ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ನಿನ್ನ ದಯವು ಆಗೋದೋ ಇಂದಿರೇಶ ದುರಿತ ಹಿಂದಕ್ಕ್ಹೋಗೋದೊ ಮಂದಬುದ್ಧಿಯಿಂದ ನಾಲಿಗೆ ಹಿಂದೆ ಮುಂದೆ ನೋಡುತಿಹುದು ಸಂದೇಹ ಬಿಟ್ಟು ಗೋವಿಂದನ್ನ ನೆನೆಯಲಿಕ್ಕೆ ಪ ಹರಿಯ ತನಯ ಹರಿಯು ಹರಿಯೆಂದು ಒರೆಯುತಿರಲು ಗಿರಿಯನ್ಹತ್ತಿಸಿ ಉರಿಗೆ ಕೆಡುಹಿದ ಕರುಣವಿಲ್ಲದ ಹಿರಣ್ಯಕನು ಪರಮ ಬಾಧೆ ಬಡಿಸುತಿರಲು ಕರೆಯೆ ಕಂಬದಿ ಬಂದು ನರ- ಹರಿಯ ನಾಮ ಕಾಯ್ತು ಅವನ 1 ಕಂತುಪಿತನೆ ನಿನ್ನ ಭಜಿಸದೆ ದ್ವಿಜನು ಕೆಟ್ಟು ಅಂತ್ಯಜ ಸ್ತ್ರೀಯಳ ಕೂಡಿ ಮೆರೆಯಲು ಅಂತ್ಯಕಾಲದಲ್ಲಿ ಏಕಾಂತದಿಂದ ಮಗನ ಕರೆಯೆ ಕಂತುನಯ್ಯ ನಿನ್ನ ನಾಮ ಎಂಥಗತಿಯ ಕೊಟ್ಟಿತವಗೆ2 ದುಷ್ಟಪತ್ನಿ ನುಡಿಗೆ ಉತ್ತಾನಪಾದ ತನ್ನ ಪುತ್ರನಿಂದ ರಹಿತನಾಗಲು ಅಚ್ಚುತನ ಧ್ಯಾನದಲಾಸಕ್ತನಾಗೆ ಉಗ್ರತಪಕೆ ಮೆಚ್ಚಿಕೊಟ್ಟ ನಮ್ಮ ಸ್ವಾಮಿ ಹೆಚ್ಚಿನ ಲೋಕ ಪದವಿ ಧ್ರುವಗೆ 3 ಬಂದು ಭರದಿ ಮಡುವ ಕಲಕುವೋ ಮದಡಗಜವ ಕಂಡು ಮಕರಿ ಕಾಲು ಹಿಡಿಯಲು ಬಂಧುಗಳಿಂದ ರಹಿತವಾಗಿ ಒಂದು ಸಾವಿರ್ವರುಷ ಬಾಳಲು ಇಂದಿರೇಶ ನಿನ್ನ ಸ್ಮರಣೆಯಿಂದ ಶಾಪ ವಿಮೋಚಿತನಾದ 4 ಸೃಷ್ಟಿಗಧಿಕ ನಿನ್ನ ದಯವಿರೆ ಪಾಂಡುಸುತರ ಪಟ್ಟದ ರಾಣಿ ಸಭೆಗೆ ಎಳೆಯಲು ವಸ್ತ್ರಹರಣ ಕಾಲದಲ್ಲಿ ಭಕ್ತಿಯಲ್ಲಿ ಭೀಮೇಶ- ಕೃಷ್ಣನ ಮುಟ್ಟಿ ಭಜಿಸೆ ಕೃಷ್ಣೆಗಾಕ್ಷಣ ತೃಪ್ತನಾಗಿ ಕೊಟ್ಟೆಯೊ ವಸನ 5
--------------
ಹರಪನಹಳ್ಳಿಭೀಮವ್ವ
ತಾಳು ತಾಳೆಲೆ ಮನವೆ ತಾಳ್ಮೆಯ ತಾಳು ತಾಳೆಲೆ ಮನವೆ ಪ. ತಾಳು ತಾಳು ನಿನ್ನಾಳುವ ದೊರೆಯಿಹ ಅವ ಗಾಳಾಗಿ ನೀ ಬಾಳಲು ಕಾಳು ಮಾಡನು ಹರಿ ಅ.ಪ. ದುರ್ಜನರಾಡಿದ ನುಡಿ ಮನಕದ ಸಜ್ಜುಗೊಳಿಸಬೇಡ ಅರ್ಜುನ ಸಖನೇ ನಿನ್ನ ಪರೀಕ್ಷಿಸೆ ನಿರ್ಜರೇಶನೀಪರಿ ಮಾಡಿಹನೆಂದ 1 ಅಳಕು ಮನವ ಬಿಡು ನಿ ನ್ನಳದು ನೋಡುವ ಹರಿಯು ಅಳವಲ್ಲವನ ಲೀಲೆ ಕಂಡ್ಯ ಝಳ ಝಳ ಮನದಲಿ ಕಳೆ ಕಲೆ ಹರಿರೂಪ ಪೊಳೆದು ನಿನ್ನ ಮನದಳಕನೆ ದೂಡುವ 2 ಅಂಜದಿರಭಯವ ಅಂಜನಾಸುತ ಸೇವ್ಯ ಶ್ರೀ ಶ್ರೀನಿವಾಸ ಶ್ರೀರಾಮ ನಿ ನ್ನಂಜಿಸುವರನು ಅಂಜಿಸೆ ಕಾದಿಹ ಸಂಜಯ ಪ್ರಿಯ ಕಂಜನಾಭ ಹರಿ 3
--------------
ಸರಸ್ವತಿ ಬಾಯಿ