ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ಎರಡು ಮೃಗ ಬ್ಯಾಟಯಲಿ ಹೊರಟ್ಹೋಗುವಾ ಯಕ್ಷಾನುಗರಿಂದ ತಾ ಮೃತನಾಗುವಾ ಮಗ ಬಾರಾನೆಂದು ತಾಯಿ ಮಿಡುಕುತಾ ರಾಜ್ಯ ಅಗಲಿ ಹೋಗ್ವಳು ತಾ ಹುಡುಕುತಾ 7 ಅಂತ:ಕರುಣ ತಾಪದಲಿ ಕಾಡಾಕಿಚ್ಚಿ ನಂತದೊಳಗೆ ಬೀಳೋಳು ಗಾಡಾ ಚಿಂತೆಯಾಕೆ ನೃಪಹೋಗಿನ್ನ ನಿ ಶ್ಚಿಂತೆಯಿಂದಲಿ ರಾಜ್ಯ ಮಾಡಿನ್ನ 8 ಎಂದು ಹಸ್ತವ ಶಿರದಲ್ಲಿಟ್ಟು ಆ ನಂದದಿಂದಲಿ ವರಗಳನು ಕೊಟ್ಟು ಮುಂದನಡೆದ ಪಕ್ಷಿವಾಹನನು ಜಗ ದ್ವಂದ್ಯ 'ಶ್ರೀ ಅನಂತದ್ರೀಶ' ನು 9 ಪದ ಆದಿ ಮೂರುತಿ ಶ್ರೀರಮೇಶಾ ತನ್ನ ಧಾಮಕ್ಕ್ಹೋದನು ಮೋದರಹಿತನಾಗಿ ಬಾಲದೀರ್ಘ ಉಸುರಗಳದನು ಪೋದನೆಂದು ದು:ಖದಿಂದ ತಿರುಗಿ ಪುರಕ ನಡದನು ಯಾದವೇಶ ಹಾ ಮುರಾರಿ ಎಂದು ಆಗ ನುಡದನು 1 ಪೂರ್ವ ಪುಣ್ಯದಿಂದ ನಿನ್ನ ರೂಪ ಯನಗ ತೋರಿದಿ ಶರ್ವಮಿತ್ರಯೆನ್ನಾ ವಿಷಯ ಮಡುವಿನೊಳಗ ಹಾಕಿದಿ ಸರ್ವಕಾರ್ಯ ಬಿಟ್ಟು ಕರುಣಾದಿಂದ ಆಗ ನೋಡಿದಿ ಗರ್ವಯುಕ್ತನಾಗಿ ಯನ್ನಬಿಟ್ಟು ಈಗವೋಡಿದಿ 2 ಸಿಕ್ಕಿದಂಥ ದಿವ್ಯಮಾಣಿಕ್ಯ ಕಳದಂತಾಯಿತು ಫಕ್ಕನೆದ್ದು ಕುಳಿತು ಕಂಡಾಕನಸಿನಂತಾಯಿತು ಮಿಕ್ಕ ವಿಷಯ ಭೋಗ ಬೇಡಿ ಜನ್ಮ ವ್ಯರ್ಥವಾಯಿತು ತಕ್ಕ ಮುಕ್ತಿ ಬೇಡಲಿಲ್ಲಾ ಯನ್ನ ಬುದ್ಧಿ ಹೋಯಿತು 3 ಕ್ಲೇಶ ಬಿಟ್ಟು ಈಗ ಬಹಳ ವಿಷ್ಯ ಸೌಖತು” ಏಸು ಜನ್ಮ ಪೂಜೆ ಮಾಡಿದಾರು ದೇವ ದೊರಕನು ಮಾಸ ಪಂಚದಿಂದ ಯನ್ನ ದೃಷ್ಟಿ ವಿಷಯ ನಾದನು 4 ಆಶಿಇಂದ ಆಗ ವಿಷಯ ಸËಖ್ಯವನು ದೈವಕೆ ಮಾಡಿಕೊಂಡು ಹೀಂಗ ಮನಸ್ಸಿನಲ್ಲಿ ಬಂದ ಪಟ್ಟಣಕೆ ಕೊಂಡ ಪುರಸಮೀಪಕೆ 5 ಶ್ಲೋಕ ಆಗ ನೋಡಿದ ಒಬ್ಬ ಧ್ರುವನ್ನಾ ವೇಗ ಪುಟ್ಟಿತು ಮನಸಿಗೆ ತನ್ನ ಬ್ಯಾಗ ಪೇಳಿದ ಅರಿಸಿನ ಮುಂದಾ ಬಾಗಿ ಬಿನ್ನಯಿಸಿ ತಾನಯ ದಿಂದಾ 1 ಪದ ರಾಜಭೂಪಾನೆ ನಿನ ಕಂದ ಬಂದಾ|| ಪೂಜಿಸಿ ದೇವೇಶನ ಛಂದದಿಂದ || ಪರಿಪರಿಯಿಂದಾ ಗುರುಕೃಪೆಯಿಂದಾ | ತಿರುಗಿ ಇಲ್ಲಿಗೆ ಕ್ಷೇಮದಿಂದಲಿಂದಾ 1 ಪುಣ್ಯಗಳಿಂದಾರಣ್ಯದಲಿಂದಾ ಸಣ್ಣಬಾಲನು ಭಾಳನಂದದಿಂದಾ 2 ಅನಂತರದಿಂದಾ ಅನಂತ ಸÉೀವಿಂದಾ 'ನಂತ್ರಾದೀಶನಾ’ ದಯದಿಂದ ಲಿಂದಾ 3 ಆರ್ಯಾ ಕಾಂಬೆನು ಯಂದಾ ಹುಟ್ಟಿತು ಆನಂದಾ1 ಪದ ರಾಗ :ಶಂಕರಾಭರಣ ಆದಿತಾಳ ಸುದ್ದಿ ಹೇಳಿದಾತಾಗೆ ಬೇಕಾದ್ದು ಕೊಟ್ಟು ಹರುಷದಿಂದ ಯದ್ದು ರಥವಾನೇರಿ ತಾ ಸನ್ನದ್ಧ ನಾದನು 1 ಇಬ್ಬರ ಹೆಂಡಿರ ಕೂಡಿ ಒಬ್ಬ ಪುತ್ರನಿಂದ ಕೂಡಿ ಅಬ್ಬರದಿಂದಲಿ ತಾ ಉಬ್ಬುಬ್ಬಿ ನಡದಾನು 2 ಮಂತ್ರಿಗಳು ವಿಪ್ರಾರು(ಗಳು) ಮಂತ್ರಜ್ಞಾರು ಮಾನವಾರು ಸಂತ್ರೋಧಾರ ನಡದಾರು ಬಜಂತ್ರಿ ಘೋಷಾದಿ 3 ಮೃದಂಗ ಘೋಷ ಸಾರಿಸಾರಿ ನುಡದಾವು ಅಬ್ಬಾರದಿಂದಲಿ 4 ತಂಬೂರಿಘೋಷಾ ಜಾಣೆ ರಾಮಂಜುಳಗೀತಾವಾಣಿ ಘೋಷಾವು 5 ಅಂಗಾನೇರು ಕುಂಕುಮಾದಿ ಮಂಗಲ ಭೂಷಾದಿಂದ ಶೃಂಗಾರಿಸಿ ಕೊಂಡಾರು ಕುರಂಗ ನೇತೆÀ್ರರು 6 ಧಟ್ಟಿ ಪೀತಾಂಬರನುಟ್ಟ ಬಟ್ಟಾ ಕುಚದಲ್ಯೊಪ್ಪುವಾ ಕಠ್ಠಾಣಿ ಮೋಹನ ಮಾಲೆನಿಟ್ಟು ಕೊರಳಿಗೆ 7 ರಂಬೇರು ವೀಳ್ಯವ ಮೆದ್ದು ತಾಂಬೂಲಗಲ್ಲಾದಲ್ಯೊತ್ತಿ ತುಂಬಿ ಹರುಷದಿಂದ ಚಂದ್ರ ಬಿಂಬ ಮುಖಿಯರು 8 ಮೀರಿದಾ ಸಂಭ್ರಮದಿ ಶೃಂಗಾರವನು ಮಾಡಿಕೊಂಡು ಥೋರಾಗನ್ನಡಿಲಿ ತಮ್ಮ ಮಾರಿ ನೋಡೋರು 9 ಕುಡಿಗಣ್ಣ ನೋಟಾದವರು ನಡಸಣ್ಣಾದಿ ಬಳಕುವರು ಮಂದ ನಡಗಿ ವಂತರು 10 ಪಟ್ಟಾಣದಿಂದಲಿ ವಳ್ಳೇ ಧಿಟ್ಟನಾರಿಯರು ಕಾಲಾ ಬಟ್ಟಿನಲಿ ಕಾಲುಂಗುರ ಮೆಟ್ಟಿ ನಡದಾರು11 ಪರಿಪರಿ ವಿಲಾಸದಿಂದ ಕರದಲ್ಲಿ ಕರತಳಾನಿಕ್ಕಿ ಕಿರಿನಗಿಯಿಂದಲ್ಲೆ ನಗುತಾ ಬರುವುತೀಹರು 12 ಹಿಂಡುಜನರಾಗಳ ಕೂಡಿಕೊಡು ರಾಜಾಬಂದು ಮಗನಾರಥವಾನಿಳುದು ಅಪ್ಪಿಕೊಂಡಾ ಹರುಷದಿ 13 ಮೂಸಿ ನೋಡಿತನ್ನ ಜಲಜಾ ಲೋಚನಗಳಿಂದ ಜಲವಾಧರಿಸಿದ 14 ಛಂದಾದಿ ಬಾಲಾನು ತನ್ನ ತಂದಿ ಪಾದಾದೊಳು ಯರಗಿ ಪಾದ ಬಂದು ಯರಗಿದ 15 (ತಾಯಿಯರ ಪಾದಗಳಿಗೆ ಪೋರ ಬಂದು ಯರಗಿದ) ಸಾಧುತಂದಿತಾಯಿ ಆಶೀರ್ವಾದ ಯುಕ್ತನಾಗಿ ತನ್ನ ಮೋದ ಬಟ್ಟಾಳು 16 ಏಳಯ್ಯಾ ಎಳಯ್ಯಾಯೆಂದು ಭಾಳಾನಂದಾದಿಂದ ಲ್ಯಪ್ಪಿ ಭಾಳಾಯುಷ್ಯಾವಂತನಾಗೊ ಬಾಲಾಯೆಂದಾಳು 17 ಉತ್ತಮ ಧ್ರುವನು ತಾತಾ ಗುಣೋತ್ತಮ ಇಬ್ಬರು ಕೂಡಿ ಅತ್ಯಂತ ಹರುಷಗೊಂಡಾರಂತ:ಕರುಣದಿ 18 ಇಂದಿಗೆ 'ಅನಂತಾದ್ರೀಶಾ’ ಹೊಂದಿಸಿದಾ ನಮ್ಮಿಬ್ಬರಾ ನೆಂದು ಮಾತನಾಡಿದರು ಕಂದರಿಬ್ಬಾರು 19 ಛಂದ ಹೆತ್ತ ತಾಯಿಗೆ ಚಿತ್ತಸಂಭ್ರಮಾ ಮತ್ತ ಜನರಿಗೆ ಚಿತ್ತ ವಿಭ್ರಮಾ ಪುತ್ರನಷ್ಟಿ ತಾ ಯೆತ್ತಿಕೊಂಡಳು ಸುತ್ತ ಚಿಂತಿಯಾ ಮರ್ತುಬಿಟ್ಟಳು 1 ಸುಂದರಾಂಗಿಯ ಆನಂದ ಬಾಷ್ಪದಾ ಬಿಂದು ಸ್ನಾನವು ಕಂದ ಮಾಡಿದಾ ಮುಂದ ರಥದಲ್ಲಿ ಬಂದು ಕುಳಿತನು ಮುಂದಿರುವ ಬಾಲನ ಒಲಿದು ನೋಡುತಾ ಮೊಲಿಯ ಪಾಲು ಚೆಮ್ಮಿ ತಲಿಯಲಿ ಹರುತಾ ಹಲವು ರಾಜ್ಯಕೆ ಮುಂದ ಸೂಚನಾ2 ಕುದರಿಸೈನ್ಯದಿಂದ ನಡದನು ಭಾಳ ಬಿರುದಿನಾ ಕಾಳಿ ಊದುತಾ ತಾಳ ವಾದ್ಯವು ಭಾಳ ನುಡುವುತಾ ಕೇಳಿಪುರದಲ್ಲಿ ಬಾಲಪುರುಷರು ಮಾಳಿಗಿಯಲಿ ಭಾಳ ನಿಂತರು 3 ಉತ್ತಮಾರ್ಯರು ಮತ್ತ ಸ್ತ್ರೀಯರು ಹತ್ತಿ ಮಾಳಿಗಿ ಸುತ್ತ ನಿಂತರು ಯೆತ್ತ ನೋಡಲು ರತ್ನ ಭೂಷಿತಾ ಉತ್ತುಮಾ ಪುರಿ ಭರ್ತ ಪಾಲಿತಾ 4 ಸಾಲು ಸಾಲಕೆ ವಿಶಾಲ ಮಂಟಪಾ ಸಾಲ ದೀಪದಿ ಭಾಳ ಶೋಭಿಪಾ ಸೆಲ (ಚೆಲ್ವ?) ಮುತ್ತಿನ ಸಾಲಯಳಿಗಳು ಮ್ಯಾಲ ಮಲ್ಲಗಿ ಮಾಲಕಿಗಳು 5 ಆರ್ಯಾ ಮಂದ ಮಾರುತಾನಿಂದ ಭಾಳಮಕರಂದ ಪುಷ್ಟದಾ ವಾಸನವು ಮುಂದ ಪತಾಕಿಗಳಿಂದ ಕಣ್ಣಿಗೆ ಛಂತ ತೋರಿಪಾ ಪಟ್ಟಣ್ಣವು 1 ವೇಗದಿಂದ ರಥ ಸಾಗಿಸಿ ಧ್ರುವ ಛಂ ದಾಗಿ ನಡೆದನು ಪುರದೊಳಗೆ ಬ್ಯಾಗ ಗೋಪುರದ ಬಾಗಿಲದಾಟಿ ಪೋಗಿ ಕುಳಿತನು ಸಭಿಯೊಳಗೆ 2 ಬಾಲನ ಕಂಡು ಭೂಪಾಲನು ಹಿಗ್ಗುತಾ ಭಾಳಪುಟ್ಟಿ ಮನದುದ್ರೇಕಾ ಕಾಲ ಮೂಹೂರ್ತದ ವ್ಯಾಳಯವು ಸಾಧಿಸಿ ಬಾಲಗ ಮಾಡಿದ ನಭಿಷೇಕಾ3 ಕೊಟ್ಟರಾಜ್ಯವನು ಪಟ್ಟಗಟ್ಟಿ ಮುಂ ದಿಟ್ಟ ಶಿಖಾ ಮುದ್ರಿಕಿಯನ್ನು ಅಷ್ಟ ವಿಭೂತಿಗ¼ಷ್ಟು ಕೊಟ್ಟು ಸಂ ತುಷ್ಟನಾದ ಭೂಪತಿ ತಾನು 4 ಛಂದದಿ ದೇವರಿಗೊಂದಿಸಿ ಧ್ರುವ ಆ ನಂದದಿ ಬ್ರಾಹ್ಮರಿಗೆರಗಿದನು ತಂದಿ ತಾಯಿಗಳಿಗೊಂದಿಸಿ ಬಹುತ್ವರ ದಿಂದ ಏರಿದಾ ಪೀಠವನು 5 ಸುಂದರ ಸಭಿಯಲಿ ಬಂದು ಕೂಡಲು ದೇ ವೇಂದ್ರನಂತೆ ಬಹು ಶೋಭಿಸಿದಾ ಬಂಧು ಜನರಿಗ್ಯಾನಂದವ ತೋರುತ ಚಂದ್ರಮನಂತೆ ಶೋಭಿಸಿದ 6 ಝಗಿಝಗಿ ತೋರುವ ಬಗಿಬಗಿ ಕುಪ್ಪುಸ ಬಿಗಿಬಿಗಿ ಇಂದಲಿ ತೊಟ್ಟವರು ಲಗು ಬಗೆಯಿಂದಲಿ ನಗಿನಗಿ ಮಾತಿನ ಸೊಗಸು ಗಾರಿಕೆ ಬಲ್ಲವರು 7 ಥೊರಮುತ್ತು ಜರತಾರ ಮಯದ ಉಡ ಗೊರಿ ತಂದರು ಆ ಜನರು ಸಾರ ಸಿಂಹಾಸನಯೇರಿದ ಧ್ರುವನಿಗೆ ಆರುತಿ ತಂದರು ನಾರಿಯರು 8 ಮುತ್ಹಚ್ಚಿದ ಹೊಸ ನತ್ತುಗಳಿಂದಲಿ ಮತ್ತಿಷ್ಟೊಪ್ಪುವ ಮುಖದವರು ಪುತ್ಥಳಿ ಸರಘುನ ಮುತ್ತಿನ ಸರಗಳು ಉಳ್ಳವರು9 ಹತ್ಹೊರಷುದ ಮ್ಯಾಲ್ಮತ್ತೆರಡೊರ್ಷದ ಉತ್ತಮ ಪ್ರಾಯದ ಬಾಲಿಯರು ಮತ್ತ ಕಾಲುಂಗರ ವತ್ತೊತ್ತಿ ನಡುವುತ ಗತ್ತಿನಿಂದಲೆ ನಡುವುವರು 10 ಪದ ತಂದ್ರು ಆರುತಿ ಚಂದ್ರ ಮುಖಿಯಾರು ತಂದ್ರು ಆರುತಿ ಬಹು ಸುಂದರ ಸುಗುಣೇರು ಪ ಚಂದುಟಿ ಕಚ್ಚುತ ನಿಂದ್ರದ ಮದದ ಗ ಜೇಂದ್ರ ಗಮನಿಯರು ಬಂದ್ರಾಗಲೇ ದೇ ವೇಂದ್ರನ ಸಮರಾಜೇಂದ್ರನÀ ಸುತಗೆ ಅ.ಪ ಬಣ್ಣಗಾರಿಕೆಯಲಿ ಸಣ್ಣಕುಂಕುಮನಿಟ್ಟ ಕಣ್ಣಕುಡಿ ಹುಬ್ಬು ಕುಣಿಕುಣಿಸ್ಯಾಡುತ ಹೆಣ್ಕೋಕಿಲ ಸ್ವರ ಸಣ್ಕಂಠದಿ ನುಡಿ ಸಣ್ಕದಿ ಪಾಡುತ 1 ಕೈ ಬೆರಳಿಗೊಪ್ಪುವ ಹರುಳಿನುಂಗುರ ಇಟ್ಟವರು ಯರಳಿಯಂತೆ ಹೊರಹೊರಳಿ ನೋಡಿ ಮುಂ ಗುರುಳ ಗೂದಲಾ ತೀಡುವರು ಜಾಣಕಾಂತಿಯರು 2 ಮೇಲ್ಮಾಟದ ಬಗಿಯುಲ್ಮಾತಾಡುತ ಬಲ್ಮೋಹದಿ ಬಹು ಮೆಲ್ಲಮೆಲ್ಲನೆ ಹೆಜ್ಜೆ ನೆಲ್ಲ ಮ್ಯಾಲಿಕ್ಕುತ ಸೊಲ್ಮುಡಿನೇವರಿಸಿ ಮ್ಯಾಲ್ಮಲ್ಲಿಗಿ ಸರಗಳ ಮುಡಿಯವರು 3 ಸದ್ರಸ ಕುಂಕುಮ ಮುದ್ರಾಂಕಿತ ಕುಚ ಘದ್ರಿಸುತಲಿ ಬಹು ಉದ್ರೇಕದಿ `ಅನಂತಾದ್ರೀಶನ ' ಮುದ್ರಿಕಿ ಪದಗಳು ಘದ್ರಿಸಿ ನುಡಿವುತಾ ಭದ್ರಾಂಗಿಯರು 4 ಪದ ಮಂಗಳ ಮೂರುತಿ ಬಾಲಾಗೆ ಶ್ರೀ ನೃಪಾಲಾಗೆ ಮಂಗಳ ಗುಣಶೀಲಾಗೆ ಮಂಗಳಮೂರುತಿ ಛಂದಾ ಬಗಿಯಿಂದಾ ಪ ಶುಭದಿಂದಾ ಆನಂದದಿಂದಾ ಅಂಬೂಧಿಯೊಳಗಾಡಿ ಗಂಭೀರಾಗಿರಿಪೊತ್ತಾ ಜಾಂಬುನದಾಕ್ಷಾರಿ ವರ ಪ್ರಿಯಾಗೆ ಗಂಭೀರಾ ನೃಸಿಂಹಾನ ನೆಂಬಿ ರಕ್ಷಿತ ನೀಗೆ ರಂಭೇರು ಕರುಣಾದಿ ನೋಡಿ ಒಡಗೂಡಿ ಕೊಂಡಾಡಿ ತ್ವರಗೂಡಿ ಪಾಡಿ 1
--------------
ಅನಂತಾದ್ರೀಶ - ಕಥನಕಾವ್ಯಗಳು
ತೂಗಿರೆ ವೇಣು ಗೋಪಾಲನ್ನ ತೂಗಿರೆ ಕನಕಾದ್ರಿ ವೆಂಕಟನಾ ಪ ಬಾಲಾನುಮಲಗ್ಯಾನೆ ತೂಗಿರೇ 1 ಕಮಲಾಕ್ಷಿಯರೆಲ್ಲಾ ತೂಗೀರೇ ಕಟಹಾಲ್ದಮರನೇರಿದವನ್ನಾ 2 ವನಜಾಕ್ಷಿಯಾರೆಲ್ಲಾ ತೂಗೀರಮ್ಮಾ ಪವಮಾನನುತರಾಮಚಂದ್ರನ್ನಾ 3 ವೆಂಕಟವಿಠಲನ್ನ ತೂಗೀರೇ4
--------------
ರಾಧಾಬಾಯಿ
ಪಾಲಿತ ಸುರನರ ಜಾಲಸುಚರಿತ ಪ ಫಣಿ ಮಾಲಶ್ರೀಲೋಲ 1 ಜಾಲವಿಮೋಹಿತ ಬಾಲಾನು ಕೂಲ 2 ಧಾರಾಧರಾಭ ಶರೀರ ತಿರಸ್ಕøತದೂರ ವಿಹಗಸಂ ಚಾರವುದಾರ3 ನಿಗಮ ವಿಚಾರ ವಿಹಾರ 4 ಸುಖಕರಣ ಶ್ರೀರಮಣ 5 ಮನೋಹರಭೂಷ ಸುವೇಷ 6 ದ್ವಿರದವರದ ಶ್ರೀವರದ ವಿಠಲ 7
--------------
ಸರಗೂರು ವೆಂಕಟವರದಾರ್ಯರು
ಫಾಲನಯನ ನುತ ಪಾಲಿಸು ಸತತ ಪಾಲಿಸು ಸುರನರ ಜಾಲಸುಚರಿತ ಪ ಲೀಲಾನಟನ ಫಣಿಶೈಲನಿಳಯ ಭಕ್ತ ಪಾಲವಿಧೃತ ವನಮಾಲ ಶ್ರೀಲೋಲ 1 ಬಾಲತನದಿ ನಿಜ ಲೀಲಾ ಚರಿತಗುಣ ಜಾಲವಿಮೋಹಿತ ಬಾಲಾನುಕೂಲ 2 ಧಾರಾಧರಾಭ ಶರೀರ ತಿರಸ್ಕøತ ಮಾರ ವಿಹಗಸಂಚಾರ ಉದಾರ 3 ಸುಜನ ಪರಿ ನಿಗಮ ವಿಚಾರ ವಿಹಾರ 4 ಕರುಣಾವರಣ ನಿಜಶರಣಾಭರಣ ಭಯ ಹರಣ ಸಕಲ ಸುಖಕರಣ ಶ್ರೀರಮಣ 5 ಶೇಷಶಯನ ಕಲಿದೋಷದಮನ ಮೃದು ಭಾಷ ಮನೋಹರಭೂಷ ಸುವೇಷ 6 ಹರಿದಾಸರನು ಬಲು ಹಿರಿದಾಗಿ ಮೆರೆಸುವ ದ್ವಿರದ ವರದ ಶ್ರೀವರದವಿಠಲ 7
--------------
ವೆಂಕಟವರದಾರ್ಯರು