ಒಟ್ಟು 6 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋಲು ಕೋಲೆನ್ನಕೋಲೆ ಕೋಲು ಕೋಲೆನ್ನಕೋಲೆ ಸದ್ವಸ್ತುವಿನ ಬಲಗೊಂಬೆಕೋಲೆ ಧ್ರುವ ಕೋಲುನಿಕ್ಕುತ ಬನ್ನಿ ಬಾಲೇರೆಲ್ಲರು ಕೂಡಿ ಮ್ಯಾಲ್ಯೆ ಮಂದಿರದ ಹಾದೀಲಿ ಕೋಲೆ ಮ್ಯಾಲೆ ಮಂದಿರದೊಳು ಬಾಲಮುಕುಂದತಾನು ಲೋಲ್ಯಾಡುತ ಒಳಗಿದ್ದಾನೆ ಕೋಲೆ 1 ಆದಿಗಿಂತಲ್ಯದೆ ಹಾದಿ ಅನಾದಿಯು ಸಾಧಿಸ ಬನ್ನಿ ಒದಗಿನ್ನು ಕೋಲೆ ಸಾಧಿಸಿ ಬರಲಿಕ್ಕೆ ಸಾಧ್ಯವಾಗುತಲ್ಯಾದೆ ಭೇದಿಸಿ ನೋಡಿ ಮನದಲಿ ಕೋಲೆ 2 ಕಣ್ಣಿನೊಳಿಹ್ಯ ಬೊಂಬೆಕಾಣಬರುತ್ತದೆ ಜಾಣ್ಯೇರು ನೀವು ತಿಳಕೊಳ್ಳಿಕೋಲೆ ಜಾಣ್ಯೇರು ನೀವು ಕಾಣದೆ ಹೋಗಬ್ಯಾಡಿ ಜಾಣ್ರಿಸುತ್ಹಾನೆ ಸದ್ಗುರು ಕೋಲೆ 3 ಸದ್ಗುರುಪಾದಕೆ ಸದ್ಭಾವವಿಟ್ಟು ನೀವು ಸದ್ಭೋಧ ಕೇಳಿ ಸಾಧಿಸಿ ಕೋಲೆ ಸಾಧಿಸಿ ಕೇಳಿ ನೀವು ಬುಧಜನರೊಡಗೂಡಿ ಚದುರತನದಲಿ ಅತಿ ಬ್ಯಾಗೆ ಕೋಲೆ 4 ಅರಹುವೆಂದ ಸೀರೆಯನುಟ್ಟು ಕುರವ್ಹೆಂಬ ಕುಪ್ಪಸಲಿ ಇರವಂತಿ ಪುಷ್ಪಲಿ ಮುಡಿದಿನ್ನು ಕೋಲೆ ಮುಡಿದು ಬರಲು ಪೂರ್ಣ ಒಡಗೂಡಿ ಬರುತಾನೆ ಬಡವನಾ ಧಾರಿ ಬಲಗೊಂಬೆ ಕೋಲೆ5 ಬಲಗೊಂಬೆ ಸಾಧನವು ನೆಲೆಗೊಂಡು ಮಾಡಬೇಕು ವಲವ್ಹಾಂಗ ತಾನೆ ಶ್ರೀಹರಿ ಕೋಲೆ ಶ್ರೀಹರಿ ಮುಂದೆ ನೀವು ಸೋಹ್ಯ ತಿಳಿದುಬನ್ನಿ ಸಾಹ್ಯಮಾಡುವ ಇಹಪರಕೆ ಕೋಲೆ 6 ದಾತ ಮಹಿಪತಿಸ್ವಾಮಿ ಸಹಕಾರನೊಬ್ಬ ಶ್ರೀಪತಿಕೋಲೆ ಶ್ರೀಪತಿಸ್ತುತಿ ಕೊಂಡಾಡಲಿಕ್ಕೆ ಪೂರ್ಣ ಭುಕ್ತಿ ಮುಕ್ತಿಯ ನೀಡು ತಾನೆ ಕೋಲೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಲೆ ಬೆಳಗಾಯಿತು ತಲೆ ಬೆಳಗಾಯಿತು ಎನ್ನ ಬೆಳಗದೊಳು ಕೂಡಿ ಧ್ರುವ ಹಿಂದೆ ಗೋವಿಂದನು ಮುಂದೆ ಮುಕುಂದನು ಅಂದಿಗಿಂದಿಗೆ ಅನಿರುದ್ಧ ತಂದೆ ತಾಯಿಯ ವೃಂದಾವನ ಪತಿಯು ಮಂದರಧರ ಬಂಧು ಬಳಗ 1 ಕುಂದ ನೋಡದೆ ಸಲಹುವ ಸಂಕರುಷಣಾ ನಂದ ಮೂರುತಿ ತ್ರಿ ವಿಕ್ರಮನ ದುರಿತ ದೂರಮಾಡಿ ದಾಮೋದರ ಚಂದ ಮಾಡುವ ಜನಾರ್ದನನು 2 ಎಡಕ ಯಾದವ ನಾರಾಯಣ ಕೃಷ್ಣನು ಬಲಕ ಬಾಲಮುಕುಂದ ಎತ್ತ ನೋಡಿದರತ್ತ ಸುತ್ತ ಪುರುಷೋತ್ತಮ ಚಿತ್ತ ಮನದೊಳು ಅಚ್ಯುತನು 3 ಪ್ರಾಣಪತಿಕರಿಸಿಹ್ಯ ಪ್ರದ್ಯುಮ್ನ ಆಭಯನಿತ್ತಿಹ ಪದ್ಮನಾಭ ಮಾಧವ ಮಧುಸೂದನ ಯದು ಕುಲೋತ್ತಮ ಶ್ರೀಧರನು 4 ತುಂಬಿ ಹೃಷಿಕೇಶ ದೃಷ್ಟಿಮೂರುತಿ ನರಸಿಂಹ ದೃಷ್ಟಿಯೊಳಗೆ ಹರಿ ವಿಷ್ಣು ವಾಸುದೇವ ಸೃಷ್ಟೇಶ ಗುರು ಕೇಶವನು 5 ಲಕ್ಷ್ಮಿಯೊಳಗೆ ಗುರು ಲಕ್ಷುಮಿಕಾಂತನು ರಕ್ಷಿಸುವ ಅಭೋಕ್ಷಜನು ಉಪೇಕ್ಷವಿಲ್ಲದೆ ಹೊರೆವ ಉಪೇಂದ್ರನು ಮೂರ್ತಿ ವಾಮನನು 6 ತುಂಬಿದ ಬಳಗವು ಕಂಡ ಮೇದಿನಿಯೊಳು ಕಂದ ಮಹಿಪತಿ ಸ್ತುತಿಸಿದನು ಬಂದ ಜನ್ಮವು ಕಡೆ ಆಯಿತೆಂದು ಮನದೊಳು ತ್ರಾಹಿ ತ್ರಾಹಿ ಎಂದ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಂದಕಂದ ಬಾಲಮುಕುಂದ ನಂದಕಂದ ಧ್ರುವ ನಂದಕಂದಾ ನಂದ ಘನ ನಿ ದ್ರ್ವಂದ್ವ ನಿರ್ಗುಣ ನಿಜಸ್ವರೂಪ 1 ವಿದುರವಂದ್ಯ ವಿರಾಜಿತರೂಪ ಮದನಮೋಹನ ಮಾಮನೋಹರ 2 ಮಾಧವ ಕರುಣಾಕರ ಗುರು ಶ್ರೀವರ ಪೂರ್ಣ ಸದಾ ಸಹಕಾರಿ 3 ಶರಣರಕ್ಷಕ ಸುಜನರ ಪಾಲಕ ಸರಸಿಜೋದ್ಭವನುತ ಶ್ರೀ ಹರಿ 4 ಶ್ರೇಯ ಸುಖದಾಯಕ ಸದೋದಿತ ಸಾಂದ್ರ ಮಹಿಪತಿ ಸ್ವಾಮಿ ಸದ್ಭನ ಚಿದ್ರೂಪ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ರಕ್ಷಿಸೊ ಸ್ವಾಮಿ ನೀ ಪಕ್ಷಿ ಸುವಾಹನ ಭಿಕ್ಷೆ ಸುನೀಡೊ ನೀ ಲಕ್ಷ ಸುಸಾಧನ ಅಕ್ಷಯಾನಂದ ನೀ ಲಕ್ಷುಮಿ ಜೀವನ ಪಕ್ಷ ನೀ ಪ್ರಾಣಕ ಈಕ್ಷಿಸಿದವನ 1 ಸೃಷ್ಟಿಗಧಿಕ ನೀ ವಿಷ್ಣು ಜನಾರ್ಧನ ಕಷ್ಟ ನೀ ಹಿಂಗಿಸೊ ದುಷ್ಟರ ಮರ್ದನ ಶಿಷ್ಟರ ಪಾಲಕ ಶ್ರೇಷ್ಠ ನಾರಾಯಣ ದೃಷ್ಟಿಸಿ ನೋಡೊ ನೀ ಕೃಷ್ಣ ಕೃಪಾಘನ2 ಈಶನೆಂದರಿಯದೆ ದೋಷದ ರಾಶಿ ನಾ ವಾಸನೆ ಪೂರಿಸೊ ದಾಸರ ದಾಸ ನಾ ಏಸು ತಾ ಜನ್ಮಕೆ ಬಂದು ಸೂಸಿದೆನೊ ಹೇಸಿತು ಜೀವನ ಸ್ಮರಿಸಬೇಕೆಂದು ನಾ 3 ನಿಮ್ಮನೆ ನೋಡಬೇಕೆಂದು ಬಂದೆ ನಾ ಘಮ್ಮನೆ ಪೂರಿಸೊ ಭಾವನೆ ಕಂದನ ತಮ್ಮನೆ ಬೇಡಿಕೊಂಬುದು ತಾ ವಂದನ ಅಮ್ಮ ನಮ್ಮಪ್ಪನೆ ಬಂಧು ನೀ ಎಂದೆ ನಾ 4 ಕಾಣದ ಪಾಮರ ಹೀನ ಸೂಕರ ಏನು ತಾ ಬಲ್ಲದು ಲೂನದ ಸೂಕರ ನೀನೆ ದಯಾನಿಧೆ ಜ್ಞಾನದ ಸಾಗರ ನ್ಯೂನ ನೋಡದೆ ತಾರಿಸೊ ಶ್ರೀಧರ 5 ಪಾರ ನೀ ಗೆಲಿಸೊ ದ್ವಾರಕಿನಾಥನೆ ಸಾರಿ ನೀ ಬೋಧವ ತಾರಿಸೊ ದಾತನೆ ತೋರಿ ನೀ ಪಾದವ ಬೀರು ಸ್ವಹಿತನೆ ಸಿರಿ ಲೋಲನೆ ನೀಕರುಣಿಸಿ ಮಾತನೆ 6 ಪಾಲಿಸೊ ಪ್ರಾಣವ ಬಾಲಮುಕುಂದನೆ ಲಾಲನೆ ನೋಡು ಗೋಪಾಲ ಗೋವಿಂದನೆ ತ್ಯಕ್ತ ನಾ ತಾಳು ನೀ ಸಚ್ಚಿದಾನಂದನೆ ಕೀಲನೆ ಹೇಳು ನೀ ಭಕ್ತಿಯ ವಂದನೆ 7 ದೇವರ ದೇವನೆ ಕಾವ ಕರುಣನೆ ಜೀವದ ಜೀವ ನೀ ಸ್ವಾಮಿ ಸರ್ವೇಶನೆ ಭಾವದ ಭಾವ ನೀ ಸಾವಿರ ನಾಮನೆ ಸೇವೆಗೆ ಯೋಗ್ಯನ ಮಾಡು ಸರ್ವೋತ್ಮನೆ 8 ಹಿಂಡ ದೈವಕೆ ಪ್ರಚಂಡ ಪರೇಶನೆ ಗಂಡು ಹೆಣ್ಣಿಗೆ ತಾ ಒಬ್ಬ ಸರ್ವೇಶನೆ ಮಂಡಿ ಮರೆಯಲಿಹನೆ ಮಹೇಶನೆ ಕಂಡುಕಾಂಬ ಸುಖದೋರು ದೇವನೆ 9 ವೇದಕ ನಿಲ್ಕದಾಭೇದ್ಯ ಪುರುಷನೆ ಸಾರ ಸುರಸನೆ ಅದಿಗಿಂದತ್ತಲ್ಯಾನಾದಿ ನಿರ್ವಿಶೇಷನೆ ಹಾದಿದೋರಿಕೊಡೊ ಭಕ್ತಿಗೊಂದೀಶನೆ 10 ಮಹಿಪತಿಗೆ ನೀ ಸ್ವಾಮಿ ಶ್ರೀನಾಥನೆ ಬಾಹ್ಯ ಅಂತ್ರಕೆ ನೀನೆವೆ ಸುದಾತನೆ ಸೋಹ್ಯದೋರಿಕೊಡೊ ಸಾಹ್ಯವುಳ್ಳಾತನೆ ತ್ರಾಹಿಯಂದವನ ಮಾಡು ಸನಾಥನೆ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೃಷ್ಣ ಲೀಲಾನಂದ ನೋಡಿರೈಕೃಷ್ಣಾಕೃತಿಯ ಚಂದ ನೋಡಿರೈಕೃಷ್ಣ ಗೋಪಿಗಮ್ಮೆಂದ ನೋಡಿರೈಕೃಷ್ಣ ಬಾಲಮುಕುಂದನ ನೋಡಿರೈ ಪ.ಬಾಲರ ವಿಭು ಬೆಣ್ಣೆ ಮೊಸರ ಸವಿದು ಗೋಪಬಾಲೇರ ವಿಭಾಡಿಸಿ ಮೆಲುವಬಾಲರವಿಭಾ ನಖತೇಜನೊಳಾಡುವಬಾಲರ ವಿಭವವ ನೋಡಿರೈ 1ಸಮವಾಯಿ ಕಾರಣನಲ್ಲಾ ಜಗಕೆ ತಾನುಸಮವಯ ಗೋವರ್ಗೆಳೆಯನಾದನುಸಮವೆ ಇಲ್ಲೆಶೋದೆನಂದರ ಭಾಗ್ಯ ಮಗನಾದಶಾಮಮೈಯವನ ಮುದ್ದು ನೋಡಿರೈ 2ಕಣ್ಣಲ್ಲಲಸದೆ ವಿಶ್ವವ ಹೊರೆದಕಣ್ಣಿಲ್ಲೊಲಿದು ಕಟ್ಟಿಸಿಕೊಂಡನುಕಣ್ಣಲ್ಲಾಲಯವುಳ್ಳ ಪ್ರಸನ್ವೆಂಕಟೇಶನಕಣ್ಣಲಿ ಲಯವಿಟ್ಟು ನೋಡಿರೈ 3
--------------
ಪ್ರಸನ್ನವೆಂಕಟದಾಸರು
ಜೋ ಜೋ ಜೋ ಅಂಜನಿ ಕಂದಾ ಜೋ ಜೋಸಂಜೀವನ ತಂದಾ | ಜೋ ಜೋ ಸಾಧುಸಜ್ಜನ ವೃಂದಾ | ಜೋ ಜೋ ವಾಯು ಬಾಲಮುಕುಂದಾ ಜೋ ಜೋಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಭೂತೈದೆಂಬೊ ಕನ್ನಡಿ ಮಂಟಪದೊಳಗೆ |ಜ್ಯೋತಿ ದೀಪದ ಭಾಸ ಉನ್ಮನಿಯೊಳಗೆ |ಪ್ರೀತಿಂದ ಪ್ರಣವೆಂಬ ಮೇಲ್ಕಟ್ಟ ಕೆಳಗೆ ರಕ್ತಶ್ವೇತಶ್ಯಾಮನೀಲಖಿಡಕಿಯೊಳಗೆ ಜೋ ಜೋ1ಪಂಚ ಭೂತವೆಂಬ ಮಂಚವ ನಿಲಿಸಿ |ಪಂಚವಿಂಶತಿ ತತ್ತ್ವ ನವಾರ ಬಿಗಿಸಿ | ಪಂಚಕರಣವೆಂಬೋ ಹಾಸೀಗಿ ಹಾಸಿ | ಪಂಚ ಪ್ರಾಣವೆಂಬೋಲೇಪ ತೀವಿಸಿ ಜೋ ಜೋ2ಆರು ಚಕ್ರ ಮೀರಿದ ಸ್ಥಾನದಲ್ಲಿ |ಘೋರಘೋರಘೋಷ ಉನ್ಮನಿಯಲ್ಲಿ |ತುರ್ಯಾತೀತ ಶಂಕರ ತಾನೇ ಅಲ್ಲಿ |ಸೂರ್ಯಚಂದ್ರ ಅಗ್ನಿ ಮೂಜಗದಲ್ಲಿ ಜೋ ಜೋ3
--------------
ಜಕ್ಕಪ್ಪಯ್ಯನವರು