ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಶೇಖರ ರಕ್ಷಿಸೋ ಎನ್ನ ತಂದೆ ಶಂಕರ ಹಿಂದೆ ಪೊಂದಿದ ದೇಹದ ಮತ್ತಿಂದು ಹಿಡಿಯುತ ಪ ಹಿಂದೆ ಬಿಸುಟೊಡಲು ಮರು ಕೊಳಿಸಿ ಸಾರಿ ಬಂದುದು ತಂದೆ ತಾಯಿಯ ಗಣನೆ ಉರ್ವಿಸಿಕವನು ಮೀರಿತು ಅಂದು ಮೊದಲು ಜನನೀಸ್ತನವನುಂಡು ಪಾಲಸವಿದುದು ಇಂದು ಕಂದು ಗೊರಳನೆ 1 ಕಾಲ ಬಾಲವನಿತೆ ಬಾಳು ಬದುಕಿನೊಳಗೆ ತೊಳಲಿ ಬಳಲಲು ಕಾಯದೊಳಗೆ ಮುಸುಕಲು ಕೊಳುವೋದೆ ಯಮಗೆ ಶೂಲ ಪಾಣಿ ನೀಲಕಂಠನೆ 2 ಎನ್ನದಾನದೆಂಬ ಹಮ್ಮವಶದಿ ಸುಮ್ಮನೆ ಹೊನ್ನು ಹೆಣ್ಣು ಮಣ್ಣು ಮೂರು ತನ್ನದೆಂದು ನಂಬುತ ಬನ್ನ ಬಟ್ಟು ಸಾಯುತ ಭವದಶರಧಿ ಬೇಗೆಯನ್ನು ಈಸಲಾರೆನೋ 3 ಸಿಂಧು ತೆರೆಯೊಳು ಮಂದ ಗಜವು ಕುಣಿಯೋಳ್ ಬಿದ್ದು ಏಳಲಾರದಂದದಿ ಇಂದ್ರಜಾಲದೊಳಗೆ ಸಿಲುಕಿಮಂದಗೆಟ್ಟು ನೊಂದೆನೋ 4 ದುರಿತ ಮರಣ ಕಾಲದೊಳಗೆ ನಾಮಸ್ಮರಣೆ ಯಾದಗುವಂದದಿ ತರಣಿ ತಮವ ಕಡಿಸಿ ಧರೆಯ ಬೆಳಗುವಂತೆ ಹೃದಯದಿ ಕರುಣದಿಂದಲಿ ನಿರುತಸಲಹೋ ಇಕ್ಕೆರಿ ಅಘೋರೇಶಲಿಂಗನೆ 5
--------------
ಕವಿ ಪರಮದೇವದಾಸರು
ಭಾರತೀ ರಮಣ ಸುರವಿನುತ ಚರಣ ಶಾರದಾ ಪುರ ಶರಣ ಪ ನೂರು ಯೋಜನಮಿರ್ದವಾರಿಧಿ ಲಂಘಿಸಿ ಬೇಗ ಧಾರುಣಿ ಸುತೆಯ ಕಂಡು ದೂರ ನಮಿಸಿ ಸಾರಿ ಮುದ್ರಿಕೆಯ ನಿತ್ತು ತೋರಿರಾಕ್ಷಸಗೆ ಭಯ ಶ್ರೀರಾಮಗೆ ಬಂದು ಕ್ಷೇಮ ವಾರುತಿಯ ಪೇಳಿದಂಥ 1 ಇಂದು ಕುಲದಲ್ಲಿ ಪಾಂಡುನಂದನನೆನಿಸಿ ಜರಾ ಸಂಧ ಮುಖರನು ಗದೆಯಿಂದವರಸಿ ಅಂದುರಣದಲ್ಲಿ ಕರುವೃಂದವ ಮಥಿಸಿ ಆ ನಂದ ಕಂದನೊಲಿಮೆಯ ಛಂದದಿ ಪಡೆದು ಗುರು 2 ಮೇದಿನಿ ಮೋದ ತೀರ್ಥರೆಂದೆನಿಸಿ ವಾದದಿಂದಲಿ ವಾದಿ ಮತ್ತ ವಾರಣ ಮೃಗಾಧಿಪರೆನಿಸಿ ಪಂಚ ಬೇಧ ಬೋಧಿಸುವ ಶಾಸ್ತ್ರ ಸಾದರದಿ ವಿರಚಿಸಿದ 3 ಕಾಲಕಾಲದಲಿ ದ್ವಿಜರಾಲಯದಿ ಬಂದು ನಿನ್ನ ಬಾಲವನಿತೆರ ಸಹ ಶೇವಿಸುವರು ಪಾಲಿಕಿ ಉತ್ಸವದಲ್ಲಿ ಶೇರುವದು ಪೌರಜನ ಪಾಲಿಸಬೇಕಯ್ಯ ಪಾಂಚಾಲಿರಮಣನೆ ನಮೊ 4 ಭವ ಕೂ ಪಾರ ನಾವಿಕನೆ ಎಂದು ಪ್ರಾರ್ಥಿಸುತಲಿ ಸೇರಿದ ಸಜ್ಜನರಘ ದೂರಮಾಡಿ ಪೊರೆವಂಥಕಾರ್ಪರ ನಿಲಯ ಸಿರಿನಾರಸಿಂಹ ನೊಲಿಸಿದ 5
--------------
ಕಾರ್ಪರ ನರಹರಿದಾಸರು