ಒಟ್ಟು 5 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದುರಿತ ದುರ್ಗತಿಗೆ ಆವಾನಂಜನೊ ಹರಿಯ ಕರುಣವೆಂಬ ಕವಚ ತೊಟ್ಟಿರಲಿಕ್ಕೆ ಪ ಮಲಗಿ ಹೊರಳನೇಕೆ ಕುಳಿತುಕೊಂಡಿರನೇಕೆ ಬಲುದೂರ ತಿರುಗಾಡಿ ಬಪ್ಪನೇಕೆ ಮಲಿನ ವಸನವ ಪೊದ್ದು ಮೋರೆ ತೊಳಿಯನೇಕೆ ಪಾದ ನೆಳಲು ಸೇರಿದವ 1 ಸ್ನಾನ ಸಂಧ್ಯಾ ಮೌನ ಮಾಡದೆ ಇರನೇಕೆ ಕಾನÀನದಲಿ ಬಂದು ಸೇರನೇಕೆ ದಾನ ಧರ್ಮಂಗಳ ಮಾಡದೆ ಇರನೇಕೆ ದಾನವಾರಿಯ ಕಾಣುತಲಿಪ್ಪವ 2 ಮಡಿ ಉಡದೆ ಉಣನೇಕೆ ಅಡಿಗೆ ನೇಮನವೇಕೆ ಅಡಿಗಡಿಗೆ ಜಪಮಣಿ ಎಣಿಸನೇಕೆ ನಡೆಯುತ ಪಥದೊಳು ತಿನ್ನಲ್ಲಾ ಮೆಲ್ಲನೇಕೆ ಪೊಡವೀಶ ಶ್ರೀ ಹರಿಯ ಅಡಿಗಳ ಬಲ್ಲವಾ 3 ಓದದೆ ಇರನೇಕೆ ವೇದ ಪಠಿಸನೇಕೆ ವೇದಮಂತ್ರ ರಚಿಸದರನೇತಕೆ ಓದನವೀಯದೆ ಬಾಳುತಲಿ ಇರನೇಕೆ ಮಾಧವನ ಚರಣಾರಾಧನೆ ಮಾಳ್ಪ 4 ತೀರ್ಥ ತಿರುಗನೇಕೆ ಯಾತ್ರಿ ಚರಿಸನೇಕೆ ವ್ಯರ್ಥ ದಿವಸವೆಂದು ಅನಿಸಲೇಕೆ ಆರ್ಥಿಯನ್ನು ನೋಡಿ ಆಟ ಆಡುವನೇಕೆ ತೀರ್ಥಪದನ ದಿವ್ಯತೀರ್ಥ ಬಯಸುವವ 5 ವ್ರತವು ಮಾಡನೇಕೆ ಕಥಿಯ ಕೇಳನೇಕೆ ಸತಿಯ ಸಂಗಡ ನಿತ್ಯರಮಿಸನೇಕೆ ಚತುರ ಸಾರೆ ಉಂಡು ಹಾಗೇ ಇರನೇಕೆ ಪತಿತಪಾವನನಂಘ್ರಿ ಮತಿಯಲ್ಲಿ ನೋಳ್ಪನಾ6 ದುರಿತವೆಂಬೋದೆಂತು ಬಿಳಿದೊ ಹಸರೊ ಕೆಂಪೊ ಕರದೊ ಮತ್ತಾವದೋ ಅದರ ವರ್ಣಾ ದುರಿತಾರಿ ವಿಜಯವಿಠ್ಠಲನ್ನದಾಸಗೆ ತನ್ನ- ತೊರೆದು ಕಾಣೊ ಹಣೆ ನೋಡದೆ ಮಹಾ 7
--------------
ವಿಜಯದಾಸ
ನಾನಾ ಯೋನಿಗಳೊಳು ಹೀನಜನ್ಮದಿ ಬಂದು ನಾನು ತಿರುಗಲಾರೆನೊ ಗೋಪಾಲ ಪ. ಶ್ರೀನಿವಾಸ ನಿನ್ನ ಸೇರಿದ ಬಳಿಕ ಉದಾಸೀನ ಮಾಳ್ಪರೇನೋ ಗೋಪಾಲ ಅ.ಪ. ಇಂದ್ರಿಯದೊಳಿದ್ದೆನೊ ಗೋಪಾಲ ಪಿಂಡವಾದೆನೊ ಗೋಪಾಲ ಮಾಸ ನಾಲ್ಕಯಿದಾಗಲ ವಯವಂಗಳಿಂದ ಬೆಳೆವುತಿದ್ದೆನೊ ಗೋಪಾಲ 1 ನರಳಿ ಕೋಟಲೆಗೊಂಡೆನೊ ಗೋಪಾಲ ಹಿರಿದು ಚಿಂತಿಸಿದೆನೊ ಗೋಪಾಲ ಕಷ್ಟಬಡುತಿದ್ದೆನೊ ಗೋಪಾಲ ಸಂದ ಧರೆಗೆ ಪತನವಾದೆನೊ ಗೋಪಾಲ2 ಘಾಸಿಯೊಳೊರಲುವೆನೊ ಗೋಪಾಲ ಘಾಸಿಸಿ ದುಃಖಿಪೆನೊ ಗೋಪಾಲ ಬ್ಯಾಸತ್ತು ಒರಲುವೆನೊ ಗೋಪಾಲ ಶ್ವಾಸ ಎತ್ತಿದೆನೊ ಗೋಪಾಲ 3 ಬಾಲತನದಿ ಬಹುವಿಧದಾಟವ ತೋರಿ ಮೇಲನರಿಯದಿದ್ದೆನೊ ಗೋಪಾಲ ಮಾರ್ಜಾಲ ಘಾತಕನಾಗಿದ್ದೆನೊ ಗೋಪಾಲ ಕೂಳಿಗೀಡಾಗಿದ್ದೆನೊ ಗೋಪಾಲ ಪಾಳೆಯಕೀಡಾದೆನೊ ಗೋಪಾಲ 4 ಆಗಿ ಬಾಳುತಲಿದ್ದೆನೊ ಗೋಪಾಲ ನೀಗಿ ಬಾಳುತಿದ್ದೆನೊ ಗೋಪಾಲ ಬಾಧೆಗೆ ಬೆಂಡಾದೆನೊ ಗೋಪಾಲ ಆಗಲು ಪುತ್ರ ಬಾಂಧವರಿಗೋಸ್ಕರ ಭವ- ಸಾಗರ ಎತ್ತಿದೆನೊ ಗೋಪಾಲ 5 ಬಾಲ್ಯಯೌವನವಳಿದು ಜರೆ ಒದಗಿ ನಾನು ಮೇಲೇನರಿಯದಿದ್ದೆನೊ ಗೋಪಾಲ ಬೀಳುತೇಳುತಲಿದ್ದೆನೊ ಗೋಪಾಲ ಹೋದಂತಿದ್ದೆನೊ ಗೋಪಾಲ ಗೂಳಿಯಂದದಲಿದ್ದೆನೊ ಗೋಪಾಲ 6 ಬಾಳುತಲಿದ್ದೆನೊ ಗೋಪಾಲ ಗಿಷ್ಟನೆನಿಸಿಕೊಂಡೆನೋ ಮುಟ್ಟರೆನಿಸಿಕೊಂಡೆನೊ ಗೋಪಾಲ ಕೊಟ್ಟು ತಿನಿಸಿದೆನೊ ಗೋಪಾಲ7 ವೇದನೆಗೊಳುತಿದ್ದೆನೊ ಗೋಪಾಲ ಕೊಂಡದಿ ಬಿದ್ದೆನೊ ಗೋಪಾಲ ಗುಹ್ಯ ಯಾತನೆಗೊಳಗಾದೆ ಗೋಪಾಲ ಬಾಧೆಯೊಳು ಒರಲುವೆನೊ ಗೋಪಾಲ 8 ನಿನ್ನ ನೆನೆಯದಿದ್ದೆನೊ ಗೋಪಾಲ ದುಷ್ಟಬುದ್ಧಿಯೊಳಿದ್ದೆನೊ ಗೋಪಾಲ ಶ್ರೇಷ್ಠಜನ್ಮದಿ ಬಂದೆನೊ ಗೋಪಾಲ ಸೃಷ್ಟಿಯೊಳು ತುರುಗೇರಿ ಗುರು ಅಚಲಾನಂದವಿಠಲ ಸಲಹೆಂದೆನೋ ಗೋಪಾಲ 9
--------------
ಅಚಲಾನಂದದಾಸ
ಬನ್ನ ಬಡಿಸುವುದು:ಖನೀಗುವಂತೆ ಸಿರಿ ಮನ್ನಣೆಯ ಪಡಿಯ ಕಂಡ್ಯಾಮನವೆ ಪ ಘನ್ನವಿದ್ಯದಮಬ್ಬಿಲಿನ್ನ ಖಳಜಗದ ಜೀ ವನ್ನ ಮಲಗಿದೆರೊಳಗ ಮುನ್ನ ಮಾಡಿದ ಸುಕೃತ ಪುಣ್ಯ ತಂಗಾಳಿ ಸಂಪನ್ನ ಗುರು ಕರುಣೋದಯ ದುನ್ನತೆಯ ಬೆಳಗು ಕಂಡು ಸನ್ನುತುದಯರಾಗಸ್ತವನ್ನು ಪಡುತಜ್ಞಾನ ಚನ್ನ ನದಿಯೊಳುಮಿಂದು ತನ್ನ ಸಂಚಿತದ ತ್ರೈಯ ಘ್ರ್ಯನ್ನೆರದು ಮೆರುವುತಿಹ ನಿನ್ನ ಸಿರಿಕರ ನೋಡು ಇನ್ನು ನಾಚಿಕೆ ಬಾರದೇ 1 ಬಂದು ನರದೇಹದಲಿ ನಿಂದಾಗ್ರ ಜನ್ಮದಲಿ ಹೊಂದುಪಥವನೆ ಬಿಟ್ಟು ಛಂದ ಹೊಲಬದಿ ಕೆಟ್ಟು ಮಂದಮತ ತನವೆರಿಸಿ ಮಂದಿಯೊಳಗಲ್ಲೆನಿಸಿ ಪರಿ ಪರಿಯ ಬಯಸೀ ಬೆಂದ ವಡಲನೆ ಹೊರೆದಿ ಕುಂದದಾಟಕೆ ಬೆರೆದಿ ತಂದಾಯುಷವ ಹೊತ್ತು ಇರದಯೇರಿತು ಬೆರೆತು ಮುಂದ ನಿನ್ನಯ ಗತಿಯ ಯಂದು ಘಳಿಸುವೆ ಸ್ಥಿತಿಯಾ ಇಂದಿರೇಶನ ವಲುಮೆಯಾ 2 ಮರಹು ಮುಸುಕವ ತೆಗೆದು ಅರಹುನಯನವ ತೆರೆದು ಪರಮ ಭಾವನೆ ಬಲಿದು ವರ ಭಕುತಿಗಳ ಜಡಿದು ತರಣೋಪಾಯವ ಕೂಡು ಹರಿಯ ಸೇವೆಯ ಮಾಡು ನೆರೆ ಸಾಧು ಸಂಗ ಬೇಡು ಸುರಸ ಬೋಧವ ಕೇಳು ಸರಕುಮಾತನೆ ಕೀಳು ಧರಿಯೊಳಗ ಸಾರ್ಥಕಲಿ ಪರಿಬಾಳುತಲಿರಲಿ ಗುರು ಮಹಿಪತಿಸ್ವಾಮಿ ಹೊರೆವದಯದಲಿ ನೇಮಿ ಶರಣ ಜನರಂತರ್ಯಾಮೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾತರ | ಜನುಮಾ | ಶಿರಿನಾಥನ ವಲುಮೆಗೆ ದೂರಾದ ನರನಾ ಪ ಉಂಡುಂಡು ವರಗುತ ಕಂಡಲ್ಲಿ ತಿರುಗುತ | ಭಂಡ ಮಾತುಗಳಾಡಿ ದಿನನೂಕುತಾ | ಮಂಡಲೇಶನ ಭಕ್ತಿ ಮಂಡಿಸಿ ಮನದೊಳು | ಖಂಡ ವಿಷಯದಾಶೆ ಗಂಡಲುವವನಾ 1 ಸ್ನಾನ ಸಂಧ್ಯಾನಿಲ್ಲಾ ಧ್ಯಾನ ಮೌನಗಳಿಲ್ಲಾ | ಭವ ಕಾನನವನು ಸೇರಿ | ಶ್ವಾನ ಸೂಕರನಂತೆ ಬಾಳುತಲಿಹನಾ 2 ಹಿಂದಿನ ಪುಣ್ಯದೀ ಬಂದದೀ ನರದೇಹ | ಮುಂದ್ಯಾವ ಗತಿಯೆಂಬ ಬೆಜ್ಜರದೀ | ತಂದೆ ಮಹಿಪತಿ ನಂದನ ಪ್ರಭು ಗೋ | ವಿಂದ ಮುಕ್ಕುಂದೆಂಬ ನಾಮವ ನೆನಿಯದೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು