ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಾಂಬುವತಿ ಪ್ರಿಯ ವಿಠಲ | ಅಂಬುಜದಳಾಕ್ಷ ಪ ನಂಬಿ ಬಂದಿಹನ ಮನ | ದಂಬಲವ ಸಲಿಸೋ ಅ.ಪ. ಲೌಕಿಕಾನೇಕದಲಿ | ಸಿಲ್ಕಿ ನೊಂದವನಾಗಿಏಕಾಮೇವಾದ್ವಿತೀಯ | ನೀನೇವೆಯಂಬಾವಾಕು ನುಡಿವಾ ಇವಗೆ | ಪ್ರಾಕ್ಕು ಕರ್ಮವ ಕಳೆದುತೋಕನ್ನ ಸಲಹೆಂದು | ಪ್ರಾರ್ಥಿಸುವೆ ಹರಿಯೇ 1 ನೀಚೋಚ್ಛ ಸುಜ್ಞಾನ | ದಾಸ್ಯಕಿದುವೇ ಮೂಲವಾಚಿಸೋ ಇವನಲ್ಲಿ | ಕೀಚಕಾರಿಪ್ರಿಯಾವಾಚಾಮಗೋಚರನೆ | ಖೇಚರೋತ್ತಮಸವ್ಯಸಾಚಿ ಸಖನೇ ಇವನ | ಕಾಪಾಡೊ ಹರಿಯೇ 2 ಸಂಗೀತ ಲೋಲ ಹರಿ | ಮಂಗಳಾಂಗನೆ ಸಾಧುಸಂಗವನು ಇವಗಿತ್ತು | ಕಾಪಾಡೊ ಹರಿಯೇಇಂಗಿತಜ್ಞನೆ ವಿಷಯ | ನಿಸ್ಸಂಗನೆಂದೆನಿಸಿಸಂಗೀತದಲಿ ತವ ಪ್ರ | ಸಂಗವಿತ್ತು ಕಾಯೋ 3 ಮೂರೆರಡು ಭೇದಗಳ | ತಾರತಮ್ಯ ಜ್ಞಾನವಾರವಾರಕೆ ತಿಳಿಸಿ | ಕಾಪಾಡೊ ಇವನಾಸೂರಿಜನ ಸಂಪ್ರೀಯ | ಸೂರಿಸಂಗವನಿತ್ತುಪಾರುಗೈ ಭವದ ಕೂ | ಪಾರ ಹರಿಯೇ 4 ಗರುಡವಾಹನ ಕೃಷ್ಣ | ಗರುವಗಳ ಪರಿಹರಿಸಿಸರ್ವಾಂತರಾತ್ಮಕನೆ | ಕಾಪಾಡೊ ಹರಿಯೇ |ನಿರವಧಿಕ ಗುಣ ಪೂರ್ಣ | ಸರ್ವೇಷ್ಟ ಪ್ರದನಾಗಿಪೊರೆಯ ಬೇಕಿವನ | ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಬಾಲಕೃಷ್ಣ ಸುಮ್ಮನೆ ಹಟವ್ಯಾತಕಮ್ಮಾ ನಿನಗೆಮೊಮ್ಮುಣಿಸುವೆ ನಾನು ಕೇಳೊ ಕೃಷ್ಣಯ್ಯ ಪ. ಹಶಿವಿಯಾಗಿಹುದೇನೊ ನಿನಗೆ ಸಣ್ಣಹಸುಳರಂಜಿಪ ಬಾವಾ ಬಂದಾನೊ ಹೊರಗೆಮೊಸರಕಡೆದು ನಾ ಬೇಗ ಅಟ್ಟಿಹೊಸ ಬೆಣ್ಣೆ ಕೊಡುವೆನೊ ಕಂದಯ್ಯ ನಿನಗೆ 1 ಹಾಲು ಕುಡಿಸುವೆನೊ ನಾ ಒಬ್ಬಕೀಳು ತಿರುಕ ಬಾಗಿಲಲ್ಲಿ ಬಂದಿಹನೊಬಾಲಯ್ಯ ಅಳದೀರೊ ನೀನು ತನ್ನಜೋಳಗೆಯಲಿ ನಿನ್ನ ಕೊಂಡೊಯುವನು 2 ಅರಳೆಲೆ ಅಂದಿಗಿ ಇಡಿಸಿ ನಿನ್ನಪೆರನೂಸಲಲಿ ಕಸ್ತೂರಿಯ ಧರಿಸಿಪರಿಪರಿಯಲಿ ಸಿಂಗರಿಸಿ ಗೊಲ್ಲತರಳರೊಡನ ಆಡಕಳುವೆನೋ ಕರಸಿ 3 ಉಂಗುರು ಸರಪಳಿಯಿಟ್ಟು ಬಣ್ಣದಂಗಿಯ ತೊಡಿಸುವೆ ಕೇಳೋ ನಿ ಇಷ್ಟುರಂಗಯ್ಯ ಬಂತ್ಯಾಕೊ ಸಿಟ್ಟು ನಿನಗೆಮಂಗಳಾತ್ಮಕ ಏನೂ ಬೇಕೊ ಹೇಳಿಷ್ಟು 4 ಸಿರಿ ವೆಂಕಟರಾಯಾನಿನ್ನಾಟವಬಲೇಶ ನಿಚಯಾ ನೋಡಿಕರಂಣಿನೊಳಗಿಟ್ಟು ಹೀರುವರಯ್ಯಾ 5 ಪಾಪ ಕರ್ಮವ ಮಾಡಬ್ಯಾಡಾ ನರಕಕೂಪದೊಳಗೆ ಬಿದ್ದು ಹೊರಳಾಡಬ್ಯಾಡಕಾಕಪುರುಷರ ಸಂಗ ಕೇಡಾ ನಮ್ಮಶ್ರೀಪತಿಯ ಸ್ಮರಣೆ ಮಾಡದೆ ಬಿಡಬ್ಯಾಡಾ 6 ವಿಹೀತ ಕರ್ಮಗಳನ್ನು ಮಾಡೋ ನೀನುಅಹಿತಲ್ಪನೊಲಿಸಿ ಸದ್ಗತಿಯನ್ನು ಬೇಡೊಅಹಿತ ವಿಷಯ ಸುಖ ದೂಡೋ ಲೋಕ ದಹಿತನ ಸೇವೆಗೆಯುತಲಿ ಕೊಂಡಾಡೊ 7 ಸತ್ಯವಚನದಿಂದ ಬಾಳೊ ಬಲುಭಕ್ತಿಪೂರ್ವಕದಿ ಸಚ್ಛಾಸ್ತ್ರ ಕೇಳೊಚಿತ್ತದಿ ಶಾಂತಿಯ ತಾಳೊ ದುಷ್ಟ_ರುಕ್ತಿ ಕೇಳದೆ ನಿನ್ನ ಕಿವಿ ಮುಚ್ಚಿಕೊಳ್ಳೊ 8 ಪಂಚಭೇದ ಪ್ರಪಂಚವು ನಿಜವೆನ್ನೊ ಮೂಢಾ 9 ಜೀವೇಶಾರೊಂದೆಂಬೊ ಹೊಲಿಯಾ ಪರಿಭಾವಿಸೂ ದ್ವಾಸುಪರ್ಣವೆಂಬೊ ಶ್ರುತಿಯಾಕಾವನಯ್ಯನೆ ಜಗದೊಡೆಯಾ ನಮ್ಮಜೀವಾತ್ಮ ಭೃತ್ಯನೊ ಖರಿಯಾ 10 ಅದ್ವೈತರೊಡನಾಟ ಬ್ಯಾಡ ನಮ್ಮಮಧ್ವಮತದ ಪದ್ಧತಿ ಬಿಡಬ್ಯಾಡಾಖದ್ಯೋತಸುತಗಂಜಬ್ಯಾಡಾ ನೀನುಪೊಂದು ಐಹೊಳಿಯ ವೆಂಕಟನಂಘ್ರಿಗಾಢಾ 11
--------------
ಐಹೊಳೆ ವೆಂಕಟೇಶ
ವಿವೇಕದಿಂದಾ ಮತಿಯುಕ್ತನಾಗಿ ಕುವಿದ್ಯದಾದಾ ಗುಣವೆಲ್ಲ ನೀಗಿ ಭಾವಾರ್ಥದಿಂದಾ ಸ್ಮರಿಸೋದು ನೀತಿ ಗೋವಿಂದದಾಮೋದರ ಮಾಧವೇತಿ 1 ತ್ರಿವಿಧ ತಾಪದೊಳು ಮಗ್ನನಾಗಿ ನೀವ್ಯರ್ಥದಿನಗಳಿಯದೆ ಹೋಗಿ ಭಾವಾರ್ಥದಿಂದಾ ಸ್ಮರಿಸೋದು ನೀತಿ ಗೋವಿಂದ ದಾಮೋದರ ಮಾಧವೇತಿ 2 ಈ ವಿಷಯದಾಸುಖ ನಿತ್ಯವಲ್ಲಾ ನೀವಾತು ಕೇಳಿಗುರುವೀನ ಸೊಲ್ಲಾ ಭಾವಾರ್ಥದಿಂದ ಸ್ಮರಿಸೂದು ನೀತಿ ಗೋವಿಂದ ದಾಮೋದರ ಮಾಧವೇತಿ 3 ಆವದು ತನ್ನ ಹಿತವನು ನೋಡಿ ಸಾವಧನಾಗೀ ಶ್ರವಣ ಮಾಡಿ ಭಾವರ್ಥದಿಂದ ಸ್ಮರಿಸೋದು ನೀತಿ ಗೋವಿಂದ ದಾಮೋದರ ಮಾಧವೇತಿ 4 ಅವಾವ ಯೋನಿಯಲಿ ಬಂದಹಿಂದಾ ಅವದುಗತಿಯಂದು ನೋಡಿವಂದಾ ಭಾವರ್ಥದಿಂದ ಸ್ಮರಿಸೋದು ನೀತಿ ಗೋವಿಂದ ದಾಮೋದರ ಮಾಧವೇತಿ 5 ತಾವಂದೇ ಆಶ್ರೈಸದೆ ಕಾಮಧೇನು ಸಾವಿರ ಸಾಧನಕ ಬೀಳುದೇನು ಬಾವಾರ್ಥದಿಂದಾ ಸ್ಮರಿಸೋದು ನೀತಿ ಗೋವಿಂದ ದಾಮೋದರ ಮಾಧವೇತಿ 6 ಜೀವಾತ್ಮರಾಗಿ ಸಚ ರಾಚ ರಾವ ಬಾವರ್ಥದಿಂದಾ ಸ್ಮರಿಸೋದು ನೀತಿ ಗೋವಿಂದ ದಾಮೊದರ ಮಾಧವೇತಿ 7 ಗೋವಿಂದ ಅಷ್ಟಕವ ದಾವಪ್ರಾಣೀ ಸೇವಿಸುವನು ಕಾವನು ಚಕ್ರಪ್ರಾಣೀ ಭಾವಾರ್ಥದಿಂದಾ ಸ್ಮರಿಸೋದು ನೀತಿ ಗೋವಿಂದ ದಾಮೋದರ ಮಾಧವೇತಿ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೋಗಿ ಬರತೇವ ಸಾಗರನ ಮಗಳೆ ಹೋಗಿ ಬರತೇವ ಪ. ರುಕ್ಮಿಣಿದೇವಿ ನಿನ್ನ ದುರ್ಗೆರೂಪವ ಕಂಡು ಅಬ್ಬರಿಸುತಾರೆ ಜನರೆಲ್ಲ ಅಬ್ಬರಿಸುತಾರೆ ಜನರೆಲ್ಲ ಮುಯ್ಯಕ್ಕೆನಿರ್ಭಯದಿಂದ ಬರಬೇಕು ಸಖಿಯೆ 1 ಹಿಂಡು ಹಿಂಡು ಕರೆಸಿ ಕುಣಿಸುತ ಖ್ಯಾತಿಲೆ ಮುಯ್ಯ ತಿರುಗಿಸೆ ಸಖಿಯೆ2 ಹಿಂಡು ಕರೆಸವ್ವ ಸಖಿಯೆ 3 ರಂಭೆ ಸತ್ಯಭಾವೆ ಸಂಭ್ರಮದಿ ಬರುವಾಗ ಒಂಭತ್ತು ವಾದ್ಯ ನಿನಗೆಲ್ಲೆಒಂಭತ್ತು ವಾದ್ಯ ನಿನಗೆಲ್ಲೆ ಮುಯ್ಯಕ್ಕೆಡೊಂಬರ ಡೊಳ್ಳು ಹೊಯಿಸವ್ವ ಸಖಿಯೆ 4 ಹಿಂಡು ಬರಲೆವ್ವ ಸಖಿಯೆ 5 ಆವ್ವ ರುಕ್ಮಿಣಿ ನಿನಗೆ ದಿವ್ಯವಾಹನ ವೆಲ್ಲಿಸಿಂಹ ಶಾರ್ದೂಲ ಕರೆಸವ್ವಸಿಂಹ ಶಾರ್ದೂಲ ಕರೆಸಿ ಏರಿಕೊಂಡುಬಾವಾನ ಹಾಂಗೆ ಬಾರವ್ವ ಸಖಿಯೆ 6 ಕೋಗಿ¯ ಸ್ವರದಂತೆ ರಾಗದಿ ರಾಮೇಶನ ಪಾಡಿ ಕೊಂಡಾಡಿ ಅರಿತಿಲ್ಲಪಾಡಿ ಕೊಂಡಾಡಿ ಅರಿತಿಲ್ಲ ಒಡಗೂಡಿ ಕಾಗೆ ಕೂಗಾಡಿ ಬರಲೆವ್ವ ಸಖಿಯೆ7
--------------
ಗಲಗಲಿಅವ್ವನವರು