ಕಡೆಯಲ್ಲಿ ಒಂದೊಂದು ಮಕರಿಯ ಕಂಡೆಕಡೆದ ಶಂಖ ಚತುರ್ವೇದಕೊದಗುವುದ ಕಂಡೆ 1ಪದುಮದೆಸಳ್ಗಳಿಗೆ ಮೂರು ವಿಧದ ಬಣ್ಣವ ಕಂಡೆಮೃದುವಾದ ಕೂರ್ಮಗಳ ಬೆನ್ನಸೊಬಗ ಕಂಡೆಮಧುರ ಪವಳೊಳಗೆ ಪುಟ್ಟ ಕರಡಿಗೆಯ ಕಂಡೆಅಧೋಮುಖದ ಸಂಪಿಗೆಗೆರಡು ವಿವರವ ಕಂಡೆ 2ನೇಲುತಿದ್ದ ಲತೆಗಳ ತುದಿಯ ಜಾಲವ ಕಂಡೆ ವಿ-ಶಾಲವಾದ ನೀಲಮಣಿಯ ಹಲಗೆಯಲಿ ಹೆಣ್ಣ ಕಂಡೆಏಳು ಲೋಕಗಳೊಳಗೆ ಪುಟ್ಟ ಕರಡಿಗೆಯ ಕಂಡೆಈ ಲೋಕವ ಮೋಹಿಸುವ ಮೂರು ಚಿನ್ನದಕೋಲಕಂಡೆ3ಬಾವಿಯೊಳು ಪುಟ್ಟಿಕೊಂಡ ಸ್ಥೂಲ ಪದ್ಮವ ಕಂಡೆಭಾವಿಸೆ ಕರಿಯಿಲ್ಲದ ಕುಂಭಸ್ಥಳವ ಕಂಡೆಆವಾಗಳಿವಿಲ್ಲದಕದಳಿಕಂಬಗಳ ಕೆಳಗೆಈ ವಸುಧೆಯ ಮೋಹಿಸುವೆರಡು ಕನ್ನಡಿಗಳ ಕಂಡೆ 4ಬೆಳೆದೆರಡು ಗಜದಂತಗಳ ಕಂಡೆ ನಳನಳಿಪನಳಿನಯುಗ್ಮವ ಕಂಡೆನದರೆಸಳುಗಳಲ್ಲಿತೊಳೆದ ಹತ್ತು ಮುತ್ತುಗಳ ಕಂಡೆ ಬೇಗದಲಿ ಶ್ರೀ-ಲಲನೆಯಾಳ್ದ ಹಯವದನನಾಳ್ಗಳೆ ಬಲ್ಲರೈಸೆ 5
--------------
ವಾದಿರಾಜ