ಒಟ್ಟು 6 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏತಕೆ ನೀ ಚಿಂತಿಸುವೆ ಹೇಡಿ ಜೀವವೇ ಪ ವೀತಮೋಹರಾಗನಾಗಿ ವಿಧಿಪಿತ ದಾತತಾನೆಂದು ತಿಳಿಯಲು ಹೃತ್ತಾಪನಾಶನಾ ಅ.ಪ ಹೊನ್ನು ಹೆಣ್ಣು ಮಣ್ಣು ಮೂರು ನಂಬಬ್ಯಾಡಲೊ ನಿನ್ನೊಳಿರುವ ಮೂರ್ತಿಯನ್ನು ಅರಿತು ಬಾಳೆಲೊ 1 ವಂದಿಸುತ ಸಜ್ಜನರ ಕಂಡರಾನಂದ ಪೊಂದುತ ಸಂದೇಹಗಳೆಲ್ಲ ತೊರೆದು ಸತತ ನಲಿಯುತ 2 ಆತ್ಮವತ್ ಸರ್ವಭೂತನೆಂಬೊ ವಚನವು ಆತ್ಮನಲ್ಲಿ ಸಮರ್ಪಿಸಿದರೆ ಪಡೆವೆ ಸೌಖ್ಯವು 3 ಸಾಮಜೇಂದ್ರ ವರದ ಶ್ರೀ ಗುರುರಾಮವಿಠಲನ ಪ್ರೇಮದಿಂ ನಿಷ್ಕಾಮನಾಗಿ ಸೇವಿಸುನುದಿನ 4
--------------
ಗುರುರಾಮವಿಠಲ
ಡಿಂಬದಲ್ಲಿ ಇರುವ ಜೀವ ಕಂಬಸೂತ್ರ ಗೊಂಬೆಯಂತೆಎಂದಿಗಿದ್ದರೊಂದು ದಿನ ಸಾವು ತಪ್ಪದು ಪ ಬಟ್ಟೆ ಕಾಣದು1 ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದೆಂದು ಪರರಅರ್ಥಕಾಗಿ ಆಸೆಪಟ್ಟು ಸುಳ್ಳು ನ್ಯಾಯ ಮಾಡ್ವರುಬಿತ್ತಿ ಬೆಳೆದು ತನ್ನದೆಂಬ ವ್ಯರ್ಥಚಿಂತೆಯನ್ನು ಮಾಡೆಸತ್ತು ಹೋದ ಮೇಲೆ ಅರ್ಥ ಯಾರಿಗಾಹುದೊ 2 ಹೊನ್ನು ಹೆಣ್ಣು ಮಣ್ಣು ಮೂರು ತನ್ನಲಿದ್ದು ಉಣ್ಣಲಿಲ್ಲಅಣ್ಣತಮ್ಮ ತಾಯಿ ತಂದೆ ಬಯಸಲಾಗದುಅನ್ನ ವಸ್ತ್ರ ಭೋಗಕಾಗಿ ತನ್ನ ಸುಖವ ಕಾಣಲಿಲ್ಲಮಣ್ಣುಪಾಲು ಆದಮೇಲೆ ಯಾರಿಗಾಹುದೊ 3 ಬೆಳ್ಳಿ ಬಂಗರಿಟ್ಟುಕೊಂಡು ಒಳ್ಳೆ ವಸ್ತ್ರ ಹೊದ್ದುಕೊಂಡುಅಳ್ಳಾಚಾರಿ ಗೊಂಬೆಯಂತೆ ಆಡಿ ಹೋಯಿತುಹಳ್ಳ ಹರಿದು ಹೋಗುವಾಗ ಗುಳ್ಳೆ ಬಂದು ಒಡೆಯುವಂತೆಉಳ್ಳೆ ಪೊರೆಯಂತೆ ಕಾಣೊ ಸಂಸಾರದಾಟವು 4 ವಾರ್ತೆ ಕೀರ್ತಿಯೆಂಬುವೆರಡು ಸತ್ತ ಮೇಲೆ ಬಂದವಯ್ಯವಸ್ತು ಪ್ರಾಣನಾಯಕನು ಎಲ್ಲಿ ದೊರಕ್ಯಾನುಕರ್ತೃ ಕಾಗಿನೆಲೆಯಾದಿಕೇಶವನ ಚರಣಕಮಲನಿತ್ಯದಲ್ಲಿ ಭಜಿಸಿ ಸುಖಿಯಾಗಿ ಬಾಳೆಲೊ 5
--------------
ಕನಕದಾಸ
ಬಾಲನೆ ಬಹುವಿಭವದಲಿ ಬಾಳೆಲೊ ಚಿರಕಾಲದಲಿ ಪ ಶುದ್ಧ ಸದ್ಭಕುತಿ ಭಾವದಲಿ ಮಧ್ವಶಾಸ್ತ್ರವ ಪಠಿಸುತಲಿ | ಸದ್ವೈಷ್ಣವನೆಂದೆನಿಸುತಲಿ ಬಾಳೆಲೋ ನೀ ಚಿರಕಾಲದಲಿ 1 ತಾಯಿನುಡಿಯ ಸೇವೆಗೈದು ನ್ಯಾಯಮಾರ್ಗದಲಿ ನಡೆದು | ಬೇಗ ಆಯಿತ ಜಯ ಯಶ ಪಡೆದು ಬಾಳೆಲೊ 2 ದಾಸವೃತ್ತಿಯನು ಅನುಸರಿಸಿ ಶ್ರೀ ಶಮಸುಂದರ ನೊಲಿಸಿ ಸತಿ ಸುತರಿಂದಲಿ ಹಿತದಿಂದಲಿ ಬಾಳೋ 3
--------------
ಶಾಮಸುಂದರ ವಿಠಲ
ಮೊದಲಿಂದ ನೀ ಕೆಟ್ಟೆ ಮನುಜ ಪ ಬುಧರಾಡುತಿಹ ನುಡಿಯನು ಕೇಳದೆ ಅ.ಪ ಹಗಲಿರುಳು ದುರ್ವಿಷಯದಲಿ ಬಿದ್ದು ಮಿಗೆ ದುರಿತಗಳ ಗಳಿಸಿ ಮುಂದೆ ಯ- ಮಗೆ ನಿರುತ್ತರನಾದೆಯಲೊ 1 ಹೆಣ್ಣು ಹೊನ್ನು ಮಣ್ಣುಗಳ ಬಯ ಸಿನ್ನು ದುರ್ಜನ ಸೇವೆಯಿಂ ಜನ್ಮವ ನಿರರ್ಥಕವ ಗೈಯುತಾ ರಣ್ಯದೊಳಿಹ ಪಿಶಾಚದೋಲ್ 2 ನಿರತವು ಸಜ್ಜನರಡಿಯ ಕಿಂ- ಕರನೆನಿಸಿ ನೀ ಬಾಳೆಲೊ ಕರುಣದಲಿ ಗುರುರಾಮ ವಿಠ್ಠಲ ಕಾಯುವನು ಸಂದೇಹ ಬಿಡು 3
--------------
ಗುರುರಾಮವಿಠಲ
ಮಡಿ ಮಡಿದ ಮಡಿಯೆಂದು ಮುಮ್ಮಾರು ಹಾರುತಿ |ಮಡಿಯೆಲ್ಲಿ ಬಂದಿತೊ ಬಿಕನಾಶಿ ಪ.ಮಡಿಯು ನೀನೆ - ಮೈಲಿಗೆ ನೀನೆ - |ಸುಡಲಿ ನಿನ್ನ ಮಡಿ ಬಿಕನಾಶಿ ಅಪಎಲವು - ಚರ್ಮ - ಮಲ - ಮೂತ್ರ ಗುಂಡಿಯಲಿ |ನಲಿಯುತ ನಿಂತೆಯಾ ಬಿಕನಾಶಿ ||ನೆಲೆಗೊಂಡ ನವದ್ವಾರದ ಹೊಲೆಯೊಳು |ಅಳಲುತ ನೀ ಬಿದ್ದೆ ಬಿಕನಾಶಿ 1ಹುಟ್ಟಲುಸೂತಕ ಸಾಯಲುಸೂತಕ |ನಟ್ಟುನಡುವೆ ಬಂತೆ ಬಿಕನಾಶಿ ||ಬಿಟ್ಟು ಬಿಡದೆ ಕಾವೇರಿಯ ಮುಳುಗಲು |ಮುಟ್ಟು ಹೋಹುದೆ ಬಿಕನಾಶಿ 2ಚರ್ಮವು ತೊಳದರೆ ಕರ್ಮವು ಹೋಹುದೆ |ಮರ್ಮವ ತಿಳಿಯದೆ ಬಿಕನಾಶಿ ||ಬೊಮ್ಮನಯ್ಯ ಪುರಂದರವಿಠಲನ ಪಾಡಿ |ನಿರ್ಮಲದಿ ಬಾಳೆಲೊ ಬಿಕನಾಶಿ 3
--------------
ಪುರಂದರದಾಸರು