ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳೇಳು ಬಾಲಕನೆ ಅಜ್ಞಾನನಿದ್ರೆಯಿಂ ಏಳು ತಿಳಿವಿಕೆ ಎಂಬ ಎಚ್ಚರವ ಹೊಂದುತಲಿ ಪ ಹಾಳು ಮಾಯೆಯು ಎಂಬ ಮೇಲುಮುಸುಕನು ತೆಗೆದು ಕೀಳು ಬಾಳುವೆಯೆಂಬ ಹಾಸಿಗೆಯ ಸುತ್ತುತಲಿ ಕೇಳು ಕಿವಿದೆರದೇಕಚಿತ್ತದಿಂ ಶ್ರುತಿಯೆಂಬ ಕೋಳಿ ಕೂಗುತಲಿಹುದು `ತತ್ವಮಸಿ' ಎಂದು 1 ಬಿತ್ತರಿಸಿಹುದು ಮುಮುಕ್ಷುತ್ವ ಮುಂಬೆಳಗಾಗೆ ಚಿತ್ತವೆನ್ನುವ ಕಮಲವರಳಿಹುದು ನೋಡೀಗ ಸುತ್ತಲಡಿಗಿದ ಸುವಾಸನೆಯ ಮೂಸುತಲಿ ನೀ ಉತ್ತು ಮೋತ್ತುಮ ನಿಜಾನಂದವನು ಪಡೆವುದಕೆ 2 ಜ್ಞಾನನಿಂದಕರೆಂಬ ಗೂಗೆಗಳು ಅಡಗಿದವು ಕಾಣದಾದವು ಕುತರ್ಕಗಳೆಂಬ ತಾರೆಗಳು ಸ್ವಾನುಭವಸುಜ್ಞಾನಭಾನುವುದಯಿಸುತಿಹನು ಜ್ಞಾನಿಶಂಕರನ ಸದ್ಬೋಧವನೆ ಸ್ಮರಿಸುತಲಿ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಜನುಮ ಸಾರ್ಥಕವ ಮಾಡಿಸು ತಂದೇ ನೆನೆವರ ಕಾವನು ನೀನೆಂದು ಬಂದೇ ಪ ನಾನಿರುವುದು ಲೌಕಿಕರ ಸಮೂಹ ಏನ ಗೈವುದೋ ಪ್ರಪಂಚದ ಮೋಹ 1 ಅಜ್ಞನು ನಾ ನನ್ನದೆಂಬುದ ಬಿಡಿಸು ಸುಜ್ಞಾನದೀಪ ಕೊಟ್ಟು ಪ್ರಜ್ವಲಿಸು 2 ಅಜ್ಞನಾ ಯೆನ್ನಪರಾಧಾವ ಕ್ಷಮಿಸು ವಿಜ್ಞಾಪಿಸಿಕೊಂಬೇ ನೀ ಮನಸ್ಕರಿಸು 3 ಹಗಲಿರಳು ಯನ್ನ ಹೆಗಲೊಳು ಕುಳಿತು ಮಿಗಿಲಾಗಿಸು ದಿನ್ಯ ಸೇವೆಗಳನಿತು 4 ನಾಲಗೆ ಮಧ್ಯದಿ ನೀ ನಲಿದಾಡಿ ಬಾಳುವೆಯೆಲ್ಲವು ಭಜಿಪುದ ಮಾಡಿ 5 ಕಣ್ಣೆಲ್ಲಿ ಸುಳಿದರೆ ಅಲ್ಲಿನೀ ಕಂಡು ಉನ್ನತವೈಭವ ತೋರು ಮನಗೊಂಡು 6 ಜಾಜೀಕೇಶವ ಜಯ ಪದವಿತ್ತು ರಾಜೀವಾಂಬಕ ಪೊರೆ ಭಾರಪೊತ್ತು 7
--------------
ಶಾಮಶರ್ಮರು
ಚಿತ್ತಶುದ್ಧಿಯಿಲ್ಲದವನವ ಜ್ಞಾನಿಯೆ - ಪುಣ್ಯಪಾತಕಗಳನರಿಯದವ ಮನುಜನೆ ಕೃಷ್ಣ ಪ.ಮಾರಿ ಮನೆಯೊಳಗಿರಲು ಸಹಕಾರಿಯೆನಬಹುದೆ ?ಊರೊಳಗಿನಾ ಕಳ್ಳ ಅವ ಸುಜನನೆ ?ಜಾರತನವೆಸಗುವಳು ಕುಲವನಿತೆಯಹುದೆ - ಸಂಸಾರದೆಚ್ಚವಿಲ್ಲದವ ಸುಗಣನೆ ? 1ಶ್ವಾನ ಬೂದಿಯಲಿರಲು ಶಿವಭಕ್ತನನೆಬಹುದೆ ?ಕಾನನದೊಳಿಹ ಕಾಗೆ ವನವಾಸಿಯೇ ?ಗಾಣ ತಿರುಗುವ ಎತ್ತಿಗದು ಪ್ರದಕ್ಷಣೆಯೆ ಬಕಧ್ಯಾನವನು ಮಾಡಲದು ಮೌನವೇ ಕೃಷ್ಣಾ ? 2ತೋಳ ಅಡವಿಯಲಿರಲು ಅದು ದಿಗಂಬರನಹುದೆ ?ಗಾಳಿಯಂಬುವ ಉರುಗ ಉಪವಾಸಿಯೇ ?ಆಲವದು ಜಡೆಬಿಡಲುಪರಮ ಋಷಿಯಹುದೆ - ಬಲುಕಾಲಉಳಿದ ಹದ್ದು ತಾ ಹಿರಿಯದೆ ?3ಬಂಧನದೊಳಿಹ ವ್ಯಾಘ್ರವನು ತಪಸಿಯೆನಬಹುದೆ ?ಸಿಂಧುಜವು ಎನೆ ವಿಷಯ ಶೀತಕರನೆ ?ಅಂಧಕನು ಕಣ್ಮಚ್ಚಲದು ಧ್ಯಾನವೇ, ಗಜವುಮಂದಗತಿಯಾದರದು ಸ್ಮರಣೆಯೆ ಕೃಷ್ಣಾ ? 4ಮರಣಕ ಗಂಟಲನು ಮಾಡಲದು ಮಂತ್ರವೆ ?ಗಂಡು ನೀರಲಿ ಮುಳುಗಲದು ಸ್ನಾನವೇ ?ಪುಂಡರೀಕಾಕ್ಷ ಶ್ರೀ ಪುರಂದರವಿಠಲನತೊಂಡನಾಗದ ನರನ ಬಾಳು ಬಾಳುವೆಯೆ ? 5
--------------
ಪುರಂದರದಾಸರು