ಒಟ್ಟು 9 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಜ್ಞಾನಿ ಜೀವನಿಗೆ ಅಭಿಮಾನ ಬಹಳ ಸುಜ್ಞಾನಿಯಾ ನುಡಿಯ ಲಕ್ಷಿಸನು ಕೇಳಾ ಪ ಬುದ್ಧಿ ಮನದೇಹಗಳು ತಾನೆಂದು ತಿಳಿಯುತಲಿ ಇದ್ದುದನು ಮರೆತು ತಾ ಜಾಣನೆನಿಸುವನು ಒದ್ದಾಡುತಿದ್ದರೂ ಅಭಿಮಾನವನೆ ಹÉೂತ್ತು ಗುದ್ದಾಡುತಲಿ ತಾನು ಸುಖವ ಹುಡುಕುವನು 1 ಸಟಿಯಾದ ಸಂಸಾರ ದಿಟವೆಂದು ನಂಬುತಲಿ ಸೆಟೆದಾಡುತಿರುವೆಯೋ ತಿಳಿದು ನೋಡಾ ಹಟವ ಹಿಡಿಯಲು ಬೇಡ ತೋರ್ಪುದೇ ದಿಟವೆಂದು ನಟನೆಯಾ ಮಾತಲ್ಲವೆನೆ ಕೇಳನವನು 2 ಅರಿ ನೀನು ನಿನ್ನ ಅರಿವಿನಾ ಹೊರತು ನೀ ಸುಖ ಪೊಂದಲಾರೆ ಆರು ಸುಖಪಡೆದಿಲ್ಲ ಅಜ್ಞಾನದಿಂದೆನಲು ಇರಲಿ ಹೋಗೆಂದೆನುತ ಮೋರೆ ಹೊರಳಿಸುವಾ 3 ಬಾಳುವೆಯು ನಿಜವೆಂದು ನಂಬಲಿವನಾ ಗೋಳು ಗಾಳಿಯನೆ ಗುದ್ದಿ ಮೈ ನೊಯ್ಸಿಕೊಂಡಂತೆ ಕೇಳು ಚಿತ್ರದೊಳಿರುವ ಬೆಂಕಿ ತಾ ದಿಟವೆಂದು ಮೇಲೆ ನೀರೆರೆದಂತೆ ಎನೆ ಕೇಳನವನು 4 ಗೊಡ್ಡು ಮಾತೆಂದು ತಾ ಜ್ಞಾನಕೆರವಾಗುತಲಿ ದಡ್ಡತನವನೆ ತೋರಿ ದುಃಖಿಯಾಗುವನು ಶುದ್ಧಜ್ಞಾನವನಂಬಿ ತನ್ನ ತಾ ತಿಳಿಯದಲೆಬುದ್ಧ ಶಂಕರನುಕ್ತಿಗೆರವಾಗುತಿಹನು 5
--------------
ಶಂಕರಭಟ್ಟ ಅಗ್ನಿಹೋತ್ರಿ
ಏಳೇಳು ಬಾಲಕನೆ ಅಜ್ಞಾನನಿದ್ರೆಯಿಂ ಏಳು ತಿಳಿವಿಕೆ ಎಂಬ ಎಚ್ಚರವ ಹೊಂದುತಲಿ ಪ ಹಾಳು ಮಾಯೆಯು ಎಂಬ ಮೇಲುಮುಸುಕನು ತೆಗೆದು ಕೀಳು ಬಾಳುವೆಯೆಂಬ ಹಾಸಿಗೆಯ ಸುತ್ತುತಲಿ ಕೇಳು ಕಿವಿದೆರದೇಕಚಿತ್ತದಿಂ ಶ್ರುತಿಯೆಂಬ ಕೋಳಿ ಕೂಗುತಲಿಹುದು `ತತ್ವಮಸಿ' ಎಂದು 1 ಬಿತ್ತರಿಸಿಹುದು ಮುಮುಕ್ಷುತ್ವ ಮುಂಬೆಳಗಾಗೆ ಚಿತ್ತವೆನ್ನುವ ಕಮಲವರಳಿಹುದು ನೋಡೀಗ ಸುತ್ತಲಡಿಗಿದ ಸುವಾಸನೆಯ ಮೂಸುತಲಿ ನೀ ಉತ್ತು ಮೋತ್ತುಮ ನಿಜಾನಂದವನು ಪಡೆವುದಕೆ 2 ಜ್ಞಾನನಿಂದಕರೆಂಬ ಗೂಗೆಗಳು ಅಡಗಿದವು ಕಾಣದಾದವು ಕುತರ್ಕಗಳೆಂಬ ತಾರೆಗಳು ಸ್ವಾನುಭವಸುಜ್ಞಾನಭಾನುವುದಯಿಸುತಿಹನು ಜ್ಞಾನಿಶಂಕರನ ಸದ್ಬೋಧವನೆ ಸ್ಮರಿಸುತಲಿ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಕೇಳಿಸಲೊಲ್ಲದೇನೋ ಕೃಷ್ಣಾ ಕೇಳಿಕೇಳದಂತಿರುವಿಯೇನೋ ಪ ಬಾಳುವೆಯೊಲು ಕೀಳಾದೆನಾನಿಂತುಏಳಿಸೆನ್ನನು ಎಂದು ಕೇಳಿಕೊಳ್ಳುವದಿನ್ನು ಅ.ಪ ಯಾವತ್ತೂ ತಿಳಿದವನು ಎಂಬರು ಎನ್ನನೋವು ತಿಳಿಯದಾಯ್ತೇನುಸಾವಿರ ವಿಥಿಗಳಿದ್ದೆನ್ನಯ ಪಾಲಿಗೆದೇವಾ ಅವಲ್ಲವು ಕಿವುಡಾದವೇನೋ 1 ತುಂಬಿ ನಿಂತಿಹನೆಂಬೀಭಾವಕೆ ನೀನೆಂಬಿ ಆವಾವಜೀವರ ಭಾವವರಿತು ನೀಕಾವುದೆಂತೆಂಬೊ ಈ ವಚನವು ನಿನಗೆ 2 ಭೇದಭಾವವು ಇಲ್ಲೆಂದೂ ಸಾಧಿಸುವವುವೇದಗಳೆಲ್ಲ ಎಂದುಬಾಧೆಯ ಬಿಡಿಸೆಂದು ಬೇಡಿಕೊಳ್ಳುವೆಗದುಗಿನ ಆಧಾರಿ ದೇವನೆ ವೀರನಾರಾಯಣ 3
--------------
ವೀರನಾರಾಯಣ
ಜನುಮ ಸಾರ್ಥಕವ ಮಾಡಿಸು ತಂದೇ ನೆನೆವರ ಕಾವನು ನೀನೆಂದು ಬಂದೇ ಪ ನಾನಿರುವುದು ಲೌಕಿಕರ ಸಮೂಹ ಏನ ಗೈವುದೋ ಪ್ರಪಂಚದ ಮೋಹ 1 ಅಜ್ಞನು ನಾ ನನ್ನದೆಂಬುದ ಬಿಡಿಸು ಸುಜ್ಞಾನದೀಪ ಕೊಟ್ಟು ಪ್ರಜ್ವಲಿಸು 2 ಅಜ್ಞನಾ ಯೆನ್ನಪರಾಧಾವ ಕ್ಷಮಿಸು ವಿಜ್ಞಾಪಿಸಿಕೊಂಬೇ ನೀ ಮನಸ್ಕರಿಸು 3 ಹಗಲಿರಳು ಯನ್ನ ಹೆಗಲೊಳು ಕುಳಿತು ಮಿಗಿಲಾಗಿಸು ದಿನ್ಯ ಸೇವೆಗಳನಿತು 4 ನಾಲಗೆ ಮಧ್ಯದಿ ನೀ ನಲಿದಾಡಿ ಬಾಳುವೆಯೆಲ್ಲವು ಭಜಿಪುದ ಮಾಡಿ 5 ಕಣ್ಣೆಲ್ಲಿ ಸುಳಿದರೆ ಅಲ್ಲಿನೀ ಕಂಡು ಉನ್ನತವೈಭವ ತೋರು ಮನಗೊಂಡು 6 ಜಾಜೀಕೇಶವ ಜಯ ಪದವಿತ್ತು ರಾಜೀವಾಂಬಕ ಪೊರೆ ಭಾರಪೊತ್ತು 7
--------------
ಶಾಮಶರ್ಮರು
ದಾಸನಾಗು ಹರಿಯ ದಾಸನಾಗು ಮೋಸಹೋಗದೆ ಭವಕೆ ಬ್ಯಾಸರಾಗು ಪ ಭಾನುಮಂಡಲ ಕಂಡು ಶ್ವಾನನುಬ್ಬರಿಪಂತೆ ಭೂನಾಥನಡಿವಿಡಿದು ಬಾಳ್ವೆ ನಿನಗೆ ಹೀನಮಾನವ ಕಂಡಣಕೆ ನುಡಿದರು ಸರಿಯೆ ಜ್ಞಾನನಿಧಿ ಹರಿಭಕುತಿಯ ಲೆಕ್ಕಿಸದೆ ಮಾಡು1 ಕಾಳುವೆಗ್ಗಳವಾಗೆ ಸುಮತಿ ಸಂಗ್ರಹಿಪಂತೆ ಬಾಳುವೆಯೊಳ್ಹರಿಸೇವೆ ಬಲು ಅಗ್ಗವಂತೆ ಕೀಳು ಜನರಲ್ಲಿ ಲೌಕಿಕತೆ ಮರುಳಾಗಿ ಸಂತೆ ಕೇಳುವವರಾರು ಹರಿಭಕುತಿ ಮಾಡುವವರು2 ಮಾರಿಗಾಹುತಿಯಾಗ್ವ ಕುರಿಮೇಕೆ ತೆರನಂತೆ ಘೊರ ಜವನನು ಮರೆತು ಕೊಬ್ಬುವವರಂತೆ ಶೇರು ನರಸಿಂಹವಿಠ್ಠಲನಂಘ್ರಿಕಮಲವಾ ಆರಾರು ಬಾಧೆಯಿಲ್ಲದೆ ಗತಿಯ ಕೊಡುವಾ 3
--------------
ನರಸಿಂಹವಿಠಲರು
ನಡತೆಯನೆಣಿಸಿದರೆ ಗುಣವೇನು ತೃಣಕುಕಡೆಯಾಗುವಲ್ಲಿ ಸಂದೇಹವಿಲ್ಲ ಪನೀನು ಹಿಂದೆಗೆಯೆ ಕಣ್ಣು ಕಾಣದೆಂಬೆಯಲ್ಲೋ ುೀಗಕಾಣು ಕಿಮಿಂದ ರೂಪ ಜಾಣೆಯ ಮಗನೆ 1ಕೇಳು ಮೂಗಿನಿಂದಾ ನುಡಿಯ ತಾಳು ಗಂಧವ ಬಾುಂದಾಹೇಳು ಮಾತ ಕಣ್ಣಿನಿಂದಾ ಕೂಳುಗೊಂಬೆ 2ನಡೆಯೊ ಕೈುಂದ ಕಾಲಿಂ ಪಿಡಿಯೊಗುದದಲುಣ್ಣೋ ಪಡೆಯೊ ನೀನುಪಸ್ಥೆಯ ಬಿಟ್ಟಾನಂದವಾ 3ವಾಕಿನಿಂ ವಿಸರ್ಗವನ್ನು ಸೋಕಿಸೊ ಸ್ಪರ್ಶವ ನೀನುತಾಕದೊಲ್ ತ್ವಗಿಂದ್ರಿಯವ ಕಾಕಿ ಮನವೆ 4ಜೀವನು ಕುರುಡನೇನೊ ಪ್ರಾಣಗಳ್ [ಕೊ]ರಡುಗಳೇನೊಯಾವಗವು ನೀನೊರ್ವ ಬಾಳುವೆಯೇನೊ 5ಕಾದಿ ಮನೆಗೆ ಕೇಡು ತಾ ದರಿದ್ರತೆಗೆ ಬೀಡುಸಾಧುವಾಗಿ ನಮ್ಮೊಳಾಡು ಕೆಡಬೇಡ ನೋಡು 6ಹತ್ತು ದಾರಿಯೊಳಾಡುವೆ ಗೊತ್ತಿಗೆ ನೀನಿಲ್ಲದಿರೊಮತ್ತನಾಹೆ ಕೆಣಕಲು ಸತ್ತವನಂತೆ 7ನಿನ್ನ ಹತ್ತಿರೆ ದೈವವು ಬನ್ನ ಬಡಿಸಲೆಮ್ಮನುಕಣ್ಣುಗಾಣದೆ ಸೇರಿಸಿತು ಕಾಲಗತಿುಂದಾ 8ತಿರುಪತೀಶನೊಲವನು ಸರಸದಿಂ ಸಾಧಿಪ ನೀನುತೊರೆಯಲೆಮ್ಮ ತಿಳಿದುದು ಜಾಣುಮೆ ತಾನು 9ಕಂ||ಕರಣಗಳಾಡಿದ ಮಾತನು ಹರುಷದಿ ಕೇಳುತ್ತ ಜೀವ ತನು ಸಹ ಮನಮಂ ಪರಿಪರಿ ವಿಧದಲಿ ಬೋಧಿಪ ಪರಿುಂ ದೂಸಿದನಾಗ ನಾಚುವ ತೆರದಿಂ
--------------
ತಿಮ್ಮಪ್ಪದಾಸರು
ಬಲುಕಷ್ಟ ಬರಗಾಲ ಬಂದಿತಯ್ಯ ವೈರಿ ಜನಕೆ ಬರಬಾರದಯ್ಯ ಪ ಶಿಶುಗಳಿಗೆ ಹಾಲಿಲ್ಲ ಪಶುಗಳಿಗೆ ಮೇವಿಲ್ಲ ಉಸರಲು ಬಾಯಿಲ್ಲ ವೃದ್ಧ ಜನಕೇ ಅಶನ ವಸನಕ್ಕಾಗಿ ವ್ಯಸನ ಪೂರಿತರಾಗಿ ನಿಶಿ ಹಗಲು ಜನರೆಲ್ಲ ಉಸುರು ಹಾಕುತಲಿಹರು 1 ಧÀವಸಧ್ಯಾನ್ಯದ ಬೆಲೆಯು ದಿವಸ ದಿವಸಕೆ ಮಹಾ ಪ್ರವಾಹದಂದದಿ ವೃಧ್ಧಿಯಾಗುತಲಿಹುದು ಅವಸರಕೆ ಬೇಡಿದರೆ ಲವಣದೊರೆಯದು ಮೇಲೆ ಶಿವಶಿವಾಯೆಂದು ಭವಣಿಯನನುಭವಿಸುವರು 2 ಶಾರೆ ಕಾಳು ಭಿಕ್ಷೆಕೆರೆಯುವದಕೆ ಗತಿಯಿಲ್ಲಾ ಶರಗೊಡ್ಡಿ ಕರೆದರೂ ಕೊಂಡರೊಬ್ಬರುಯಿಲ್ಲಾ ಅರೆಹೊಟ್ಟಿಯುಂಡು ಹರಕು ಬಟ್ಟಯನುಟ್ಟ ಮರಮರನೆ ಮನದೊಳಗೆ ಮರುಗುವರು ಬಡಜನರೂ 3 ಜೋಳನವಣಿ ಸಜ್ಜಿ ಕಾಳಿಗೇರಿದ ಬೆಲೆಗೆ ತಾಳಿ ಮನದಲಿ ವ್ಯಥಿಯ ಕೂಲಿ ಜನರು ಕೂಳಿಗಾಗದು ಎಂದು ಬಾಳುವೆಯ ಗೈಯುವಂಥ ಕೂಲಿವಲ್ಲೆವು ಎನುತ ಗೋಳಿಡುತಲಿಹರು 4 ಕಡಲೆ ಕಾಣದ ಹರಿಯು | ಕಡಲೊಳಡಗಿದ ಮೃಡನು ಸೊಡರೆಣ್ಣೆಸಿಗದೆಂದು ಸುಡುಗಾಡು ಸೇರಿದಾ ಅಡಕಿ ಸಕ್ಕರೆ ಗೋಧಿ ಕೊಡುವ ಬೆಲೆಯನು ಕೇಳಿ ಮಿಡುಕಿ ಮನದೊಳು ಕಣ್ಣ ಬಿಡುತಿಹರು ಸುಮನಸರು 5 ಮಳೆರಾಯ ಮುನಿದುದಕೆ ಹೊಲ ಬೆಳೆಯದಿದ್ದುದಕೆ ಬಳುತಿಹವು ಬಡಜನರ ಕಣ್ಣಿಂದ ನೀರು ಜಲಹರಿಸುವದು ನೋಡಿ ನಲಿದಾಡಿ ನಗುತಿಹಳುಕ್ಷಾಮದೇವಿ 6 ಕ್ಷಾಮದೇವಿಗೆ ತನ್ನ | ಧಾಮಸೇರುವಂತೆ ನೀಡಿ ಮಾಡಿ ಸಾಕು ನಮ್ಮ ಸಕಲ ಜನಕೇ | ಕ್ಷೆಮ ಸೌಖ್ಯವಗರೆದು | ಪ್ರೇಮದಲಿ ಪೊರೆ ಕರವ ನಾ | ಮುಗಿದು ಪ್ರಾರ್ಥಿಸುವೆ ಶಾಮಸುಂದರ ಸ್ವಾಮಿ 7
--------------
ಶಾಮಸುಂದರ ವಿಠಲ
ಚಿತ್ತಶುದ್ಧಿಯಿಲ್ಲದವನವ ಜ್ಞಾನಿಯೆ - ಪುಣ್ಯಪಾತಕಗಳನರಿಯದವ ಮನುಜನೆ ಕೃಷ್ಣ ಪ.ಮಾರಿ ಮನೆಯೊಳಗಿರಲು ಸಹಕಾರಿಯೆನಬಹುದೆ ?ಊರೊಳಗಿನಾ ಕಳ್ಳ ಅವ ಸುಜನನೆ ?ಜಾರತನವೆಸಗುವಳು ಕುಲವನಿತೆಯಹುದೆ - ಸಂಸಾರದೆಚ್ಚವಿಲ್ಲದವ ಸುಗಣನೆ ? 1ಶ್ವಾನ ಬೂದಿಯಲಿರಲು ಶಿವಭಕ್ತನನೆಬಹುದೆ ?ಕಾನನದೊಳಿಹ ಕಾಗೆ ವನವಾಸಿಯೇ ?ಗಾಣ ತಿರುಗುವ ಎತ್ತಿಗದು ಪ್ರದಕ್ಷಣೆಯೆ ಬಕಧ್ಯಾನವನು ಮಾಡಲದು ಮೌನವೇ ಕೃಷ್ಣಾ ? 2ತೋಳ ಅಡವಿಯಲಿರಲು ಅದು ದಿಗಂಬರನಹುದೆ ?ಗಾಳಿಯಂಬುವ ಉರುಗ ಉಪವಾಸಿಯೇ ?ಆಲವದು ಜಡೆಬಿಡಲುಪರಮ ಋಷಿಯಹುದೆ - ಬಲುಕಾಲಉಳಿದ ಹದ್ದು ತಾ ಹಿರಿಯದೆ ?3ಬಂಧನದೊಳಿಹ ವ್ಯಾಘ್ರವನು ತಪಸಿಯೆನಬಹುದೆ ?ಸಿಂಧುಜವು ಎನೆ ವಿಷಯ ಶೀತಕರನೆ ?ಅಂಧಕನು ಕಣ್ಮಚ್ಚಲದು ಧ್ಯಾನವೇ, ಗಜವುಮಂದಗತಿಯಾದರದು ಸ್ಮರಣೆಯೆ ಕೃಷ್ಣಾ ? 4ಮರಣಕ ಗಂಟಲನು ಮಾಡಲದು ಮಂತ್ರವೆ ?ಗಂಡು ನೀರಲಿ ಮುಳುಗಲದು ಸ್ನಾನವೇ ?ಪುಂಡರೀಕಾಕ್ಷ ಶ್ರೀ ಪುರಂದರವಿಠಲನತೊಂಡನಾಗದ ನರನ ಬಾಳು ಬಾಳುವೆಯೆ ? 5
--------------
ಪುರಂದರದಾಸರು
ಮರುಳಾಟವೇಕೊ - ಮನುಜಾ |ಮರುಳಾಟವೇಕೊ? ಪ.ಊಧ್ರ್ವ ಪುಂಢ್ರವಿಲ್ಲದ ಮುಖವ ತಿದ್ದಿ ನೋಡಲೇಕೊ |ಶುದ್ದ ಸಾತ್ತ್ವಿಕವಿಲ್ಲದನ ಬುಧ್ಧಿ ಏತಕೊ ||ಕದ್ದು ಹೊಟ್ಟೆಹೊರಕೊಂಬುವಗೆ ಶುದ್ಧ ಶೀಲವೇಕೊ |ಮಧ್ವಶಾಸ್ತ್ರ ಓದದವನವಿದ್ಯೆಏತಕೊ - ಮನುಜಾ1ಮೃತ್ತಿಕೆ ಶೌಚವಿಲ್ಲದವಗೆ ಮತ್ತೆ ಸ್ನಾನ - ಜಪವೇಕೊ |ಹಸ್ತಕಟ್ಟಲರಿಯದವಗೆ ಅಗ್ನಿಹೋತ್ರವೇತಕೊ ||ತೊತ್ತು ಹೋಗುವವಗೆ ಪರತತ್ತ್ವವಿಚಾರವೇಕೋ |ಕರ್ತೃ ಕೃಷ್ಣನ ನೆನೆಯದವನ ಉತ್ತಮತನವೇಕೊ 2ಹಸಿವೆ ತೃಷೆಯ ತಾಳದವನ ಹುಸಿಯ ವೈರಾಗ್ಯವೇಕೊ |ವಿಷಯ ಮೆಚ್ಚಿದವಗೆ ಪರದ ಕುಶಲವೇತಕೊ ||ಹುಸಿಜಪಗಳ ಮಾಡುವವಗೆ ಮುಸುಕಿನ ಡಂಬಕವೇಕೊ |ಕುಸುಮನಾಭಗರ್ಪಿಸದ ಅಶನವೇತಕೊ - ಮನುಜಾ 3ಸೂಳೆಗಾರನಿಗೆ ತುಳಸಿ ಮಾಲೆಯ ಶೃಂಗಾರವೇಕೊ ||ಶ್ರೀಲೋಲನ ನೆನೆಯದವನ ಬಾಳುವೆಯೇತಕೊ |ಮೂಲಮಂತ್ರವರಿಯದವಗೆ ಮೇಲೆ ದೇವತಾರ್ಚನೆ ಏಕೊ |ಸಾಲಗ್ರಾಮದಭಿಷೇಕವಿಲ್ಲದ ತೀರ್ಥವೇತಕೊ ಮನುಜಾ 4ಕಂಡ ನಾರಿಯೀಕ್ಷಿಸುವ ಲಂಡಗೆ ಪುರಾಣವೇತಕೋ |ಭಂಡ ಮಾತನಾಡುವನ ಪಾಂಡಿತ್ಯವೇತಕೊ |ಪುಂಡರೀಕವರದ ಶ್ರೀ ಪುರಂದರವಿಠಲನ |ಕಂಡು ಭಜಿಸಲರಿಯದವನವಿತಂಡಬುಧ್ಧಿಯೇತಕೋ5
--------------
ಪುರಂದರದಾಸರು