ಒಟ್ಟು 9 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳು ಗೋಪಾಲ ಬಾಲ ಇನ್ನೂ ಭಾಳ ಹೊತ್ತಾಯಿತು ಭಕ್ತ ಪರಿಪಾಲ ಪ. ಮುನಿಜನರೆದ್ದು ಪೂಜಿಸೆ ನಿನ್ನ ನಿಂತಿರೆ ಮನುಜರೆಲ್ಲರೂ ಕಾದಿಹರು ದರುಶನಕೆ ಸನಕಾದಿ ವಂದಿತ ಸರ್ವೇಶನೆಂತೆಂದು ವಿನಯದಿಂದಲಿ ನುತಿಪರು ಭಾಗವತರು 1 ತಾರೆಗಳಡಗಿತು ಕಮಲಗಳರಳಿತು ಪೂರ್ವ ದಿಕ್ಕಿನಲಿ ತೋರುವ ರವಿ ಉದಯ ಭೇರಿ ತುತ್ತೂರಿ ನಗಾರಿ ಬಾರಿಸುತಿದೆ ಸಾರಿ ಕೂಗುತಲಿದೆ ಕೋಳಿ ವೃಂದಗಳು 2 ಬಾಲಲೀಲೆಗಳಿಂದ ಗೋವಳರೊಡನಾಡಿ ಭಾಳ ಆಯಾಸವಾಗಿಹುದೆ ಕಂದಯ್ಯ ಬಾಲೆ ಗೋಪ್ಯಮ್ಮ ನಿನ್ನ ಲಾಲಿಸಲಿಲ್ಲವೆ ಬಾಲಯತಿಗಳು ಪೂಜಿಸುವರೇಳಯ್ಯ 3 ಬಿಸಿಬಿಸಿ ನೀರು ಪಂಚಾಮೃತವೆರೆಯುತ ಹಸನಾದ ಪಾಲು ಸಕ್ಕರೆ ಉಂಡೆಗಳು ಹಸುಗೂಸು ನಿನಗೆ ಹುಗ್ಗಿಯು ದೋಸೆ ಪೊಂಗಲು ಬಿಸಜಾಕ್ಷ ಯತಿಗಳರ್ಪಿಸುವರೇಳಯ್ಯ 4 ನುತಿ ಕೇಳಲಿಲ್ಲ ಆ ದಣಿದೆಂದು ಮಲಗಿದ್ಯಾ ಶ್ರುತಿ ವೇದತತಿಗಿಂತ ಚತುರ ಮಾತಿನೊಳು ಹಿತದಿ ಯಶೋದೆ ಎಬ್ಬಿಸಲೆಂದು ಮಲಗಿದ್ಯಾ ಚ್ಯುತದೂರ ಗೋಪಾಲಕೃಷ್ಣವಿಠ್ಠಲಯ್ಯ 5
--------------
ಅಂಬಾಬಾಯಿ
ಜಾನಕಿಯು ನಮ್ಮಮ್ಮ ನಮಗೆ ಭಯವೇನು ಪ ಪವಮಾನ ತನಯನು ಪಾಲಿಪ ಗುರುವಯ್ಯಾ ಅ.ಪ ಕಾಲಕಾಲದಿ ತಪ್ಪದೆ | ಭತ್ಯವ ಹಾಕಿ ಬಾಲಲೀಲೆಗಳಾಡಿಸಿ ಮೇಲೆ ತುಡುಗಾಟವಾಡಿದರೆ ಕೆನ್ನೆಯ ಹಿಂಡಿ ಹಾಲ ಕುಡಿಸಿ ಮಕ್ಕಳರ್ಥಿಯ ನೋಡುವ 1 ಇತರ ಮಕ್ಕಳಿಗೆಲ್ಲಾ | ಅವರ ಮಾತಾ ಪಿತರು ವಡವೆಗಳಿಟ್ಟು ಮಿತಿಯಿಲ್ಲದೆ ಬೈದು ಬಲು ಚಿಂತೆಯ ಪಡುವರು 2 ಕಳ್ಳರಿಗೆ ಸಿಕ್ಕದೈಯ್ಯ | ನಮ್ಮೊಡವೆಗಳ್ ಕಳಚುವುದಕೆ ಬಾರದು ಒಳ್ಳೆ ವಸ್ತ್ರವ ಉಡಿಸಿ ಉಚಿತ ತಿಂಡಿಯ ಕೊಡಿಸಿ ಸುಳ್ಳಾಡದಂದದಿ ಸುತ್ತಿಸಿ ನಗುವರು 3 ಓದು ಬರಹವ ಕಲಿಸಿ | ನಮ್ಮನು ಕೆಲವು ಹೊತ್ತು ಆಟಗಳಾಡಿಸಿ ಆದರಿಸುತ ಜನ್ಮ ಜನ್ಮಗಳಲಿ ಬಿಡದೆ ಕಾದು ಕೊಂಡಿರುವರು ಕಡೆಗೂ ನಮ್ಮಗಲರು 4 ಇಂತಹ ನಮ್ಮವರ ಬಿಟ್ಟು | ಬರಿದೇ ಲೋಕ ಸಂತೆಯವರನು ನಂಬುವರೆ ಎಂತಾದರೂ ಗುರುರಾಮ ವಿಠಲನ ನಾಮ ಸ್ವಂತವಾದರೆ ಮುಕ್ತಿ ಸ್ವಾಧೀನವಾಗುವುದು5
--------------
ಗುರುರಾಮವಿಠಲ
ಬಂದ ಶ್ರೀಕೃಷ್ಣ ನಲಿಯುತ್ತ ನಸುನಗೆ-ಯಿಂದ ಬೇಗ ಯಶೋದೆಯಿದ್ದೆ[ಡೆಗೆ] ಪ. ಉದಯದೊಳೆದ್ದು ಮೊಸರ ಕಡೆವಾಗ ತನ್ನಅದುಭುತ ಬಾಲಲೀಲೆಗಳ ಪಾಡೆಮುದದಿ ನಯನದಿ ಜಲ ತುಳುಕಾಡುತಿರೆ ಕಂಡುಮದನನಯ್ಯನು ನಚ್ಚಿ ಬೆಣ್ಣೆಯ ಬೇಡುತ್ತ1 ಮಕ್ಕಳುಗಳ ಕೂಡಿ ಮನೆಮನೆಯೊಳಗಾಡಿಮಿಕ್ಕುಮೀರಿದ ರಕ್ಕಸರನೀಡ್ಯಾಡಿಅಕ್ಕರಿಂದಲಿ ತಾಯ ಮುಖವನೀಕ್ಷಿಸುತಲಿಗಕ್ಕನೆ ಸೆರಗ ಪಿಡಿದು ಮೊಲೆಯ ಕೊಡೆನ್ನುತ2 ಕುರುಳಕೂದಲು ಅರಳೆಲೆ ಮಾಗಾಯಿಕೊರಳಪದಕ ಹಾರ ಎಸೆಯುತಿರೆಚರಣದಂದುಗೆ ಗೆಜ್ಜೆ ಘಲುಘಲುಕೆನ್ನುತಲಿಸಿರಿಯರಸ ಹಯವದನನೆನಿಪ ಮೋಹನಾಂಗ 3
--------------
ವಾದಿರಾಜ
ಬೆಳಗಾಗಲು ಅರಘಳಿಗೆಯು ಇರುತಿರೆ ಸ್ಮರಿಸುವೆ ವಿಶ್ವಮೂರುತಿಯನ್ನು ಬೆಳಗಾಗಲು ಹರಿಧ್ಯಾನವ ಮಾಡುತ ಬಹಿರ ಭೂಮಿಗ್ಹೋಗುತ ಮುನ್ನು 1 ಕಲಿ ಮೊದಲಾಗಿಹ ದೈತ್ಯರನೆಲ್ಲಾ ವಿ- ಸರ್ಜನೆ ಮಾಡುತ ಮತ್ತಿನ್ನೂ ದಂತ ಧಾವನೆಯ ಮಾಡುತ ಶ್ರೀ ಮಾ- ಧವನನು ಸ್ಮರಿಸುವೆ ನಾನಿನ್ನೂ 2 ಮುಖವನು ತೊಳೆಯುತ ಮುರಹರಿ ಧ್ಯಾನದಿ ಶ್ರೀತುಳಸಿಯ ನಮಿಸುತಲಿನ್ನೂ ಮೀಸಲ ನೀರನು ಎರೆಯುತ ಬೇಗದಿ ಮೃತ್ತಿಕಿ ಫಣಿಗಿಡುತಲಿ ಇನ್ನು 3 ಮೂರು ಪ್ರದಕ್ಷಿಣಿ ಮಾಡುತ ಬೇಗದಿ ಮುದದಿ ನಮಸ್ಕರಿಸುತಲಿನ್ನೂ ದೇವರ ಮನೆಕಡೆ ಪೋಗುತ ನಿಂದಿಹ ಜಯವಿಜಯರಿಗೊಂದಿಸಿ ಮುನ್ನು 4 ದೇವರ ದರ್ಶನಕಾಜ್ಞೆಯ ಕೇಳುತ ದೇವರ ಗೃಹದೊಳು ಪೋಗುತಲಿ ಮಾಯಾ ಪತಿಯನು ಮನದೊಳು ಧ್ಯಾನಿಸಿ ವಂದನೆ ಮಾಡುತ ಬೇಗದಲಿ 5 ದೇವರ ಮನೆಯನು ಸಾರಿಸಿ ಶಂಖುಚಕ್ರವುಗದೆ ಪದುಮನ್ಹಾಕುತಲಿ ಗಜವರದನ ಕೊಂಡಾಡುತ ಮುದದಿ ಗಜೇಂದ್ರ ಮೋಕ್ಷನ ಸ್ಮರಿಸುತಲಿ 6 ಗೋವೃಂದದ ಕಡೆ ಪೋಗುತ ಶ್ರೀ- ಗೋವಿಂದನ ಸ್ಮರಿಸುತ ನಿತ್ಯದಲಿ ಗೋಪೀ ಬಾಲನ ಗೋಕುಲವಾಸನ ಗೋವ್ಗಳ ಮಧ್ಯದಿ ಸ್ಮರಿಸುತಲಿ 7 ಬಾಲಕೃಷ್ಣನ ಲೀಲೆಯ ಪೊಗಳುತ ಬಾಲಲೀಲೆಗಳ ಕೇಳುತಲಿ ಪುರಾಣವ ಪೇಳುವ ದ್ವಿಜರಿಗೆ ವೃದ್ಧರಿಗೆರಗುತ ಪ್ರತಿನಿತ್ಯದಲಿ 8 ಮುರಳಿಯನೂದುತ ಮೆರೆಯುವ ಕೃಷ್ಣನ ಅನುದಿನ ಮಾಡುತಲಿ ಸರಸಿಜನಾಭನ ಸ್ಮರಿಸುತ ಮನದಲಿ ಸ್ನಾನಕೆ ತೆರಳುತ ಶೀಘ್ರದಲಿ 9 ನದಿಯ ಸ್ನಾನಕೆ ಪೋಗುವ ಸಮಯದಿ ನಾರದವಂದ್ಯನ ಸ್ಮರಿಸುತಲಿ ಭಾಗೀರಥಿಯಲಿ ಸ್ನಾನವು ಮಾಡುತ ಬಾಗುತ ಸಿರವನು ಬೇಗದಲಿ10 ಫಣಿರಾಜನ ಶಯನದಿ ಮಲಗಿಹ ಶ್ರೀ- ಪರಮಾತ್ಮನ ನೋಡುತ ಬೇಗ ಪಾದಗಳ ಸೇವಿಪ ಶ್ರೀ ಭೂದೇವಿಯ- ರೇನುಧನ್ಯರೆಂದೆನುತಾಗ11 ಪೊಕ್ಕಳ ಮಧ್ಯದಿ ಪೊರಟಿಹ ನಾಳದ ತುದಿಯಲಿ ರಂಜಿಪ ಕಮಲದಲಿ ಉದ್ಭವಿಸಿದ ನಾಲ್ಮೊಗನನು ನೋಡುತ ಬಗೆ ಬಗೆ ಪ್ರಾರ್ಥಿಸುತಲಿ ಇನ್ನು 12 ನೆರೆದಿಹ ಸುರ ಪರಿವಾರವೆಲ್ಲ ಶ್ರೀ- ಹರಿಯನು ವಾಲೈಸುತಲಿನ್ನೂ ಪರಮವೈಭವದಿ ಮೆರೆಯುವ ದೇವನ ಸ್ಮರಿಸುವೆ ಜಲಮಧ್ಯದೊಳಿನ್ನು 13 ದೇವರ ರಥವನು ತೊಳೆಯುವೆನೆಂಬ- ನುಸಂಧಾನದಿ ಸ್ನಾನವು ಮಾಡಿ ದೇವರ ರಥ ಶೃಂಗರಿಸುವೆನೆನ್ನುತ ಶ್ರೀಮುದ್ರೆಗಳ್ಹಚ್ಚುತ ಪಾಡಿ 14 ನಿತ್ಯ ಕರ್ಮಮುಗಿಸುವ ಬೇಗದಿ ಶ್ರೀ- ಹರಿಪೂಜೆಗೆ ಅಣಿಮಾಡುತಲಿ ಪುಷ್ಪಗಳನು ಗಂಧಾಕ್ಷತೆ ಶ್ರೀ ತುಳಸಿಯ ತಂದಿಡುವೆನು ಮೋದದಲಿ 15 ಪಂಚಭಕ್ಷ ಪಾಯಸಗಳ ಮಾಡುತ ಪಂಚಾತ್ಮಕ ನ ಸ್ಮರಿಸುತಲಿ ಮಿಂಚಿನಂತೆ ಹೊಳೆಯುವ ತಬಕಿಲಿ ತಾಂಬೂಲವ ನಿರಿಸುತ ಬೇಗದಲಿ 16 ಬ್ರಹ್ಮನು ಈ ವಿಧ ಪೂಜೆಯ ಪ್ರತಿದಿನ ಬ್ರಹ್ಮನ ಪಿತಗರ್ಪಿಸುತಲಿರಲು ಸುಮ್ಮಾನದಿ ಮಹಲಕುಮಿಯು ಇದ- ನೊಯ್ಯತ ಸುರಮುನಿ ವಂದ್ಯನಿಗೆ ತಾನರ್ಪಿಸಲು17 ಪರಮಾತ್ಮನು ಈ ವಿಧ ಸೇವೆಯ ಕೈ- ಗೊಳುತಲಿ ಸಂತಸ ಪಡಲಿನ್ನು ಅರಿತವರೆಲ್ಲರು ನಿರುತದಿ ಹರಿ ಧ್ಯಾ- ನವ ಮಾಡುತಲಿರೆ ತಾವಿನ್ನು 18 ದೇವಪೂಜೆ ವೈಶ್ವದೇವವು ನಿತ್ಯದಿ ಗೋಬ್ರಾಹ್ಮಣನರ್ಚಿಸಿ ಇನ್ನು ಸಾಯಂ ಸಮಯದಿ ಸಾಧುಗಳೊಡನೆ ದೇವರ ಕಥೆ ಕೇಳುತಲಿನ್ನೂ 19 ಝಾಮಝಾಮದಿ ಜಯಶಬ್ದಗಳಿಂ ಜಯಾಪತಿಯನು ಪೊಗಳುತಲಿ ಆರತಿ ಜೋಗುಳ ಹಾಡುತ ಮುದದಲಿ ಮಧ್ವೇಶಾರ್ಪಣ ಪೇಳುತಲಿ 20 ಮಲುಗುವಾಗ ಮುಕುಂದನ ಸ್ಮರಿಸುತ ಲಯ ಚಿಂತನೆಯನು ಮಾಡುತಲಿ ಕರಮುಗಿಯುತ ಕಾಯೇನ ವಾಚಾ ಎಂ- ದ್ಹೇಳುತ ಪ್ರಾಜ್ಞನ ಸ್ಮರಿಸುತಲಿ 21 ಝಾಮಝಾಮದಿ ಶ್ರೀ ಹರಿ ಮಾಧವ ಆಗಲು ಬೆಳಗಿನ ಝಾವದಿ ಸೃಷ್ಟಿಯ ಚಿಂತನೆ ಮಾಡಿ ಎಂದೆನುತ22 ಮಳಲಗೌರಿ ನೋಂತಿಹ ಸತಿಯರಿಗೆ ಮುರಳೀಧರ ಒಲಿದಿಹನೆನ್ನುತ ಉದಯವಾಗಲು ವಿಶ್ವನ ಸ್ಮರಿಸುತ ವಿಧಿ ನೇಮಗಳನುಸರಿಸುತ್ತ 23 ನಿತ್ಯದಿ ಈ ತೆರವಾಚರಿಸುವ ನರ ಮುಕ್ತನು ಧರೆಯೊಳಗೆಂದೆನುತ ಅತ್ಯುತ್ಸಾಹದಿ ಬರೆದೋದುತಲಿ- ದರರ್ಥವ ತಿಳಿದಾಚರಿಸುತ್ತ24 ಈ ವಿಧ ಚಿಂತನೆ ಮಾಡುವ ಮನುಜಗೆ ದಾರಿದ್ರ್ಯವು ದೂರಾಗುವದು ಮಾರಮಣನು ತನ್ನವರೊಡಗೂಡುತ ವಾಸವಾಗುವನೆಂಬುವ ಬಿರುದು25 ಕರೆಕರೆಗೊಳ್ಳದೆ ಕೇಳಿರಿ ನಿತ್ಯವು ಕನಕಗಿರಿವಾಸನ ಮಹಿಮೆ ಕನಲಿಕೆ ಕಳೆವುದು ಕಮಲನಾಭ- ವಿಠ್ಠಲನು ಕೊಂಡಾಡುತ ಮಹಿಮೆ 26
--------------
ನಿಡಗುರುಕಿ ಜೀವೂಬಾಯಿ
ಶ್ರೀಕೃಷ್ಣಬಾಲಲೀಲೆಗಳು ನಕ್ಕು ನಲಿವ ಬಾಲ ಇವನಾರೆ ಪ ಕೈಯಿಕ್ಕಿ ಬರುವನಿವ ನೋಡುವ ಬಾರೆ ಅ.ಪ ಸುತ್ತಲು ಕುಣಿಯುವ ಬಾಲೆಯರಾಟ ಮಣಿ ಸರಗಳ ನಲಿದಾಟ ಅತ್ತಿತ್ತ ಮಿಂಚಿನ ಕಡೆಗಣ್ಣೋಟ 1 ಮಿಸುನಿಯ ಬಣ್ಣದ ಹೊಸವಸನ ರಸಿಕನನೀಕ್ಷಿಸು ಎನ್ನುತಿದೇ ಮನ 2 ಘಲ್ಲೆಂಬ ಕಿರುಗೆಜ್ಜೆ ಧರಿಸಿಹನು ನಲ್ಲೆಯ ಗಾನಕೆ ಸರಿಕುಣಿಯುವನು ಮೆಲ್ಲುಲಿವನು ಮತ್ತೆ ಕೊಳಲೂದುವನು 3 ಬಾಯಲಿ ಜಗಂಗಳ ತೋರಿಸಿದನಂತೆ ಮಾಯದ ನಾರಿಯ ಮಡುಹಿದನಂತೆ ಜೀಯನೀತನೆ ಗೋವಳನಂತೆ 4 ಮದನ ಸುಂದರನು ಲೋಕ ಮೋಹಕನು ಮುದವ ಬೀರುವನು ಮನವ ಸೆಳೆವನು ಪದುಳದಿಕಾವ ಮಾಂಗಿರಿ ಪತಿಯವನು5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತಾರಿಸೊ ಶ್ರೀಹರಿ ತಾರಿಸೊ ಪತಾರಿಸೊ ಭವವ ನಿವಾರಿಸೊ ನಿನ್ನಡಿಯತೋರಿಸೊ ವೈಕುಂಠ ಸೇರಿಸೋ ರಂಗಯ್ಯ ಅ.ಪಪಾಪವಿನಾಶನ ಮಾಡುವಿ ನೀತಾಪಸರನುನಿತ್ಯಸಲಹುವಿ ||ವ್ಯಾಪಿಸಿ ಸರ್ವತ್ರ ನಿನ್ನವರನು ಕಾಯ್ವಶ್ರೀ ಪಾಂಡುರಂಗ ಪರಮಾತ್ಮ ಮುಕುಂದ 1ಹಿರಣ್ಯಕಶಿಪುವನು ಸೀಳಿದೆ ಅವನಕರುಳನು ಕೊರಳೊಳು ಹಾಕಿದೆ ||ದುರಳ ಬುದ್ಧಿಯ ತಳೆದ ದೈತ್ಯಾಧಮನ ಕೊಂದಕರುಣ ದಿಂದಲಿ ಕಂದಗೊಲಿದೆ ಗೋವಿಂದ 2ಅಸುರೆ ಪೂತನಿಯ ಸಂಹರಿಸಿದೆ ನೀಶಶಿಮುಖಿಯಭಿಮಾನ ಕಾಯ್ದೆ ||ಶಿಶುವಾಗಿ ಬಾಲಲೀಲೆಗಳನು ತೋರಿದೆಕುಸುಮನಾಭ ಶ್ರೀಪುರಂದರವಿಠಲ3
--------------
ಪುರಂದರದಾಸರು
ನಿಲ್ಲಬೇಕಯ್ಯಾ ನೀನು ಕೃಷ್ಣಯ್ಯಾನಿಲ್ಲಬೇಕಯ್ಯಾ ನೀನು ಪನಿಲ್ಲಬೇಕಯ್ಯಾ ನೀಮಲ್ಲಮರ್ದನಸಿರಿವಲ್ಲಭಎನ್ನ ಹೃದಯದಲಿ ಸತತಅ.ಪಸುಪ್ಪಾಣಿಮುತ್ತಿಟ್ಟು ನೋಡುವೆ ನಿನ್ನಚಪ್ಪಾಳಿ ತಟ್ಟುತ ನಾ ಪಾಡುವೆ ||ಅಪ್ಪ ಶ್ರೀ ಕೃಷ್ಣ ನಿನ್ನನೆತ್ತಿ ಮುದ್ದಿಸಿಕೊಂಬೆಸರ್ಪಶಯನ ಕೃಪೆ ಮಾಡೆಂದು ಬೇಡುವೆ 1ಚೆಂದದ ಹಾಸಿಗೆ ಹಾಸುವೆಪುನಗುಗಂಧದ ಕಸ್ತೂರಿಯ ಪೂಸುವೆ ||ತಂದು ಮುದದಿ ಮುತ್ತಿನ ಹಾರ ಹಾಕುವೆಅಂದದಿಂದಲಿ ನಿನ್ನನೆತ್ತಿ ಮುದ್ದಿಸಿಕೊಂಬೆ 2ನೀಲದ ಕಿರೀಟವನಿಡುವೆ ಬಲುಬಾಲಲೀಲೆಗಳನು ಪಾಡುವೆ ||ಚೆಲ್ವ ಶ್ರೀಪುರಂದರವಿಟ್ಠಲರಾಯನೆನಿಲ್ಲು ಎನ್ನ ಮನದಲಿ ಒಂದೇ ಗಳಿಗೆ 3
--------------
ಪುರಂದರದಾಸರು
ಪಾಲಿಸು ಪಾಲಿಸು ಪಾಲಯಮಾಂ ಸತತಇಂದಿರಾದೇವಿ ಪಪಾಲಿಸು ಪನ್ನಗವೇಣಿಪಾಲಿಸುಪಂಕಜಪಾಣಿಪಾಲಿಸು ಗುಣಗಣ ಶ್ರೇಣಿ ಪಾಹಿನಿತ್ಯ ಕಲ್ಯಾಣಿ ಅ.ಪಬಾಲಕನು ತಾನಾಗಿ ಗೋಪಿಗೆಬಾಲಲೀಲೆಗಳನ್ನು ತೋರಿದಶ್ರೀಲಲಾಮನನ್ನು ಮೆಚ್ಚಿಮಾಲೆಹಾಕಿದಂಥ ಲಕ್ಷ್ಮಿ 1ಅಂಬುಧಿಯೊಳ್ ಶಯನಿಸಿದಕಂಬುಕಂಧರಹರಿಯಬೆಂಬಿಡದೆ ಸೇವಿಪ ಭಕ್ತ ಕು-ಟುಂಬಿ ನಿನ್ನ ನಂಬಿದವರ 2ನಿನ್ನನೆ ನಾನಂಬಿರುವೆ-ನನ್ಯರ ನಾಶ್ರಯಿಸದಲೆಸನ್ನುತಾಂಗಿ ಎನ್ನ ಮನದ-ಲಿನ್ನು ಹರಿಯಪಾದತೋರು3ಸರಸೀಜಾಸನ ಮಾತೆಸ್ಮರಿಸುವೆ ನಿನ್ನಯಪಾದಸ್ಮರಣೆ ಮರೆಯದಂತೆ ಕೊಟ್ಟುಹರಿಯ ತೋರು ಹರುಷದಿಂದ 4ಕಮಲೇ ಹೃತ್ಕಮಲದಿ ಶ್ರೀಕಮಲನಾಭ ವಿಠ್ಠಲಮಿನುಗುವಂಥ ಸೊಬಗು ತೋರುವಿನಯದಿಂದ ನಮಿಪೆ ನಿನ್ನ 5
--------------
ನಿಡಗುರುಕಿ ಜೀವೂಬಾಯಿ
ಪ್ರಸನ್ನ ಶ್ರೀ ಕೃಷ್ಣಾಮೃತಸಾರ27ಬಾರೋ ಎನ್ನ ಮನಕೆ ಗೋಪಾಲಕೃಷ್ಣಬಾರೋ ಎನ್ನ ಮನಕ್ಕೆ ಪಬಾರೋ ಎನ್ನ ಮನಕೆ ಭಾಮೆ ರುಕ್ಮಿಣೀ ಸಹಸರಸೀರುಹಾಸನ ಶಿವಾದ್ಯಮರ ವಂದ್ಯ ಅ.ಪ.ಮೋದಚಿನ್ಮಯ ಜಗಚೇಷ್ಟಕ ಬಲರೂಪಯದುಪತೇ ಕೃಷ್ಣ ನೀನು ದೇವಕೀ ಸುತನೆನಿಸಿಮೇದಿನಿಯಲಿ ಅವತಾರ ಮಾಡಿದಅಜಸಾಧು ಸದ್ಭಕ್ತರ ಸದ್ಧರ್ಮ ರಕ್ಷಿಸಲು 1ಪೂತನಿ ಶಕಟತೃಣಾವರ್ತವತ್ಸಬಕಅಘಧೇನು ಕೇಶಿ ಚಾಣೂರ ಮುಷ್ಟಿಕದೈತ್ಯಕುವಲಯಪೀಡಾ ಕಂಸಾದಿ ದುಷ್ಟರನ್ನಸದೆದು ಭೂಬಾರವ ಇಳಿಸಿದಿಶೌರಿ2ಸುಂದರ ವದನದಲ್ಲಿ ಜಗವೆಲ್ಲಾ ತೋರಿಸಿದಿಉದ್ಧರಿಸಿ ಮಣಿಗ್ರೀವ ನಳಕೂಪರನ್ನಮುಖಾದಿಂದ್ರಶ್ಚಾಗ್ನಿ ದಾವಾಗ್ನಿಯನು ನುಂಗಿನಂದನ್ನ ವರ್ಣಾಲಯದಿಂದ ಬಿಡಿಸಿ ತಂದಿ 3ನಾಗಪತ್ನಿಯರಿಗೂ ಕಾಳಿಂಗನಿಗೂ ಒಲಿದುನಗವನ್ನ ಎತ್ತಿ ಗೋ ಗೋಪಾ ಜನರ ಕಾಯ್ದಿಉಕ್ಕುವ ಪ್ರೇಮದಿಂ ಸೇವಿಸಿದ ಗೋಪಿಯರಭಕುತೀಗೆ ಮೆಚ್ಚಿ ಯೋಗ್ಯ ಸಾಧನ ಫಲವಿತ್ತಿ 4ಸುದರ್ಶನಾಭಿದ ವಿದ್ಯಾಧರನ್ನ ಶಾಪದಿಂದಪಾದಸ್ಪರ್ಶವನಿತ್ತು ಮೋಚನೆ ಮಾಡಿಉದ್ಧರಾಕ್ರೂರ ಸ್ತ್ರೀ ವಾಯುಕ ಮಾಲಾಕಾರಮೊದಲಾದವರ್ಗೂವಿಪ್ರಸ್ತ್ರೀಯರಿಗೂ ಒಲಿದಿ5ಬಲಭದ್ರ ಸುಭದ್ರ ಸಹ ಕೃಷ್ಣ ಜಗನ್ನಾಥಮಾಲೋಲ ನಿನ್ನಯ ಬಾಲಲೀಲೆಗಳುಬಲು ಶುಭತಮ ಪಾಲ್‍ಬೆಣ್ಣೆಯ ಪ್ರಿಯ ಈಶಪಾಲಾಬ್ಧಿಶಾಯಿ ಅಚ್ಚುತಾನಂದ ಗೋವಿಂದ 6ಈರಾರುಯೋಜನ ದ್ವಾರಕಾ ದುರ್ಗವುಸುರದ್ರುಮ ಲತೋದ್ಯಾನ ವಿಚಿತ್ರೋಪ ವನಗಳ್ಪುರುಟ ಶೃಂಗೋನ್ನತ ಸ್ಫಟಿಕ ಅಟ್ಟಾಳಗೋಪುರಗಳು ನವರತ್ನ ಸ್ವರ್ಣಗೃಹಗಳ್ 7ಆಶ್ಚರ್ಯ ಕಡಲ್‍ಮಧ್ಯ ದ್ವಾರಕಾ ನಿರ್ಮಿಸಿಅಚ್ಛನ್ನ ಭಕ್ತ ಸೇವಕರೊಡೆ ಇದ್ದಿಮುಚುಕುಂದನಿಗೆ ಒಲಿದು ಕಾಲನ್ನ ಕೊಲ್ಲಿಸಿದಿರಚಿಸಿದಿ ಮದುವೆಯ ಅಣ್ಣ ಬಲರಾಮಗೆ 8ಸಿಂಧುಜಾ ಇಂದಿರಾಜನಕಜಾಸೀತೆಯೇಪ್ರಾದುರ್ಭವಿಸಿಹಳು ರುಕ್ಮಿಣೀ ಭೈಷ್ಮಿಸಿಂಧುಜನಕಾ ತೆರದಿ ಅಲ್ಲದೇ ಭೀಷ್ಮಕಪುತ್ರ ದುಷ್ಟಗೆ ಸೋತು ಚೈದ್ಯನಿಗೆ ಕೊಡಲಿದ್ದ 9ಅನಾದಿನಿತ್ಯನಿನ್ನಸತಿರಮಾ ರುಕ್ಮಿಣಿಜ್ಞಾನ ತೇಜಃ - ಪುಂಜ ಭಕ್ತಿಪ್ರವಾಹ ಓಲೆನಿನಗೆ ಕಳುಹಿಸಿದಳು ದ್ವಿಜವರ ಶ್ರೇಷ್ಠಬ್ರಾಹ್ಮಣ ಅಚ್ಛಿನ್ನ ಭಕ್ತನ ಕೈಯಲ್ಲಿ 10ಉನ್ನಾಮ ಉದ್ದಾಮ ಅಚ್ಚುತ ನೀನಿತ್ಯಆನಂದ ಚಿತ್ತನು ಯದುಪತಿ ಕೃಷ್ಣನೀನೇ ತನ್ನಪತಿಸಿರಿತಾನು ಎಂದುಅನಘಲಕ್ಷ್ಮೀಭೈಷ್ಮಿ ಪತ್ರದಿ ಹೇಳಿಹಳು11ಸುಧಾಕಲಶ ವಿಪ ಕಿತ್ತಿ ತಂದ ತೆರದಿಚೈದ್ಯಮಾಗಧಸಾಲ್ವಾದಿ ಕಡೆಯಿಂದಎತ್ತಿತಂದಿಯೋ ಸ್ವಯಂವರದಿಂದ ಶ್ರೀಭೈಷ್ಮಿಯವಂದಿಸಿ ಶರಣಾದೆ ಕೃಷ್ಣ ರುಕ್ಮಿಣಿಗೆ 12ಜಯ ಕೃಷ್ಣ ನೀ ರುಕ್ಮಿಣೀ ಸಮೇತದಿ ಬಾರೆಜಯಭೇರಿ ತಾಡಿಸಿ ದ್ವಾರಕಾವಾಸಿಗಳುಗಾಯಕರು ನರ್ತಕರು ವಿಪ್ರಮುತ್ತೈದೆಯರುಜಯ ಜಯತು ಎನ್ನುತಾನಂದ ತೋರಿಸಿದರು 13ಯದುಪುರಿಯಲಿ ಮನೆ ಮನೆಯಲಿ ಮಹೋತ್ಸವಮುದದಿ ಅಲಂಕೃತವಾಗಿ ಸ್ತ್ರೀ ಪುರುಷರುಜ್ಯೋತಿ ಉಜ್ವಲ ದೀಪಾವಳಿ ಪೂರ್ಣಕುಂಭಗಳುಛಂದಗೊಂಚಲ ಪುಷ್ಪರತ್ನ ತೋರಣಗಳ್14ಸಂಜಯ ಕುರು ಕೇಕಯಾದಿ ರಾಜರುಗಳುರಾಜಕನ್ಯೆಯರು ಗಜಗಳ್ ಓಡ್ಯಾಟಮೂರ್ಜಗದೊಡೆಯ ನೀ ರುಕ್ಮಿಣಿಯ ಕರೆತಂದಸುಚರಿತ್ರೆ ಪೊಗಳಿದರು ನರನಾರಿರೆಲ್ಲರು 15ಚತುರ್ಮುಖ ವಾಯು ಶಿವ ವೈನತೇಯನುಶೇಷಶತಮುಖಸ್ಮರಅಹಂಕಾರಿಕ ಪ್ರಾಣಮೊದಲಾದಅಮರರುಮುನೀಂದ್ರರು ವೇದಮಂತ್ರ ಘೋಷಿಸೆ ಮದುವೆ ವೈಭವ ಏನೆಂಬೆ 16ಪೂರ್ಣಜ್ಞÕನಾತ್ಮನೆ ಪೂರ್ಣ ಐಶ್ವರ್ಯಾತ್ಮಪೂರ್ಣಪ್ರಭಾನಂದತೇಜಶಕ್ತ್ಯಾತ್ಮಆನಮಿಪೆ ಅಚ್ಚುತಾನಂತ ಗೋವಿಂದಕೃಷ್ಣ ರುಕ್ಮಿಣಿನಾಥ ಜಗದೇಕ ವಂದ್ಯ 17ಆದರದಿಸುರರಾಜವಿಪ್ರರ ವೃಂದಯಾದವರುಗಳು ಶ್ರೀ ರುಕ್ಮಿಣಿಕೃಷ್ಣನಿತ್ಯಸತಿಪತಿ ಮದುವೆ ನೋಡಿ ಹಿಗ್ಗಿದರುಶ್ರೀದ ನೀ ಕೊಡುವಿಯೊ ಸೌಭಾಗ್ಯ ಇದು ಪಠಿಸೆ 18ಯೋಗೇಶ್ವರ ದೇವ ದೇವ ಶ್ರೀಯಃಪತೇಅಗಣಿತಗುಣಪೂರ್ಣಅಪ್ರಮೇಯಾತ್ಮನ್ಶ್ರೀಕೃಷ್ಣ ವಿಷ್ಣೋ ಶ್ರೀರಮಾರುಕ್ಮಿಣಿಬಾಗಿ ಶರಣಾದೆ ನಿಮ್ಮಲ್ಲಿ ಮಾಂಪಾಹಿ 19ರುಕ್ಮಿಣಿ ಪತ್ರಧರ ದ್ವಿಜವರ ಶ್ರೇಷ್ಠರುಧರ್ಮ ಭೀಮಾರ್ಜುನ ಸಹದೇವ ನಕುಲಅಮಲ ಭಕ್ತಾಗ್ರಣಿ ವಿದುರನು ಇಂಥಸುಮಹಾ ಭಕ್ತವಿನುತವಂದ್ಯನೇ ನಮೋ ನಮೋ20ಜಯತು ದೇವಕೀತನಯ ಸತ್ಯಾ ರುಕ್ಮಿಣೀಕಾಂತಜಯತು ಜಗಜ್ಜನಾದಿಕರ್ತ ನಮೋ ನಮೋಜಯತು ವಿಧಿತಾತ ಶ್ರೀ ಪ್ರಸನ್ನ ಶ್ರೀನಿವಾಸಜಯತು ಜಯತು ದಶಪ್ರಮತಿ ಹೃತ್‍ಪದ್ಮಸ್ಥ 21-ಇತಿ ಕೃಷ್ಣಾಮೃತಸಾರ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು