ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಳಗಿರಿಯಲಿ ಬೆಳಗಿಹೆಯ ಕಳವಳಿಸುವ ಮನ ಸುಳಿವದೆನ್ನಮಲ ಕಳೆದಭಯವನಿತ್ತು ನರಹರಿ ಪ. ಅಳಗಿರಿ ಹತ್ತಲು ಝಳ ಝಳ ಮನಸಲಿ ಸುಳಿದು ಭಯವ ಹರಿಸಿ ತೊಳಲಿದ ಭಕ್ತರಘ ಕಳೆದು ಪೊರೆವೆನೆಂದು ಅ.ಪ. ರಂಗನ ಮದುವೆಯೋಳ್ ವೆಂಕಟೇಶನು ಬೊಮ್ಮಗೆ ಮುಂಗಡ ನಿನಗುಣಿಸೆನೆ ಉಂಡನು ಹರೆ ರಂಗನ ಬೆಟ್ಟ ಬಾಷಿಂಗ ನರಸಿಂಗ ಹಿಂಗದೆ ವೆಂಕಟನ ತೋರಿಸೋ ಎನ್ನ ಕಂಗಳಲಿ ನೋಡುವೆ ಮನದಣಿಯೆ 1 ಬಂದ ಭಕ್ತರಿಗಭಯದಿಂದಲೇರಿಸಿ ಮುನ್ನ ತಂದೆ ತೋರಿ ವೆಂಕಟನ್ನ ರನ್ನನ್ನ ನಿಂದು ಶ್ರೀನಿವಾಸ ತಂದೆ ವರಹರಂತೆ ಇಂದೆನ್ನ ಕುಲದೇವತೆ ತಂದು ತೋರಿದೆ ನಿಮ್ಮ ಮೂವರ ರೂಹವ 2 ನಾರದ ವಂದ್ಯನ ನಾರೇರಿಗೊಲಿದನ ಶೂರ ಶ್ರೀ ಶ್ರೀನಿವಾಸನೆಂಬ ಪೆಸರಿನ ನೀ ಸಾರಿರ್ಪೆ ಪೆಸರ್ವ ನಾಮದಲಿ ನಾರಾಯಣನೆಂದ ಬಾಲನಿಗೆ ಒಲಿದನೆ ಆರಿಗು ವಶವÀಲ್ಲ ದಾರುಣನಿನಾಮ ನರಸಿಂಹ3
--------------
ಸರಸ್ವತಿ ಬಾಯಿ
ಆರುತಿ ಬೆಳಗುವೆವು ಕೃಷ್ಣಗೆ ರಾಧಾಕೃಷ್ಣಗೆ ಬೆಳಗುವೆವು ಪ ಗೋಕುದಲಿ ಹುಟ್ಟಿ | ಗೋವುಗಳನು | ಕಾಯ್ದವಗೆ ಗೋಪಾಲಕೃಷ್ಣಗೆ ಬೆಳಗುವೆವು 1 ನಂದಕುಮಾರನಿಗೆ ಇಂದೀವರಾಕ್ಷ ಬಾಲನಿಗೆ | ರಾಧಾಕೃಷ್ಣಗೆ ಬೆಳಗುವೆವು 2 ಶಾಮಸುಂದರನಿಗೆ ಕಾಮಿತಶೀಲ ಕೃಷ್ಣನಿಗೆ ರಾಧಾಕೃಷ್ಣಗೆ 3
--------------
ಶಾಮಸುಂದರ ವಿಠಲ
ಪರಮಾನಂದದಿ ಸರಸಿಜಾಕ್ಷಿಯರೆಲ್ಲ ಪರಮ ಪುರುಷನಿಗಾರತಿ ಎತ್ತುತ ಪ ಕರಿವರ ವರದನ ಸ್ಮರಿಸುತ ಸಂತತ ನವರತ್ನದಾರತಿ ಬೆಳಗಿದರುಅ.ಪ ಗೋಪಿಕಾಲೋಲನಿಗೆ ಗೋಪಾಲಕೃಷ್ಣಗೆ ಗೋವರ್ಧನೋದ್ಧಾರ ಗೋವಿಂದಗೆ ಗೋಪಸ್ತ್ರೀಯರ ಕೂಡ್ಯಾಡಿದ ಹರಿಗೆ ಗೋಪಿಬಾಲನಿಗೆ ಎತ್ತಿದರಾರತಿ1 ನವನೀತ ಚೋರಗೆ ಬೃಂದಾವನÀದಿ ವಿರಾಜಿಪಗೆ ಇಂದಿರೆ ಸಹಿತಗೆ ಕುಂದಣದಾರತಿ ಬೆಳಗಿದರು2 ಕಮಲದಳಾಕ್ಷಗೆ ಕಮಲಮುಖಿಯರೆಲ್ಲ ಕಮಲ ಮುತ್ತಿನ ಆರತಿ ಪಿಡಿದು ಕಮಲನಾಭ ವಿಠ್ಠಲನ ಪಾಡಿ ಹರುಷದಿ ಕಮಲಾಕ್ಷಿಯರು ಶೋಭನ ಪಾಡುತ್ತ 3
--------------
ನಿಡಗುರುಕಿ ಜೀವೂಬಾಯಿ
ಪಾಹಿ ಪಾಹಿ ಮೋಹನ್ನರೆ | ಲೋಹಲೊಷ್ಟ ಸಮೇಕ್ಷಣ ಪ ಪಾದ ಸೇವೆ | ವಿಹಿತದಿ ನೀಡೆನಗೆ ಅ.ಪ. ಪಾದ | ಬಂಡುಣಿಯಂದದಲೀಮಾಂಡವ್ಯರಾಗಿರುವಾಗ | ಚಂಡತಪ ಮಾಡಿದಿರಿ 1 ಗಾಣಿಗನುದರದೀ | ಜನಿಸುತ ಪೂರ್ವದೀಧನ ಬಹುಗಳಿಸುತ | ಜನುಮವ ನೂಕಿದಿರಿ2 ಗಳಿಸಿದ ಧನವನೂ | ಲಲನೆಗೂ ಪೇಳದೇಮಲಿನ ದೇಹವನೀಗಿ | ಕಳೆದಿರಿ ಪ್ರಾರಬ್ಧವ 3 ಸತಿಸುತ ಬಂಧು ಜನ | ಗತಿತಪ್ಪಿ ಭ್ರಾಂತರಾಗೀಅತಿ ಅತಿ ವ್ಯಥೆಯಿಂದ | ಪಾಥೇಯವ ಕಾಣಲಿಲ್ಲ 4 ಚಿನಿವಾರ ನೂದರದೀ | ಪುನರಪಿ ಜನಿಸಲೂಜನನಿಯು ಅನುವನು | ಕಾಣದಲೆ ಚಿಂತಿಸಿದಳ್ 5 ಆರ್ತಳಾಗುತ ಚಕ್ರ | ತೀರ್ಥವ ಪೊಗಲೂ ಬರೇಪಾರ್ಥ ಸಖನ ಭಕ್ತ | ಆರ್ತೆಯನು ತಡೆದರು 6 ಆಕೆಯ ಶಿಶು ಸಹಾ | ಸಾಕುವೆನೆನುತಲೀಶ್ರೀಕರ ವಾಕ್ಯವಿತ್ತು | ಭೀಕರವ ತಪ್ಪಿಸಿದ 7 ವಿಜಯರಾಯರು ಬಂದೂ | ನಿಜಸತಿ ಮಡುವಿನೊಳ್‍ತೇಜಸ್ಸಿನಿಂ ಮೆರೆವಂಥ | ದ್ವಿಜಸುತನರ್ಪಿಸಿದರ್ 8 ಮೋಹನ ಬಾಲನಿಗೆ | ಮೋಹನ ವಿಠಲನಾಮೋಹದಂಕಿತವಿತ್ತು | ಮಾಹಿತಾಂಘ್ರಿ ನೆನೆಸಿದರ್ 9 ಮುಂಜಿ ಮದುವೆ ಮಾಡೀ | ಹಂಜರದಿ ನಿಲಿಸುತಾಕಂಜಾಕ್ಷನಂಘ್ರಿಯನು | ಅಂಜಾದಲೆ ಭಜಿಸೆಂದರ್10 ಚಿನಿವಾರತನದಿಂದ | ಧನವನು ಗಳಿಸಿದಾಜನುಮ ಪೂರ್ವದಸ್ಮøತಿ | ಮನದೊಳು ನೆನೆದೆಯೋ11 ಗಾನವ ಮಾಡುತಲೀ | ಗಾಣಿಗತನಯರನೂಕಾಣುತಲೀ ಪೇಳಿದೆಯೊ | ಧನವಿಟ್ಟ ಸ್ಥಳವನು 12 ಗುರುಗಳ ಕರುಣಿಯಿಂ | ಹರಿದೆಯೊ ಅಪಮೃತೀನೆರೆದಿದ್ದ ಜನರುಗಳ್ | ಅರೀಯರು ಸೋಜಿಗವ 13 ಮೋದ ತೀರ್ಥರ ಮತ | ಸಾಧಿಸಿದೆ ಜಗದೊಳು14 ಪವನಾಂತರಾತ್ಮ ಗುರು | ಗೊವಿಂದ ವಿಠಲನಾಪಾವನಾ ಸ್ಮರಣೆಯಿಂ | ಭವವನು ಕಳೆದೆಯೋ 15
--------------
ಗುರುಗೋವಿಂದವಿಠಲರು
ಶೌರಿ ನಿನ್ನಯ ಭಕ್ತ ನಾನೆನ್ನಿಸೊ ಪ ಇಂದುವರನಂದದಲಿ ಬಂದೆ ನೀ ಕನಸಿನಲಿ ಇಂದಿರಾಪತಿಯೆಂದೆ | ಹುಸಿನಗೆಯಲಿ ಒಂದು ಶಿವಚರಿತೆ ಪೇಳೆಂದು ಗುರುರೂಪದಲಿ ಅಂದಿತ್ತ ದರ್ಶನವೆ ಸಾಕು ಎನಗೆ 1 ವಾರಿನಿಧಿಯೊಳು ಮುಳುಗಿ ದಾರಿಕಾಣದ ಮುನಿಗೆ ತೋರಿದಾ ಶಿಶುರೂಪ ಸಾಕು ಎನಗೆ ಘೋರ ಕಾನನದಲ್ಲಿ ಜಾನಿಸಿದ ಬಾಲನಿಗೆ ಸಿರಿ ಮೊಗವೆ ಸಾಕು ಎನಗೆ 2 ಅರಸಿಯಾಲಿಂಗನವ ಅರೆಘಳಿಗೆ ಬಿಡದವಗೆ ಕರುಣದಿಂ ನೀತೋರ್ದ ಚರಣ ಸಾಕೆನಗೆ ಪರರ ದಂಡಿಸಿ ಧನವ ಅಪಹರಿಸಿದಾತಂಗೆ ಗುರುವೆನಿಸಿದಾ ರೂಪ ಸಾಕು ಎನಗೆ 3 ಘೋರ ರೂಪವ ಗಳಿಸಿ ನಾರಣಾಯೆಂದವಗೆ ತೋರಿದಾ ಕಾರುಣ್ಯವಿರಲಿ ಎನ್ನೊಳಗೆ [ಹದಿ ನಾ]ರು ಸಾಸಿರ ಜನರ ಗುಂಪಿಂದಲೈತಂದು ತೋರಿದಾ ದ್ವಿಜರೂಪ ಸಾಕು ಎನಗೆ4 ರಂಗನಾಥನು ನೀನೆ ಗಂಗಾಧರನು ನೀನೇ ಮಾಂಗಿರಿಯ ಶೃಂಗಾರ ನಿಲಯ ನೀನೇ ಅಂಗಜನ ಪಿತನೀನೆ | ಅಂಗಜಾರಿಯು ನೀನೆ ಮಂಗಳಾಂಗನೆ ಭವದ ಹಂಗ ಬಿಡಿಸೋ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಿರಿ ರಂಗನಿಗೇ ಮಂಗಳಾಂಗನಿಗೆ ಪ ಭಾರ ಬೆನ್ನಿಲೆ ಪೊತ್ತು ದಾಟಿಸಿತಂದಂದು ನಾರಶಿಂಹನಿಗೆ ಸುರಶೂರ ಸಿಂಹನಿಗೆ 1 ಬಲಿಯ ದಾನವ ಬೇಡಿ ಕುಲವ ಸಂಹರಿಸುತಶಿಲೆಯನುದ್ಧರಿಸಿದ ಚೆಲುವ ಬಾಲನಿಗೆ ಗಾನಲೋಲ ಕೃಷ್ಣನಿಗೆ 2 ದುರಿತ ನಾಶಕಗೆ 3
--------------
ಸಿರಿಗುರುತಂದೆವರದವಿಠಲರು